ಗೂಗಲ್‌ ಕ್ರೋಮ್‌ನಲ್ಲಿ ಮೆಮೊರೀಸ್ ಫೀಚರ್ಸ್‌ ಅನ್ನು ಸಕ್ರಿಯಗೊಳಿಸುವುದು ಹೇಗೆ ?

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಬಳಕೆದಾರರಿಗೆ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿದೆ. ಕಾಲಕ್ಕೆ ಅನುಗುಣವಾಗಿ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುವ ಮೂಲಕ ಬಳಕೆದಾರರ ಸ್ನೇಹಿ ಎನಿಸಿಕೊಂಡಿದೆ. ಸದ್ಯ ಇದೀಗ ಗೂಗಲ್ ಕ್ರೋಮ್ "ಮೆಮೊರೀಸ್" ಎಂಬ ಹೊಸ ಫೀಚರ್ಸ್‌ ಅನ್ನು ಪರೀಕ್ಷಿಸುತ್ತಿದೆ. ಇದು ಬಳಕೆದಾರರಿಗೆ ತಮ್ಮ ವೆಬ್ ಆಕ್ಟಿವಿಟಿಯನ್ನು ನಿರ್ವಹಿಸಲು ಸುಲಭವಾಗಿಸುತ್ತದೆ. ಇನ್ನು ಫೀಚರ್ಸ್‌ ಬುಕ್‌ಮಾರ್ಕ್‌ಗಳು, ಟ್ಯಾಬ್ ಗ್ರೂಪ್‌ಗಳು ಮತ್ತು ಕ್ರೋಮ್‌ ಹಿಸ್ಟರಿಯನ್ನು ಒಳಗೊಂಡಂತೆ ಒಂದೇ ಸ್ಥಳದಲ್ಲಿ ಬಳಕೆದಾರರ ವೆಬ್ ಆಕ್ಟಿವಿಟಿಯನ್ನು ಡಿಸ್‌ಪ್ಲೇ ಮಾಡಲಿದೆ.

ಗೂಗಲ್‌

ಹೌದು, ಗೂಗಲ್‌ ಕ್ರೋಮ್‌ ಬಳಕೆದಾರರ ವೆಬ್‌ ಆಕ್ಟಿವಿಟಿಯನ್ನು ನಿರ್ವಹಿಸುವ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಈ ಫೀಚರ್ಸ್‌ ಮೂಲಕ ಬಳಕೆದಾರರ ಎಲ್ಲಾ ವೆಬ್ ಆಕ್ಟಿವಿಟಿಯನ್ನು ಕ್ರೋಮ್‌ ಬ್ರೌಸರ್‌ನಲ್ಲಿ ಕಾರ್ಡ್ ಆಧಾರಿತ ವೀಕ್ಷಣೆಯಲ್ಲಿ ನೋಡಬಹುದಾಗಿದೆ. ಆದ್ದರಿಂದ ಬಳಕೆದಾರರು ತಮ್ಮ ಹಿಂದಿನ ವೆಬ್ ಆಕ್ಟಿವಿಟಿಯನ್ನು ಒಂದೇ ಸ್ಥಳದಲ್ಲಿ ಸರ್ಚ್‌ ಮಾಡಲು ಸಾಧ್ಯವಾಗಲಿದೆ. ಹಾಗಾದ್ರೆ ಗೂಗಲ್‌ ಕ್ರೋಮ್‌ನ ಈ ಹೊಸ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್‌

ಗೂಗಲ್‌ ಕ್ರೋಮ್‌ಗಾಗಿ ಮೆಮೊರೀಸ್ ಫೀಚರ್ಸ್‌ ಅನ್ನು ಪರೀಕ್ಷಿಸಲಾಗುತ್ತಿದೆ. ಇದು ಇನ್ನು ಕೂಡ ಆಕ್ಟಿವ್‌ ಆಗಿಲ್ಲ, ಆದರೂ ಈ ಹೊಸ ಫೀಚರ್ಸ್‌ ಗೂಗಲ್ ಕ್ರೋಮ್ ಕ್ಯಾನರಿ ಆವೃತ್ತಿ 92.0.4479.0 ನಲ್ಲಿ ಲಭ್ಯವಿದೆ. ಸದ್ಯ ಇದನ್ನು ಇತರ ಫೀಚರ್ಸ್‌ಗಳಂತೆ, ಎಲ್ಲಾ ಪರೀಕ್ಷೆಗಳ ನಂತರ ಇದನ್ನು ಎಲ್ಲರಿಗೂ ಸ್ಥಿರವಾದ ಆವೃತ್ತಿಗೆ ತರುತ್ತದೆ. ಅಲ್ಲಿಯ ತನಕ ಯಾವುದೇ ಗ್ಯಾರಂಟಿ ನೀಡಲಾಗುವುದಿಲ್ಲ.

ಗೂಗಲ್‌ ಕ್ರೋಮ್‌ನಲ್ಲಿ ಮೆಮೊರೀಸ್ ಫೀಚರ್ಸ್‌ ಅನ್ನು ಸಕ್ರಿಯಗೊಳಿಸುವುದು ಹೇಗೆ ?

ಗೂಗಲ್‌ ಕ್ರೋಮ್‌ನಲ್ಲಿ ಮೆಮೊರೀಸ್ ಫೀಚರ್ಸ್‌ ಅನ್ನು ಸಕ್ರಿಯಗೊಳಿಸುವುದು ಹೇಗೆ ?

ಗೂಗಲ್ ಕ್ರೋಮ್‌ನ ಮೆಮೊರಿಸ್‌ ಫೀಚರ್ಸ್‌ ಈಗ ಕ್ರೋಮ್ ಕ್ಯಾನರಿಯಲ್ಲಿ ಮಾತ್ರ ಲಭ್ಯವಿದೆ. ಇದನ್ನು ಸಕ್ರಿಯಗೊಳಿಸಲು ಕೆಳಗಿನ ಹಂತಗಳನ್ನು ಅನುಸರಿಸಿರಿ.
ಹಂತ:1 ಮೆಮೊರೀಸ್‌ ಫೀಚರ್ಸ್‌ ಬಳಸಲು, ನಿಮ್ಮ ವಿಂಡೋಸ್, ಮ್ಯಾಕೋಸ್, ಅಥವಾ ಲಿನಕ್ಸ್ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಕಂಪ್ಯೂಟರ್‌ನಲ್ಲಿ ಕ್ರೋಮ್ ಕ್ಯಾನರಿ ಆವೃತ್ತಿ 92.0.4479.0 ಅನ್ನು ಬಳಸಿ.

ಹಂತ:2 ಅಡ್ರೆಸ್‌ ಬಾರ್‌ನಲ್ಲಿ "chrome: // flags" ಎಂದು ಟೈಪ್ ಮಾಡಿ. "Enter" ಕೀಲಿಯನ್ನು ಒತ್ತಿ.

ಹಂತ:3 ನೀವು ಫ್ಲ್ಯಾಗ್‌ ಸ್ಕ್ರೀನ್‌ ಅನ್ನು ನೋಡಿ. ಸರ್ಚ್‌ ಬಾಕ್ಸ್‌ನಲ್ಲಿ "ಮೆಮೊರೀಸ್" ಎಂದು ಟೈಪ್ ಮಾಡಿ.

ಡೇಟಾ

ಹಂತ:4 "ಮೆಮೊರೀಸ್" ಫ್ಲ್ಯಾಗ್‌ ಕಾಣಿಸಿಕೊಂಡ ನಂತರ, ಅದನ್ನು ಸಕ್ರಿಯಗೊಳಿಸಿ. ನಂತರ ನೀವು ಬ್ರೌಸರ್ ಅನ್ನು ರಿ ಲಾಂಚ್‌ ಮಾಡಬೇಕಾಗುತ್ತದೆ. ಆದ್ದರಿಂದ ನಿಮ್ಮ ಇತರ ಟ್ಯಾಬ್‌ಗಳಲ್ಲಿನ ಡೇಟಾವನ್ನು ಉಳಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಹಂತ:5 ಅಂತಿಮವಾಗಿ "ರಿ ಲಾಂಚ್‌" ಬಟನ್ ಕ್ಲಿಕ್ ಮಾಡಿ.

ಹಂತ:6 ಗೂಗಲ್ ಕ್ರೋಮ್ ಕ್ಯಾನರಿ ರಿ ಲಾಂಚ್‌ ಮಾಡಿದ ನಂತರ, ಬುಕ್‌ಮಾರ್ಕ್‌ಗಳು, ಟ್ಯಾಬ್ ಗ್ರೂಪ್‌ಗಳು ಮತ್ತು ಕ್ರೋಮ್ ಹಿಸ್ಟರಿಯನ್ನು ಒಳಗೊಂಡಂತೆ ನಿಮ್ಮ ಎಲ್ಲಾ ವೆಬ್ ಆಕ್ಟಿವಿಟಿಯನ್ನು ಒಂದೇ ಸ್ಥಳದಲ್ಲಿ ನೋಡಲು ಅಡ್ರೆಸ್‌ ಬಾರ್‌ನಲ್ಲಿ "ಕ್ರೋಮ್: //ಮೆಮೊರೀಸ್‌" ಎಂದು ಟೈಪ್ ಮಾಡಿ.

Most Read Articles
Best Mobiles in India

English summary
Google Chrome is testing a new feature called “Memories” that will make it easier for users to manage their web activity.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X