ಇನ್‌ಕಾಗ್ನಿಟೋ/ಪೋರ್ನ್ ಮೋಡ್‌ಗೆ ಮತ್ತಷ್ಟು ಶಕ್ತಿ ಕೊಡುತ್ತಿದೆ 'ಗೂಗಲ್'!

|

ನಿಮ್ಮ ಜಾಲತಾಣವನ್ನು ಇನ್ನೊಬ್ಬರು ನೋಡುವ ಸಾಧ್ಯತೆ ಇರುವುದರಿಂದ ಬಳಕೆದಾರರ ರಕ್ಷಣೆಗೆ ಹುಟ್ಟಿಕೊಂಡ ವ್ಯವಸ್ಥೆ ಗೂಗಲ್ ಕ್ರೋಮ್‌ನ ಇನ್‌ಕಾಗ್ನಿಟೋ ಮೋಡ್ ಮತ್ತಷ್ಟು ಸುರಕ್ಷಿತವಾಗುತ್ತಿದೆ. ಖಾಸಗಿಯಾಗಿ ಬ್ರೌಸಿಂಗ್ ಮಾಡಲು ಮತ್ತು ನೆಟ್‌ ಜಾಲಾಟದ ಜಾಡನ್ನು ಇತರರು ಹಿಂಬಾಲಿಸದಂತೆ ತಡೆಯಲು ಗೂಗಲ್ ಕ್ರೋಮ್ ನಿರ್ಧರಿಸಿದ್ದು, ಇನ್‌ಕಾಗ್ನಿಟೋ ಮೋಡ್‌ ಅನ್ನು ಪೂರ್ಣವಾಗಿ ಖಾಸಗಿ ಬ್ರೌಸಿಂಗ್‌ಗೆ ಬಳಕೆಯಾಗುವ ರೀತಿ ರೂಪಿಸಲಿದೆ ಎಂದು ಹೇಳಿದೆ.

ಪ್ರೈವೇಟ್ ವಿಂಡೋ, ಇನ್‌ಕಾಗ್ನಿಟೋ ವಿಂಡೋ, ವಿದೇಶಗಳಲ್ಲಿ ಪೋರ್ನ್ ಮೋಡ್ ಎಂದೆಲ್ಲಾ ಕರೆಯುವ ಸುರಕ್ಷಿತ ಇಂಟರ್‌ನೆಟ್ ಬಳಕೆ ವಿಧಾನ ಜಗತ್ತಿನಾಧ್ಯಂತ ಇಂಟರ್‌ನೆಟ್ ಬಳಕೆದಾರರ ಖಾಸಾಗಿತನವನ್ನು ಕಾಪಾಡುತ್ತಿದೆ. ಆದರೆ, ಕೆಲ ಡೆವಲಪರ್‌ಗಳು ಬಳಕೆದಾರರ ಬ್ರೌಸಿಂಗ್ ಮಾಹಿತಿ ಪಡೆದು ಅದನ್ನು ಜಾಹೀರಾತಿಗೆ ಬಳಸುತ್ತಾರೆ ಎಂಬ ಆರೋಪವಿದ್ದು, ಖಾಸಗೀತನ ಮತ್ತು ಸುರಕ್ಷತೆಯ ಕಾರಣಕ್ಕೆ ಇನ್‌ಕಾಗ್ನಿಟೋ ಮೋಡ್ ಅನ್ನು ಮತ್ತಷ್ಟು ಸುಧಾರಿಸಲು ಗೂಗಲ್ ಕ್ರಮ ಕೈಗೊಳ್ಳಲಿದೆ ಎಂದು ಗೂಗಲ್ ಹೇಳಿದೆ.

ಇನ್‌ಕಾಗ್ನಿಟೋ/ಪೋರ್ನ್ ಮೋಡ್‌ಗೆ ಮತ್ತಷ್ಟು ಶಕ್ತಿ ಕೊಡುತ್ತಿದೆ 'ಗೂಗಲ್'!

ಆನ್‌ಲೈನ್‌ನಲ್ಲಿ ಲಭ್ಯವಿರುವ ಕೆಲ ಟೂಲ್ ಬಳಸಿ ಡೆವಲಪರ್‌ಗಳು ಇನ್‌ಕಾಗ್ನಿಟೋ ಮೋಡ್‌ ಬ್ರೌಸಿಂಗ್ ಅನ್ನು ಜಾಲಾಡುತ್ತಾರೆ. ಮುಂದೆ ಅಂತಹ ಟೂಲ್‌ಗಳ ಬಳಕೆಗೆ ಅವಕಾಶ ನೀಡದಿರಲು ಗೂಗಲ್ ಕ್ರೋಮ್ ನಿರ್ಧರಿಸಿದ್ದು, ಇನ್‌ಕಾಗ್ನಿಟೋ ಮೋಡ್‌ ಅನ್ನು ಪೂರ್ಣವಾಗಿ ಖಾಸಗಿ ಬ್ರೌಸಿಂಗ್‌ಗೆ ಬಳಕೆಯಾಗುವ ರೀತಿ ರೂಪಿಸಲಿದೆ ಎಂದು ಹೇಳಿದೆ. ಹಾಗಾದರೆ, ಏನಿದು ಪ್ರೈವೇಟ್ ವಿಂಡೋ?, ಬಳಸುವುದು ಹೇಗೆ?, ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಏನಿದು ಪ್ರೈವೇಟ್/ ಪೋರ್ನ್ ವಿಂಡೋ?

ಏನಿದು ಪ್ರೈವೇಟ್/ ಪೋರ್ನ್ ವಿಂಡೋ?

ಇಂಟರ್‌ನೆಟ್ ಬಳಕೆದಾರರ ಖಾಸಾಗಿತನವನ್ನು ಕಾಪಾಡುವ ವ್ಯವಸ್ಥೆಗೆ ಪ್ರೈವೇಟ್/ ಪೋರ್ನ್ ವಿಂಡೋ ಎಂದು ಕರೆಯುತ್ತಾರೆ. ಪ್ರೈವೇಟ್/ ಪೋರ್ನ್ ವಿಂಡೋ ತೆರೆದು ಇಂಟರ್‌ನೆಟ್ ಬಳಕೆ ಮಾಡಿದರೆ ನಿಮ್ಮ ಜಾಲತಾಣವನ್ನು ಇನ್ನೊಬ್ಬರು ನೋಡಲು ಸಾಧ್ಯವಿಲ್ಲ. ಅಂದರೆ ಗೂಗಲ್ ಕೂಡ ನಿಮ್ಮನ್ನು ಟ್ರ್ಯಾಕ್ ಮಾಡುವುದಿಲ್ಲ. ( ಆದರೆ, ಡೆವಲಪರ್‌ಗಳು ಮಾಡಿಕೊಳ್ಳುತ್ತಿದ್ದರು)

ಪತ್ತೆದಾರನೊಬ್ಬನ ಮುಖದ ಐಕಾನ್

ಪತ್ತೆದಾರನೊಬ್ಬನ ಮುಖದ ಐಕಾನ್

ಕ್ರೋಮ್, ಇಂಟರ್ನೆಟ್ ಎಕ್ಸ್‌ಪ್ಲೋರರ್ ಅಥವಾ ಮೋಝಿಲಾ ಯಾವುದೇ ಬ್ರೌಸರ್‌ನಲ್ಲಾದರೂ ಸಹ ಪ್ರೈವೇಟ್ ವಿಂಡೋ ತೆರೆದರೆ ಅದರ ಮೇಲ್ಭಾಗದ ಎಡಮೂಲೆಯಲ್ಲಿ ಕನ್ನಡಕಧಾರಿ ಪತ್ತೆದಾರನೊಬ್ಬನ ಮುಖದ ಐಕಾನ್ ಕಾಣಿಸುತ್ತದೆ. ಈ ಐಕಾನ್ ಮೂಡಿದ ಬ್ರೌಸರ್ ವಿಂಡೋದಲ್ಲಿಯೇ ನೀವು ಬ್ರೌಸಿಂಗ್ ಮಾಡಿದರಾಯಿತು.

ಇದಕ್ಕೆ ಪೋರ್ನ್ ಮೋಡ್ ಹೆಸರು ಬಂದಿದ್ದು ಹೇಗೆ?

ಇದಕ್ಕೆ ಪೋರ್ನ್ ಮೋಡ್ ಹೆಸರು ಬಂದಿದ್ದು ಹೇಗೆ?

ಬಳಕೆದಾರರ ಹಿಸ್ಟರಿ ಸಂಗ್ರಹಿಸದೇ ಇರುವ ಹಾಗೂ ವೈರಸ್ ಕುತಂತ್ರಾಂಶಗಳಿಂದ ಕಾಪಾಡಿಕೊಳ್ಳುವ ಪ್ರೈವೇಟ್ ವಿಂಡೋವನ್ನು ವಿದೇಶಗಳಲ್ಲಿ 'ಪೋರ್ನ್ ಮೋಡ್' ಅಂತ ಕರೆಯುತ್ತಾರೆ. ಈ ಮೋಡ್‌ನಲ್ಲಿ ಪೋರ್ನ್ ವೆಬ್ ತಾಣಗಳನ್ನು ವೀಕ್ಷಿಸಿದರೆ ಬ್ರೌಸಿಂಗ್ ಮಾಡಿದ್ದು ಯಾರಿಗೂ ತಿಳಿಯುವುದಿಲ್ಲ ಎಂದು ಅಲ್ಲಿ ಇದನ್ನು ಹೀಗೆ ಕರೆಯಲಾಗುತ್ತದೆ. .

ಕ್ರೋಮ್‌ನಲ್ಲಿ ಪ್ರೈವೇಟ್ ವಿಂಡೋ ತೆರೆಯುವುದು ಹೇಗೆ?

ಕ್ರೋಮ್‌ನಲ್ಲಿ ಪ್ರೈವೇಟ್ ವಿಂಡೋ ತೆರೆಯುವುದು ಹೇಗೆ?

ನೀವಿಗ ಕಂಪ್ಯೂಟರ್‌ನಲ್ಲಿ ಕ್ರೋಮ್ ಬ್ರೌಸರ್ ಬಳಕೆ ಮಾಡುತ್ತಿದ್ದೀರಾ ಎಂದಿಟ್ಟುಕೊಳ್ಳಿ. ಬಳಕೆ ಮಾಡುವಾಗ ಪ್ರೈವೇಟ್ ವಿಂಡೋ ತೆರೆಯಲು ಕೀಬೋರ್ಡ್‌ನಲ್ಲಿ 'ಶಿಫ್ಟ್ ಕೀ' ಹಾಗೂ 'ಕಂಟ್ರೋಲ್ ಕೀ' ಒಟ್ಟಿಗೇ ಒತ್ತಿ ನಂತರ 'ಎನ್' ಬಟನ್ ಒತ್ತಿದರೆ ಹೊಸದೊಂದು ಬ್ರೌಸರ್ ಪ್ರೈವೇಟ್ ವಿಂಡೋ ತೆರೆದುಕೊಳ್ಳುತ್ತದೆ.

ಎಕ್ಸ್‌ಪ್ಲೋರರ್ ಅಥವಾ ಫೈರ್‌ಫಾಕ್ಸ್‌

ಎಕ್ಸ್‌ಪ್ಲೋರರ್ ಅಥವಾ ಫೈರ್‌ಫಾಕ್ಸ್‌

ಕ್ರೋಮ್ ಬ್ರೌಸರ್ ಅಲ್ಲದೆ ಇಂಟರ್ನೆಟ್ ಎಕ್ಸ್‌ಪ್ಲೋರರ್ ಅಥವಾ ಮೋಝಿಲಾ ಫೈರ್‌ಫಾಕ್ಸ್‌ ಅನ್ನು ನೀವು ಬಳಸುತ್ತಿದ್ದರೆ ಶಿಫ್ಟ್ + ಕಂಟ್ರೋಲ್ + ಪಿ ಬಟನ್ ಒತ್ತಿದಾಗ ಹೊಸ ವಿಂಡೋ ತೆರೆದುಕೊಳ್ಳುತ್ತದೆ.! ಆಯಾ ಬ್ರೌಸರ್‌ಗಳು ಬೇರೆ ಬೇರೆ ರೀತಿಯಾಗಿ ಸೆಟ್ಟಿಂಗ್ಸ್ ಅಳವಡಿಸಿಕೊಂಡಿರುವುದು ಇದಕ್ಕೆ ಕಾರಣ

ಯಾರೂ ಟ್ರ್ಯಾಕ್ ಮಾಡಲು ಸಾಧ್ಯವಿಲ್ಲ

ಯಾರೂ ಟ್ರ್ಯಾಕ್ ಮಾಡಲು ಸಾಧ್ಯವಿಲ್ಲ

ಹ್ಯಾಕರ್‌ಗಳಿಂದ ನಿಮ್ಮ ಕಂಪ್ಯೂಟರ್‌ಗೆ ಧಕ್ಕೆಯಾಗದಂತೆ ಪ್ರೈವೇಟ್ ವಿಂಡೋ ಬಹುಪಾಲು ರಕ್ಷಿಸಬಲ್ಲುದು. ಮತ್ತು ನಿಮ್ಮೆಲ್ಲಾ ಸರ್ಚ್ ಹಿಸ್ಟರಿಯನ್ನು ಸೇವ್ ಮಾಡದ ಹಾಗೂ ನಿಮ್ಮ ಯಾವುದೇ ಮಾಹಿತಿಯನ್ನು ಈ ಬ್ರೌಸರ್ ಕಲೆಯಾಕುವುದಿಲ್ಲ. ಆದರೆ, ಆನ್‌ಲೈನ್‌ನಲ್ಲಿ ನಿಮ್ಮ ಮೇಲೆ ಹದ್ದಿನ ಕಣ್ಣಿಡುವವರಿಂದ ಏನನ್ನೂ ಬಚ್ಚಿಡಲಾಗುವುದಿಲ್ಲ ಎಂಬುದು ನೆನಪಿರಲಿ.

Best Mobiles in India

English summary
Google Chrome's incognito mode is popular for private browsing. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X