ಮುಂದಿನ ವರ್ಷದಿಂದ ವಿಂಡೋಸ್ 7 ಮತ್ತು 8.1 ಗೆ ಗೂಗಲ್ ಕ್ರೋಮ್ ಬೆಂಬಲ ಇಲ್ಲ!

|

ಜಗತ್ತಿನಲ್ಲಿ ಏನೇ ನಡೆದರೂ ಮೊದಲು ನಾವು ಮಾಹಿತಿ ಜಾಲಾಡಲು ಗೂಗಲ್‌ ಪುಟಕ್ಕೆ ತೆರಳುತ್ತೇವೆ. ಅದರಂತೆ ಗೂಗಲ್‌ನ ಸರ್ಚ್‌ ಇಂಜಿನ್‌ನಲ್ಲಿ ನಮಗೆ ಬೇಕಾದ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆಯುತ್ತಿದ್ದೇವೆ. ಅದರಂತೆ ಹಲವಾರು ಫೀಚರ್ಸ್‌ ಅನ್ನು ಸಹ ಗೂಗಲ್‌ ಒದಗಿಸುತ್ತಾ ಬರುತ್ತಿದ್ದು, ಬಳಕೆದಾರರಿಗೆ ಅನುವು ಮಾಡಿಕೊಡುತ್ತಿದೆ. ಆದರೆ, ಸದ್ಯಕ್ಕೆ ಕೆಲವು ಬಳಕೆದಾರರಿಗೆ ಬೇಸರ ಆಗುವ ಸುದ್ದಿಯೊಂದನ್ನು ಗೂಗಲ್‌ ನೀಡಿದೆ.

ಸರ್ಚ್ ಇಂಜಿನ್

ಹೌದು, ಪ್ರಮುಖ ಸರ್ಚ್ ಇಂಜಿನ್ ಆಗಿರುವ ಗೂಗಲ್‌ ಕೆಲವು ಬಳಕೆದಾರರಿಗೆ ಶಾಕಿಂಗ್‌ ನ್ಯೂಸ್‌ ನೀಡಿದೆ. ಇನ್ಮುಂದೆ ಗೂಗಲ್ ಕ್ರೋಮ್ ವೆಬ್ ಬ್ರೌಸರ್ ವಿಂಡೋಸ್ 7 ಮತ್ತು 8.1 ಗೆ ಬೆಂಬಲ ನೀಡುವುದಿಲ್ಲ ಎಂದು ತಿಳಿಸಿದೆ. ಪರಿಣಾಮ ವಿಂಡೋಸ್ 7 ಮತ್ತು 8.1 ಬಳಕೆದಾರು ಅಪ್‌ಗ್ರೇಡ್‌ ಆಗಬೇಕಾದ ಅನಿವಾರ್ಯತೆ ಎದುರಾಗಲಿದೆ.

ಗೂಗಲ್‌ ಹೇಳೋದೇನು?

ಗೂಗಲ್‌ ಹೇಳೋದೇನು?

ಗೂಗಲ್ ಕ್ರೋಮ್ ವೆಬ್ ಬ್ರೌಸರ್ ಫೆಬ್ರವರಿ 2023 ರಿಂದ ವಿಂಡೋಸ್ 7 ಮತ್ತು 8.1 ಗೆ ಬೆಂಬಲವನ್ನು ಕೈಬಿಡಲಿದೆ ಎಂದು ಗೂಗಲ್ ಘೋಷಿಸಿದ್ದು, ವಿಂಡೋಸ್ 7 ಮತ್ತು 8.1 ನಲ್ಲಿ ಕ್ರೋಮ್ ವೆಬ್ ಬ್ರೌಸರ್ ನಿಲ್ಲಿಸಿದ ನಂತರ ಕ್ರೋಮ್ ಬಳಕೆದಾರರು ವಿಂಡೋಸ್ 10 ಗೆ ಅಪ್‌ಗ್ರೇಡ್‌ ಆಗಬೇಕಿದೆ ಎಂದು ಕಂಪನಿ ಹೇಳಿದೆ. ಫೆಬ್ರವರಿ 7, 2023 ಕ್ಕೆ ಅಂತ್ಯವಾಗುವ ಕ್ರೋಮ್‌ 110 ಬಿಡುಗಡೆಯೊಂದಿಗೆ ನಾವು ಅಧಿಕೃತವಾಗಿ ವಿಂಡೋಸ್‌ 7 ಮತ್ತು ವಿಂಡೋಸ್‌ 8.1 ಗೆ ನೀಡಲಾಗುವ ಬೆಂಬಲವನ್ನು ಕೊನೆಗೊಳಿಸುತ್ತೇವೆ. ಮುಂದೆ ಇದಕ್ಕೆ ಸಪೋರ್ಟ್‌ ಮಾಡುವ ಕ್ರೋಮ್ ವೆಬ್ ಬ್ರೌಸರ್ ಇರುವುದಿಲ್ಲ ಎಂದು ಉಲ್ಲೇಖಿಸಿದೆ. ಈ ಕಾರಣಕ್ಕೆ ನೀವು ನಿಮ್ಮ ಡಿವೈಸ್‌ ವಿಂಡೋಸ್‌ 10 ಅಥವಾ ಅದಕ್ಕಿಂತಲೂ ಹೆಚ್ಚಿನ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದೆ.

ಕ್ರೋಮ್‌

ಕ್ರೋಮ್‌ನ ಹಳೆಯ ಆವೃತ್ತಿಗಳು ಎಂದಿನಂತೆ ಕೆಲಸ ಮಾಡಲಿವೆಯಾದರೂ ಈ ಆಪರೇಟಿಂಗ್ ಸಿಸ್ಟಂಗಳಲ್ಲಿ ಹೆಚ್ಚಿನ ನವೀಕರಣಗಳು ಇರುವುದಿಲ್ಲವಂತೆ. ಅಂದರೆ ವಿಂಡೋಸ್ ವಿಂಡೋಸ್ 7 ಅಥವಾ ವಿಂಡೋಸ್ 8.1 ಬಳಕೆದಾರರಾಗಿದ್ದರೆ, ಇತ್ತೀಚೆಗೆ ಪರಿಚಯಿಸಲಾದ ಭದ್ರತಾ ನವೀಕರಣಗಳು ಮತ್ತು ಇತರೆ ಕ್ರೋಮ್ ಫೀಚರ್ಸ್‌ಗಳು ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

65 % ಕ್ಕಿಂತ ಹೆಚ್ಚಿನ ಜನರಿಂದ ಕ್ರೋಮ್‌ ಬಳಕೆ

65 % ಕ್ಕಿಂತ ಹೆಚ್ಚಿನ ಜನರಿಂದ ಕ್ರೋಮ್‌ ಬಳಕೆ

ಸ್ಟೇಟ್‌ಕೌಂಟರ್ ಗ್ಲೋಬಲ್ ಸ್ಟೇಟ್‌ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರಪಂಚದಾದ್ಯಂತ ವಿಂಡೋಸ್ 7 10 % ಗೂ ಹೆಚ್ಚು ಬಳಕೆಯಲ್ಲಿದೆ, ವಿಂಡೋಸ್ 8.1 ಕೇವಲ 2.7% ರಷ್ಟಿದೆ ಎಂದು ವಿವರಿಸಿದ್ದು, ಗೂಗಲ್ ಕ್ರೋಮ್ ವೆಬ್ ಬ್ರೌಸರ್ 65 % ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿದ್ದು, ಇದರ ನಂತರ ಸಫಾರಿ 18 % ಹಾಗೂ ಮೈಕ್ರೋಸಾಫ್ಟ್ ಎಡ್ಜ್ 4.32 % ನೆಟ್‌ವರ್ಕ್‌ ವಲಯದಲ್ಲಿ ಪಾಲುದಾರಿಕೆ ಪಡೆದಿದೆ ಎಂದು ತಿಳಿಸಿದೆ.

ಗೂಗಲ್‌ನ ಇತರೆ ಫೀಚರ್ಸ್‌

ಗೂಗಲ್‌ನ ಇತರೆ ಫೀಚರ್ಸ್‌

ಇನ್ನು ಗೂಗಲ್ ಸ್ಥಳೀಯ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳಿಗಾಗಿ (ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್) API ಜೊತೆಗೆ ಈ ವರ್ಷದ ನಂತರ ಪಾಸ್‌ಕೀಗಳಿಗೆ ಬೆಂಬಲವನ್ನು ಹೊರತರುವುದಾಗಿ ಈ ತಿಂಗಳ ಆರಂಭದಲ್ಲಿ ಘೋಷಿಸಿತು. ಜೊತೆಗೆ ಅಪ್ಲಿಕೇಶನ್‌ಗಳ ಉತ್ತಮ ಲಿಸ್ಟ್‌ಗಾಗಿ ಪ್ಲೇ ಸ್ಟೋರ್‌ಗೂ ನೂತನ ಫೀಚರ್ಸ್‌ ಅನ್ನು ಘೋಷಿಸಿದೆ. ಇದೆಲ್ಲಕ್ಕೂ ಮಿಗಿಲಾಗಿ ಕಂಪೆನಿಯು ಈ ವರ್ಷದ ಆರಂಭದಲ್ಲಿ ಜರುಗಿದ ತನ್ನ ವಾರ್ಷಿಕ ಡೆವಲಪರ್ ಸಮ್ಮೇಳನ I/O ನಲ್ಲಿ ಕಂಪೆನಿಯು ತನ್ನ ಸೇವೆಗಳಲ್ಲಿ ಏನೆಲ್ಲಾ ನವೀಕರಣ ತರಲಾಗಿದೆ, ಮುಂದೆ ಏನೆಲ್ಲಾ ಪರಿಚಯಿಸಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಿತ್ತು.

Best Mobiles in India

English summary
We are getting the information we want in a moment in Google's search engine. But Google said that Chrome will no longer support Windows 7 and 8.1.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X