ಗೂಗಲ್‌ ಕ್ರೋಮ್‌ನಲ್ಲಿ ನಿಮಗೆ ತಿಳಿದಿಲ್ಲದ ಕೆಲವು ಅಚ್ಚರಿಯ ಫೀಚರ್ಸ್‌ಗಳು!

|

ಗೂಗಲ್ ಕ್ರೋಮ್ ವಿಶ್ವದ ಅತ್ಯಂತ ಜನಪ್ರಿಯ ಇಂಟರ್‌ನೆಟ್ ಬ್ರೌಸರ್ ಆಗಿದೆ. ಬಳಕೆದಾರರಿಗೆ ಪರಿಚಯಿಸಿರುವ ಹೊಸ ಮಾದರಿಯ ಫೀಚರ್ಸ್‌ಗಳ ಕ್ರೋಮ್‌ನ ಜನಪ್ರಿಯತೆಗೆ ಕಾರಣವಾಗಿದೆ. ಸದ್ಯ ವೆಬ್‌ಬ್ರೌಸರ್‌ಗಳಲ್ಲಿ ಗೂಗಲ್‌ ಕ್ರೋಮ್‌ ಮೂಲಕ ಬ್ರೌಸಿಂಗ್‌ ಮಾಡುವುದು ಸಾಕಷ್ಟು ಸುಲಭವಾಗಿದೆ. ಇದೇ ಕಾರಣಕ್ಕೆ ಹೆಚ್ಚಿನ ಮಂದಿ ಗೂಗಲ್‌ ಕ್ರೋಮ್‌ ಅನ್ನು ಬಳಸುತ್ತಾರೆ. ಇನ್ನು ಗೂಗಲ್‌ ಕ್ರೋಮ್‌ ಸಾಕಷ್ಟು ಫೀಚರ್ಸ್‌ಗಳನ್ನ ಪರಿಚಯಿಸಿದೆ. ಈ ಫೀಚರ್ಸ್‌ಗಳಲ್ಲಿ ಕೆಲವು ವಿಶೇಷ ಫೀಚರ್ಸ್‌ಗಳ ಬಗ್ಗೆ ಬಳಕೆದಾರರಿಗೆ ತಿಳಿದೆ ಇಲ್ಲ.

ಗೂಗಲ್‌

ಹೌದು, ಜಾಗತಿಕವಾಗಿ ಅತಿ ಹೆಚ್ಚು ಬಳಸಲಾಗುವ ಬ್ರೌಸರ್‌ಗಳಲ್ಲಿ ಗೂಗಲ್‌ ಕ್ರೋಮ್ ಕೂಡ ಒಂದಾಗಿದೆ. ಗೂಗಲ್‌ ಕ್ರೋಮ್‌ ಹಲವು ಫೀಚರ್ಸ್‌ಗಳನ್ನ ಒಳಗೊಂಡಿದ್ದು, ಇದರಲ್ಲಿ ನೀವು ಎಂದಿಗೂ ಬಳಸದಿರುವ ಕೆಲವು ಫೀಚರ್ಸ್‌ಗಳು ಕೂಡ ಇವೆ. ಹಾಗಾದ್ರೆ ಗೂಗಲ್‌ ಕ್ರೋಮ್‌ನಲ್ಲಿ ಲಭ್ಯವಿರುವ ಹಾಗೂ ನೀವು ಎಂದಿಗೂ ಬಳಸದಿರುವ ಕೆಲವು ಫೀಚರ್ಸ್‌ಗಳ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಸಿಕೊಡ್ತಿವಿ ಮುಂದೆ ಓದಿರಿ.

ಮಾಲ್ವೇರ್ ಸ್ಕ್ಯಾನರ್

ಮಾಲ್ವೇರ್ ಸ್ಕ್ಯಾನರ್

ಗೂಗಲ್‌ ಕ್ರೋಮ್‌ನಲ್ಲಿ ಇಂಟರ್‌ಬಿಲ್ಟ್‌ ಮಾಲ್ವೇರ್ ಸ್ಕ್ಯಾನರ್ ಇದೆ. ಇದು ನಿಮ್ಮ ಡೇಟಾವನ್ನು ಸುರಕ್ಷಿತವಾಗಿಡಲಿದೆ. ಇದಕ್ಕಾಗಿ ನೀವು ಗೂಗಲ್‌ ಕ್ರೋಮ್‌ನಲ್ಲಿ ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ಸುಧಾರಿತ ಆಯ್ಕೆಗೆ ಹೋಗಿ, ಇಲ್ಲಿ ನೀವು ರಿಸೆಟ್‌ ಮಾಡಬಹುದು. ನಂತರ ಕಂಪ್ಯೂಟರ್ ಅನ್ನು ಕ್ಲಿನ್‌ ಮಾಡಬಹುದಾಗಿದೆ. ಅಲ್ಲದೆ ಇದು ಕಂಪ್ಯೂಟರ್ ಅನ್ನು ಸರಿಯಾಗಿ ಸ್ಕ್ಯಾನ್ ಮಾಡುತ್ತದೆ. ಜೊತೆಗೆ ಯಾವುದೇ ರೀತಿಯ ಅನುಮಾನಾಸ್ಪದ ಮಾಹಿತಿ ಕಂಡುಬಂದಲ್ಲಿ, ಕ್ರೋಮ್‌ ಅದನ್ನು ವರದಿ ಮಾಡುತ್ತದೆ.

ಗೆಸ್ಟ್‌ ಮೋಡ್

ಗೆಸ್ಟ್‌ ಮೋಡ್

ನಿಮ್ಮ ಕಂಪ್ಯೂಟರ್‌ ಬೇರೆಯವರು ಬಳಸುತ್ತಿದ್ದರೆ ನೀವು ಬ್ರೌಸ್‌ ಮಾಡಿರುವ ಹಿಸ್ಟರಿಯನ್ನು ನೋಡುವ ಸಾದ್ಯತೆ ಇರುತ್ತದೆ. ಅಲ್ಲದೆ ನಿಮ್ಮ ಎಲ್ಲಾ ಬ್ರೌಸ್ ಅನ್ನು ಹಂಚಿಕೊಳ್ಳಲು ನಿಮಗೆ ಸೂಕ್ತ ಎನಿಸುವುದಿಲ್ಲ. ಆದರೆ ಇದಕ್ಕಾಗಿ ಗೂಗಲ್‌ ಕ್ರೋಮ್‌ನಲ್ಲಿ ಗೇಸ್ಟ್‌ ಮೋಡ್ ಅನ್ನು ನೀಡಲಾಗಿದೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಮೇಲಿನ ಬಲ ಮೂಲೆಯಲ್ಲಿರುವ ನಿಮ್ಮ ಗೂಗಲ್‌ ಅಕೌಂಟ್‌ ಅವತಾರ್‌ ಅನ್ನು ಕ್ಲಿಕ್ ಮಾಡಿ, ಗೇಸ್ಟ್‌ ಮೋಡ್ ಅನ್ನು ಆರಿಸಿ, ಇದು ನಿಮ್ಮ ಡೇಟಾ ಖಾಸಗಿಯಾಗಿರಿಸುತ್ತದೆ.

ರೀಡರ್ ಮೋಡ್

ರೀಡರ್ ಮೋಡ್

ನೀವು ಬಿಡುವಿನ ವೇಳೆಯಲ್ಲಿ ಏನನ್ನಾದರೂ ಓದಲು ಬಯಸಿದರೆ ಮತ್ತು ಲೇಖನದಲ್ಲಿ ಯಾವುದೇ ಜಾಹೀರಾತುಗಳನ್ನು ಬಯಸದಿದ್ದರೆ, ರೀಡರ್ ಮೋಡ್ ಅನ್ನು ಆನ್ ಮಾಡಿ. ರೀಡರ್ ಮೋಡ್ ಅನ್ನು ಸಕ್ರಿಯಗೊಳಿಸಲು, ಗೂಗಲ್‌ ಕ್ರೋಮ್‌ ನಲ್ಲಿ ಹೊಸ ಟ್ಯಾಬ್ ತೆರೆಯಿರಿ ಮತ್ತು chrome: // flags / # enable-reader-mode ಎಂದು ಟೈಪ್ ಮಾಡಿ, ರೀಡರ್ ಮೋಡ್ ಆಯ್ಕೆಯನ್ನು ಸಕ್ರಿಯಗೊಳಿಸಿ. ಇದನ್ನು ಸಕ್ರಿಯಗೊಳಿಸಿದ ನಂತರ, ಕ್ರೋಮ್‌ ಮೆನುವಿನಲ್ಲಿ ನೀವು ಹೊಂದಿಕೆಯಾಗುವ ಪುಟಗಳಲ್ಲಿ ಎಂಟರ್ ರೀಡರ್ ಮೋಡ್ ಆಯ್ಕೆಯನ್ನು ನೋಡುತ್ತೀರಿ.

ಸ್ಟ್ರೀಮಿಂಗ್‌ ಮೋಡ್‌

ಸ್ಟ್ರೀಮಿಂಗ್‌ ಮೋಡ್‌

ಇದು ಕೂಡ ಎಷ್ಟೋ ಮಂದಿಗೆ ತಿಳಿದೆ ಇಲ್ಲ. ಇದಕ್ಕಾಗಿ ನೀವು ಗೂಗಲ್‌ನ ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳನ್ನು ಕ್ಲಿಕ್ ಮಾಡಿ, ಇಲ್ಲಿ ನೀವು ಕಾಸ್ಟ್‌ ಆಯ್ಕೆಯನ್ನು ನೋಡಬಹುದು. ನಿಮ್ಮ ಬ್ರೌಸರ್ ಟ್ಯಾಬ್‌ಗಳನ್ನು ಅಥವಾ ಸಂಪೂರ್ಣ ಡೆಸ್ಕ್‌ಟಾಪ್ ಅನ್ನು ಕ್ರೋಮ್‌ಕಾಸ್ಟ್‌ ಡಿವೈಸ್‌ನಲ್ಲಿ ಬಿತ್ತರಿಸಲು ನೀವು ಬಯಸಿದರೆ ಇದನ್ನು ಆರಿಸಬಹುದಾಗಿದೆ. ಇನ್ನು ನೀವು YouTube ಅಥವಾ ಕೆಲವು ಹೊಂದಾಣಿಕೆಯ OTT ಅಪ್ಲಿಕೇಶನ್ ಬಳಸುತ್ತಿದ್ದರೆ, ನೀವು ವೀಡಿಯೊ ವಿಷಯವನ್ನು ಸಹ ಸ್ಟ್ರೀಮ್ ಮಾಡಬಹುದಾಗಿದೆ.

Best Mobiles in India

English summary
Google Chrome: You Probably Didn't Know These Features.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X