ಗೂಗಲ್ ಡಾಕ್ಸ್, ಮತ್ತು ಗೂಗಲ್ ಸ್ಲೈಡ್‌ಗಳಲ್ಲಿಯೂ ಡಾರ್ಕ್‌ಮೋಡ್‌ ಫೀಚರ್ಸ್‌ ಲಭ್ಯ!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಈಗಾಗಲೇ ತನ್ನ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಕಾಲಕಾಲಕ್ಕೆ ತಕ್ಕಂತೆ ಬಳಕೆದಾರರ ಅವಶ್ಯಕತೆಗೆ ಅನುಗುಣವಾಗಿ ಹೊಸ ಫೀಚರ್ಸ್‌ಗಳನ್ನ ಪರಿಚಯಿಸುತ್ತಾ ಬಂದಿರುವ ಗೂಗಲ್‌ ಇದೀಗ ಆಂಡ್ರಾಯ್ಡ್‌ನಲ್ಲಿ ಗೂಗಲ್ ಡಾಕ್ಸ್, ಗೂಗಲ್ ಶೀಟ್‌ಗಳು ಮತ್ತು ಗೂಗಲ್ ಸ್ಲೈಡ್‌ಗಳಲ್ಲಿಯೂ ಸಹ ಡಾರ್ಕ್ ಮೋಡ್ ಫೀಚರ್ಸ್‌ ಅನ್ನು ಪರಿಚಯಿಸಿದೆ. ಸದ್ಯ ಇದೀಗ ಇದು ಆಂಡ್ರಾಯ್ಡ್ 10ಬೆಂಬಲಿಸುವ ಡಿವೈಸ್‌ಗಳಲ್ಲಿ ಈ ಫೀಚರ್ಸ್‌ ಲಭ್ಯವಾಗಲಿದೆ.

ಗೂಗಲ್‌

ಹೌದು, ಗೂಗಲ್‌ ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಗೂಗಲ್ ಡಾಕ್ಸ್, ಗೂಗಲ್ ಶೀಟ್‌ಗಳು ಮತ್ತು ಗೂಗಲ್ ಸ್ಲೈಡ್‌ಗಳಲ್ಲಿಯೂ ಸಹ ಡಾರ್ಕ್ ಮೋಡ್ ಫೀಚರ್ಸ್‌ ಅನ್ನು ಪರಿಚಯಿಸಿದೆ. ಸದ್ಯ ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಈ ಫೀಚರ್ಸ್‌ ಲಭ್ಯವಿದೆ. ಈ ಡಿವೈಸ್‌ಗಳಲ್ಲಿ ನೀವು ಈಗಾಗಲೇ ಡಾರ್ಕ್ ಥೀಮ್ ಅನ್ನು ಸಕ್ರಿಯಗೊಳಿಸಿದ್ದರೆ ಗೂಗಲ್ ಡಾಕ್ಸ್, ಗೂಗಲ್ ಶೀಟ್‌ಗಳು ಮತ್ತು ಗೂಗಲ್ ಸ್ಲೈಡ್‌ಗಳಲ್ಲಿ ಡಾರ್ಕ್‌ ಥೀಮ್ ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುತ್ತದೆ ಎಂದು ಹೇಳಲಾಗ್ತಿದೆ. ಹಾಗಾದ್ರೆ ಗೂಗಲ್‌ ಡಾಕ್ಸ್‌, ಗೂಗಲ್‌ ಶೀಟ್‌ಗಳಲ್ಲಿ ಡಾರ್ಕ್‌ ಥೀಮ್‌ ಅನ್ನು ಸಕ್ರಿಯಗೊಳಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಗೂಗಲ್‌

ಗೂಗಲ್‌ ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಗೂಗಲ್ ಡಾಕ್ಸ್, ಗೂಗಲ್ ಶೀಟ್‌ಗಳು ಮತ್ತು ಗೂಗಲ್ ಸ್ಲೈಡ್‌ಗಳನ್ನ ಡಾರ್ಕ್ ಮೋಡ್ ಫೀಚರ್ಸ್‌ ಬೆಂಬಲಿಸುವಂತೆ ಮಾಡಿದ್ದು, ಇದನ್ನ ನಿಮ್ಮ ಸೆಟ್ಟಿಂಗ್‌ಗಳಿಂದ ನೀವು ಡಾರ್ಕ್ ಥೀಮ್ ಅನ್ನು ಸಕ್ರಿಯಗೊಳಿಸಬಹುದು. ಇದಕ್ಕಾಗಿ ನೀವು ಗೂಗಲ್‌ನಲ್ಲಿ ಸೆಟ್ಟಿಂಗ್‌ಗಳಿಗೆ ಹೋಗಿ, ಡಿಸ್‌ಪ್ಲೇ ಕ್ಲಿಕ್ ಮಾಡಿ ನಂತರ ಅದನ್ನು ಸಕ್ರಿಯಗೊಳಿಸಲು ಥೀಮ್ ಕ್ಲಿಕ್ ಮಾಡಿದರೆ ಸಾಕು ಡಾರ್ಕ್‌ ಥೀಮ್‌ ಸಕ್ರಿಯಗೊಳ್ಳಲಿದೆ. ಅಲ್ಲದೆ ಎಲ್ಲಾ ಅಪ್ಲಿಕೇಶನ್‌ಗಳಲ್ಲಿ ಡಾರ್ಕ್ ಥೀಮ್ ಕಾರ್ಯನಿರ್ವಹಿಸಲು ನೀವು ಬಯಸದಿದ್ದರೆ, ನೀವು ಪ್ರತಿ ಅಪ್ಲಿಕೇಶನ್‌ಗೆ ಪ್ರತ್ಯೇಕವಾಗಿ ಈ ಫೀಚರ್ಸ್‌ ಅನ್ನು ಸಕ್ರಿಯಗೊಳಿಸಬಹುದು ಅಥವಾ ನಿಷ್ಕ್ರಿಯಗೊಳಿಸಬಹುದಾಗಿದೆ.

ಗೂಗಲ್

ಇದಲ್ಲದೆ ನೀವು ಗೂಗಲ್ ಡಾಕ್ಸ್, ಗೂಗಲ್ ಶೀಟ್‌ಗಳು ಮತ್ತು ಗೂಗಲ್ ಸ್ಲೈಡ್‌ಗಳಲ್ಲಿ ಡಾರ್ಕ್ ಮೋಡ್ ಫೀಚರ್ಸ್‌ ಸಕ್ರಿಯಗೊಳಿಸಲು ಮೊದಲಿಗೆ ನೀವು ಅಪ್ಲಿಕೇಶನ್ ತೆರೆಯಬೇಕು, ಮೆನು ಬಟನ್ ಟ್ಯಾಪ್ ಮಾಡಿ, ಸೆಟ್ಟಿಂಗ್‌ಗಳಿಗೆ ಹೋಗಿ ನಂತರ ನಿಮ್ಮ ಥೀಮ್ ಅನ್ನು ಆರಿಸಬೇಕಾಗುತ್ತದೆ. ಸಾಮಾನ್ಯವಾಗಿ ಡಾರ್ಕ್ ಥೀಮ್ ಕಣ್ಣುಗಳ ಮೇಲೆ ಸುಲಭವಾಗಿರುತ್ತದೆ ಮತ್ತು ತಡರಾತ್ರಿ ನಿಮ್ಮ ಫೋನ್ ಅನ್ನು ನೋಡುವಾಗ ಡಾರ್ಕ್‌ಥೀಮ್ ನಿಂದಾಗಿ ನಿಮ್ಮ ಕಣ್ಣುಗಳಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ.

ಡಾರ್ಕ್ ಮೋಡ್

ನಿವು ಡಾರ್ಕ್ ಮೋಡ್‌ ಅನ್ನು ಸಕ್ರಿಯಗೊಳಿಸುವುದರಿಂದ ನೀವು ಕೆಲಸ ಮಾಡುತ್ತಿರುವ ಫೈಲ್ ಅನ್ನು ಡಾರ್ಕ್‌ಮೋಡ್‌ನಲ್ಲಿ ಪ್ರಸ್ತುತಪಡಿಸಲು ನೀವು ಬಯಸದಿದ್ದರೆ, ಇದಕ್ಕಾಗಿ, ಮತ್ತೆ ನೀವು ಸೆಟ್ಟಿಂಗ್‌ಗಳಿಗೆ ಹೋಗುವ ಅವಶ್ಯಕತೆ ಇಲ್ಲ. ಬದಲಿಗೆ ನಿಮ್ಮ ಡಾಕ್ಯುಮೆಂಟ್ ಅನ್ನು ಲೈಟ್ ಮೋಡ್‌ನಲ್ಲಿಯೇ ಪ್ರಿವ್ಯೂ ಮಾಡಬಹುದು. ಅಲ್ಲದೆ ನೀವು ಪ್ರಿವ್ಯೂ ಮಾಡಲು ಬಯಸುವ ನಿಮ್ಮ ಡಾಕ್ಯುಮೆಂಟ್ ಅಥವಾ ಸ್ಲೈಡ್ ತೆರೆದ ನಂತರ, ಮೇಲಿನ ಬಲ ಮೂಲೆಯಲ್ಲಿರುವ 'ಇನ್ನಷ್ಟು' ಗುಂಡಿಯನ್ನು ಟ್ಯಾಪ್ ಮಾಡಿ ಮತ್ತು ನೀವು ಪ್ರಶ್ನೆಯಲ್ಲಿರುವ ಫೈಲ್ ಅನ್ನು ಹಂಚಿಕೊಂಡಾಗ ಅದು ಹೇಗೆ ಕಾಣುತ್ತದೆ ಎಂಬುದನ್ನು ನೋಡಲು 'ಲೈಟ್ ಥೀಮ್‌ನಲ್ಲಿ ವೀಕ್ಷಿಸಿ' ಆಯ್ಕೆಮಾಡಬಹುದಾಗಿದೆ. ಸದ್ಯ ಗೂಗಲ್ ಡಾಕ್ಸ್, ಶೀಟ್‌ಗಳು ಮತ್ತು ಸ್ಲೈಡ್‌ಗಳಿಗಾಗಿ ಡಾರ್ಕ್ ಮೋಡ್ ಇದೀಗ ಲಭ್ಯವಾಗುತ್ತಿದೆ. ಆದರೆ ಇದು ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಾಗಲು ಇನ್ನು ಸ್ವಲ್ಪ ಸಮಯ ಬೇಕಾಗಲಿದೆ. ಸದ್ಯ ಇದೀಗ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಐಒಎಸ್ ಬಳಕೆದಾರರು ಸ್ವಲ್ಪ ಕಾಯಬೇಕಾಗಬಹುದು.

Best Mobiles in India

English summary
Dark mode for Google Docs, Sheets and Slides rolls out today but it might take a little while to reach all smartphones. However, it is only available for Android users right now.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X