ಇನ್ಮುಂದೆ ಗೂಗಲ್‌ ಡ್ರೈವ್‌ ಕೂಡ ಆಫ್‌ಲೈನ್‌ ಮೋಡ್‌ ಬೆಂಬಲಿಸಲಿದೆ!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ನ ಜನಪ್ರಿಯ ಸೇವೆಗಳಲ್ಲಿ ಗೂಗಲ್‌ ಡ್ರೈವ್‌ ಕೂಡ ಸೇರಿದೆ. ಗೂಗಲ್‌ ಡ್ರೈವ್‌ನಲ್ಲಿ ನಿಮ್ಮ ಡೇಟಾವನ್ನು ಸ್ಟೋರೇಜ್‌ ಮಾಡುಬಹುದು. ಪಿಡಿಎಫ್‌ ಫೈಲ್‌, ಆಫೀಸ್‌ ಫೈಲ್‌ ಹಾಗೂ ಇಮೇಜ್‌ಗಳನ್ನು ಸಹ ಸ್ಟೋರೇಜ್‌ ಮಾಡುವುದಕ್ಕೆ ಅವಕಾಶ ನೀಡಲಿದೆ. ಇನ್ನು ಗೂಗಲ್‌ ಡ್ರೈವ್‌ ನಿಮಗೆ 15GB ಉಚಿತ ಸ್ಟೋರೇಜ್‌ ಅವಕಾಶವನ್ನು ಸಹ ನೀಡಲಿದೆ. ಹೆಚ್ಚುವರಿ ಆಯ್ಕೆಗೆ ಸ್ಟೋರೇಜ್‌ ಪ್ಲಾನ್‌ಗಳನ್ನು ಖರೀದಿಸಬೇಕಾಗುತ್ತದೆ. ಆದರೆ ಇದೀಗ ವಿಷಯ ಏನೆಂದರೆ ಗೂಗಲ್‌ ಡ್ರೈವ್‌ ಅನ್ನು ನೀವು ಆಪ್‌ಲೈನ್‌ನಲ್ಲಿಯೂ ಕೂಡ ಬಳಸಬಹುದಾಗಿದೆ.

ಗೂಗಲ್‌

ಹೌದು, ಗೂಗಲ್‌ ಡ್ರೈವ್‌ ಅಪ್ಲಿಕೇಶನ್‌ ಅನ್ನು ನೀವು ಆಫ್‌ಲೈನ್‌ನಲ್ಲಿ ಕೂಡ ಬಳಸಬಹುದಾಗಿದೆ. ಗೂಗಲ್‌ ಡ್ರೈವ್ ಈಗ ಆಫ್‌ಲೈನ್ ಮೋಡ್‌ಗೆ ಬೆಂಬಲವನ್ನು ನೀಡುತ್ತದೆ. ಗೂಗಲ್‌ನ ಬ್ಲಾಗ್ ಪೋಸ್ಟ್‌ನಲ್ಲಿ ಇದರ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಬಳಕೆದಾರರು ಈಗ ಪಿಡಿಎಫ್‌ಗಳು, ಆಫೀಸ್ ಫೈಲ್‌ಗಳು ಮತ್ತು ಚಿತ್ರಗಳನ್ನು ಆಫ್‌ಲೈನ್‌ನಲ್ಲಿ ಬಳಸಲು ಸಾದ್ಯವಾಗಲಿದೆ. ಹಾಗಾದ್ರೆ ಗೂಗಲ್‌ ಡ್ರೈವ್‌ ಅನ್ನು ಆಫ್‌ಲೈನ್‌ನಲ್ಲಿ ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಡ್ರೈವ್‌

ಗೂಗಲ್‌ ಡ್ರೈವ್‌ ಅನ್ನು ಆಫ್‌ಲೈನ್‌ನಲ್ಲಿ ಪ್ರವೇಶಿಸುವ ಮೊದಲು ಫೈಲ್‌ಗಳನ್ನು ನೀವು ಆಫ್‌ಲೈನ್‌ನಲ್ಲಿ ಲಭ್ಯವಾಗುವಂತೆ ಹೈಲೈಟ್‌ ಮಾಡಬೇಕು. ಇದರಿಂದ ನಿಮಗೆ ಇಂಟರ್‌ನೆಟ್‌ ಕನೆಕ್ಟಿವಿಟಿ ಇಲ್ಲದೆ ಹೋದರೂ ಸಹ ಬ್ರೌಸರ್ ಬಳಸಿ ಫೈಲ್‌ಗಳನ್ನು ತೆರೆಯಲು ಅವಕಾಶ ನೀಡುತ್ತದೆ. ಈ ಫೀಚರ್ಸ್‌ ಅನ್ನು ಗೂಗಲ್ 2019 ರಲ್ಲಿಯೇ ಗೂಗಲ್ ಬೀಟಾ ವರ್ಷನ್‌ನಲ್ಲಿ ಪರಿಚಯಿಸಿತ್ತು. ಇದು ವೆಬ್‌ನಲ್ಲಿ ಗೂಗಲ್ ಡ್ರೈವ್ ಬಳಸುವಾಗ ಗೂಗಲ್ ಅಲ್ಲದ ಫೈಲ್ ಪ್ರಕಾರಗಳನ್ನು ಆಫ್‌ಲೈನ್‌ನಲ್ಲಿ ಹೈಲೈಟ್‌ ಮಾಡಲು ಅವಕಾಶ ನೀಡಿತ್ತು.

ಫೀಚರ್ಸ್‌

ಸದ್ಯ ಈ ಫೀಚರ್ಸ್‌ ಇದೀಗ ಎಲ್ಲಾ ಬಳಕೆದಾರರಿಗೆ ಲಭ್ಯವಿದೆ. ಆದ್ದರಿಂದ, ನೀವು ಕೂಡ ನಿಮ್ಮ ಗೂಗಲ್‌ ಡ್ರೈವ್‌ನಲ್ಲಿ ಇರುವ ಪಿಡಿಎಫ್‌ಗಳು, ಇಮೇಜ್‌ಗಳು ಮತ್ತು ಮೈಕ್ರೋಸಾಫ್ಟ್ ಆಫೀಸ್ ದಾಖಲೆಗಳನ್ನು ಆಫ್‌ಲೈನ್‌ನಲ್ಲಿ ಪ್ರವೇಶಿಸಲು ಸಾಧ್ಯವಾಗಲಿದೆ. ಇನ್ನು ನೀವು ಗೂಗಲ್‌ ಡ್ರೈವ್‌ ಅನ್ನು ಆಫ್‌ಲೈನ್‌ನಲ್ಲಿ ಬಳಸುವ ಮೊದಲು ಮ್ಯಾಕ್ ಅಥವಾ ವಿಂಡೋಸ್‌ನಲ್ಲಿ ಡೆಸ್ಕ್‌ಟಾಪ್ ಅಪ್ಲಿಕೇಶನ್‌ ಆವೃತ್ತಿಯಲ್ಲಿ ಗೂಗಲ್ ಡ್ರೈವ್ ಅನ್ನು ಇನ್‌ಸ್ಟಾಲ್‌ ಮಾಡಿರಬೇಕು. ಇದಲ್ಲದೆ, "ಆಫ್‌ಲೈನ್" ಪ್ರವೇಶ ಆಯ್ಕೆಯನ್ನು ವೆಬ್‌ ಡ್ರೈವ್ ಸೆಟ್ಟಿಂಗ್‌ಗಳಲ್ಲಿ ಆಕ್ಟಿವ್‌ ಮಾಡಿರಬೇಕು. ಸೆಟಪ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಬೆಂಬಲಿತ ಫೈಲ್ ಮೇಲೆ ರೈಟ್‌ ಕ್ಲಿಕ್ ಮಾಡಿದರೆ "ಆಫ್‌ಲೈನ್ ಲಭ್ಯವಿದೆ" ಎಂಬ ಟಾಗಲ್ ತೋರಿಸುತ್ತದೆ.

ಗೂಗಲ್

ಇನ್ನು ಈ ಫೀಚರ್ಸ್‌ ಎಲ್ಲಾ ಗೂಗಲ್ ವರ್ಕ್‌ಸ್ಪೇಸ್ ಗ್ರಾಹಕರಿಗೆ ಲಭ್ಯವಿದೆ, ಜೊತೆಗೆ ಕ್ಲೌಡ್ ಐಡೆಂಟಿಟಿ ಫ್ರೀ, ಕ್ಲೌಡ್ ಐಡೆಂಟಿಟಿ ಪ್ರೀಮಿಯಂ, ಜಿ ಸೂಟ್ ಬೇಸಿಕ್ ಮತ್ತು ಬಿಸಿನೆಸ್ ಗ್ರಾಹಕರಿಗೆ ಕೂಡ ಲಭ್ಯವಿದೆ. ವೈಯಕ್ತಿಕ ಖಾತೆಗಳನ್ನು ಹೊಂದಿರುವವರಿಗೆ ಕೂಡ ಇದು ಲಭ್ಯವಾಗುವಂತೆ ಮಾಡಲು ಗೂಗಲ್‌ ಕ್ರಮ ಕೈಗೊಂಡಿದೆ. ಇನ್ನು ಗೂಗಲ್‌ ಡ್ರೈವ್‌ನಲ್ಲಿ ನಿಮ್ಮ 15GB ಫ್ರೀ ಸ್ಟೋರೇಜ್‌ ಸ್ಪೇಸ್‌ ಖಾಲಿ ಮಾಡಿದದ್ದರೆ, ಬ್ಯಾಕಪ್ ಮಾಡುವುದನ್ನು ಕಂಟಿನ್ಯೂ ಮಾಡಲು ಭಾರತದಲ್ಲಿ, ಬಳಕೆದಾರರು ಮಾಸಿಕ ಮತ್ತು ವಾರ್ಷಿಕ ಯೋಜನೆಗಳಿಂದ ಹೆಚ್ಚುವರಿ ಸ್ಟೊರೇಜ್‌ ಅನ್ನು ಆಯ್ಕೆ ಮಾಡಬಹುದು.

Best Mobiles in India

English summary
Google Drive will now allow users to access PDFs, Office files, and images in offline mode. Read on to know more.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X