ಗೂಗಲ್ ಉದ್ಯೋಗಿಗಳ ವಿಶ್ವಾಸ ಕಳೆದುಕೊಂಡ ಸುಂದರ್ ಪಿಚೈ!..ಕಾರಣ ಏನು?

|

ಪ್ರಖ್ಯಾತ ಸರ್ಚ್​ ಎಂಜಿನ್ ದೈತ್ಯ ಗೂಗಲ್​ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ)ಯಾಗಿರುವ ಭಾರತೀಯ ಸುಂದರ್ ಪಿಚೈ ಅವರ ಮೇಲೆ ಗೂಗಲ್ ಉದ್ಯೋಗಿಗಳ ವಿಶ್ವಾಸ ಸ್ವಲ್ಪ ಕಡಿಮೆಯಾಗಿರುವ ಬಗ್ಗೆ ವರದಿಯಾಗಿದೆ. ಸುಂದರ್ ಪಿಚೈ ಅವರು ಭವಿಷ್ಯದಲ್ಲಿ ಗೂಗಲ್ ಕಂಪನಿಯನ್ನು ಪರಿಣಾಮಕಾರಿಯಾಗಿ ಹಾಗೂ ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗಲಿದ್ದಾರೆಯೇ ಎಂಬ ಪ್ರಶ್ನೆಗೆ ಈ ಬಾರಿ ಗೂಗಲ್ ಉದ್ಯೋಗಿಗಳಿಂದ ಸ್ವಲ್ಪ ಕಡಿಮೆ ಅಂಕಗಳು ಲಭಿಸಿವೆ.

ಗೂಗಲ್ ಕಂಪನಿಯ ಆಂತರಿಕ ಸಮೀಕ್ಷೆಯಲ್ಲಿ, ಪಿಚೈ ಅವರು ಭವಿಷ್ಯದಲ್ಲಿ ಗೂಗಲ್ ಕಂಪನಿಯನ್ನು ಪರಿಣಾಮಕಾರಿಯಾಗಿ ಹಾಗೂ ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗಲಿದ್ದಾರೆಯೇ ಎಂಬ ಪ್ರಶ್ನೆಯನ್ನು ಈ ಬಾರಿಯೂ ಮುಂದಿಡಲಾಗಿತ್ತು. ಈ ಪ್ರಶ್ನೆ ಶೇ 74ರಷ್ಟು ಗೂಗಲ್ ಉದ್ಯೋಗಿಗಳು ಸಮ್ಮತಿ ಸೂಚಿಸಿದ್ದಾರೆ. ಆದರೆ, ಕಳೆದ ವರ್ಷ ಈ ಪ್ರಶ್ನೆಗೆ ಇದಕ್ಕಿಂತಲೂ ಹೆಚ್ಚು ಧನಾತ್ಮಕ ಉತ್ತರ ಪಡೆದಿದ್ದ ಪಿಚೈ ಅವರಿಗೆ ಈ ವರ್ಷ ವಿಶ್ವಾಸದ ಕೊರತೆ ಎದುರಾಗಿದೆ.

ಗೂಗಲ್ ಉದ್ಯೋಗಿಗಳ ವಿಶ್ವಾಸ ಕಳೆದುಕೊಂಡ ಸುಂದರ್ ಪಿಚೈ!..ಕಾರಣ ಏನು?

2018ರ ಅಂತ್ಯದ ವೇಳೆಯಲ್ಲಿ ಕಂಪನಿಯನ್ನು ಪರಿಣಾಮಕಾರಿಯಾಗಿ ಮುನ್ನಡೆಸಿದ ಪಿಚೈ ಅವರ ಸಾಮರ್ಥ್ಯದ ಬಗ್ಗೆ ನಾಲ್ಕರಲ್ಲಿ ಮೂವರು ಗೂಗಲ್ ಉದ್ಯೋಗಿಗಳು (ಶೇ74) 'ಸಕರಾತ್ಮಕ' ಪ್ರತಿಕ್ರಿಯೆ ನೀಡಿದ್ದಾರೆ. ಒಟ್ಟಾರೆ ಸಮೀಕ್ಷೆಯ ಫಲಿತಾಂಶದಲ್ಲಿ ಶೇ 74ರಷ್ಟು ಉದ್ಯೋಗಿಗಳು ಧನಾತ್ಮಕ ಉತ್ತರ ನೀಡಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಇದೇ ಪ್ರಶ್ನೆಗೆ ಶೇ 92 ರಷ್ಟು ಉದ್ಯೋಗಿಗಳು ನಕರಾತ್ಮಕವಾಗಿ ಸ್ಪಂದಿಸಿದ್ದರು ಎಂದು ಪ್ರಮುಖ ಮಾಧ್ಯಮಗಳು ವರದಿ ಮಾಡಿದೆ.

2018ರ ನವೆಂಬರ್​ನಲ್ಲಿ ಕಂಪನಿಯಲ್ಲಿ ಲೈಂಗಿಕ ಕಿರುಕುಳ ನಡೆಯುತ್ತಿದೆ ಎಂದು 2,000ಕ್ಕೂ ಅಧಿಕ ನೌಕರರು ಪ್ರತಿಭಟನೆ ನಡೆಸಿದ್ದರಿಂದ ಈ ಸಮೀಕ್ಷಾ ಫಲಿತಾಂಶದಲ್ಲಿ ಏರುಪೇರಾಗಿದೆ ಎಂದು ವರದಿಗಳು ಹೇಳಿವೆ. ಇದೇ ಕಾರಣದಿಂದ ಕಳೆದ ಆರು ವರ್ಷಗಳಲ್ಲೇ ಅತಿ ಹೆಚ್ಚು ವಿಶ್ವಾಸದ ಕೊರತೆ ಈ ಬಾರಿಯ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ ಎಂದು ಹೇಳಲಾಗಿದ್ದು, ಏನೇ ಆದರೂ ಸುಂದರ್ ಪಿಚೈ ಅವರ ಮೇಲೆ ಉದ್ಯೋಗಿಗಳ ವಿಶ್ವಾಸ ಸ್ವಲ್ಪ ಕಡಿಮೆಯಾಗಿರುವುದು ಸ್ಪಷ್ಟ ಎಂದು ತಿಳಿಸಿವೆ.

ಗೂಗಲ್ ಉದ್ಯೋಗಿಗಳ ವಿಶ್ವಾಸ ಕಳೆದುಕೊಂಡ ಸುಂದರ್ ಪಿಚೈ!..ಕಾರಣ ಏನು?

ಇನ್ನು ಈ ಆಂತರಿಕ ಸಮೀಕ್ಷೆಯಿಂದ ಸುಂದರ್‌ ಪಿಚೈ ನಾಯಕತ್ವಕ್ಕೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಹೇಳಲಾಗಿದೆ. ಪಿಚೈ ಅವರ ನಾಯಕತ್ವದಲ್ಲಿ ಗೂಗಲ್ ಉತ್ತಮ ದಾಪುಗಾಲನ್ನು ಇಟ್ಟಿದ್ದು, ಪಿಚೈ ಅವರ ನಾಯಕತ್ವದಲ್ಲಿ ಸಂಶೋಧನೆಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗೂಗಲ್ ಹೆಸರುಗಳಿಸಿದೆ ಎಂಬುದು ಕೂಡ ಟೆಕ್ ಲೋಕ ಒಪ್ಪಿದೆ. ಒಟ್ಟಿನಲ್ಲಿ ಹೆಚ್ಚು ಉದ್ಯೋಗಿಗಳ ವಿಶ್ವಾಸವನ್ನು ಗಳಿಸಿಕೊಳ್ಳಲು ಪಿಚೈ ವಿಫಲರಾದರೂ ಸಹ ನಾಯಕರಾಗಿ ಯಶಸ್ವಿಯಾಗಿದ್ದಾರೆ.

Best Mobiles in India

English summary
Far less Google employees are now "positive" than a year ago about the company's chief executive officer (CEO) Sundar Pichai . to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X