ಟೀಮ್‌ ಇಂಡಿಯಾ ಲೈವ್‌ ಮ್ಯಾಚ್ ಪ್ರಸಾರಕ್ಕೆ ಫೇಸ್‌ಬುಕ್‌-ಗೂಗಲ್-ಜಿಯೋ ಪೈಫೋಟಿ...!

|

ಭಾರತದಲ್ಲಿ ಕ್ರಿಕೆಟ್ ಕ್ರೇಜ್ ಹೆಚ್ಚಾಗಿರುವುದು ಎಲ್ಲಿರಿಗೂ ತಿಳಿದಿರುವ ವಿಚಾರ. ಇದರ ಲಾಭವನ್ನು ಪಡೆಯಲು ಪ್ರತಿಯೊಬ್ಬರು ಮುಂದಾಗುತ್ತಿರುವುದು ತಿಳಿದೆ ಇದೆ. ಈ ಹಿನ್ನಲೆಯಲ್ಲಿಯೇ ಟೀಮ್ ಇಂಡಿಯಾ ಪಂದ್ಯಗಳ ನೇರಾ ಪ್ರಸಾರವನ್ನು ಮಾಡಲು ಟಿವಿ ಚಾನಲ್‌ಗಳು ಕೋಟಿ-ಕೋಟಿ ಹಣವನ್ನು ಬಿಡ್ ಮಾಡುತ್ತಾರೆ. ಕಾರಣ ಕ್ಷಣ ಜಾಹೀರಾತಿಗೆ ಕೋಟಿ-ಕೋಟಿ ಪಡೆಯುವುದು ಅವರಿಗೆ ತಿಳಿದಿದೆ. ಒಟ್ಟಿನಲ್ಲಿ ಭಾರತದಲ್ಲಿ ಕ್ರಿಕೆಟ್ ನಲ್ಲಿ ಲಾಭವಿದೆ ಎಂದು ತಿಳಿದಿರುವ ಕಂಪನಿಗಳು ಹೆಚ್ಚಿನ ಪ್ರಮಾಣದಲ್ಲಿ ಆಸಕ್ತಿಯನ್ನು ತೋರಿಸುತ್ತಿವೆ.

ಟೀಮ್‌ ಇಂಡಿಯಾ ಲೈವ್‌ ಮ್ಯಾಚ್ ಪ್ರಸಾರಕ್ಕೆ ಫೇಸ್‌ಬುಕ್‌-ಗೂಗಲ್-ಜಿಯೋ ಪೈಫೋಟಿ...!

ಬಿಸಿಸಿಐ ಈ ಬಾರಿ ಐದು ವರ್ಷಗಳ ಕ್ರಿಕೆಟ್ ಪಂದ್ಯದ ನೇರಾ ಪ್ರಸಾರದ ಹಕ್ಕುಗಳ ಹರಾಜು ಪ್ರಕ್ರಿಯೆಯನ್ನು ನಡೆಸಲು ಮುಂದಾಗಿದ್ದು, ಇದರಲ್ಲಿ ಗೂಗಲ್. ಫೇಸ್‌ಬುಕ್‌ ಸೇರಿದಂತೆ ದೈತ್ಯ ಕಂಪನಿಗಳು ಭಾಗಿಯಾಗಲಿವೆ ಎನ್ನಲಾಗಿದೆ. ಹರಾಜು ಪ್ರಕ್ರಿಯೆಯಲ್ಲಿ ಸ್ಟಾರ್ ಇಂಡಿಯಾ ಮತ್ತು ಸೋನಿ ಪಿಕ್ಚರ್ಸ್ ಜತೆಗೆ ರಿಲಯನ್ಸ್ ಜಿಯೋ ಸಹ ಬಿಡ್ ಮಾಡಲಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಏಪ್ರಿಲ್ 3ರಂದು 2023ರವರೆಗೆ ಟೀಮ್ ಇಂಡಿಯಾ ಪಂದ್ಯಗಳ ನೇರಾ ಪ್ರಸಾರ ಹಕ್ಕುಗಳ ಹರಾಜು ಪ್ರಕ್ರಿಯೆಯನ್ನು ನಡೆಸಲಿದೆ. ಈ ಹಿನ್ನಲೆಯಲ್ಲಿ ಚಾನಲ್‌ಗಳೊಂದಿಗೆ ಟೆಕ್ ಕಂಪನಿಗಳು ಭಾಗಿಯಾಗುತ್ತಿವೆ. ಇದಲ್ಲದೇ ಇದೇ ಮೊದಲ ಬಾರಿಗೆ ಸರ್ಚ್ ಇಂಜಿನ್ ದೈತ್ಯ ಗೂಗಲ್ ಸಹ ಭಾರತೀಯ ಕ್ರೀಡೆಯ ಪ್ರಸಾರ ಹಕ್ಕಿಗಾಗಿ ಬಿಡ್ ಮಾಡುತ್ತಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.

ಟೀಮ್‌ ಇಂಡಿಯಾ ಲೈವ್‌ ಮ್ಯಾಚ್ ಪ್ರಸಾರಕ್ಕೆ ಫೇಸ್‌ಬುಕ್‌-ಗೂಗಲ್-ಜಿಯೋ ಪೈಫೋಟಿ...!

2018ರ ಏಪ್ರಿಲ್ 15ರಿಂದ 2023ರ ಮಾರ್ಚ್ 31ರವರೆಗಿನ ಇಂಡಿಯಾ ಕ್ರಿಕೆಟ್ ಪುರುಷರ ಮತ್ತು ಮಹಿಳೆ ಮತ್ತು ದೇಶೀ ಕ್ರಿಕೆಟ್ ಮೂರು ವಿಭಾಗದ ಪ್ರಸಾರ ಹಕ್ಕುಗಳ ಹರಾಜು ನಡೆಯಲಿದ್ದು, ಈ ಬಾರಿ ರಿಲಯನ್ಸ್ ಜಿಯೋ ಟೀಮ್ ಇಂಡಿಯಾ ಪಂದ್ಯಗಳ ನೇರಾ ಪ್ರಸಾರ ಹಕ್ಕುಗಳ ಹರಾಜು ಪ್ರಕ್ರಿಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಜಿಯೋ ಟಿವಿಯಲ್ಲಿ ಕ್ರಿಕೆಟ್ ಮ್ಯಾಚ್ ಪ್ರಸಾರಕ್ಕೆ ಮುಂದಾಗಲಿದೆ.

ಈ ಹಿಂದೆ ಫೇಸ್ ಬುಕ್ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಎರಡು ತಿಂಗಳ ಪ್ರಸಾರ ಹಕ್ಕಿಗಾಗಿ ಬಿಡ್ ಮಾಡಿತ್ತು ಆದರೆ ಇದರಲ್ಲಿ ಯಶಸ್ವಿಯಾಗಿರಲಿಲ್ಲ. ಈ ಬಾರಿ ಮತ್ತೊಮ್ಮೆ ಬಿಡ್‌ನಲ್ಲಿ ಭಾಗಿಯಾಗಲು ಮುಂದಾಗಿದೆ. ಅಲ್ಲದೇ ಬಿಸಿಸಿಐ ಈ ಬಾರಿ ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದೆ.

Best Mobiles in India

English summary
Google, Facebook, Reliance Jio Show Intent to Bid for India Cricket Rights on Tuesday. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X