ಗೂಗಲ್ ಫಾರ್ ಇಂಡಿಯಾ 2022 ಈವೆಂಟ್‌ ಪ್ರಾರಂಭ! ಏನೆಲ್ಲಾ ಘೋಷಣೆ ನಿರೀಕ್ಷೆ!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಭಾರತದಲ್ಲಿ ತನ್ನ ವಾರ್ಷಿಕ ಗೂಗಲ್‌ ಫಾರ್‌ ಇಂಡಿಯಾ ಈವೆಂಟ್‌ ಅನ್ನು ಆಯೋಜಿಸಿದೆ. ಭಾರತದಲ್ಲಿ ಗೂಗಲ್‌ ತಾನು ಕೈಗೊಳ್ಳುವ ಕಾರ್ಯಕ್ರಮಗಳು ಹಾಗೂ ಪರಿಚಯಿಸಲಿರುವ ಹೊಸ ಪ್ರಾಡಕ್ಟ್‌ಗಳ ಬಗ್ಗೆ ಈ ಈವೆಂಟ್‌ನಲ್ಲಿ ಘೋಷಣೆ ಮಾಡಲಿದೆ. ಸದ್ಯ ಗೂಗಲ್‌ ಕಂಪೆನಿ ಕಾರ್ಯನಿರ್ವಹಕರು ವಿವಿಧ ಹೊಸ ಉತ್ಪನ್ನಗಳು, ಯೋಜನೆಗಳು ಮತ್ತು ಬೆಳವಣಿಗೆಗಳನ್ನು ಘೋ‍ಷಣೆ ಮಾಡುವ ಮೂಲಕ ಈವೆಂಟ್‌ ಪ್ರಾರಂಭವಾಗಿದೆ.

ಗೂಗಲ್‌

ಹೌದು, ಗೂಗಲ್‌ ತನ್ನ ವಾರ್ಷಿಕ ಗೂಗಲ್ ಫಾರ್ ಇಂಡಿಯಾ ಈವೆಂಟ್ ನಡೆಸುತ್ತಿದೆ. ಇನ್ನು ಈವೆಂಟ್‌ನಲ್ಲಿ ಗೂಗಲ್‌ ಹಲವು ಹೊಸ ಸೇವೆಗಳನ್ನು ಪರಿಚಯಿಸುವ ಸಾಧ್ಯತೆಯಿದೆ. ಅಲ್ಲದೆ ಆಂಡ್ರಾಯ್ಡ್‌ ಮತ್ತು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಹೊಸ ಭಾರತ-ಕೇಂದ್ರಿತ ಫೀಚರ್ಸ್‌ಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ. ಭಾರತದ ಡಿಜಿಟಲ್ ಆರ್ಥಿಕತೆಯನ್ನು ಹೆಚ್ಚಿಸಲು ಗೂಗಲ್‌ ಹೊಸ AI ಆಧಾರಿತ ಸಲ್ಯೂಶನ್‌ಗಳನ್ನು ನೀಡುವ ಹೊಸ ಪಾಲುದಾರಿಕೆಗಳನ್ನು ಘೋ‍ಷಿಸಿದೆ. ಹಾಗಾದ್ರೆ ಗೂಗಲ್‌ ಫಾರ್‌ ಇಂಡಿಯಾ ಈವೆಂಟ್‌ನಲ್ಲಿ ಏನೆಲ್ಲಾ ನಿರೀಕ್ಷೆ ಇಡಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಇಂದಿನಿಂದ (ಡಿ.19) ಶುರುವಾಗಿರುವ ಗೂಗಲ್‌ ಫಾರ್‌ ಇಂಡಿಯಾ ಈವೆಂಟ್‌ನಲ್ಲಿ ಗೂಗಲ್‌ ಹಲವು ಪ್ರಮುಖ ಘೋಷಣೆಗಳನ್ನು ಮಾಡುವ ನಿರೀಕ್ಷೆಯಿದೆ. ಗೂಗಲ್‌ ಇಂಡಿಯಾದ ಮುಖ್ಯಸ್ಥ ಸಂಜಯ್‌ ಗುಪ್ತಾ ಇದರ ಮುನ್ಸೂಚನೆಯನ್ನು ನೀಡಿದ್ದಾರೆ. ಈಗಾಗಲೇ ಗೂಗಲ್‌ನ ಇಂಡಿಯಾ ಡಿಜಿಟೈಸೇಶನ್ ಫಂಡ್ 2020 ಮತ್ತು ಮಹಿಳಾ ನೇತೃತ್ವದ ಉದ್ಯಮಗಳಲ್ಲಿ ಹೂಡಿಕೆ ಮಾಡುವ ಕಂಪನಿಯ ಪ್ಲಾನ್‌ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಭಾರತದಲ್ಲಿ AI ಸಲ್ಯೂಶನ್‌ಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಕಂಪನಿಯ ಪ್ರಯತ್ನದ ಬಗ್ಗೆ ಕೂಡ ಮಾಹಿತಿ ಹಂಚಿಕೊಂಡಿದ್ದಾರೆ.

ಗೂಗಲ್

ಇನ್ನು ಗೂಗಲ್ ಫಾರ್ ಇಂಡಿಯಾ 2022 ಈವೆಂಟ್‌ನ ಎಂಟನೇ ಆವೃತ್ತಿಯ ಅಪ್ಡೇಟ್‌ಗಳನ್ನು ಗೂಗಲ್‌ನ ಅಧಿಕೃತ ಟ್ವಿಟರ್ ಮತ್ತು ಫೇಸ್‌ಬುಕ್ ಹ್ಯಾಂಡಲ್‌ಗಳಲ್ಲಿ ವೀಕ್ಷಿಸಬಹುದಾಗಿದೆ. ಅಲ್ಲದೆ ಗೂಗಲ್‌ ಒಡೆತನದ ಯುಟ್ಯೂಬ್‌ ಅಧಿಕೃತ ಹ್ಯಾಂಡಲ್‌ನಲ್ಲಿ ಈವೆಂಟ್‌ ಲೈವ್‌ ಸ್ಟ್ರೀಮ್‌ ಆಗುತ್ತಿದೆ. ಇನ್ನು ಈ ಈವೆಂಟ್‌ನಲ್ಲಿ ಗೂಗಲ್ ತನ್ನ ಡಿಜಿಟಲ್ ಪಾವತಿಗಳ ಪ್ಲಾಟ್‌ಫಾರ್ಮ್ ಗೂಗಲ್ ಪೇನಲ್ಲಿ ಹೊಸ ಅಪ್ಡೇಟ್‌ಗಳನ್ನು ಪರಿಚಯಿಸುವ ನಿರೀಕ್ಷೆ ಕೂಡ ಇದೆ.

ಗೂಗಲ್

ಇದಲ್ಲದೆ ಗೂಗಲ್ ಸರ್ಚ್‌, ಯೂಟ್ಯೂಬ್ ಮತ್ತು ಗೂಗಲ್ ಕ್ಲೌಡ್‌ನಲ್ಲಿ ಭಾರತ ಕೇಂದ್ರಿತ ಫೀಚರ್ಸ್‌ಗಳನ್ನು ಪರಿಚಯಿಸುವ ಸಾಧ್ಯತೆಯಿದೆ. ಜೊತೆಗೆ ಭಾರತದ ಡಿಜಿಟಲ್ ಆರ್ಥಿಕತೆಯನ್ನು ಪ್ರತಿಯೊಬ್ಬ ಭಾರತೀಯರಿಗೂ ತಲುಪಿಸುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ಶೇರ್‌ ಮಾಡಲಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ AI ನಲ್ಲಿ ಗೂಗಲ್‌ನ ಟೆಕ್ನಾಲಜಿ ಹೂಡಿಕೆಗಳ ಬಗ್ಗೆ ಮಾಹಿತಿ ಹೊರಬೀಳುವ ಸಾದ್ಯತೆಯಿದೆ.

ಪ್ರಾಜೆಕ್ಟ್ ವಾಣಿ

ಪ್ರಾಜೆಕ್ಟ್ ವಾಣಿ

ಸದ್ಯ ಗೂಗಲ್‌ ಫಾರ್‌ ಇಂಡಿಯಾ ಈವೆಂಟ್‌ನಲ್ಲಿ ಉತ್ತಮ AI ಭಾಷಾ ಮಾದರಿಗಳನ್ನು ನಿರ್ಮಿಸಲು ಹೊಸ ಪ್ರಾಜೆಕ್ಟ್ ವಾಣಿಯನ್ನು ಘೋಷಿಸಲಾಗಿದೆ. ಇದು ವೈವಿಧ್ಯಮಯ ಭಾರತೀಯ ಉಪಭಾಷೆಗಳನ್ನು ಸೆರೆಹಿಡಿಯಲು ಕಂಪನಿಯು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು ಜೊತೆಗೆ ಸಹಯೋಗವನ್ನು ಹೊಂದಿದೆ. ಇನ್ನು ಈ ಪ್ಲಾನ್‌ನಿಂದ ಭಾರತದ ಎಲ್ಲಾ 773 ಜಿಲ್ಲೆಗಳಿಂದ ಭಾಷೆಗಳ ಡೇಟಾವನ್ನು ಸಂಗ್ರಹಿಸುವ ಮತ್ತು ಕಾಪಿ ಮಾಡುವ ಗುರಿಯನ್ನು ಹೊಂದಿದೆ. ಭವಿಷ್ಯದಲ್ಲಿ ಇದು ಕೇಂದ್ರದ 'ಭಾಷಿಣಿ' ಯೋಜನೆಯ ಮೂಲಕ ಲಭ್ಯವಾಗುವಂತೆ ಮಾಡುತ್ತದೆ ಎಂದು ಕಂಪನಿಯು ಘೋಷಿಸಿದೆ.

ಗೂಗಲ್

ಇದಲ್ಲದೆ ಗೂಗಲ್ ಸರ್ಚ್‌ನಲ್ಲಿ ಕೂಡ ಹೊಸ ಅಪ್ಡೇಟ್‌ಗಳನ್ನು ಘೋಷಣೆ ಮಾಡಿದೆ. ಇದರಲ್ಲಿ ದ್ವಿಭಾಷಾ ಬಳಕೆದಾರರ ಅಗತ್ಯತೆಗಳು ಮತ್ತು ಕ್ಯಾಮೆರಾ ಮತ್ತು ಧ್ವನಿಯನ್ನು ಬಳಸಿಕೊಂಡು ಹೊಸ ಹುಡುಕಾಟ ಸಾಮರ್ಥ್ಯಗಳನ್ನು ಕೇಂದ್ರೀಕರಿಸಲಾಗಿದೆ. ಅಲ್ಲದೆ ಗೂಗಲ್‌ ಪೇನಲ್ಲಿ ಸುರಕ್ಷಿತ ಡಿಜಿಟಲ್ ಪಾವತಿಗಳಿಗಾಗಿ ಹೊಸ ವಂಚನೆ ಪತ್ತೆ ಮಾದರಿಯನ್ನು ಕೂಡ ಪರಿಚಯಿಸಲಾಗಿದೆ.

Best Mobiles in India

English summary
Google for India 2022 event: What to expect?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X