ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ ಬಳಸುವವರಿಗೆ ಗೂಗಲ್‌ನಿಂದ ಶಾಕಿಂಗ್‌ ಸುದ್ದಿ!

|

ಡೆಬಿಟ್‌ ಕಾರ್ಡ್‌ಮತ್ತು ಕ್ರೆಡಿಟ್‌ ಕಾರ್ಡ್‌ ಬಳಸುವವರಿಗೆ ಗೂಗಲ್‌ ಶಾಕಿಂಗ್‌ ಸುದ್ದಿಯನ್ನು ತಿಳಿಸಿದೆ. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಹೊಸ ಮಾರ್ಗಸೂಚಿಗಳ ಅನ್ವಯ ಗ್ರಾಹಕರ ಕಾರ್ಡ್‌ಗಳನ್ನು ಬದಲಾಯಿಸಬೇಕೆಂಬ ವಿಚಾರವನ್ನು ಬಹಿರಂಗಪಡಿಸಿದೆ. ಮುಂದಿನ ವರ್ಷ ಜನವರಿ 1, 2022 ರಿಂದ, ಪ್ರಸ್ತುತ ಸ್ವರೂಪದಲ್ಲಿ ಲಭ್ಯವಿರುವ ಕಾರ್ಡ್ ಸಂಖ್ಯೆ ಮತ್ತು ಮುಕ್ತಾಯ ದಿನಾಂಕದಂತಹ ಗ್ರಾಹಕರ ಕಾರ್ಡ್ ವಿವರಗಳನ್ನು ಉಳಿಸಲು ಸಾಧ್ಯವಾಗುವುದಿಲ್ಲ ಎಂದು ತನ್ನ ಬಳಕೆದಾರರಿಗೆ ತಿಳಿಸಿದೆ.

ಗೂಗಲ್‌

ಹೌದು, ಮುಂದಿನ ವರ್ಷದಿಂದ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮಾರ್ಗಸೂಚಿಯನ್ನು ಗೂಗಲ್‌ ಅನುಸರಿಬೇಕಾಗುತ್ತದೆ. ಇದರಿಂದ ಪೇಮೆಂಟ್ ಅಗ್ರಿಗೇಟರ್ಸ್ (ಪಿಎ) ಮತ್ತು ಪೇಮೆಂಟ್ ಗೇಟ್‌ವೇಸ್ (ಪಿಜಿ) ಗಾಗಿ ಆರ್‌ಬಿಐ ಮಾರ್ಗಸೂಚಿಗಳನ್ನು ಗೂಗಲ್‌ ಪಾಲಿಸಬೇಕಾಗುತ್ತದೆ. ಇದರಿಂದ ಅನೇಕ ಬಳಕೆದಾರರು ಚಂದಾದಾರಿಕೆ ಆಧಾರಿತ ಸೇವೆಗಳಿಗೆ ಮಾಸಿಕ ಪಾವತಿಗಳನ್ನು ಮಾಡಲು ಸೇವ್‌ ಮಾಡಿರುವ ಕಾರ್ಡ್ ಸಂಖ್ಯೆಯನ್ನು ಅಳಿಸಲಾಗುತ್ತದೆ ಎನ್ನಲಾಗುತ್ತದೆ. ಹಾಗಾದ್ರೆ ಗೂಗಲ್‌ ಬಳಕೆದಾರರಿಗೆ ನೀಡಿದ ಹೊಸ ಮಾಹಿತಿ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಗೂಗಲ್‌ ತನ್ನ ಬಳಕೆದಾರರಿಗೆ ನೀಡಿರುವ ಮಾಹಿತಿಯಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹೊಸ ಕಾರ್ಡ್ ಶೇಖರಣಾ ನಿಯಮಗಳನ್ನು ಬದಲಾಯಿಸಿದೆ. ಈ ಹೊಸ ಮಾರ್ಗಸೂಚಿ ಅನ್ವಯ ಕಾರ್ಡ್ ವಿತರಕರು ಮತ್ತು ಕಾರ್ಡ್ ನೆಟ್‌ವರ್ಕ್‌ಗಳನ್ನು ಹೊರತುಪಡಿಸಿ ಯಾವುದೇ ಘಟಕ ಅಥವಾ ವ್ಯಾಪಾರಿಗಳು ಜನವರಿ 1, 2022 ರಿಂದ ಕಾರ್ಡ್ ವಿವರಗಳನ್ನು ಅಥವಾ ಕಾರ್ಡ್-ಆನ್-ಫೈಲ್ (CoF) ಅನ್ನು ಸಂಗ್ರಹಿಸಬಾರದು ಎಂದು RBI ಹೇಳಿದೆ. ಜೊತೆಗೆ ಅದೇ ಸಮಯದಲ್ಲಿ, ಇದು ಸಹ ಕಾರ್ಡ್ ವಿತರಕರಿಂದ CoF ನ ವಿಸ್ತೃತ ಟೋಕನೈಸೇಶನ್ ಹೊಂದಿರಲಿದೆ ಎನ್ನಲಾಗಿದೆ.

ವಹಿವಾಟು

ಮುಂದಿನ ವರ್ಷದ ಜನವರಿ 1, 2022 ರಿಂದ ಜಾರಿಗೆ ಬರುವಂತೆ, ಕಾರ್ಡ್ ವಿತರಕರು ಮತ್ತು ಕಾರ್ಡ್ ನೆಟ್‌ವರ್ಕ್‌ಗಳನ್ನು ಹೊರತುಪಡಿಸಿ ಕಾರ್ಡ್ ವಹಿವಾಟು ಅಥವಾ ಪಾವತಿ ಸರಪಳಿಯಲ್ಲಿ ಯಾವುದೇ ಯೂನಿಟ್‌ಗೆ ನಿಮ್ಮ ಕಾರ್ಡ್‌ ಮಾಹಿತಿಯನ್ನು ಶೇಖರಿಸುವ ಹಕ್ಕು ನೀಡಿಲ್ಲ. ಅಲ್ಲದೆ ನೀವು ಕೂಡ ನಿಮ್ಮ ಕಾರ್ಡ್‌ ಮಾಹಿತಿಯನ್ನು ಹಂಚಿಕೊಳ್ಳಬಾರದು ಎಂದು ಹೇಳಲಾಗಿದೆ. ಅಲ್ಲದೆ ಈ ಹಿಂದೆ ಸಂಗ್ರಹಿಸಿದ ಕಾರ್ಡ್‌ಗಳ ಡೇಟಾವನ್ನು ಶುದ್ಧೀಕರಿಸಲಾಗುತ್ತದೆ ಎಂದು ಆರ್‌ಬಿಐ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ. ಈ ಹೊಸ ನಿಯಮ ಜಾಅರಿಗೆ ಬಂದಲಿ ಅನೇಕ ಬಳಕೆದಾರರು ತಮ್ಮ ಮಾಸಿಕ ಪಾವತಿ ಮಾಡುವುದಕ್ಕೆ ಕಾರ್ಡ್‌ ಇವರಗಳನ್ನು ನಮೂದಿಸುವ ಅವಶ್ಯಕತೆ ಬರುವುದಿಲ್ಲ.

ಹೊಸ

ಇನ್ನು ಈ ಹೊಸ ಮಾರ್ಗಸೂಚಿಗಳು ಹಲವು ವ್ಯವಹಾರಗಳಲ್ಲಿ ಗೊಂದಲ ಉಂಟುಮಾಡುವ ಸಾದ್ಯತೆ ಇದೆ. ಅದರಲ್ಲೂ ಗೂಗಲ್‌ ಒನ್‌ ಅಥವಾ Google ಕ್ಲೌಡ್ ಕೆಲಸದ ಖಾತೆಗಳಿಗೆ ಪಾವತಿಸಲು ತಮ್ಮ ಕಾರ್ಡ್ ಮಾಹಿತಿಯನ್ನು ಸೇವ್‌ ಮಾಡಿರುವ ಬಳಕೆದಾರರು ಮುಂದಿನ ದಿನಗಳಲ್ಲಿ ಹಣ ಪಾವತಿಸಲು ಸಮಸ್ಯೆ ಎದುರಿಸಬಹುದು. ಆದರೆ ಈ ವಿಚಾರವಾಗಿ ಗೂಗಲ್‌ ತನ್ನ ಬಳಕೆದಾರರಿಗೆ ಹೊಸ ಪರಿಹಾರ ನೀಡಿದೆ. ಅದರಂತೆ ಬಳಕೆದಾರರ ದೃಢೀಕರಣದೊಂದಿಗೆ ಅವರು ಕಾರ್ಡ್ ವಿವರಗಳನ್ನು ಆರ್‌ಬಿಐ ನಿಯಮಗಳಿಗೆ ಅನುಸಾರವಾಗಿ ಮತ್ತು ಸೂಕ್ಷ್ಮ ಕಾರ್ಡ್ ವಿವರಗಳನ್ನು ಸುರಕ್ಷಿತವಾಗಿರಿಸುವ ಫಾರ್ಮ್ಯಾಟ್‌ನಲ್ಲಿ ಉಳಿಸಬಹುದಾಗಿದೆ.

ಗೂಗಲ್‌ ಅಕೌಂಟ್‌ನಲ್ಲಿ ಕಾರ್ಡ್‌ ವಿವರ ಪಡೆಯಲು ಏನು ಮಾಡಬೇಕು?

ಗೂಗಲ್‌ ಅಕೌಂಟ್‌ನಲ್ಲಿ ಕಾರ್ಡ್‌ ವಿವರ ಪಡೆಯಲು ಏನು ಮಾಡಬೇಕು?

ಮುಂದಿನ ವರ್ಷದಿಂದ ಯಾವುದೇ ಪಾವತಿಗಳನ್ನು ಮಾಡಲು ವೀಸಾ ಅಥವಾ ಮಾಸ್ಟರ್‌ಕಾರ್ಡ್ ನೀಡಿದ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ಬಳಸುವುದಕ್ಕೆ ಹೊಸ ಮಾರ್ಗಸೂಚಿ ಪಾಲಿಸಬೇಕು. ಅದೇ ಸಂಖ್ಯೆಯನ್ನು ಮುಂದುವರಿಸಲು, ನೀವು ನಿಮ್ಮ ಕಾರ್ಡ್ ವಿವರಗಳನ್ನು ರಿ-ಎಂಟ್ರಿ ಮಾಡಬೇಕಾಗುತ್ತದೆ. ಒಂದು ವೇಳೆ ನೀವು ಹಾಗೆ ಮಾಡದಿದ್ದರೆ, ನಿಮ್ಮ ಕಾರ್ಡ್ ಇನ್ನು ಮುಂದೆ ನಿಮ್ಮ ಖಾತೆಯಲ್ಲಿ ಕಾಣಿಸುವುದಿಲ್ಲ ಎಂದು ಗೂಗಲ್‌ ಹೇಳಿದೆ.

ಟೋಕನ್

ಇನ್ನು ನಿಮಗೆಲ್ಲಾ ತಿಳಿದಿರುವಂತೆ ಟೋಕನೈಸೇಶನ್ ಎಂದರೆ actual ಕಾರ್ಡ್ ವಿವರಗಳನ್ನು "ಟೋಕನ್" ಎಂದು ಕರೆಯಲಾಗುವ ಪರ್ಯಾಯ ಕೋಡ್‌ನೊಂದಿಗೆ ಬದಲಾಯಿಸುವುದನ್ನು ಸೂಚಿಸುತ್ತದೆ. ಇದು ಕಾರ್ಡ್, ಟೋಕನ್ ವಿನಂತಿದಾರ ಮತ್ತು ಡಿವೈಸ್‌ ನಡುವಿನ ಸಂಯೋಜನೆಗೆ ಸಹಾಯಕವಾಗಿದೆ. ಇದು ಕಾರ್ಡ್ ಸಂಖ್ಯೆಗಳು ಮತ್ತು CVV ನಂತಹ ಕಾರ್ಡ್ ವಿವರಗಳನ್ನು ಹಂಚಿಕೊಳ್ಳುವ ಮೂಲಕ ಸಂಭವಿಸುವ ವಂಚನೆಗಳನ್ನು ಕಡಿಮೆ ಮಾಡುತ್ತದೆ. ಹೆಚ್ಚಿನ ಕೋಡ್ ಪಾವತಿಗಳಲ್ಲಿ ಸಂಪರ್ಕವಿಲ್ಲದ ಮೋಡ್‌ನಲ್ಲಿ ಕಾರ್ಡ್ ವಹಿವಾಟುಗಳನ್ನು ನಿರ್ವಹಿಸಲು ಇದನ್ನು ಬಳಸಲಾಗುತ್ತದೆ.

ಸೇಫ್‌ಕಾರ್ಡ್

ಇನ್ನು ಕೆಲವು ದಿನಗಳ ಹಿಂದೆಯಷ್ಟೇ ಫೋನ್‌ಪೇ, ಆರ್‌ಬಿಐ ಮಾರ್ಗಸೂಚಿಗಳಿಗೆ ಅನುಸಾರವಾಗಿ, ಆನ್‌ಲೈನ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಹಿವಾಟುಗಳಿಗೆ ಟೋಕನೈಸೇಶನ್ ಪರಿಹಾರವಾದ ಸೇಫ್‌ಕಾರ್ಡ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿತು. ಟೋಕನ್‌ಗಳನ್ನು ಬಳಸಿಕೊಂಡು ಕಾರ್ಡ್‌ಗಳನ್ನು ಸೇವ್‌ ಮಾಡಲು ಬಯಸುವ ಪಾವತಿ ಪೂರೈಕೆದಾರರಿಗೆ ಅವಕಾಶ ನೀಡುವ ಮೂಲಕ PhonePe ನ ಸೇಫ್‌ಕಾರ್ಡ್ ಪ್ರಾರಂಭಿಸಲು ಮುಂದಾಗಿದೆ. ಇದು ಮಾಸ್ಟರ್‌ಕಾರ್ಡ್, ರುಪೇ ಮತ್ತು ವೀಸಾದಂತಹ ಎಲ್ಲಾ ಪ್ರಮುಖ ಕಾರ್ಡ್ ನೆಟ್‌ವರ್ಕ್‌ಗಳನ್ನು ಬೆಂಬಲಿಸುತ್ತದೆ.

ಪೇಟಿಎಂ

ಇದಲ್ಲದೆ ಇತ್ತೀಚಿಗಷ್ಟೆ ಪೇಟಿಎಂ ಮೇಲೆ ಆರ್‌ಬಿಐ ದಂಡಾಸ್ತ್ರ ಪ್ರಯೋಗಿಸಿತ್ತು. ಆರ್‌ಬಿಐ ಅಂತಿಮ ದೃಡೀಕರಣ ಪ್ರಮಾಣಪತ್ರ (CoA) ವಿತರಣೆಗಾಗಿ ಪೇಟಿಎಂನ ಅರ್ಜಿಯನ್ನು ಪರಿಶೀಲಿಸಿದಾಗ, ದೋಷ ಕಂಡುಬಂದ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿತ್ತು. "ಇದು ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯಿದೆ, 2007 ರ ಸೆಕ್ಷನ್ 26 (2) ರಲ್ಲಿ ಉಲ್ಲೇಖಿಸಲಾಗಿರುವ ಅಪರಾಧವಾಗಿದೆ. ಆದರಿಂದ ಆರ್‌ಬಿಐ ದಂಡ ವಿಧಿಸುತ್ತಿರುವುದಾಗಿ ಹೇಳಿತ್ತು. ಅಲ್ಲದೆ ಆರ್‌ಬಿಐ PPBL ಗೆ ನೋಟಿಸ್ ಕೂಡ ನೀಡಿತ್ತು.

ಪೇಟಿಎಂ

ಆರ್‌ಬಿಐ ಪೇಟಿಎಂ ಸಲ್ಲಿಸಿದ್ದ CoA ಅರ್ಜಿಯನ್ನು ಪರಿಶೀಲಿಸಿದ ನಂತರ ಒಂದು ಕೋಟಿ ಮೊತ್ತದ ದಂಡವನ್ನು ವಿಧಿಸಿತ್ತು. ವೈಯಕ್ತಿಕ ವಿಚಾರಣೆಯ ಸಮಯದಲ್ಲಿ ಮಾಡಿದ ಲಿಖಿತ ಪ್ರತಿಕ್ರಿಯೆಗಳು ಮತ್ತು ಮೌಖಿಕ ಸಲ್ಲಿಕೆಗಳನ್ನು ಪರಿಶೀಲಿಸಿದ ನಂತರ, ಆರ್‌ಬಿಐ ಈ ದಂಡವನ್ನು ವಿಧಿಸಲಾಗಿತ್ತು. ಅಕ್ಟೋಬರ್ 1 ರಂದು ನೋಟಿಸ್‌ ಮೂಲಕ ಪಿಪಿಬಿಎಲ್ ಮೇಲೆ 1 ಕೋಟಿ ರೂಪಾಯಿಗಳ ದಂಡವನ್ನು ವಿಧಿಸಲಾಗಿತ್ತು. ದೇಶದಲ್ಲಿ ಮಾರ್ಕೆಟಿಂಗ್‌ ಪ್ರಚಾರ ನಡೆಸುತ್ತಿರುವ ಪೇಟಿಎಂಗೆ ಇದು ಬಿಗ್‌ ಶಾಕ್‌ ಅಂತಾನೇ ಹೇಳಬಹುದಾಗಿದೆ. ವಿತ್ತೀಯ ನೀತಿಯಲ್ಲಿ ಕೆಲವು ನಿಯಮಗಳನ್ನು ಪೇಟಿಎಂ ಉಲ್ಲಂಘಿಸಿದ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿತ್ತು.

Best Mobiles in India

Read more about:
English summary
Google has informed users that from January, 2022, it will not be able to save customer card details.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X