ಗೂಗಲ್ ನಿಂದ ಮತ್ತೊಂದು ಹೊಸ ಸೇವೆ ಲಾಂಚ್

Written By: Lekhaka

ಗೂಗಲ್ ನೂತನವಾಗಿ ಆಂಡ್ರಾಯ್ಡ್ ಫೋನ್ ಗಳಿಗೆ ಜಾಗತೀಕವಾಗಿ ಹೊಸದಾಗಿ ನ್ಯೂಸ್ ಫೀಡ್ ಸೇವೆಯನ್ನು ಲಾಂಚ್ ಮಾಡಿದೆ.

ಗೂಗಲ್ ನಿಂದ ಮತ್ತೊಂದು ಹೊಸ ಸೇವೆ ಲಾಂಚ್

ಈ ಫೀಡ್ ನಲ್ಲಿ ಗ್ರಾಹಕರು ತಮ್ಮ ಆಯ್ಕೆ ಮತ್ತು ಅಭಿರುಚಿಗೆ ತಕ್ಕಂತೆ ನ್ಯೂಸ್ ಸೇವೆಯನ್ನು ಪಡೆಯಬಹುದಾಗಿದೆ. ಈಗಾಗಲೇ ಈ ಸೇವೆಯನ್ನು ಅಮೇರಿಕಾದಲ್ಲಿ ಜುಲೈನಿಂದಲೇ ಗ್ರಾಹಕರು ಪಡೆದುಕೊಳ್ಳುತ್ತಿದ್ದಾರೆ.

ಈ ಸೇವೆಯನ್ನು ಗೂಗಲ್ ಶೀಘ್ರವೇ ಆಂಡ್ರಾಯ್ಡ್ ಮತ್ತು iOS ನಲ್ಲಿ ದೊರೆಯುವಂತೆ ಮಾಡಲಿದ್ದು, ಇದು ಪಿಕ್ಸಲ್ ಲಾಂಚರ್ ನೊಂದಿಗೂ ದೊರೆಯಲಿದೆ. ಈ ಫಿಡ್ಸ್ ನೀವು ಸರ್ಚ್ ಮಾಡುವ ವಿಚಾರಗಳನ್ನು ಟ್ರಾಕ್ಸ್ ಮಾಡಿ ನಿಮಗೆ ಬೇಕಾದ ವಿಷಯಗಳನ್ನು ತಿಳಿದುಕೊಂಡು ಅದರ ಬಗ್ಗೆಯೇ ಮಾಹಿತಿಯನ್ನು ನೀಡಲಿದೆ.

ಐಫೋನ್ 8, ಐಫೋನ್ 8+ ಹೊಂದಿರುವ ಹೊಸ ಫೀಚರ್ಸ್ ಯಾವುವು ಗೊತ್ತಾ?..ಇಲ್ಲಿವೆ ನೋಡಿ!!

ಇಲ್ಲಿ ಬಳಕೆದಾರರು ಸೆಟ್ಟಿಂಗ್ ನಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ತಮ್ಮ ಆಯ್ಕೆಯ ವಿಚಾರಗಳನ್ನು ಸೆಲೆಕ್ಟ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಕೇಲವು ನ್ಯೂಸ್ ಗಳನ್ನು ರೀಮೂ ಮಾಡುವ ಅವಕಾಶವನ್ನು ಸಹ ಪಡೆದುಕೊಂಡಿದೆ. ಅಲ್ಲದೇ ಕೆಲವು ಆಸಕ್ತಿಯ ವಿಚಾರಗಳನ್ನು ಬ್ಲಾಕ್ ಸಹ ಮಾಡಬಹುದು.

ಸದ್ಯ ಇದನ್ನು ಅಮೇರಿಕಾದಲ್ಲಿ ಲಾಂಚ್ ಮಾಡಲಾಗಿತ್ತು ನಿಧಾನವಾಗಿ ವಿವಿಧ ಎಲ್ಲಾ ದೇಶಗಳಲ್ಲಿಯೂ ಈ ಸೇವೆಯನ್ನು ಲಾಂಚ್ ಮಾಡವ ಯೋಜನೆ ಕಂಪನಿಯ ಮುಂದಿದೆ.

Read more about:
English summary
Google has rolled out the Feed feature throughout the globe for Android users while iOS users will have to wait for the app.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot