ಗೂಗಲ್‌ನಿಂದ ಹೊಸ ಫೀಚರ್ಸ್‌ ಬಿಡುಗಡೆ! ಏನೆಲ್ಲಾ ಉಪಯೋಗ ಗೊತ್ತಾ?

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಬಳಕೆದಾರರ ಅನುಕೂಲಕ್ಕಾಗಿ ಹಲವು ಫೀಚರ್ಸ್‌ಗಳನ್ನು ಒಳಗೊಂಡಿದೆ. ಬಳಕೆದಾರರ ಅನುಭವ ಇನ್ನಷ್ಟು ಸುಧಾರಿಸುವುದಕ್ಕಾಗಿ ಹೊಸ ಅಪ್ಡೇಟ್‌ಗಳನ್ನು ನೀಡುತ್ತಾ ಬಂದಿದೆ. ಸದ್ಯ ಇದೀಗ ತನ್ನ ಬಳಕೆದಾರರಿಗೆ ಹೊಸ ಫಂಕ್ಷನ್‌ ಅನ್ನು ಪರಿಚಯಿಸಿದೆ. ಇದು ಆರೋಗ್ಯ ಕೇಂದ್ರಿತ ಫೀಚರ್ಸ್‌ ಆಗಿದ್ದು, ಸಾಕಷ್ಟು ಅನುಕೂಲಕರವಾಗಿದೆ. ಇದರಿಂದ ನೀವು ಸರ್ಚ್‌ ಮಾಡುವಾಗಲೇ ಲಭ್ಯವಿರುವ ಹೆಲ್ತ್‌ ಕೇರ್‌ ಪ್ರೊವೈಡರ್‌ ನೆಕ್ಸ್ಟ್‌ ಅಪಾಯಿಂಟ್‌ಮೆಂಟ್ ಅನ್ನು ತೋರಿಸುತ್ತದೆ.

ಗೂಗಲ್‌

ಹೌದು, ಗೂಗಲ್‌ ಬಳಕೆದಾರರಿಗೆ ಸರ್ಚ್‌ ಮಾಡುವಾಗಲೇ ಡಾಕ್ಟರ್ಸ್‌ ಅಪಾಯಿಂಟ್‌ ಯಾವಾಗ ಲಭ್ಯವಿದೆ ಅನ್ನೊದನ್ನ ತಿಳಿಸುತ್ತದೆ. ಇದಕ್ಕಾಗಿ ಟೆಕ್ ದೈತ್ಯ CVS ನಲ್ಲಿ ಮಿನಿಟ್‌ ಕ್ಲಿನಿಕ್‌ ಮತ್ತು ಫೀಚರ್ಸ್‌ ಸ್ಟಾರ್ಟಿಂಗ್‌ ರೋಲ್‌ಗಾಗಿ ಹೆಚ್ಚಿನ ಅಪಾಯಿಂಟ್‌ಮೆಂಟ್ ಶೆಡ್ಯೂಲರ್‌ಗಳೊಂದಿಗೆ ಕೈಜೋಡಿಸಿದೆ. ಈ ಫೀಚರ್ಸ್‌ ಮುಂಬರುವ ವಾರಗಳಲ್ಲಿ ಲಭ್ಯವಾಗಲಿದ್ದು, ಆರಂಭದಲ್ಲಿ ಕೇವಲ ಇಂಗ್ಲಿಷ್‌ನಲ್ಲಿ ಲಭ್ಯವಿರುತ್ತದೆ ಎನ್ನಲಾಗಿದೆ. ಹಾಗಾದ್ರೆ ಗೂಗಲ್‌ ಪರಿಚಯಿಸಿರುವ ಹೊಸ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್‌

ಗೂಗಲ್‌ ತನ್ನ ಬಳಕೆದಾರರು ಹೆಲ್ತ್‌ಕೇರ್‌ ಪ್ರೊವೈಡರ್‌ ಬಗ್ಗೆ ಸರ್ಚ್‌ ಮಾಡುವಾಗ ಹೊಸ ಅನುಭವ ನೀಡಲಿದೆ. ನಿಮಗೆ ಯಾವಾಗ ಹೆಲ್ತ್‌ ಕೇರ್‌ಗಳ ಅಪಾಯಿಂಟ್‌ಮೆಂಟ್‌ ಸಿಗಲಿದೆ ಅನ್ನೊ ಮಾಹಿತಿಯನ್ನು ನೀಡಲಿದೆ. ಅಂದರೆ ಬಳಕೆದಾರರು ವೈದ್ಯರು ಅಥವಾ ಆರೋಗ್ಯ ಸೇವೆ ಒದಗಿಸುವವರ ಕಚೇರಿಗಾಗಿ ಹುಡುಕಿದರೆ ಸಾಕು ಅಪಾಯಿಂಟ್‌ಮೆಂಟ್‌ನ ದಿನಾಂಕವನ್ನು ತೋರಿಸುತ್ತದೆ. ನಂತರ ನೀವು "ಬುಕ್‌" ಬಟನ್ ಅನ್ನು ಟ್ಯಾಪ್ ಮಾಡಬಹುದು, ಇದು ಅವರನ್ನು ಥರ್ಡ್‌ ಪಾರ್ಟಿ ಸೈಟ್‌ಗೆ ಕರೆದೊಯ್ಯುತ್ತದೆ, ಇದರಲ್ಲಿ ನೀವು ಅಪಾಯಿಂಟ್‌ಮೆಂಟ್ ಮಾಡಬಹುದು. ಸದ್ಯ ಈ ಫೀಚರ್ಸ್‌ ಇದೀಗ US ನಲ್ಲಿನ ಬಳಕೆದಾರರಿಗೆ ಮಾತ್ರ ಸೀಮಿತವಾಗಿದೆ.

ಗೂಗಲ್‌

ಇನ್ನು ಗೂಗಲ್‌ ಕಂಪನಿಯ ಬ್ಲಾಗ್ ಪ್ರಕಾರ, ನಾವು ಇನ್ನೂ ಈ ವೈಶಿಷ್ಟ್ಯವನ್ನು ಹೊರತರುವ ಆರಂಭಿಕ ಹಂತದಲ್ಲಿದ್ದೇವೆ, ಇದಕ್ಕಾಗಿ ನಾವು CVS ನಲ್ಲಿ MinuteClinic ಮತ್ತು ಇತರ ಶೆಡ್ಯೂಲಿಂಗ್ ಸಲ್ಯೂಶನ್‌ ಪ್ರೊವೈಡರ್‌ ಒಳಗೊಂಡಂತೆ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದ್ದೇವೆ. ಈ ಫೀಚರ್ಸ್‌ಗಳು ಕ್ರಿಯಾತ್ಮಕತೆ ಮತ್ತು ನಮ್ಮ ಪಾಲುದಾರರ ನೆಟ್‌ವರ್ಕ್ ಅನ್ನು ವಿಸ್ತರಿಸಲು ಅನುಕೂಲವಾಗಲಿವೆ. ಆದ್ದರಿಂದ ಜನರಿಗೆ ಅಗತ್ಯವಿರುವ ಕಾಳಜಿಯನ್ನು ಪಡೆಯುವುದನ್ನು ನಾವು ಸುಲಭಗೊಳಿಸಬಹುದಾಗಿದೆ ಎಂದು ಹೇಳಿಕೊಂಡಿದೆ.

ಗೂಗಲ್‌

ಇದಲ್ಲದೆ ಗೂಗಲ್‌ ತನ್ನ ಒಡೆತನದ ಯೂಟ್ಯೂಬ್‌ ಪ್ಲಾಟ್‌ಫಾರ್ಮ್‌ನಲ್ಲಿ ಆರೋಗ್ಯ ಕೇಂದ್ರಿತ ಫೀಚರ್ಸ್‌ ಪರಿಚಯಿಸಿದೆ. ಇದು ಯೂಟ್ಯೂಬ್‌ನಲ್ಲಿ ಆರೋಗ್ಯ ಮೂಲ ಮಾಹಿತಿ ಪ್ಯಾನಲ್‌ ಫೀಚರ್ಸ್‌ ಅಧಿಕೃತ ಮೂಲಗಳಿಂದ ವೀಡಿಯೊಗಳನ್ನು ಗುರುತಿಸುತ್ತದೆ ಮತ್ತು ಅವುಗಳನ್ನು ಲೇಬಲ್ ಮಾಡುತ್ತದೆ. ಇದರಿಂದ ಯೂಟ್ಯೂಬ್‌ನಲ್ಲಿ ಆರೋಗ್ಯ-ಸಂಬಂಧಿತ ವಿಷಯವನ್ನು ಹುಡುಕುವ ಬಳಕೆದಾರರು ವಿಶ್ವಾಸಾರ್ಹ ವೀಡಿಯೊಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿದೆ. ಇದರಲ್ಲಿ ಮಾನ್ಯತೆ ಪಡೆದ ಆರೋಗ್ಯ ಸಂಸ್ಥೆಗಳು ಮತ್ತು ಸರ್ಕಾರಿ ಘಟಕಗಳಿಂದ ತಕ್ಷಣವೇ ವೀಡಿಯೊಗಳನ್ನು ತೆಗೆದುಕೊಳ್ಳುವಂತೆ ಮಾಡುವುದು ಯೂಟ್ಯೂಬ್‌ನ ಮುಖ್ಯ ಉದ್ದೇಶವಾಗಿದೆ. ಅಲ್ಲದೆ ಮಾನ್ಯತೆ ಪಡೆದ ಆರೋಗ್ಯ ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಸಂಬಂಧಿಸಿದ ವೀಡಿಯೊಗಳು ಈ ಶೆಲ್ಫ್‌ಗಳಿಗೆ ಅರ್ಹವಾಗಿವೆ ಎನ್ನಲಾಗಿದೆ.

ಯೂಟ್ಯೂಬ್‌

ಇನ್ನು ಈ ಎರಡು ಹೊಸ ಆರೋಗ್ಯ-ಕೇಂದ್ರಿತ ಫೀಚರ್ಸ್‌ಗಳಿಗಾಗಿ US ನ್ಯಾಷನಲ್ ಅಕಾಡೆಮಿ ಆಫ್ ಮೆಡಿಸಿನ್ (NAM) ಮೂಲಕ ಸಂಯೋಜಿತ ತಜ್ಞರ ಸಮಿತಿಯು ಅಭಿವೃದ್ಧಿಪಡಿಸಿದ ತತ್ವಗಳನ್ನು ಬಳಸುತ್ತಿದೆ ಎಂದು ಯೂಟ್ಯೂಬ್‌ ಹೇಳಿದೆ. ಅಲ್ಲದೆ COVID-19 ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಯೂಟ್ಯೂಬ್‌ ಮಾಹಿತಿಯ ವಿಶ್ವಾಸಾರ್ಹ ಮೂಲವಾಗಿದೆ ಎಂದು 69% ಬಳಕೆದಾರರು ಹೇಳಿದ್ದಾರೆ. ಇದೇ ಕಾರಣಕ್ಕೆ ಇನ್ನಷ್ಟು ವಿಶ್ವಾಸಾರ್ಹ ಮೂಲಗಳ ವೀಡಿಯೊಗಳನ್ನು ನೀಡಲು ಯೂಟ್ಯೂಬ್‌ ಮುಂದಾಗಿದೆ.

Best Mobiles in India

English summary
Google has teamed up with MinuteClinic at CVS and more appointment schedulers for the initial roll out of the feature.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X