ಹೈದರಾಬಾದ್‌ ವಿಧ್ಯಾರ್ಥಿನಿಗೆ ಒಲಿಯಿತು 1.2 ಕೋಟಿ ಸಂಬಳದ 'ಗೂಗಲ್ ಉದ್ಯೋಗ'!

|

ಇತ್ತೀಚಿಗಷ್ಟೆ ಬೆಂಗಳೂರಿನ ವಿಧ್ಯಾರ್ಥಿಯೋರ್ವನಿಗೆ ಭಾರೀ ಸಂಬಳದ ಆಫರ್ ನೀಡಿ ಗಮನ ಸೆಳೆದಿದ್ದ ಗೂಗಲ್ ಸಂಸ್ಥೆ ಇದೀಗ ಹೈದರಾಬಾದ್‌ನಲ್ಲಿ ಐಐಟಿ ಓದುತ್ತಿರುವ ವಿಧ್ಯಾರ್ಥಿನಿಗೆ ಕೋಟಿ ಸಂಬಳದ ಆಫರ್ ನೀಡಿದೆ. ಹೈದರಾಬಾದ್‌ ಐಐಟಿ ಕಾಲೇಜಿನ ವಿಧ್ಯಾರ್ಥಿನಿಯಾಗಿರುವ 'ಸ್ನೇಹ ರೆಡ್ಡಿ' ಎಂಬುವವರಿಗೆ ಅವರಿಗೆ ವಾರ್ಷಿಕ 1.2 ಕೋಟಿ ಸಂಬಳದ ಪ್ಯಾಕೇಜ್ ನೀಡಿದೆ.!

ಹೌದು, ಹೈದರಾಬಾದ್‌ ಐಐಟಿ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚು ಸಂಬಳದ ಪ್ಯಾಕೇಜ್ ಪಡೆದ ಮೊದಲ ವಿಧ್ಯಾರ್ಥಿ/ ವಿಧ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಇದೀಗ ಐಐಟಿ ಪದವಿ ಮುಗಿಸಿರುವ ಸ್ನೇಹ ರೆಡ್ಡಿ ಅವರು ಪಾತ್ರರಾಗಿದ್ದಾರೆ. ಗೂಗಲ್ ನೀಡಿದ ನಾಲ್ಕು ಹಂತಗಳ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿದ ನಂತರ 'ಸ್ನೇಹ ರೆಡ್ಡಿ' ಅವರಿಗೆ ಗೂಗಲ್‌ನಲ್ಲಿ ಉದ್ಯೋಗ ಒಲಿದಿದೆ.

ಹೈದರಾಬಾದ್‌ ವಿಧ್ಯಾರ್ಥಿನಿಗೆ ಒಲಿಯಿತು 1.2 ಕೋಟಿ ಸಂಬಳದ 'ಗೂಗಲ್ ಉದ್ಯೋಗ'!

ಗೂಗಲ್‌ನಲ್ಲಿ ಒಮ್ಮೆ ಕೆಲಸ ಗಿಟ್ಟಿಸಿದರೆ ಅದು ಅಸಾಮಾನ್ಯರು ಎಂಬ ನಾಣ್ಣುಡಿಗೆ ತಕ್ಕಂತೆ ಗೂಗಲ್ ತನ್ನ ಉದ್ಯೋಗಿಗಳನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಎಂದೂ ಎಡುವುದಿಲ್ಲ ಎನ್ನುವ ಮಾತಿದೆ. ಹಾಗಾದರೆ, ಸ್ನೇಹ ರೆಡ್ಡಿ ಅವರು ಗೂಗಲ್‌ನಲ್ಲಿ ಕೆಲಸ ಗಿಟ್ಟಿಸಿದ್ದು ಹೇಗೆ? ಸ್ನೇಹ ರೆಡ್ಡಿ ಅವರ ತಂತ್ರಜ್ಞಾನ ಹಿನ್ನಲೆ ಏನು? ಎಂಬ ಮಾಹಿತಿಯನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಯಾರು ಈ 'ಸ್ನೇಹ ರೆಡ್ಡಿ'?

ಯಾರು ಈ 'ಸ್ನೇಹ ರೆಡ್ಡಿ'?

ಗೂಗಲ್‌ನ ಇಂಟಲಿಜೆಟ್ ಪ್ರಾಜೆಕ್ಟ್ ಅಂಗವಾಗಿ ಗೂಗಲ್ ಸಂಸ್ಥೆಯಲ್ಲಿ ಕೆಲಸ ಗಿಟ್ಟಿಸಿರುವ ಸ್ನೇಹ ರೆಡ್ಡಿ ಅವರು ಐಐಟಿ ಕಂಪ್ಯೂಟರ್ ಸೈನ್ಸ್‌ ಪದವಿಯನ್ನು ಈಗಷ್ಟೇ ಪಡೆದಿದ್ದಾರೆ. ರಾಮನಾಥ್ ಕೋವಿಂದ್ ಅವರಿಂದ ಚಿನ್ನದ ಪದಕವನ್ನು ಸಹ ಪಡೆದುಕೊಂಡು ಸುದ್ದಿಯಾಗಿದ್ದ ರೆಡ್ಡಿ, ಕಂಪ್ಯೂಟರ್ ಸೈನ್ಸ್‌ ಪದವಿಯಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಸಹ ಪಡೆದಿದ್ದಾರೆ.

ಸ್ನೇಹ ರೆಡ್ಡಿ ಹಿನ್ನಲೆ ಏನು?

ಸ್ನೇಹ ರೆಡ್ಡಿ ಹಿನ್ನಲೆ ಏನು?

ಸ್ನೇಹ ರೆಡ್ಡಿ ಅವರು ಹೈದರಾಬಾದ್ ನಿಂದ ಸ್ವಲ್ಪವೇ ದೂರದಲ್ಲಿರುವ ವಿಕಾರಾಬಾಸ್ ಪ್ರದೇಶದಿಂದ ಬಂದವರಾಗಿದ್ದಾರೆ.ಅವರ ತಂದೆ ಹೈದರಾಬಾದ್‌ನಲ್ಲಿರುವ ಸಾಫ್ಟ್‌ವೇರ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಮೊದಲಿನಿಂದಲೂ ಕಂಪ್ಯೂಟರ್ ಮತ್ತು ಕೋಡಿಂಗ್ ವಿಷಯದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದಾಗಿ ಸ್ನೇಹ ರೆಡ್ಡಿ ಅವರು ಹೇಳಿದ್ದಾರೆ.

ಗೂಗಲ್‌ನಲ್ಲಿ ಕೆಲಸ ಸಿಕ್ಕಿದ್ದು ಹೇಗೆ?

ಗೂಗಲ್‌ನಲ್ಲಿ ಕೆಲಸ ಸಿಕ್ಕಿದ್ದು ಹೇಗೆ?

ಗೂಗಲ್‌ ತನ್ನ ಭವಿಷ್ಯದ ಇಂಟಲಿಜೆಟ್ ಪ್ರಾಜೆಕ್ಟ್ ಒಂದು ಕೆಲಸಕ್ಕಾಗಿ ಉದ್ಯೋಗಿಗಳ ಹುಡುಕಾಟ ಆರಂಭಿಸಿತ್ತು. ಈ ವೇಳೆಯಲ್ಲಿ ಗೂಗಲ್ ನೀಡಿದ ನಾಲ್ಕು ಆನ್‌ಲೈನ್ ಪರೀಕ್ಷೆಗಳನ್ನು ಸ್ನೇಹ ರೆಡ್ಡಿ ಅವರು ಯಶಸ್ವಿಯಾಗಿ ಮುಗಿಸಿದ್ದಾರೆ. ವರದಿ ಪ್ರಕಾರ, ಹಿಂದಿನ ಹಂತದ ಪರೀಕ್ಷೆ ಶ್ರೇಷ್ಠತೆ ಆಧಾರದ ಮೇಲೆ ಭಾರತದಲ್ಲಿಯೇ ಕೊನೆ ಹಂತಹ ಪರೀಕ್ಷೆಯನ್ನು ರೆಡ್ಡಿ ಎದುರಿಸುತ್ತಿದ್ದಾರೆ.

ಈ ಬಗ್ಗೆ ಸ್ನೇಹ ರೆಡ್ಡಿ ಹೇಳಿದ್ದೇನು?

ಈ ಬಗ್ಗೆ ಸ್ನೇಹ ರೆಡ್ಡಿ ಹೇಳಿದ್ದೇನು?

ಗೂಗಲ್‌ನಲ್ಲಿ ತನ್ನ ಭವಿಷ್ಯವನ್ನು ಕಂಡುಕೊಂಡ ನಂತರ ಸ್ನೇಹ ರೆಡ್ಡಿ ಅವರು ಕೆಲಸಗಿಟ್ಟಿಸಿಕೊಳ್ಳುವ ನಿರೀಕ್ಷೆಯನ್ನು ಹೊಂದಿದ್ದಾಗಿ ಹೇಳಿದ್ದಾರೆ. ಐಐಟಿ-ಹೈದರಾಬಾದ್ ತನ್ನ ವಿದ್ಯಾರ್ಥಿಗಳು ಪ್ರಯೋಗಗಳಿಗೆ ಒಳಗಾಗಲು ಉತ್ತೇಜನ ನೀಡಿತು. ಇದು ಗೂಗಲ್‌ನಲ್ಲಿ ಉದ್ಯೋಗ ಪಡೆಯಲು ಸಾಕಷ್ಟು ಸಹಾಯ ಮಾಡಿತು ಎಂದು ಕಾಲೇಜನ್ನು ಪ್ರಶಂಸಿದ್ದಾರೆ.

ಟಾಪರ್‌ಗೆ 35 ಲಕ್ಷ ಸಂಬಳ!

ಟಾಪರ್‌ಗೆ 35 ಲಕ್ಷ ಸಂಬಳ!

ಸ್ನೇಹ ರೆಡ್ಡಿ ಅವರ ಜೊತೆಗೆ ಗೂಗಲ್‌ನಲ್ಲಿ ಮತ್ತೋರ್ವ ಐಐಟಿ ವಿಧ್ಯಾರ್ಥಿ 'ಇಬ್ರಾಹಿಂ ದಲಾಲ್' ಕೂಡ ಕೆಲಸ ಗಿಟ್ಟಿಸಿದ್ದಾರೆ. ವಾರ್ಷಿಕ 35 ಲಕ್ಷ ರೂ. ಪ್ಯಾಕೇಜ್ ಒಳಗೊಂಡಿರುವ ಗೂಗಲ್ ಉದ್ಯೋಗ ಪಡೆದಿರುವ 'ಇಬ್ರಾಹಿಂ ದಲಾಲ್' ಹೈದರಾಬಾದ್‌ ಐಐಟಿಯಲ್ಲಿ ಕಾಲೇಜಿನ ಟಾಪರ್ ಆಗಿದ್ದರು ಎಂದು ತಿಳಿದುಬಂದಿದೆ.

Best Mobiles in India

English summary
In what is being called the highest pay package of a student of the IIT-Hyderabad in the institution’s history. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X