ಗೂಗಲ್‌ I/O 2020 ಸಮ್ಮೇಳನದ ಮೇಲೂ ಕೊರೊನಾ ವೈರಸ್‌ನ ಕರಿನೆರಳು!

|

ಚೀನಾದಲ್ಲಿ ಕಾಣಿಸಿಕೊಂಡು ಇದೀಗ ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್‌ ಇದೀಗ ಮತ್ತೊಂದು ಜಾಗತಿಕ ಸಮ್ಮೇಳನವನ್ನು ರದ್ದುಮಾಡಲು ಕಾರಣವಾಗಿದೆ. ಕೊರೊನಾ ವೈರಸ್‌ ಎಂಬ ಮಹಾಮಾರಿಯಿಂದಾಗಿ ಜಗತ್ತಿನ ಎಲ್ಲಾ ವಲಯಗಳಲ್ಲೂ ಭಯದ ವಾತಾವರಣ ಸೃಷ್ಟಿಯಾಗಿದ್ದು, ಅಂತರರಾಷ್ಟ್ರೀಯ ಮಟ್ಟದ ಬಹುತೇಕ ಸಮ್ಮೇಳನಗಳು ರದ್ದಾಗುತ್ತಿವೆ. ಇಲ್ಲವೇ ಮುಂದೂಡಲಾಗುತ್ತಿದೆ. ಇದರ ನಡುವೆ ಕೊರೊನಾ ವೈರಸ್‌ ಭೀತಿ ಟೆಕ್‌ ವಲಯದ ಮೇಲೂ ಪರಿಣಾಮ ಬೀರಿದ್ದು, ಗೂಗಲ್‌ ಕಂಪೆನಿಯ ನೇತೃತ್ವದಲ್ಲಿ ನಡೆಯಬೇಕಿದ್ದ I/O 2020 ಜಾಗತಿಕ ಸಮ್ಮೇಳನ ರದ್ದಾಗಿದೆ.

ಹೌದು

ಹೌದು, ಕೊರೊನಾ ವೈರಸ್‌ ಭೀತಿ ಇಂದು ಎಲ್ಲಾ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿದ್ದು, ಟೆಕ್‌ ವಲಯ ಕೂಡ ಇದರಿಂದ ತತ್ತರಿಸಿ ಹೋಗಿದೆ. ಈಗಾಗ್ಲೆ ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್‌ ಸಮ್ಮೇಳನವನ್ನು ರದ್ದು ಮಾಡಿ ನಷ್ಟದ ಸುಳಿಗೆ ಸಿಲುಕಿರುವ ಟೆಕ್‌ ವಲಯ ಇದೀಗ ಮತ್ತೊಂದು ಸಮ್ಮೇಳನವನ್ನ ರದ್ದುಮಾಡಿ ಇನ್ನಷ್ಟು ಆತಂಕಕ್ಕೆ ಒಳಗಾಗಿದೆ. ಆಂಡ್ರಾಯ್ಡ್‌ ಡೆವಲಪ್‌ಮೆಂಟ್‌ ಕುರಿತಂತೆ ಗೂಗಲ್‌ ನೇತೃತ್ವದಲ್ಲಿ ನಡೆಯಬೇಕಾಗಿದ್ದ ಗೂಗಲ್‌ I/O 2020 ಕಾರ್ಯಕ್ರಮವನ್ನ ಏಕಾಏಕಿ ರದ್ದು ಮಾಡಲಾಗಿದ್ದು, ಟೆಕ್‌ ವಲಯಕ್ಕೆ ಇದು ಭಾರಿ ನಷ್ಟವನ್ನುಂಟು ಮಾಡಲಿದೆ ಎನ್ನಲಾಗ್ತಿದೆ.

ಗೂಗಲ್‌ I/O 2020

ಗೂಗಲ್‌ I/O 2020

ಗೂಗಲ್‌ I/O 2020 ಸಮ್ಮೇಳನ ಗೂಗಲ್‌ ನೇತೃತ್ವದಲ್ಲಿ ಇದೇ ಮೇ 12 ರಿಂದ ಮೇ 14 ರವರೆಗೆ ಮೌಂಟೇನ್ ವ್ಯೂನಲ್ಲಿ ನಡೆಯಬೇಕಿತ್ತು. ಆದರೇ ಇದೀಗ ಇಡೀ ಕಾರ್ಯಕ್ರಮವನ್ನ ರದ್ದು ಮಾಡಲಾಗಿದೆ. ಕೊರೊನಾ ವೈರಸ್‌ ಚೀನಾದಲ್ಲಿ ಮರಣ ಮೃದಂಗವನ್ನೇ ಭಾರಿಸಿದೆ. ಜಗತ್ತಿನ ಇತರೆ ರಾಷ್ಟ್ರಗಳಲ್ಲೂ ಈ ವೈರಸ್‌ ಪತ್ತೆಯಾಗಿ ಸಾವುನೋವುಗಳು ಸಂಭವಿಸುತ್ತಿರೊದ್ರಿಂದ ಸಮ್ಮೇಳನವನ್ನ ರದ್ದು ಮಾಡಲಾಗಿದೆ. ಕಾರ್ಯಕ್ರಮದಲ್ಲಿ ವಿಶ್ವದ ಎಲ್ಲಾ ರಾಷ್ಟ್ರಗಳ ಸ್ಮಾರ್ಟ್‌ಫೋನ್‌ ತಯಾರಕರು, ಟೆಕ್‌ ವಲಯದ ಪ್ರಮುಖ ಕಂಪೆನಿಗಳು ಭಾಗವಹಿಸಬೇಕಿತ್ತು, ಆದರೆ ಕೊರೊನಾ ವೈರಸ್‌ ಒಂದು ಸಾಂಕ್ರಾಮಿಕ ರೋಗವಾಗಿರುವುದರಿಂದ ಆರೋಗ್ಯದ ಹಿತದೃಷ್ಟಿಯಿಂದ ಕಾರ್ಯಕ್ರಮವನ್ನ ರದ್ದು ಮಾಡಲಾಗಿದೆ.

ಗೂಗಲ್‌ I/O ಉದ್ದೇಶ

ಗೂಗಲ್‌ I/O ಉದ್ದೇಶ

ಇನ್ನು ಈ ಸ್ಮಮೇಳನದ ಮುಖ್ಯ ಉದ್ದೇಶ ಆಂಡ್ರಾಯ್ಡ್‌ ಡೆವಲಪ್‌ಮೆಂಟ್‌ ಬಗ್ಗೆ ಕುರಿತುಯ ಚರ್ಚಿಸುವುದಾಗಿತ್ತು. ಗೂಗಲ್‌ ಆಂಡ್ರಾಯ್ಡ್‌ ಡೆವಲಪ್‌ಮೆಂಟ್‌ನಲ್ಲಿ ಮುಂದಿನ ಹಾದಿ, ಭವಿಷ್ಯದ ತಲೆಮಾರಿನ ಆಂಡ್ರಾಯ್ಡ್‌ ಬಗ್ಗೆ ಯಾವೆಲ್ಲಾ ನಿರ್ಧಾರಗಳನ್ನ ಮಾಡಲಾಗಿದೆ. ಆಂಡ್ರಾಯ್ಡ್‌ ತಂತ್ರಜ್ಞಾನದಲ್ಲಿ ಇನ್ನು ಯಾವೆಲ್ಲಾ ಸುದಾರಣೆಗಳನ್ನ ತರಬೇಕು ಅನ್ನೊದರ ಬಗ್ಗೆ ಮುಕ್ತವಾಗಿ ಚರ್ಚಿಸುವ ಸಮ್ಮೇಳನ ಇದಾಗಿತ್ತು. ಈ ಸ್ಮಮೇಳನಕ್ಕಾಗಿಯೇ ಒಂದು ಮಿಲಿಯನ್‌ಗೂ ಅಧಿಕ ವೆಚ್ಚವನ್ನ ಟೆಕ್‌ ವಲಯ ಮಾಡಿತ್ತು. ಆದರೆ ಇದೀಗ ಕಾರ್ಯಕ್ರಮವೇ ರದ್ದಾಗಿ ಹೋಗಿದೆ.

ಗೂಗಲ್‌ ಹೇಳಿದ್ದೇನು.?

ಗೂಗಲ್‌ ಹೇಳಿದ್ದೇನು.?

ಇನ್ನು ''ಕರೋನವೈರಸ್ (COVID -19) ಮತ್ತು CDC, WHO ಮತ್ತು ಇತರ ಆರೋಗ್ಯ ಅಧಿಕಾರಿಗಳ ಮಾರ್ಗದರ್ಶನದ ಆಧಾರದಮೇಲೆ, Shoreline Amphitheatre ಗೂಗಲ್ I/O ಈವೆಂಟ್ ಅನ್ನು ರದ್ದುಗೊಳಿಸಲು ನಾವು ನಿರ್ಧರಿಸಿದ್ದೇವೆ" ಎಂದು ಗೂಗಲ್ ಹೇಳಿದೆ. 2008 ರಲ್ಲಿ ಶುರುವಾದ ಈ ಕಾರ್ಯಕ್ರಮ ಪ್ರತಿವರ್ಷವೂ ನಡೆದುಕೊಂಡು ಬಂದಿದೆ. ಆದರೆ ಇದೀಗ ಕೊರೊನಾ ವೈರಸ್‌ ನಿಂದಾಗಿ ರದ್ದಾಗಿದೆ. ಆದರೂ ಮುಂದಿನ ದಿನಗಳಲ್ಲಿ ಗೂಗಲ್ I/O ಅನ್ನು ಇನ್ನಷ್ಟು ಉತ್ತಮವಾಗಿ ಸಂಘಟಿಸುತ್ತೇವೆ ಮತ್ತು ನಮ್ಮ ಡೆವಲಪರ್ ಕಮ್ಯೂನಿಟಿಯನ್ನು ಇನ್ನಷ್ಟು ಬಿಲ್ಡ್‌ ಮಾಡುತ್ತೇವೆ. ಇದಕ್ಕಾಗಿ ನಾವು ಇತರ ಮಾರ್ಗಗಳನ್ನು ಅನ್ವೇಷಿಸುತ್ತೇವೆ ಎಂದು ಗೂಗಲ್‌ ಹೇಳಿದೆ.

ಕಾರ್ಯಕ್ರಮ ರದ್ದಿನಿಂದಾಗುವ ಪರಿಣಾಮವೇನು.?

ಕಾರ್ಯಕ್ರಮ ರದ್ದಿನಿಂದಾಗುವ ಪರಿಣಾಮವೇನು.?

ಸದ್ಯ ತಂತ್ರಜ್ಞಾನ ಆಧಾರಿತ ಜಗತ್ತಿನಲ್ಲಿ ಟೆಕ್ನಾಲಜಿಗೆ ಸಂಬಂಧಿಸಿದ ಯಾವುದೇ ಒಂದು ಕಾರ್ಯಕ್ರಮವೂ ಭವಿಷ್ಯದ ಹಿತದೃಷ್ಟಿಯನ್ನೇ ಹೊಂದಿರುತ್ತವೆ. ಒಂದು ಸಮ್ಮೇಳನ ನಡೆಯಬೇಕು ಅಂದ್ರೆ ಅದರ ಪೂರ್ವ ಸಿದ್ದತೆಗಾಗಿಯೇ ಕೆಲವು ವರ್ಷಗಳನ್ನ ಮೀಸಲಾಗಿಡಬೇಕಾಗಿರುತ್ತದೆ. ಸದ್ಯ ಈ ಕಾರ್ಯಕ್ರಮ ರದ್ದಾಗಿದೆ, ಅಲ್ಲದೆ ಮುಂದೆ ಈ ಕಾರ್ಯಕ್ರಮ ಯಾವಾಗ ನಡೆಯಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದರಿಂದ ಟೆಕ್‌ವಲಯದ ಪ್ರಮುಖ ಕಂಪೆನಿಗಳು ಆದರಲ್ಲೂ ಗೂಗಲ್‌ ಆಂಡ್ರಾಯ್ಡ್‌ ಆಧಾರಿತ ಡಿವೈಸ್‌ಗಳನ್ನ ಉತ್ಪಾದಿಸುವ ಪ್ರಮುಖ ಕಂಪೆನಿಗಳಿಗೆ ಭಾರಿ ನಷ್ಟ ಉಂಟಾಗಲಿದೆ. ಹೊಸ ವಿನ್ಯಾಸದ ಡಿವೈಸ್‌ಗಳನ್ನ ಪರಿಚಯಿಸುವ ಉಮೇದಿನಲ್ಲಿದ್ದ ಕೆಲ ಕಂಪೆನಿಗಳಿಗೆ ಭಾರಿ ತೊಂದರೆ ಎದುರಾಗಲಿದೆ.

ಕೊರೊನಾ ವೈರಸ್‌ನಿಂದ ರದ್ದಾದ ಇತರೆ ಸಮ್ಮೇಳನಗಳು

ಕೊರೊನಾ ವೈರಸ್‌ನಿಂದ ರದ್ದಾದ ಇತರೆ ಸಮ್ಮೇಳನಗಳು

ಇನ್ನು ಕೊರೊನಾ ವೈರಸ್‌ ಭೀತಿಯಿಂದ ಗೂಗಲ್‌ I/O 2020 ಸಮ್ಮೇಳನವನ್ನ ರದ್ದು ಮಾಡಿಲ್ಲ, ಏಪ್ರಿಲ್‌ನಲ್ಲಿ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ನಡೆಯಬೇಕಿದ್ದ ಗ್ಲೋಬಲ್ ನ್ಯೂಸ್ ಇನಿಶಿಯೇಟಿವ್ ಶೃಂಗಸಭೆಯನ್ನು ಗೂಗಲ್ ರದ್ದುಗೊಳಿಸಿದೆ. ಇದರ ಜೊತೆಗೆ ಇತರೆ ಕಂಪೆನಿಗಳಾದ ಮೈಕ್ರೋಸಾಫ್ಟ್ ಮೆಲ್ಬೋರ್ನ್‌ನಲ್ಲಿ ನಡೆಯಬೇಕಿದ್ದ, ‘ಐಒಟಿ ಇನ್ ಆಕ್ಷನ್' ಸಮ್ಮೇಳನವನ್ನು ರದ್ದುಗೊಳಿಸಿತ್ತು. ಹೀಗೆ ಟೆಕ್‌ ವಲಯದ ಬಹು ಪ್ರಮುಖ ಸಮ್ಮೇಳನಗಳು ರದ್ದಾಗಿದ್ದು, ಟೆಕ್‌ವಲಯದ ಮೇಲೆ ಭಾರಿ ಪರಿಣಾಮವನ್ನ ಬೀರಿದೆ.

Most Read Articles
Best Mobiles in India

English summary
There is no confirmation on a pushed-back date or an online-only version of the event. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more