ಗೂಗಲ್‌ I/O 2022: ಆಂಡ್ರಾಯ್ಡ್‌ ಟಿವಿ ಸೇರಲಿರುವ ಹೊಸ ಫೀಚರ್ಸ್‌ಗಳ ಅನಾವರಣ!

|

ಟೆಕ್‌ ದೈತ್ಯ ಗೂಗಲ್‌ನ ತನ್ನ ವಾರ್ಷಿಕ ಸಮ್ಮೆಳನದಲ್ಲಿ ಹಲವು ಅಚ್ಚರಿಯ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಜೊತೆಗೆ ಅನೇಕ ಹೊಸ ಪ್ರಾಡಕ್ಟ್‌ಗಳನ್ನು ಅನಾವರಣಗೊಳಿಸಿದೆ. ಇದಲ್ಲದೆ ತನ್ನ ಆಂಡ್ರಾಯ್ಡ್‌ ಟಿವಿಗೆ ಹೊಸ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡುವುದಾಗಿ ಘೋಷಣೆ ಮಾಡಿದೆ. ಆಂಡ್ರಾಯ್ಡ್‌ ಟಿವಿಯ ಕಾರ್ಯಕ್ಷಮತೆ ಮತ್ತು ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಗೂಗಲ್‌ ಹೊಂದಿದೆ ಎನ್ನಲಾಗಿದೆ. ಅಲ್ಲದೆ ಆಂಡ್ರಾಯ್ಡ್‌ ಟಿವಿಗಳಲ್ಲಿ ಮಲ್ಟಿ ಫಂಕ್ಷನ್‌ ಅನ್ನು ಸಕ್ರಿಯಗೊಳಿಸುವುದಕ್ಕೆ ಗೂಗಲ್‌ ಮುಂದಾಗಿದೆ.

ಗೂಗಲ್‌

ಹೌದು, ಗೂಗಲ್‌ ತನ್ನ ಆಂಡ್ರಾಯ್ಡ್‌ ಟಿವಿಗಳಲ್ಲಿ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುವುದಾಗಿ ಪ್ರಕಟಿಸಿದೆ. ಆಂಡ್ರಾಯ್ಡ್‌ ಟಿವಿ OS ಇದೀಗ 110 ಮಿಲಿಯನ್ MAU ಅನ್ನು ಹೊಂದಿದೆ. ಅಲ್ಲದೆ ಕಂಪನಿಯ ಪ್ರಕಾರ 10,000 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳನ್ನು ನೀಡುತ್ತಿದೆ. ಅಲ್ಲದೆ API ನಂತಹ ಪ್ಲಾಟ್‌ಫಾರ್ಮ್ ಫೀಚರ್ಸ್‌ಗಳನ್ನು ತಮ್ಮ ಅಪ್ಲಿಕೇಶನ್‌ಗಳಲ್ಲಿ ಸಂಯೋಜಿಸಲು ಡೆವಲಪರ್‌ಗಳನ್ನು ಪ್ರೋತ್ಸಾಹಿಸಲು ಗೂಗಲ್‌ ಮುಂದಾಗಿದೆ. ಇನ್ನುಳಿದಂತೆ ಗೂಗಲ್‌ ತನ್ನ ಆಂಡ್ರಾಯ್ಡ್‌ ಟಿವಿಗಳಲ್ಲಿ ಯಾವೆಲ್ಲಾ ಫೀಚರ್ಸ್ ಪರಿಚಯಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಗೂಗಲ್‌ ಆಂಡ್ರಾಯ್ಡ್‌ 13 ಅನ್ನು ಘೋಷಣೆ ಮಾಡಿದೆ. ಇದರಿಂದ ಆಂಡ್ರಾಯ್ಡ್‌ ಟಿವಿಗಳಲ್ಲಿ ಹೊಸ ಫೀಚರ್ಸ್‌ಗಳು ಸೇರ್ಪಡೆಯಾಗಲಿವೆ. ಅದರಂತೆ ಡೆವಲಪರ್‌ಗಳು ಆಡಿಯೊ ಮಾರ್ಗಗಳನ್ನು 'ನಿರೀಕ್ಷಿಸಲು' ಆಡಿಯೋ ಮ್ಯಾನೇಜರ್‌ ಅನ್ನು ಬಳಸುವುದಕ್ಕೆ ಅವಕಾಶ ನೀಡಲಿದೆ. ಜೊತೆಗೆ ಅಪ್ಡೇಟ್‌ ಮಾಡಿದ ಪಿಕ್ಚರ್-ಇನ್-ಪಿಕ್ಚರ್ API ರೂಪದಲ್ಲಿ ಮಲ್ಟಿಟಾಸ್ಕಿಂಗ್‌ಗೆ ಅಪ್ಡೇಟ್‌ ಆಗಲಿದೆ. ಇದು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಂತೆಯೇ ಅದೇ API ಅನ್ನು ಬಳಸಲಿದೆ. ಇನ್ನು ಈ ಹೊಸ ಅಪ್ಡೇಟ್‌ PiP ಮೋಡ್‌ ಮೂಲಕ ಗ್ರೂಪ್‌ ಕರೆಯಲ್ಲಿ ಹೆಚ್ಚಿನ ವೀಡಿಯೊಗಳನ್ನು ತೋರಿಸುವ ವಿಸ್ತರಿತ ಮೋಡ್ ಅನ್ನು ಬಳಕೆದಾರರು ಪ್ರವೇಶಿಸಲು ಸಾಧ್ಯವಾಗಲಿದೆ.

ಆಂಡ್ರಾಯ್ಡ್‌

ಇನ್ನು ಇತರ ಅಪ್ಲಿಕೇಶನ್‌ಗಳಲ್ಲಿ ಕಂಟೆಂಟ್‌ ಒಳಗೊಂಡಿರುವ PiP ವಿಂಡೋಗಳನ್ನು ತಡೆಯಲು ಆಂಡ್ರಾಯ್ಡ್‌ ಟಿವಿಯಲ್ಲಿ ಡಾಕ್ ಮಾಡಲಾದ ಮೋಡ್‌ಗೆ ಬೆಂಬಲವನ್ನು ನೀಡಲಿದೆ. ಇದು 'ಕೀಪ್-ಕ್ಲಿಯರ್' API ಡೆವಲಪರ್‌ಗಳಿಗೆ ಫುಲ್‌-ಸ್ಕ್ರೀನ್‌ ಅಪ್ಲಿಕೇಶನ್‌ಗಳ ಪ್ರಮುಖ ಭಾಗಗಳನ್ನು ನಿರ್ದಿಷ್ಟಪಡಿಸಲು ಅನುಮತಿಸುತ್ತದೆ. ಇದಲ್ಲದೆ ಆಂಡ್ರಾಯ್ಡ್‌ 13 ಅಪ್ಡೇಟ್‌ನಲ್ಲಿ ಬಳಕೆದಾರರು ಬಳಕೆದಾರ ಮತ್ತು ಮಕ್ಕಳ ಪ್ರೊಫೈಲ್‌ಗಳನ್ನು ನೋಡುವುದಕ್ಕೆ ಸಾಧ್ಯವಾಗಲಿದೆ. ಇದು ಪ್ರತಿ ವೀಕ್ಷಕರಿಗೆ ವೈಯಕ್ತಿಕಗೊಳಿಸಿದ ಶಿಫಾರಸುಗಳನ್ನು ಅನುಮತಿಸುತ್ತದೆ ಎನ್ನಲಾಗಿದೆ. ಇದರಿಂದ ಗೂಗಲ್‌ ಟಿವಿ ರಿಮೋಟ್‌ನಂತೆ ಸ್ಮಾರ್ಟ್‌ಫೋನ್ ಅನ್ನು ರನ್‌ ಮಾಡುವುದಕ್ಕೆ ಮತ್ತು ವಾಲ್ಯೂಮ್ ಅನ್ನು ಕಂಟ್ರೋಲ್‌ ಮಾಡುವುದಕ್ಕೆ ಅವಕಾಶ ನೀಡುವ ಸಾಧ್ಯತೆಯಿದೆ.

ಗೂಗಲ್‌

ಇದಲ್ಲದೆ ಗೂಗಲ್‌ ತನ್ನ ಆಂಡ್ರಾಯ್ಡ್‌ 13ನಲ್ಲಿ ಮುಖ್ಯವಾಗಿ ಪ್ರೈವೆಸಿ ಮತ್ತು ಸೆಕ್ಯುರಿಟಿಗೆ ಹೆಚ್ಚಿನ ಅದ್ಯತೆ ನೀಡಿದೆ. ಇದಕ್ಕಾಗಿ ಪ್ರೈವೆಸಿ ಮತ್ತು ಸುರಕ್ಷತೆಯ ಅಪ್ಡೇಟ್‌ಗಳನ್ನು ತರುವುದಕ್ಕೆ ಕೇಂದ್ರೀಕರಿಸಲಾಗಿದೆ ಎಂದು ಗೂಗಲ್‌ ಹೇಳಿದೆ. ಸದ್ಯ ಗೂಗಲ್‌ ತನ್ನ ಆಂಡ್ರಾಯ್ಡ್‌ 13 ಬೀಟಾ 1 ಮತ್ತು ಡೆವಲಪರ್ ಪ್ರಿವ್ಯೂನಲ್ಲಿ ಅಂತಹ ಕೆಲವು ಫೀಚರ್ಸ್‌ಗಳನ್ನು ತೋರಿಸಿದೆ. ಅದರಂತೆ ನೋಟಿಫಿಕೇಶನ್‌ಗಳನ್ನು ಪುಶ್‌ ಮಾಡುವ ಮೊದಲು ಅಪ್ಲಿಕೇಶನ್‌ಗಳು ಬಳಕೆದಾರರ ಅನುಮತಿಗಳನ್ನು ಪಡೆಯುವ ಅಗತ್ಯವಿದೆ. ಇನ್ನು ಸಂವಾದಗಳನ್ನು ಖಾಸಗಿಯಾಗಿ ಮತ್ತು ಸುರಕ್ಷಿತವಾಗಿರಿಸಲು, ನಿಮ್ಮ ಡಿಜಿಟಲ್ ಗುರುತನ್ನು ಸಂಗ್ರಹಿಸಲು ಹೊಸ ಮಾರ್ಗಗಳನ್ನು ಪರಿಚಯಿಸಲಿದೆ.

SMS

ಇನ್ನು ರಿಚ್ ಕಮ್ಯುನಿಕೇಶನ್ ಸರ್ವಿಸಸ್ (RCS) ಎಂಬ ಹೊಸ ಮಾನದಂಡಕ್ಕೆ SMS ಟೆಕ್ಸ್ಟ್‌ ಮೆಸೇಜ್‌ ಅನ್ನು ಅಪ್‌ಗ್ರೇಡ್ ಮಾಡಲು ಕ್ಯಾರಿಯರ್‌ ಮತ್ತು ಫೋನ್ ತಯಾರಕರೊಂದಿಗೆ ಕೆಲಸ ಮಾಡುತ್ತಿದೆ ಎಂದು ಗೂಗಲ್‌ ಹೇಳಿದೆ. ಇದಲ್ಲದೆ ಉತ್ತಮ ಗುಣಮಟ್ಟದ ಫೋಟೋಗಳನ್ನು ಹಂಚಿಕೊಳ್ಳಲು, ಟೈಪಿಂಗ್ ಇಂಡಿಕೇಟರ್ಸ್‌ ಅನ್ನು ನೋಡಲು ಮತ್ತು ಗ್ರೂಪ್‌ ಕಮ್ಯೂನಿಕೇಶನ್‌ ನಡೆಸಲು ಬಳಕೆದಾರರಿಗೆ ಅವಕಾಶ ನೀಡಲಿದೆ. ಇದಕ್ಕಾಗಿ ಆರ್‌ಸಿಎಸ್ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ ಮೂಲಕ ನಿಮ್ಮ ಸಂದೇಶಗಳಿಗೆ ಸುರಕ್ಷತೆಯನ್ನು ನೀಡಲಿದೆ.

Most Read Articles
Best Mobiles in India

English summary
Google I/O 2022: New features coming to the next versions of Android TV

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X