ಇನ್ಮುಂದೆ ನಿಮ್ಮ ಕಾರ್‌ ಲಾಕ್‌ ಅನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲೇ ತೆರೆಯಿರಿ!

|

ಟೆಕ್‌ ದೈತ್ಯ ಗೂಗಲ್‌ ತನ್ನ Google I/O ಈವೆಂಟ್‌ನಲ್ಲಿ ಮಹತ್ವದ ಘೋಷಣೆಯೊಂದನ್ನು ಪ್ರಕಟಿಸಿದೆ. ಇನ್ಮುಂದೆ ನಿಮ್ಮ ಕಾರಿನ ಕೀ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನೇ ಬಳಸಬಹುದಾದ ಟೆಕ್ನಾಲಜಿ ಪರಿಚಯಿಸಲು ಮುಂದಾಗಿದೆ. ಗೂಗಲ್ ಬಿಎಂಡಬ್ಲ್ಯು ಮತ್ತು ಇತರ ವಾಹನ ತಯಾರಕರೊಂದಿಗೆ ಡಿಜಿಟಲ್ ಕೀಲಿಯನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿದ್ದು, ಅದು ಕಾರ್ ಮಾಲೀಕರಿಗೆ ತಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಿಂದ ವಾಹನವನ್ನು ಲಾಕ್ ಮಾಡಲು, ಅನ್ಲಾಕ್ ಮಾಡಲು ಮತ್ತು ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ ಎಂದು ಗೂಗಲ್‌ ಐ / ಒ ಡೆವಲಪರ್ ಈವೆಂಟ್‌ನಲ್ಲಿ ಪ್ರಕಟಿಸಿದೆ.

ಗೂಗಲ್‌

ಹೌದು, ಗೂಗಲ್‌ ಡಿಜಿಟಲ್‌ ಕೀ ಯನ್ನು ಅಭಿವೃದ್ಧಿಪಡಿಸಲು ಪ್ಲ್ಯಾನ್ ರೂಪಿಸಿದೆ. ಕಂಪನಿಯ ಮೊಬೈಲ್ ಆಪರೇಟಿಂಗ್ ಸಿಸ್ಟಂನ ಇತ್ತೀಚಿನ ಆವೃತ್ತಿಯಾದ ಆಂಡ್ರಾಯ್ಡ್ 12 ಗೆ ಬರುವ ಹಲವಾರು ಹೊಸ ಫೀಚರ್ಸ್‌ಗಳಲ್ಲಿ ಡಿಜಿಟಲ್ ಕೀ ಕೂಡ ಒಂದು. ಈ ವರ್ಷದ ಕೊನೆಯಲ್ಲಿ ಆಯ್ದ ಪಿಕ್ಸೆಲ್ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋನ್‌ಗಳಲ್ಲಿ ಡಿಜಿಟಲ್ ಕಾರ್ ಕೀಗಳು ಲಭ್ಯವಾಗಲಿವೆ ಎಂದು ಆಂಡ್ರಾಯ್ಡ್ ಮತ್ತು ಗೂಗಲ್ ಪ್ಲೇಗಾಗಿ ಪಿಎಂನ ವಿ.ಪಿ. ಸಮೀರ್ ಸಮತ್ ಹೇಳಿದ್ದಾರೆ. ಹಾಗಾದ್ರೆ ಈ ಡಿಜಿಟಲ್‌ ಕಾರ್‌ ಕೀ ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಜಿಟಲ್

ಗೂಗಲ್‌ ಹೇಳಿರುವ ಡಿಜಿಟಲ್ ಕೀ ಅಲ್ಟ್ರಾ ವೈಡ್‌ಬ್ಯಾಂಡ್ ತಂತ್ರಜ್ಞಾನವನ್ನು ಬಳಸುತ್ತದೆ. ಇದು ರೇಡಿಯೊ ಪ್ರಸರಣದ ಒಂದು ರೂಪವಾಗಿದೆ. ಇದಕ್ಕಾಗಿ ಸೆನ್ಸಾರ್‌ ಸಿಗ್ನಲ್‌ನ ದಿಕ್ಕನ್ನು ಹೇಳಬಲ್ಲದು, ಸಣ್ಣ ರಾಡಾರ್‌ನಂತೆ ಇದು ಕಾರ್ಯನಿರ್ವಹಿಸಲಿದೆ. ಅಲ್ಲದೆ ಇದು ನಿಮ್ಮ ಫೋನ್‌ನಲ್ಲಿರುವ ಆಂಟೆನಾವನ್ನು UWB ಟ್ರಾನ್ಸ್‌ಮಿಟರ್‌ಗಳನ್ನು ಹೊಂದಿದ ವಸ್ತುಗಳನ್ನು ಪತ್ತೆಹಚ್ಚಲು ಮತ್ತು ಗುರುತಿಸಲು ಅನುವು ಮಾಡಿಕೊಡುತ್ತದೆ. ಯುಡಬ್ಲ್ಯೂಬಿ ತಂತ್ರಜ್ಞಾನವನ್ನು ಬಳಸುವ ಮೂಲಕ, ಆಂಡ್ರಾಯ್ಡ್ ಬಳಕೆದಾರರು ತಮ್ಮ ಫೋನ್ ಅನ್ನು ಹೊರತೆಗೆಯದೆ ತಮ್ಮ ವಾಹನವನ್ನು ಲಾಕ್ ಮಾಡಲು ಮತ್ತು ಅನ್ಲಾಕ್ ಮಾಡಲು ಸಾಧ್ಯವಾಗುತ್ತದೆ.

ತಂತ್ರಜ್ಞಾನವನ್ನು

ಇನ್ನು ಎನ್‌ಎಫ್‌ಸಿ ತಂತ್ರಜ್ಞಾನವನ್ನು ಸಕ್ರಿಯಗೊಳಿಸಿದ ಕಾರು ಮಾದರಿಗಳನ್ನು ಹೊಂದಿರುವ ಗ್ರಾಹಕರು ತಮ್ಮ ಫೋನ್ ಅನ್ನು ಬಾಗಿಲಿನ ವಿರುದ್ಧ ಟ್ಯಾಪ್ ಮಾಡುವ ಮೂಲಕ ತಮ್ಮ ಕಾರನ್ನು ಅನ್ಲಾಕ್ ಮಾಡಬಹುದಾಗಿದೆ. ಫೋನ್ ಬಳಕೆದಾರರ ಕಾರಿನಲ್ಲಿ ಎನ್‌ಎಫ್‌ಸಿ ರೀಡರ್‌ನೊಂದಿಗೆ ಸಂವಹನ ನಡೆಸುತ್ತದೆ. ಇದು ಸಾಮಾನ್ಯವಾಗಿ ಬಾಗಿಲಿನ ಹ್ಯಾಂಡಲ್‌ನಲ್ಲಿರಲಿದೆ. ಬಳಕೆದಾರರು ಕಾರನ್ನು ಎರವಲು ಪಡೆಯಬೇಕಾದರೆ ಸ್ನೇಹಿತರು ಮತ್ತು ಕುಟುಂಬದೊಂದಿಗೆ ತಮ್ಮ ಕಾರಿನ ಕೀಲಿಯನ್ನು ಸುರಕ್ಷಿತವಾಗಿ ಮತ್ತು ದೂರದಿಂದಲೇ ಹಂಚಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಗೂಗಲ್ ಹೇಳಿದೆ.

ಐಫೋನ್

ಕಳೆದ ವರ್ಷ ಆಪಲ್ ಇದೇ ರೀತಿಯ ಕ್ರಮ ಕೈಗೊಂಡಿದ್ದು, ಬಳಕೆದಾರರು ತಮ್ಮ ಐಫೋನ್ ಅಥವಾ ಆಪಲ್ ವಾಚ್‌ಗೆ ಡಿಜಿಟಲ್ ಕಾರ್ ಕೀಲಿಯನ್ನು ಸೇರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಐಒಎಸ್ 14 ರ ಭಾಗವಾಗಿದ್ದ ಈ ಫೀಚರ್ಸ್‌ ಎನ್‌ಎಫ್‌ಸಿಯ ಮೇಲೆ ಕಾರ್ಯನಿರ್ವಹಿಸುತ್ತದೆ. ಹೆಚ್ಚುತ್ತಿರುವ ವಾಹನ ತಯಾರಕರು ತಮ್ಮದೇ ಆದ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ, ಇದು ರಿಮೋಟ್ ಲಾಕಿಂಗ್ ಮತ್ತು ಅನ್‌ಲಾಕಿಂಗ್‌ನಂತಹ ಕೆಲವು ಕಾರ್ಯಗಳನ್ನು ಸಹ ನಿಯಂತ್ರಿಸಬಹುದು. ಗೂಗಲ್‌ನ ಮತ್ತು ಆಪಲ್‌ನ ದೃಷ್ಟಿಯಲ್ಲಿ ದೊಡ್ಡ ಲಾಭವೆಂದರೆ, ಅದರ ಮೊಬೈಲ್ ಆಪರೇಟಿಂಗ್ ಸಿಸ್ಟಂನಲ್ಲಿ ಡಿಜಿಟಲ್ ಕಾರ್ ಕೀಲಿಯನ್ನು ನೀಡುವುದರಿಂದ ಬಳಕೆದಾರರು ಅಪ್ಲಿಕೇಶನ್ ಡೌನ್‌ಲೋಡ್ ಮಾಡಬೇಕಾದ ಅವಶ್ಯಕತೆಯಿಲ್ಲ.

Best Mobiles in India

Read more about:
English summary
Google I / O keynote address on Day 1, an important tidbit for the automotive universe was the reveal of Google’s digital car key.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X