ಗೂಗಲ್‌ ಫಾರ್‌ ಇಂಡಿಯಾ 2020 ಅಭಿಯಾನಕ್ಕೆ ದಿನಾಂಕ ನಿಗದಿ ಮಾಡಿದ ಗೂಗಲ್‌!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಗೂಗಲ್‌ ಫಾರ್‌ ಇಂಡಿಯಾ 2020 ಅಭಿಯಾನಕ್ಕೆ ದಿನಾಂಕವನ್ನು ನಿಗದಿ ಮಾಡಿದೆ. ಸದ್ಯ ಗೂಗಲ್ ಫಾರ್ ಇಂಡಿಯಾ ತನ್ನ 2020 ವಾರ್ಷಿಕ ಆವೃತ್ತಿಯೊಂದಿಗೆ ಮತ್ತೆ ಬಂದಿದ್ದು. ಗೂಗಲ್ ತನ್ನ ಆರನೇ ವಾರ್ಷಿಕ ಆವೃತ್ತಿಯ 'ಗೂಗಲ್ ಫಾರ್ ಇಂಡಿಯಾ' ಕಾರ್ಯಕ್ರಮಕ್ಕಾಗಿ ಅಧಿಕೃತ ಸಂವಹನವನ್ನು ಕಳುಹಿಸಿದೆ. ಸದ್ಯ ಈ ಕಾರ್ಯಕ್ರಮವನ್ನು ಸರ್ಚ್‌ ಇಂಜಿನ್‌ ದೈತ್ಯ ಗೂಗಲ್ ಇಂಡಿಯಾದ ಯೂಟ್ಯೂಬ್ ಚಾನೆಲ್‌ನಲ್ಲಿ ಹೋಸ್ಟ್ ಮಾಡಲಿದೆ ಎನ್ನಲಾಗ್ತಿದೆ. ಇನ್ನು ಈ ಈವೆಂಟ್ ಇದೇ ಜುಲೈ 13 ರ ಸೋಮವಾರ ಮಧ್ಯಾಹ್ನ 2:00 ಗಂಟೆಗೆ IST ಯಲ್ಲಿ ಪ್ರಸಾರವಾಗಲಿದೆ.

ಗೂಗಲ್‌

ಹೌದು, ಇದೇ ಜುಲೈ 13, 2020 ರಂದು ಸೋಮವಾರ ಸರ್ಚ್‌ ಇಂಜಿನ್‌ ದೈತ್ಯ ತನ್ನ ಭಾರತದಲ್ಲಿ ಗೂಗಲ್‌ 6ನೇ ವರ್ಷದ ಆವೃತ್ತಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸದ್ಯ ಈ ಕಾರ್ಯಕ್ರಮಕ್ಕೆ ಎಲ್ಲರನ್ನೂ ಆಹ್ವಾನಿಸಲು ನಾವು ಉತ್ಸುಕರಾಗಿದ್ದೇವೆ ಎಂದು ಗೂಗಲ್‌ ಹೇಳಿಕೊಂಡಿದೆ. ನಾವು ಕಳೆದ ಆರು ವರ್ಷಗಳಲ್ಲಿ, ಅಂತರ್ಜಾಲದ ಸಂಪೂರ್ಣ ಸಾಮರ್ಥ್ಯವನ್ನು ವಿಸ್ತರಿಸುವ ಸಹಾಯಕ ಪ್ರಾಡಕ್ಟ್‌ಗಳು ಮತ್ತು ಸೇವೆಗಳನ್ನು ನಿರ್ಮಿಸಲು ನಾವು ನಿರಂತರವಾಗಿ ಹೂಡಿಕೆ ಮಾಡಿದ್ದೇವೆ ಎಂದು ಹೇಳಿಕೊಂಡಿದೆ. ಅಷ್ಟಕ್ಕೂ ಗೂಗಲ್‌ ಫಾರ್‌ ಇಂಡಿಯಾ 2020 ಅಭಿಯಾನದ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್‌

ಗೂಗಲ್‌ ಫಾರ್‌ ಇಂಡಿಯಾ 2020 ಕಾರ್ಯಕ್ರಮಕ್ಕೆ ಗೂಗಲ್‌ ಅಧಿಕೃತ ಆಮಣತ್ರಣವನ್ನ ನೀಡಿದೆ. ಈ ನಿಟ್ಟಿನಲ್ಲಿ ಗೂಗಲ್‌ ತಾನು ಕಳೆದ ಆರು ವರ್ಷಗಳಲ್ಲಿ ಭಾರತದ ಪ್ರತಿಯೊಬ್ಬರಿಗೂ ಸಾದ್ಯವಾದಷ್ಟು ಸಹಾಯಕ ಕ್ರಮಗಳನ್ನ ತೆಗೆದುಕೊಂಡಿದ್ದೇವೆ ಎಂದು ಗೂಗಲ್‌ ಹೇಳಿದೆ. ಅದರಲ್ಲೂ ವಿಶೇಷವಾಗಿ ಈ ಅಸಾಧಾರಣ ಕಾಲದಲ್ಲಿ, ಈ ಆವೇಗವನ್ನು ಹೆಚ್ಚಿಸಲು ನಾವು ಆಳವಾಗಿ ಬದ್ಧರಾಗಿದ್ದೇವೆ. ಅಲ್ಲದೆ ಭಾರತವು ಹೊಸ, ಡಿಜಿಟಲ್- ಭವಿಷ್ಯದತ್ತ ಸಾಗುತ್ತಿರುವಾಗ ನಾವು ಕೂಡ ಹೊಸ ಅವಕಾಶಗಳನ್ನು ಅನ್ಲಾಕ್ ಮಾಡುತ್ತೇವೆ ಎಂದು ಗೂಗಲ್ ಇಂಡಿಯಾ ಹೇಳಿದೆ.

ಗೂಗಲ್‌

ಇನ್ನು ಈ ಈವೆಂಟ್ ದೇಶದಲ್ಲಿ ಸದ್ಯ ಗೂಗಲ್‌ ಕೈಗೊಂಡಿರುವ ಹೊಸ ಪ್ರಯತ್ನಗಳ ಬಗ್ಗೆ ವಿವರಿಸಲಿದೆ. ಜೊತೆಗೆ ಭವಿಷ್ಯದಲ್ಲಿ ಭಾರತದಲ್ಲಿ ಗೂಗಲ್‌ ಕೈಗೊಳ್ಳುವ ಉಪಕ್ರಮಗಳ ಬಗ್ಗೆ ಒಂದು ವ್ಯೂವ್‌ ಅನ್ನು ನಿಡಲಿದೆ. ಇದಲ್ಲದೆ ಈ ವರ್ಷ ಗೂಗಲ್‌ ಫಾರ್‌ ಇಂಡಿಯಾ ಈವೆಂಟ್ ಅನ್ನು ಗೂಗಲ್ ಮತ್ತು ಆಲ್ಫಾಬೆಟ್‌ ಸಿಇಒ ಸುಂದರ್ ಪಿಚೈ ಮತ್ತು ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಗೂಗಲ್ ಹೇಳಿದೆ.

ಗೂಗಲ್

ಸದ್ಯ ಕಳೆದ ವರ್ಷ, ಗೂಗಲ್ ಫಾರ್ ಇಂಡಿಯಾ 2019 ರಲ್ಲಿ, ಕಂಪನಿಯು ಬೆಂಗಳೂರಿನ ಗೂಗಲ್‌ನ ಎಐ ಲ್ಯಾಬ್, ಬಿಎಸ್‌ಎನ್‌ಎಲ್ ಪಾಲುದಾರಿಕೆ ಮತ್ತು ವ್ಯಾಪಾರಿಗಳಿಗಾಗಿ ‘ಗೂಗಲ್ ಪೇ ಫಾರ್ ಬಿಸಿನೆಸ್' ಆಪ್ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿತ್ತು. ಅಲ್ಲದೆ ಬೆಂಗಳೂರಿನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಲ್ಯಾಬ್ ಮೂಲಭೂತ ಕಂಪ್ಯೂಟರ್ ವಿಜ್ಞಾನ ಮತ್ತು ಎಐ ಸಂಶೋಧನೆಗಳತ್ತ ಗಮನ ಹರಿಸಲಿದೆ ಎಂದು ಹೇಳಿತ್ತು. ಇದು ಆರೋಗ್ಯ, ಕೃಷಿ ಮತ್ತು ಶಿಕ್ಷಣದಂತಹ ಕ್ಷೇತ್ರಗಳಲ್ಲಿನ ದೊಡ್ಡ ಸಮಸ್ಯೆಗಳನ್ನು ನಿಭಾಯಿಸಲು ಈ ಸಂಶೋಧನೆಯನ್ನು ಅನ್ವಯಿಸುತ್ತದೆ ಎಂದು ಹೇಳಲಾಗಿತ್ತು.

ಭಾರತ

ಇದೀಗ ಭಾರತದಾದ್ಯಂತ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರಿಗಾಗಿ ಟೋಕನೈಸ್ ಮಾಡಿದ ಕಾರ್ಡ್‌ಗಳನ್ನು ಗೂಗಲ್‌ ಬಿಡುಗಡೆ ಮಾಡಿದೆ. ಇದು Google Pay ಗಾಗಿ "ಸ್ಪಾಟ್" ಪ್ಲಾಟ್‌ಫಾರ್ಮ್ ಅನ್ನು ಪರಿಚಯಿಸಿದೆ. ಅಲ್ಲದೆ ವ್ಯಾಪಾರಿಗಳು ಆಫ್‌ಲೈನ್ ಮತ್ತು ಆನ್‌ಲೈನ್ ಪ್ರಪಂಚಗಳಿಗೆ ಸೇತುವೆಯಾಗುವ ಬ್ರಾಂಡ್ ವಾಣಿಜ್ಯ ಅನುಭವಗಳನ್ನು ಸೃಷ್ಟಿಸಲು ಇದೊಂದು ಸೆತುವೆ ಆಗಿ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ಅಸಿಸ್ಟೆಂಟ್, ಡಿಸ್ಕವರ್, ಲೆನ್ಸ್ ಮತ್ತು ಬೊಲೊ ಅಪ್ಲಿಕೇಶನ್ ಸೇರಿದಂತೆ ಅದರ ಉತ್ಪನ್ನಗಳಿಗೆ ಇದು ಹೆಚ್ಚು ಭಾರತೀಯ ಭಾಷೆಗಳನ್ನು ನಿಡುತ್ತಿರೋದು ಗೂಗಲ್‌ ಫಾರ್‌ ಇಂಡಿಯಾ ಅಭಿಯಾನದ ಯಶಸ್ಸಿಗೆ ಕಾರಣವಾಗಿದೆ.

Best Mobiles in India

English summary
The search giant will be hosting Google for India 2020 event virtually on Google India’s YouTube Channel.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X