ಡಿಜಿಟಲ್ ಭಾರತವನ್ನೇ ಬದಲಿಸಲು ತಯಾರಾಗಿದೆ ಗೂಗಲ್‌

By Avinash
|

ಜಾಗತಿಕ ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಡಿಜಿಟಲ್ ಭಾರತದ ಕಲ್ಪನೆಯನ್ನು ಬದಲಾಯಿಸುವ ಎಲ್ಲಾ ಪ್ರಯತ್ನ ಮಾಡುತ್ತಿದೆ. ಈ ಹೇಳಿಕೆಗೆ ಪುಷ್ಠಿ ನೀಡುವಂತೆ ಗೂಗಲ್ ಮಂಗಳವಾರ ಆಯೋಜಿಸಿದ್ದ ಗೂಗಲ್ ಫಾರ್ ಇಂಡಿಯಾ ಕಾರ್ಯಕ್ರಮದಲ್ಲಿ ಈ ಸಾಧ್ಯತೆಯನ್ನು ಕಾಣಿಸಿದ್ದು, ಡಿಜಿಟಲ್ ಭಾರತದ ಕಲ್ಪನೆಗೆ ವೇಗ ಕಲ್ಪಿಸಿದೆ.

ಡಿಜಿಟಲ್ ಭಾರತವನ್ನೇ ಬದಲಿಸಲು ತಯಾರಾಗಿದೆ ಗೂಗಲ್‌

ಗೂಗಲ್ ಫಾರ್ ಇಂಡಿಯಾದ 4ನೇ ಆವೃತ್ತಿಯ ವಾರ್ಷಿಕ ಕಾರ್ಯಕ್ರಮದಲ್ಲಿ ಗೂಗಲ್ ಪ್ರಮುಖ 9 ನಿರ್ಧಾರಗಳನ್ನು ಘೋಷಣೆ ಮಾಡಿದ್ದು, ಇದರಲ್ಲಿ ಜನಪ್ರಿಯ ಗೂಗಲ್ ಮ್ಯಾಪ್ಸ್‌ ಮತ್ತು ಗೂಗಲ್‌ ತೇಜ್‌ ಆಪ್‌ಗಳ ಬದಲಾವಣೆಯು ಸೇರಿವೆ. ಇದರ ಜತೆ ಡಿಜಿಟಲ್ ಇಂಡಿಯಾದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ತೆಗೆದುಕೊಂಡ ಕ್ರಮಗಳನ್ನು ಮುಂದೆ ವಿವರಿಸಲಾಗಿದೆ.

ಬದಲಾದ ತೇಜ್‌

ಬದಲಾದ ತೇಜ್‌

ಗೂಗಲ್‌ನ ಜನಪ್ರಿಯ ಡಿಜಿಟಲ್ ಪೇಮೆಂಟ್‌ ಆಪ್‌ ಆಗಿದ್ದ ಗೂಗಲ್ ತೇಜ್‌ ಬದಲಾಗಿದ್ದು, ಗೂಗಲ್ ಪೇ ಆಗಿದೆ. ಬ್ರಾಂಡ್‌ ನೇಮ್ ಬದಲಾಯಿಸಿರುವ ಗೂಗಲ್ ಪ್ರೀ ಅಪ್ರೂವಲ್‌ ಬ್ಯಾಂಕ್ ಲೋನ್‌ ಎಂಬ ಹೊಸ ಫೀಚರ್ ಸೇರಿಸಿದೆ. ಈ ಪ್ರಕ್ರಿಯೆಗೆ ಫೆಡರಲ್‌ ಬ್ಯಾಂಕ್‌, ಹೆಚ್‌ಡಿಎಫ್‌ಸಿ, ಐಸಿಐಸಿಐ ಹಾಗೂ ಕೋಟಕ್‌ ಮಹೇಂದ್ರ ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಸದ್ಯ ಗೂಗಲ್ ತೇಜ್‌ ಆಪ್‌ನ್ನು 22 ಮಿಲಿಯನ್‌ ಬಳಕೆದಾರರು ಸಕ್ರಿಯವಾಗಿ ಬಳಸುತ್ತಿದ್ದಾರೆ. ಮತ್ತು ವಾರ್ಷಿಕ ವಹಿವಾಟು 2 ಲಕ್ಷ ಕೋಟಿಯನ್ನು ದಾಟುತ್ತಿದೆ ಎಂದು ಗೂಗಲ್ ಹೇಳಿಕೊಂಡಿದೆ.

ಆಂಡ್ರಾಯ್ಡ್‌ ಗೋ

ಆಂಡ್ರಾಯ್ಡ್‌ ಗೋ

ಗೂಗಲ್‌ನ ಪ್ರಮುಖ ಆಂಡ್ರಾಯ್ಡ್ ಗೋ ಆವೃತ್ತಿ ಇದೀಗ ಮತ್ತಷ್ಟು ಉತ್ತಮವಾಗಿದೆ. ಆಂಡ್ರಾಯ್ಡ್‌ ಪೈ ಗೋ ಆವೃತ್ತಿಯೊಂದಿಗೆ ಉತ್ತಮ ಭದ್ರತೆ, ಹೆಚ್ಚು ಸ್ಟೊರೇಜ್‌ ಮತ್ತೀತರ ಫೀಚರ್‌ಗಳು ದೊರೆಯಲಿವೆ. ಶೇ.50ರಷ್ಟು ಗೋ ಆವೃತ್ತಿಯ ಡಿವೈಸ್‌ಗಳು ಫೀಚರ್‌ ಫೋನ್‌ಗಳಾಗಿ ನೇರವಾಗಿ ಅಪ್‌ಡೇಟ್‌ ಆಗಿವೆ ಎಂದು ಗೂಗಲ್ ಹೇಳಿದೆ. ಆಂಡ್ರಾಯ್ಡ್‌ ಗೋ ಆವೃತ್ತಿಗೆ 150OEMs ಬೆಂಬಲ ನೀಡ್ತಿವೆ. ಈ ವರ್ಷಾಂತ್ಯಕ್ಕೆ 400ಕ್ಕೂ ಹೆಚ್ಚು ಡಿವೈಸ್‌ಗಳು ಆಂಡ್ರಾಯ್ಡ್‌ ಗೋ ಆವೃತ್ತಿ ಹೊಂದಲಿವೆ. ಭಾರತದಲ್ಲಿ ನೋಕಿಯಾ, ಮೈಕ್ರೋಮ್ಯಾಕ್ಸ್‌, ಲಾವಾ, ಟ್ರಾನ್ಸಿನ್‌ ಮತ್ತು ಸ್ಯಾಮ್‌ಸಂಗ್‌ ಡಿವೈಸ್‌ಗಳಲ್ಲಿ ಆಂಡ್ರಾಯ್ಡ್‌ ಗೋ ಆವೃತ್ತಿ ದೊರೆಯಲಿದೆ.

50 ಮಿಲಿಯನ್‌ಗಿಂತಲೂ ಹೆಚ್ಚು ಕಟ್ಟಡಗಳ ಸೇರ್ಪಡೆ

50 ಮಿಲಿಯನ್‌ಗಿಂತಲೂ ಹೆಚ್ಚು ಕಟ್ಟಡಗಳ ಸೇರ್ಪಡೆ

ಗೂಗಲ್ ಪ್ರಕಾರ ಭಾರತವು ಗೂಗಲ್ ಮ್ಯಾಪ್‌ನಲ್ಲಿ ವೇಗವಾಗಿ ಬೆಳೆಯುತ್ತಿರುವ ದೇಶವಾಗಿದೆ. ಅದಕ್ಕಾಗಿಯೇ ಗೂಗಲ್ ಮ್ಯಾಪ್ಸ್‌ಗೆ 2018ರಲ್ಲಿ 50 ಮಿಲಿಯನ್‌ಗಿಂತಲೂ ಹೆಚ್ಚು ಕಟ್ಟಡಗಳನ್ನು ಸೇರಿಸಲಾಗಿದೆ. ಅದಲ್ಲದೇ ಗೂಗಲ್ ಮ್ಯಾಪ್ಸ್‌ ರೆಡ್‌ಬಸ್‌ ಜತೆ ಟೈ ಅಪ್‌ ಅಗಿ ಭಾರತದ ಟ್ರಾವೆಲ್‌ ಉದ್ಯಮಕ್ಕೂ ಕಾಲಿಟ್ಟಿದೆ.

ಗೂಗಲ್ ಅಸಿಸ್ಟಂಟ್‌

ಗೂಗಲ್ ಅಸಿಸ್ಟಂಟ್‌

ಗೂಗಲ್‌ ಅಸಿಸ್ಟಂಟ್‌ ಈಗ ಸ್ಥಳೀಯ ಆಪ್‌ಗಳಿಗೂ ಬೆಂಬಲ ನೀಡುತ್ತಿದೆ. ಧ್ವನಿ ಆಧಾರಿತ ವರ್ಚುವಲ್ ಅಸಿಸ್ಟಂಟ್‌ ಶೀಘ್ರದಲ್ಲಿಯೇ ಭಾರತದ ಇನ್ನು 7 ಪ್ರಾದೇಶಿಕ ಭಾಷೆಗಳಿಗೆ ಬೆಂಬಲ ನೀಡುತ್ತದೆ. ಗೂಗಲ್‌ ಗೋ ಶೀಘ್ರದಲ್ಲಿಯೇ ಮರಾಠಿ, ತೆಲುಗು, ಮಲಯಾಳಂ ಮತ್ತು ತಮಿಳು ಭಾಷೆಯಲ್ಲಿ ಇಂಟರ್‌ನೆಟ್‌ ಸರ್ಚ್‌ ಮಾಡಲು ಅವಕಾಶ ನೀಡಿದೆ. ನಂತರದ ದಿನಗಳಲ್ಲಿ ಬೇರೆ ಪ್ರಮುಖ ಭಾಷೆಗಳಿಗೂ ವಿಸ್ತರಿಸುತ್ತೇವೆ ಎಂದು ಗೂಗಲ್ ಹೇಳಿದೆ.

ಗೂಗಲ್ ಸ್ಟೇಷನ್‌

ಗೂಗಲ್ ಸ್ಟೇಷನ್‌

ಗೂಗಲ್ ವಿವಿಧ ರಾಜ್ಯ ಸರ್ಕಾರಗಳ ಜತೆ ಸೇರಿ ರಾಜ್ಯಗಳಲ್ಲಿ ವೈ-ಫೈ ಸೇವೆ ನೀಡಬೇಕೆಂಬ ಗುರಿ ಹೊಂದಿದೆ. ಇದಕ್ಕಾಗಿ ತನ್ನ ಗೂಗಲ್ ಸ್ಟೇಷನ್ ಸೇವೆಯನ್ನು ಬಳಸಿಕೊಳ್ಳಲು ಸರ್ಚ್ ಇಂಜಿನ್ ದೈತ್ಯ ಉತ್ಸುಕವಾಗಿದೆ. ಹೀಗಾಗಲೇ ಆಂಧ್ರಪ್ರದೇಶ ರಾಜ್ಯ ಫೈಬರ್ ನೆಟ್‌ ಲಿಮಿಟೆಡ್ ಜತೆ ಸೇರಿ 12 ಸಾವಿರಕ್ಕೂ ಹೆಚ್ಚು ಹಳ್ಳಿ, ಪಟ್ಟಣ ಹಾಗೂ ನಗರಗಳಿಗೆ ಗೂಗಲ್‌ ಸ್ಟೇಷನ್ ಮೂಲಕ ಉಚಿತ ವೈ-ಫೈ ಸೇವೆಯನ್ನು ನೀಡಿದೆ.

ರೇಲ್‌ಟೆಲ್‌

ರೇಲ್‌ಟೆಲ್‌

ಗೂಗಲ್ ರೇಲ್‌ಟೆಲ್‌ ಅಥವಾ ಗೂಗಲ್ ಸ್ಟೇಷನ್ ವೈ-ಫೈ ಸೇವೆ ಪ್ರಸ್ತುತದಲ್ಲಿ 400 ರೈಲ್ವೇ ನಿಲ್ದಾಣಗಳಲ್ಲಿ ದೊರೆಯುತ್ತಿದೆ. ಈ ಸಂಖ್ಯೆಯನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸಲಾಗುವುದು. ರೇಲ್‌ಟೆಲ್‌ನಿಂದ ಬೇರೆ ದೇಶಗಳಲ್ಲೂ ಸ್ಟೇಷನ್ ವೈ-ಫೈಗೆ ವೇದಿಕೆ ಸಿಕ್ಕಿದೆ ಎಂದು ನೆಕ್ಸ್ಟ್‌ ಬಿಲಿಯನ್ ಇನಿಷಿಯೇಟಿವ್ ಮತ್ತು ಗೂಗಲ್ ಪೇಮೆಂಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಸೀಸರ್‌ ಸೇನ್‌ಗುಪ್ತಾ ಹೇಳಿದ್ದಾರೆ.

ನವಲೇಖಾ

ನವಲೇಖಾ

ಗೂಗಲ್ ಭಾರತೀಯ ಪಬ್ಲಿಷರ್ಸ್‌ ಉತ್ತೇಜನಕ್ಕಾಗಿ ಹೊಸ ಯೋಜನೆಯೊಂದನ್ನು ಘೋಷಿಸಿದ್ದು, ನವಲೇಖಾ ಎಂದು ಹೆಸರಿಟ್ಟಿದೆ. ಈ ಯೋಜನೆಯ ಮೂಲಕ ಮುದ್ರಿತ ಅಂಶವನ್ನು ಆನ್‌ಲೈನ್‌ನಲ್ಲಿ ತರಲು ಸಹಾಯ ಮಾಡುತ್ತದೆ. ಸಣ್ಣ ಸಣ್ಣ ಪತ್ರಿಕೆಗಳಿಗೆ ಇದರಿಂದ ಬಹಳಷ್ಟು ಸಹಾಯವಾಗಲಿದೆ. ಮೂರು ವರ್ಷಗಳ ಕಾಲ ಉಚಿತ ಡೋಮೆನ್ ಸೇವೆ ಮತ್ತು ಪಬ್ಲಿಷಿಂಗ್‌ ಟೂಲ್ಸ್‌ಗಳನ್ನು ನೀಡಲಿದೆ. ಆರ್‌ಎನ್‌ಐ ಸಂಖ್ಯೆ ಅಗತ್ಯವಾಗಿದೆ.

ಗೂಗಲ್ ಗೋ ಆಪ್‌

ಗೂಗಲ್ ಗೋ ಆಪ್‌

ಗೂಗಲ್‌ ಗೋ ಆಪ್‌ನಲ್ಲಿ ಇಂಗ್ಲಿಷ್‌, ಹಿಂದಿ, ಬೆಂಗಾಲಿ, ಮರಾಠಿ, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ವೆಬ್‌ ಪೇಜ್‌ಗಳನ್ನು ತೆರೆಯಬಹುದಾಗಿದೆ. ಮತ್ತು ಓದುವ ವೇಗದಲ್ಲಿಯೇ ಪದಗಳನ್ನು ಗೂಗಲ್ ಗೋ ಆಪ್‌ನಲ್ಲಿ ಪ್ರಾದೇಶಿಕ ಭಾಷೆಯಲ್ಲಿಯೇ ಆಲಿಸಬಹುದಾಗಿದೆ.

ಗೂಗಲ್ ಮ್ಯಾಪ್ಸ್‌ ಗೋ

ಗೂಗಲ್ ಮ್ಯಾಪ್ಸ್‌ ಗೋ

ಗೂಗಲ್‌ ಮ್ಯಾಪ್ಸ್‌ ಗೋನಲ್ಲಿ ಟರ್ನ್‌ ಬೈ ಟರ್ನ್‌ ನ್ಯಾವಿಗೇಷನ್‌ ಫೀಚರ್ ದೊರೆಯಲಿದೆ. ಅದಲ್ಲದೇ ಹೊಸ ಹೋಮ್‌ಸ್ಕ್ರೀನ್ ಶಾರ್ಟ್‌ಕಟ್ಸ್‌ ಫೀಚರ್ ಜತೆ ಬಂದಿದೆ. ಸ್ಥಳೀಯ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಈ ಆಪ್‌ನಲ್ಲಿ ಸೇರಿಸಲಾಗಿದ್ದು, ನೀವು ಇಳಿಯಬೇಕಾದ ನಿಲ್ದಾಣಗಳ, ಹೋಗಬೇಕಾದ ಮಾರ್ಗಗಳ ಬಗ್ಗೆ ಮಾಹಿತಿಯನ್ನು ನೀಡಲಿದೆ.

Best Mobiles in India

English summary
'Google for India' event: 9 biggest announcements made. TO know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X