ಇನ್ಮುಂದೆ ನಿಮ್ಮ ಕೆಮ್ಮು ಮತ್ತು ಗೊರಕೆಗಳನ್ನು ಕೂಡ ಟ್ರ್ಯಾಕ್‌ ಮಾಡಲು ಗೂಗಲ್‌ ಪ್ಲಾನ್‌!

|

ಟೆಕ್‌ ದಿಗ್ಗಜ ಗೂಗಲ್‌ ತನ್ನ ಬಳಕೆದಾರರು ಅನುಕೂಲಕ್ಕಾಗಿ ವಿಶೇಷ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇದರಲ್ಲಿ ಆರೋಗ್ಯ ಸಂಬಂಧಿತ ಫೀಚರ್ಸ್‌ಗಳು ಕೂಡ ವಿಶೇಷವಾಗಿವೆ. ಸದ್ಯ ಇದೀಗ ಗೂಗಲ್‌ ತನ್ನ ಪಿಕ್ಸೆಲ್‌ ಫೋನ್‌ಗಳು ಮತ್ತು ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಎರಡು ಆಕರ್ಷಕ ಫಿಚರ್ಸ್‌ಗಳನ್ನು ಪರಿಚಯಿಸಲು ಮುಂದಾಗಿದೆ. ಈ ಎರಡು ಫೀಚರ್ಸ್‌ಗಳ ಮೂಲಕ ಸ್ಮಾರ್ಟ್‌ಫೋನ್‌ನಲ್ಲಿ ಬಳಕೆದಾರರ ಕೆಮ್ಮು ಮತ್ತು ಮತ್ತು ಗೊರಕೆಗಳನ್ನು ಟ್ರ್ಯಾಕ್ ಮಾಡಲು ಮುಂದಾಗಿದೆ ಎನ್ನಲಾಗಿದೆ.

ಗೂಗಲ್‌

ಹೌದು, ಗೂಗಲ್‌ ಸ್ಮಾರ್ಟ್‌ಫೋನ್‌ ಮೂಲಕ ಬಳಕೆದಾರರ ಕೆಮ್ಮು ಮತ್ತು ಗೊರಕೆಗಳನ್ನು ಟ್ರ್ಯಾಕ್‌ ಮಾಡುವ ಫೀಚರ್ಸ್‌ಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ಗೂಗಲ್ ಹೆಲ್ತ್ ಸ್ಟಡೀಸ್ ಅಪ್ಲಿಕೇಶನ್‌ನ ಇತ್ತೀಚಿನ ಅಪ್‌ಡೇಟ್‌ನ ಎಪಿಕೆ ಟಿಯರ್‌ಡೌನ್‌ನಲ್ಲಿ ಈ ಫೀಚರ್ಸ್‌ಗಳನ್ನು ಅಭಿವೃದ್ಧಿ ಪಡಿಸುತ್ತಿರುವುದರ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಇನ್ನು ಈ ಹೊಸ ಫೀಚರ್ಸ್‌ಗಳು 'ಸ್ಲೀಪ್ ಆಡಿಯೋ ಕಲೆಕ್ಷನ್' ಅಧ್ಯಯನದ ಒಂದು ಭಾಗವಾಗಿದ್ದು, ಸದ್ಯಕ್ಕೆ ಗೂಗಲ್‌ ಉದ್ಯೋಗಿಗಳಿಗೆ ಮಾತ್ರ ಲಭ್ಯವಿದೆ. ಹಾಗಾದ್ರೆ ಗೂಗಲ್‌ನ ಈ ಹೊಸ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಗೂಗಲ್‌ ತನ್ನ ಬಳಕೆದಾರರ ಕೆಮ್ಮು ಮತ್ತು ಗೊರಕೆಗಳನ್ನು ಟ್ರ್ಯಾಕ್‌ ಮಾಡಲು ಮುಂದಾಗಿದೆ. ಇದಕ್ಕಾಗಿ ಹೊಸ ಫೀಚರ್ಸ್‌ಗಳನ್ನು ಅಭಿವೃದ್ದಿಪಡಿಸುತ್ತಿದೆ. ಪ್ರಸ್ತುತ ಈ ಫೀಚರ್ಸ್‌ಗಳು ಸ್ಲೀಪ್‌ ಆಡಿಯೋ ಕಲೆಕ್ಷನ್‌ ವೀಬಾಗದ ಉದ್ಯೋಗಿಗಳಿಗೆ ಸೀಮಿತವಾಗಿದೆ. ಅಧ್ಯಯನದಲ್ಲಿ ಭಾಗವಹಿಸುವವರು ಆಂಡ್ರಾಯ್ಡ್‌ ಫೋನ್‌ನೊಂದಿಗೆ ಪೂರ್ಣ ಸಮಯದ ಗೂಗಲ್‌ ಉದ್ಯೋಗಿಯಾಗಿದ್ದರೆ ಮಾತ್ರ ಈ ಫೀಚರ್ಸ್‌ ಲಭ್ಯವಾಗಲಿದೆ. ಅಂದರೆ ಈ ಅಧ್ಯಯನದಲ್ಲಿ ಭಾಗವಹಿಸುವ ವ್ಯಕ್ತಿ, ತನ್ನ ಪ್ರತಿಸ್ಪರ್ಧಿ ಕಂಪನಿಗೆ ಕೆಲಸ ಮಾಡುವುದಿಲ್ಲ ಎಂದು ಖಚಿತವಾಗಿರುವವರಿಗೆ ಮಾತ್ರ.

ಗೂಗಲ್‌

ಇನ್ನು ಗೂಗಲ್‌ನ ಹೆಲ್ತ್‌ ಸೆನ್ಸಾರ್‌ ಟೀಂ ಆಂಡ್ರಾಯ್ಡ್ ಡಿವೈಸ್‌ಗಳಿಗಾಗಿ ಅಪ್ಡೇಟ್‌ ಸೆನ್ಸಾರ್‌ ಕ್ಯಾಪಬ್ಲಿಟಿಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ವಿವರಿಸಿದೆ. ಇದು ಬಳಕೆದಾರರಿಗೆ ಅವರ ನಿದ್ರೆಯ ಮಾದರಿಯ ಅರ್ಥಪೂರ್ಣ ಒಳನೋಟವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಅಂದರೆ, ಗೊರಕೆ ಪತ್ತೆ ಮತ್ತು ನಿದ್ರೆ ಪತ್ತೆಹಚ್ಚುವಿಕೆ ಬೆಂಬಲಿತ ಆಂಡ್ರಾಯ್ಡ್‌ ಮತ್ತು ಪಿಕ್ಸೆಲ್‌ ಫೋನ್‌ಗಳಲ್ಲಿ 'ಬೆಡ್‌ಸೈಡ್ ಮಾನಿಟರಿಂಗ್' ಫೀಚರ್ಸ್‌ಗಳು ಲಭ್ಯವಾಗಲಿದೆ. ಇದರಿಂದ ನಿಮ್ಮ ಗೊರಕೆ ಹಾಗೂ ಕೆಮ್ಮಿನ ಪ್ರಮಾಣವನ್ನು ನೀವು ತಿಳಿಯಲು ಸಾದ್ಯವಾಗಲಿದೆ.

ಫೀಚರ್ಸ್‌ಗಳು

ಈ ಹೊಸ ಫೀಚರ್ಸ್‌ಗಳು 'ಗೌಪ್ಯತೆ ಕಾಪಾಡುವ' ರೀತಿಯಲ್ಲಿ ನಿಮ್ಮ ಡಿವೈಸ್‌ನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಅಂದರೆ ಈ ಫೀಚರ್ಸ್‌ಗಳ ಮೂಲಕ ಸಂಗ್ರಹಿಸಲಾದ ಎಲ್ಲಾ ಡೇಟಾವನ್ನು ಗೂಗಲ್‌ ಕ್ಲೌಡ್‌ಗೆ ರವಾನಿಸದೆ ಬಳಕೆದಾರರ ಸ್ಮಾರ್ಟ್‌ಫೋನ್‌ಗಳಲ್ಲಿ ರೆಕಾರ್ಡ್ ಮಾಡಲಾಗುತ್ತದೆ ಮತ್ತು ಪ್ರಕ್ರಿಯೆಗೊಳಿಸಲಾಗುತ್ತದೆ ಎನ್ನಲಾಗಿದೆ. ಇನ್ನು ಈ ಫೀಚರ್ಸ್‌ ಗೂಗಲ್ ತನ್ನ ಪಿಕ್ಸೆಲ್ ಫೋನ್‌ಗಳು ಮತ್ತು ಅದರ ಆಂಡ್ರಾಯ್ಡ್ ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ನಿಂದ ಚಾಲಿತವಾಗಿರುವ ಎಲ್ಲಾ ಫೋನ್‌ಗಳಲ್ಲಿ ಲಭ್ಯವಾಗುವುದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ.

ಫೀಚರ್ಸ್‌ಗಳು

ಆದರೆ ಈ ಫೀಚರ್ಸ್‌ಗಳು ಮೊದಲು ಗೂಗಲ್‌ನ ಪಿಕ್ಸೆಲ್ ಫೋನ್‌ಗಳಲ್ಲಿ ಲಭ್ಯವಾಗುವ ಸಾಧ್ಯತೆಯಿದೆ. ಇದು ಬಳಕೆದಾರರ ಹೃದಯ ಬಡಿತ ಮತ್ತು ಉಸಿರಾಟದ ದರವನ್ನು ಪತ್ತೆಹಚ್ಚುವ ಫೀಚರ್ಸ್‌ಗಳ ಜೊತೆಗೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ವ್ಯಾಪಕವಾಗಿ ಲಭ್ಯವಾಗುವ ಮೊದಲು ಲಭ್ಯವಿರುತ್ತದೆ. ನಿಮ್ಮ ಗೊರಕೆ ಮತ್ತು ಕೆಮ್ಮಿನ ಟ್ರ್ಯಾಕ್‌ ಮೂಲಕ ನಿಮ್ಮ ಆರೋಗ್ಯದ ವಿಚಾರಗಳನ್ನು ನೀವು ಅರಿತುಕೊಳ್ಳುವುದಕ್ಕೆ ಸಾದ್ಯವಾಗಲಿದೆ. ಆದರೆ ನಿಮ್ಮ ಗೊರಕೆ ಮತ್ತು ಕೆಮ್ಮಿನ ಟ್ರ್ಯಾಕ್‌ ಬೇರೆಯವರಿಗೆ ತಿಳಿಯದಂತೆ ಗೌಪ್ಯವಾಗಿಡುವ ಜವಬ್ದಾರಿಯನ್ನು ಗೂಗಲ್‌ ನಿಭಾಯಿಸಲಿದೆ. ಸದ್ಯ ಈ ಫೀಚರ್ಸ್‌ ಗೂಗಲ್‌ನ ಬಳಕೆದಾರರಿಗೆ ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ವರದಿಯಾಗಿದೆ.

Best Mobiles in India

Read more about:
English summary
Google is working on developing a feature that will track users’ coughs and snores

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X