ಗೂಗಲ್‌ ಪ್ಲೇ ಸ್ಟೋರ್‌ನಿಂದ Paytm ಕಿಕ್‌ ಔಟ್‌!

|

ಪ್ರಸ್ತುತ ಡಿಜಿಟಲ್ ಪೇಮೆಂಟ್‌ ಅಪ್ಲಿಕೇಶನ್‌ಗಳ ಬಳಕೆ ಹೆಚ್ಚಾಗಿದ್ದು, ಅವುಗಳಲ್ಲಿ ಪೇಟಿಎಮ್‌-Paytm ಆಪ್‌ ಭಾರಿ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿದೆ. ಆದರೆ ಇದೀಗ ಗೂಗಲ್ ಪ್ಲೇ ಸ್ಟೋರ್‌ನಿಂದ ಪೇಟಿಎಮ್‌ ಅಪ್ಲಿಕೇಶನ್ ಅನ್ನು ತೆಗೆದುಹಾಕಲಾಗಿದೆ ಎಂದು ಗೂಗಲ್ ತಿಳಿಸಿದೆ.

ಗೂಗಲ್‌ ಪ್ಲೇ ಸ್ಟೋರ್‌ನಿಂದ Paytm ಕಿಕ್‌ ಔಟ್‌!

ಹೌದು, ಜನಪ್ರಿಯ ಪೇಟಿಎಮ್‌ ಆಪ್‌ ಗೂಗಲ್ ಪ್ಲೇ ಸ್ಟೋರ್‌ನ ಪಾಲಿಸಿಯನ್ನು ಪಾಲಿಸದ ಕಾರಣಕ್ಕಾಗಿ ಗೇಟ್‌ಪಾಸ್‌ ನೀಡಲಾಗಿದೆ. ಪೇಟಿಎಮ್‌ ಅಪ್ಲಿಕೇಶನ್ ಕೆಲವು ಜೂಜು ಹಾಗೂ ಬೆಟ್ಟಿಂಗ್ ಸಂಬಂಧಿತ ಆಟಗಳನ್ನು ಉತ್ತೇಜಿಸುತ್ತದೆ ಎನ್ನುವ ಸಬೂಬು ನೀಡಿ ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಿದೆ. ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಹೊಸದಾಗಿ ಪೇಟಿಎಮ್‌ ಡೌನ್‌ಲೋಡ್ ಮಾಡಲು ಲಭ್ಯವಾಗುವುದಿಲ್ಲ.

ಗೂಗಲ್‌ ಪ್ಲೇ ಸ್ಟೋರ್‌ನಿಂದ Paytm ಕಿಕ್‌ ಔಟ್‌!

ಸದ್ಯಕ್ಕೆ ಪೇಟಿಎಂ ಮುಖ್ಯ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆಯಲಾಗಿದೆ. ಗೂಗಲ್ ಈ ಬಗ್ಗೆ ಪೇಟಿಎಂ ಆಪ್‌ ಡೆವಲಪರ್‌ಗಳಿಗೆ ಕೂಡ ಮಾಹಿತಿ ತಿಳಿಸಿದೆ. ಗೂಗಲ್ ಪ್ಲೇ ಸ್ಟೋರ್ ಪಾಲಿಸಿಯ ಪ್ರಕಾರ, ಬಳಕೆದಾರರಿಗೆ ಉಪಯುಕ್ತ ಮತ್ತು ಸುರಕ್ಷಿತ ಎನ್ನುವ ಅಪ್ಲಿಕೇಶನ್‌ಗಳನ್ನು ಮಾತ್ರ ನಾವು ಪುರಸ್ಕರಿಸಲಾಗುತ್ತದೆ. ಅದನ್ನು ಹೊರತುಪಡಿಸಿ ಬೆಟ್ಟಿಂಗ್ ಪ್ರಚೋದಿತ ಆಟಗಳು, ರಮ್ಮಿ, ಕ್ಯಾಸಿನೋ ಗಳಂತಹ ಆಟಗಳನ್ನು ಆಯೋಜಿಸುವ ಅಪ್ಲಿಕೇಶನ್‌ಗಳಿಗೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅವಕಾಶವಿಲ್ಲ ಎಂದು ಗೂಗಲ್ ಹೇಳಿದೆ.

ಗೂಗಲ್‌ ಪ್ಲೇ ಸ್ಟೋರ್‌ನಿಂದ Paytm ಕಿಕ್‌ ಔಟ್‌!

ಈಗಾಗಲೇ ಪೇಟಿಎಮ್‌ ಆಪ್ ಡೌನ್‌ಲೋಡ್‌ ಮಾಡಿಕೊಂಡಿರುವ ಬಳಕೆದಾರ ಫೋನ್‌ಗಳಲ್ಲಿ ಪೇಟಿಎಮ್ ಕೆಲಸ ಮಾಡುತ್ತದೆ. ಆದರೆ ಹೊಸದಾಗಿ ಗೂಗಲ್ ಪೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಆಗದು. ಈ ಸಂಬಂಧ ಪೇಟಿಎಮ್ ಟ್ವೀಟ್ ಮಾಡಿದ್ದು, ಸದ್ಯದಲ್ಲೇ ಮರಳಿ ಬರುತ್ತೇವೆ, ಎಲ್ಲ ಗ್ರಾಹಕರ ಹಣ ಸುರಕ್ಷಿತವಾಗಿದೆ, ಪೇಟಿಎಂ ಬಳಕೆಯನ್ನು ನೀವು ಮುಂದುವರಿಸಬಹುದು ಎಂದು ಹೇಳಿದೆ.

Most Read Articles
Best Mobiles in India

English summary
Google Removed Paytm app from the Play Store for violating its gambling policies.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X