ಗೂಗಲ್‌ಗೆ 2019 ಕೆಟ್ಟ ವರ್ಷವಾ..? ತೆರೆಮರೆಗೆ ಸರಿದಿವೆ ಗೂಗಲ್‌ನ ಹಲವು ಉತ್ಪನ್ನಗಳು..!

By Gizbot Bureau
|

ಪ್ರತಿ ವರ್ಷದಂತೆ, 2019ರಲ್ಲಿಯೂ ಗೂಗಲ್ ತನ್ನ ಹಲವು ಉತ್ಪನ್ನಗಳು ಮತ್ತು ಸೇವೆಗಳನ್ನು ಸ್ಥಗಿತಗೊಳಿಸಿದೆ. ಕೆಲವು ಹೊಸ ಉತ್ಪನ್ನಗಳಾಗಿದ್ದರೂ, ಕೆಲವು ದಶಕಗಳಷ್ಟು ಹಳೆಯ ಸೇವೆಗಳಾಗಿದ್ದವು. ಇದರಲ್ಲಿ ಹೆಚ್ಚಿನವು ಬಳಕೆದಾರರನ್ನು ಆಕರ್ಷಿಸುವಲ್ಲಿ ವಿಫಲವಾದರೆ, ಕೆಲವು ಹೊಸ ತಂತ್ರಜ್ಞಾನದ ನಂತರ ಬಂದ ಪ್ಲಾಟ್‌ಫಾರ್ಮ್‌ಗಳಿಂದ ಪ್ರಸ್ತುತತೆಯನ್ನು ಕಳೆದುಕೊಂಡಿವೆ. ಹಾಗಾದರೆ, ಗೂಗಲ್ 2019ರಲ್ಲಿ ಸ್ಥಗಿತಗೊಳಿಸಿದ 23 ಪ್ರಮುಖ ಉತ್ಪನ್ನಗಳು ಮತ್ತು ಸೇವೆಗಳು ಕೆಳಗಿನಂತಿವೆ.

ಇನ್‌ಬಾಕ್ಸ್ ಬೈ ಜಿಮೇಲ್‌ (2015-2019)

ಇನ್‌ಬಾಕ್ಸ್ ಬೈ ಜಿಮೇಲ್‌ (2015-2019)

2015 ರಲ್ಲಿ ಪ್ರಾರಂಭವಾದ, ‘ಇನ್‌ಬಾಕ್ಸ್ ಬೈ ಜಿಮೇಲ್' ಆಪ್‌ ಜಿಮೇಲ್‌ನಂತೆಯೇ ಕಾರ್ಯನಿರ್ವಹಿಸುತ್ತಿತ್ತು. ಆದರೆ, ಇದು ಹೆಚ್ಚಾಗಿ ಹೊಸ ಫೀಚರ್‌ಗಳಿಗೆ ಪ್ರಯೋಗ ಶಾಲೆಯಾಗಿತ್ತು. ಇವುಗಳಲ್ಲಿ ಹೆಚ್ಚಿನವು ಕೊನೆಯಲ್ಲಿ ಜಿಮೇಲ್‌ ಆಪ್‌ಗೆ ಸಂಯೋಜಿಸಲ್ಪಟ್ಟವು.

ಗೂಗಲ್‌ ಪ್ಲಸ್‌ (2011-2019)

ಗೂಗಲ್‌ ಪ್ಲಸ್‌ (2011-2019)

ಫೇಸ್‌ಬುಕ್‌ಗೆ ಪ್ರತಿಸ್ಪರ್ಧಿಯಾಗಿ 2011 ರಲ್ಲಿ ಪ್ರಾರಂಭಿಸಿದ್ದ ಗೂಗಲ್‌ ಪ್ಲಸ್‌ ಅನ್ನು ಅಂತಿಮವಾಗಿ ಈ ವರ್ಷದ ಆರಂಭದಲ್ಲಿ ಗೂಗಲ್‌ ಸ್ಥಗಿತಗೊಳಿಸಿತು. ಸಾಮಾಜಿಕ ನೆಟ್‌ವರ್ಕಿಂಗ್ ವೆಬ್‌ಸೈಟ್‌ ಬಳಕೆದಾರರನ್ನು ಆಕರ್ಷಿಸದ್ದರಿಂದ ಗೂಗಲ್‌ ಪ್ಲಸ್‌ ತೆರೆಮರೆಗೆ ಸರಿಯಿತು.

ಗೂಗಲ್‌ URL ಶಾರ್ಟ್ನರ್ (2009-2019)

ಗೂಗಲ್‌ URL ಶಾರ್ಟ್ನರ್ (2009-2019)

2009 ರಲ್ಲಿ ಪ್ರಾರಂಭವಾದ ಗೂಗಲ್ ಯುಆರ್ಎಲ್ ಶಾರ್ಟ್ನರ್ ಈ ವರ್ಷದ ಆರಂಭದಲ್ಲಿ ತನ್ನ ಸೇವೆಯನ್ನು ನಿಲ್ಲಿಸಿತು. ಗೂಗಲ್ URL ಶಾರ್ಟ್ನರ್ ದೀರ್ಘ URL ಗಳನ್ನು ಚಿಕ್ಕದಾಗಿ ಪರಿವರ್ತಿಸುತ್ತಿತ್ತು, ಅದನ್ನು ಸುಲಭವಾಗಿ ಹಂಚಿಕೊಳ್ಳಬಹುದಾಗಿತ್ತು.

ಗೂಗಲ್ ಅಲೋ (2016-2019)

ಗೂಗಲ್ ಅಲೋ (2016-2019)

ಸಾಮಾಜಿಕ ನೆಟ್‌ವರ್ಕಿಂಗ್ ಅಪ್ಲಿಕೇಶನ್ ಆಗಿದ್ದ ಅಲೋ, ಗೂಗಲ್‌ನ ಅತ್ಯಂತ ಅಲ್ಪಾವಧಿಯ ಉತ್ಪನ್ನಗಳಲ್ಲಿ ಒಂದು. ವಾಟ್ಸ್‌ಆಪ್‌ನಂತಹ ಇನ್‌ಸ್ಟಾಂಟ್‌ ಮೆಸೇಜಿಂಗ್‌ ಪ್ರಯತ್ನವೇ ಗೂಗಲ್‌ನ ಈ ಅಪ್ಲಿಕೇಶನ್.

ಕ್ರೋಮ್‌ಕ್ಯಾಸ್ಟ್‌ ಆಡಿಯೋ (2015-2019)

ಕ್ರೋಮ್‌ಕ್ಯಾಸ್ಟ್‌ ಆಡಿಯೋ (2015-2019)

2015 ರಲ್ಲಿ ಪರಿಚಯಿಸಲಾದ, ಕ್ರೋಮ್‌ಕ್ಯಾಸ್ಟ್ ಆಡಿಯೊ ಹಾರ್ಡ್‌ವೇರ್ ಸಾಧನವನ್ನು ಈ ವರ್ಷದ ಆರಂಭದಲ್ಲಿ ಸ್ಥಗಿತಗೊಳಿಸಲಾಯಿತು. ಆಡಿಯೋ ಇನ್‌ಫುಟ್ ಹೊಂದಿರುವ ಯಾವುದೇ ಸ್ಪೀಕರ್‌ಗೆ ಯಾವುದೇ ಸಾಧನದಿಂದ ಆಡಿಯೋವನ್ನು ಸ್ಟ್ರೀಮ್ ಮಾಡಲು ಇದು ಬಳಕೆದಾರರಿಗೆ ಅವಕಾಶ ಮಾಡಿಕೊಡುತ್ತಿತ್ತು.

ಯೂಟ್ಯೂಬ್ ಗೇಮಿಂಗ್ (2015-2019)

ಯೂಟ್ಯೂಬ್ ಗೇಮಿಂಗ್ (2015-2019)

ಕ್ರೋಮ್‌ಕ್ಯಾಸ್ಟ್‌ ಆಡಿಯೋ ಪ್ರಾರಂಭವಾದ ವರ್ಷದಲ್ಲಿಯೇ ಯೂಟ್ಯೂಬ್ ಗೇಮಿಂಗ್ ಲೈವ್ ಮತ್ತು ರೆಕಾರ್ಡ್ ಮಾಡಿದ ಗೇಮ್ ಸ್ಟ್ರೀಮಿಂಗ್ ವಿಡಿಯೋಗಳನ್ನು ಜನಸಾಮಾನ್ಯರಿಗೆ ನೀಡುವ ಗುರಿಯೊಂದಿಗೆ ಯೂಟ್ಯೂಬ್‌ ಗೇಮಿಂಗ್‌ ಪ್ರಾರಂಭಿಸಿತ್ತು. ಆದರೆ, ಬಳಕೆದಾರರನ್ನು ಆಕರ್ಷಿಸುವಲ್ಲಿ ವಿಫಲವಾಗಿ ಈ ವರ್ಷದ ಆರಂಭದಲ್ಲಿ ಸ್ಥಗಿತಗೊಂಡಿತು.

ಏರೋ (2017-2019)

ಏರೋ (2017-2019)

ಮತ್ತೊಂದು ಅಲ್ಪಾವಧಿಯ ಸೇವೆಯಾದ ಏರೋ ಭಾರತಕ್ಕೆ ಕಾಲಿಟ್ಟ ಎರಡೇ ವರ್ಷಗಳಲ್ಲಿ ಸ್ಥಗಿತವಾಯ್ತು. ಬಳಕೆದಾರರಿಗೆ ವಿವಿಧ ಸ್ಥಳೀಯ ಸೇವೆಗಳನ್ನು ಸುಲಭವಾಗಿ ಸಂಪರ್ಕಿಸುವ ಗುರಿಯನ್ನು ಗೂಗಲ್ ಏರೋ ಹೊಂದಿತ್ತು.

ಯೂಟ್ಯೂಬ್‌ ಮೆಸೇಜ್‌ (2017-2019)

ಯೂಟ್ಯೂಬ್‌ ಮೆಸೇಜ್‌ (2017-2019)

ಈ ವರ್ಷ ಸ್ಥಗಿತವಾದ ಮತ್ತೊಂದು ಗೂಗಲ್ ಸೇವೆ ಎಂದರೆ ಯೂಟ್ಯೂಬ್ ಮೆಸೇಜ್‌. ಹೆಸರೇ ಸೂಚಿಸುವಂತೆ, ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವಿಡಿಯೋ ಹಂಚಿಕೆ ಮತ್ತು ಚಾಟಿಂಗ್‌ನ್ನು ಸುಲಭಗೊಳಿಸುವ ಪ್ರಯತ್ನವಾಗಿ ನೇರ ಸಂದೇಶ ಸೇವೆಯನ್ನು ತಂದಿತ್ತು.

ಗೂಗಲ್ ಡೇಡ್ರೀಮ್ (2016-2019)

ಗೂಗಲ್ ಡೇಡ್ರೀಮ್ (2016-2019)

ಗೂಗಲ್ ಡೇಡ್ರೀಮ್ ಪ್ರಾರಂಭವಾಗಿ ಸುಮಾರು ಮೂರು ವರ್ಷಗಳ ನಂತರ ಅಸ್ತಿತ್ವ ಕಳೆದುಕೊಂಡಿದೆ. ಕೆಲವು ಆಂಡ್ರಾಯ್ಡ್ ಸಾಧನಗಳಲ್ಲಿ ಕೆಲಸ ಮಾಡುವ ವರ್ಚುವಲ್ ರಿಯಾಲಿಟಿ ಪ್ಲಾಟ್‌ಫಾರ್ಮ್ ಆಗಿತ್ತು.

ಗೂಗಲ್ ಕ್ಲಿಪ್‌ಗಳು (2017-2019)

ಗೂಗಲ್ ಕ್ಲಿಪ್‌ಗಳು (2017-2019)

ಆಕ್ಷನ್ ಕ್ಯಾಮೆರಾ ಗಾತ್ರದ ಹಾರ್ಡ್‌ವೇರ್ ಸಾಧನವಾದ ಗೂಗಲ್ ಕ್ಲಿಪ್‌ಗಳನ್ನು 2017 ರಲ್ಲಿ ಪ್ರಾರಂಭಿಸಲಾಗಿತ್ತು. ಕ್ಲಿಪ್‌ನೊಂದಿಗೆ ಜೋಡಿಸಲಾದ ಎಐ-ಚಾಲಿತ ಕ್ಯಾಮೆರಾ ಮೌಲ್ಯಯುತವಾಗಿದ್ದು, ಫೋಟೋ ಮತ್ತು ವಿಡಿಯೋಗಳನ್ನು ರೆಕಾರ್ಡ್ ಮಾಡುತ್ತಿತ್ತು.

ಗೂಗಲ್ ಟ್ರಿಪ್ಸ್ (2016-2019)

ಗೂಗಲ್ ಟ್ರಿಪ್ಸ್ (2016-2019)

ಗೂಗಲ್ ಟ್ರಿಪ್ಸ್ ಪ್ರಾರಂಭವಾಗಿ ಮೂರು ವರ್ಷಗಳಲ್ಲಿಯೇ ಅಂತ್ಯ ಕಂಡಿದೆ. ಸೂಕ್ತವಾದ ಪ್ರಯಾಣದ ಅಪ್ಲಿಕೇಶನ್ ಆಗಿದ್ದ ಗೂಗಲ್‌ ಟ್ರಿಪ್ಸ್‌ನಿಂದ ಬಳಕೆದಾರರು ತಮ್ಮ ಪ್ರಯಾಣದ ಯೋಜನೆಗಳನ್ನು ಉತ್ತಮವಾಗಿ ಟ್ರ್ಯಾಕ್ ಮಾಡಲು ಸಹಾಯ ಮಾಡುವ ಗುರಿ ಹೊಂದಿತ್ತು.

ಬ್ಲಾಗ್ ಕಂಪಾಸ್ (2018-2019)

ಬ್ಲಾಗ್ ಕಂಪಾಸ್ (2018-2019)

ವರ್ಡ್‌ಪ್ರೆಸ್ ಮತ್ತು ಬ್ಲಾಗರ್‌ನೊಂದಿಗೆ ಈ ಫೀಚರ್‌ ಏಕೀಕರಣ ತಂದಿತ್ತು. ಬ್ಲಾಗ್ ಕಂಪಾಸ್ ಬ್ಲಾಗರ್ಸ್‌ಗೆ ಕಂಟೆಂಟ್‌ ನಿರ್ವಹಿಸಲು ಸಹಾಯ ಮಾಡಿತು.

ಗೂಗಲ್‌ ಕ್ಲೌಡ್‌ ಮೆಸೇಜಿಂಗ್‌ (2012-2019)

ಗೂಗಲ್‌ ಕ್ಲೌಡ್‌ ಮೆಸೇಜಿಂಗ್‌ (2012-2019)

ಗೂಗಲ್‌ ಕ್ಲೌಡ್‌ ಮೆಸೇಜಿಂಗ್‌ ನೊಟಿಫಿಕೇಷನ್‌ ಸೇವೆಯಾಗಿದ್ದು, ಆಂಡ್ರಾಯ್ಡ್ ಅಥವಾ ಕ್ರೋಮ್‌ನಲ್ಲಿ ಚಾಲನೆಯಲ್ಲಿರುವ ಸರ್ವರ್‌ಗಳು ಮತ್ತು ಕ್ಲೈಂಟ್ ಅಪ್ಲಿಕೇಶನ್‌ಗಳ ನಡುವೆ ಸಂದೇಶಗಳನ್ನು ಕಳುಹಿಸಲು ಡೆವಲಪರ್‌ಗಳಿಗೆ ಅವಕಾಶ ಮಾಡಿಕೊಟ್ಟಿತ್ತು.

ಗೂಗಲ್ ಸ್ಪಾಟ್‌ಲೈಟ್‌ ಸ್ಟೋರಿಸ್‌ (2013-2019)

ಗೂಗಲ್ ಸ್ಪಾಟ್‌ಲೈಟ್‌ ಸ್ಟೋರಿಸ್‌ (2013-2019)

2013ರಲ್ಲಿ ಪ್ರಾರಂಭವಾದ ಗೂಗಲ್ ಸ್ಪಾಟ್‌ಲೈಟ್ ಸ್ಟೋರೀಸ್ ಮೊಬೈಲ್ ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್‌ಗಳಿಗಾಗಿ ಹಲವಾರು ದೃಶ್ಯ ಅನಿಮೇಟೆಡ್ ಕಥೆಗಳು ಮತ್ತು ವಿಷಯವನ್ನು ಒಳಗೊಂಡಿತ್ತು.

ಗೂಗಲ್ ಜಂಪ್ (2015-2019)

ಗೂಗಲ್ ಜಂಪ್ (2015-2019)

ಗೂಗಲ್ ಜಂಪ್ ಕ್ಲೌಡ್-ಆಧಾರಿತ ವರ್ಚುವಲ್‌ ರಿಯಾಲಿಟಿ ಪರಿಹಾರವಾಗಿದ್ದು, ಸ್ವಯಂಚಾಲಿತ ಸ್ಟಿಚ್ಚಿಂಗ್‌ನೊಂದಿಗೆ 3D ಯಲ್ಲಿ 360 ಡಿಗ್ರಿ ಕಂಟೆಂಟ್‌ ರಚಿಸಲು ಡೆವಲಪರ್‌ಗಳಿಗೆ ಅವಕಾಶ ಮಾಡಿಕೊಟ್ಟಿತ್ತು.

ಡ್ರಾಗನ್‌ಫ್ಲೈ (2018-2019)

ಡ್ರಾಗನ್‌ಫ್ಲೈ (2018-2019)

ಪ್ರಾರಂಭವಾದ ಒಂದು ವರ್ಷದೊಳಗೆ ಸ್ಥಗಿತಗೊಂಡ ಗೂಗಲ್‌ನ ಡ್ರ್ಯಾಗನ್‌ಫ್ಲೈ ಹುಡುಕಾಟ ಎಂಜಿನ್ ಆಗಿದ್ದು, ವಿಶೇಷವಾಗಿ ಚೀನಾಕ್ಕಾಗಿ ವಿನ್ಯಾಸಗೊಳಿಸಲಾಗಿತ್ತು.

ಜಿ ಸೂಟ್ ಟ್ರೈನಿಂಗ್ (2013-2019)

ಜಿ ಸೂಟ್ ಟ್ರೈನಿಂಗ್ (2013-2019)

ಇದನ್ನು ಹಿಂದೆ ಸಿನರ್ಜಿಸ್ ಎಂದು ಕರೆಯಲಾಗುತ್ತಿತ್ತು, ಜಿ ಸೂಟ್ ಟ್ರೈನಿಂಗ್‌ ಹೆಸರೇ ಸೂಚಿಸುವಂತೆ - 20 ಗೂಗಲ್ ಜಿ ಸೂಟ್ ಉತ್ಪನ್ನಗಳಿಗೆ ವಿವಿಧ ಭಾಷೆಗಳಲ್ಲಿ ವಿಡಿಯೋ ಆಧರಿತ ತರಬೇತಿಯನ್ನು ನೀಡುತ್ತಿತ್ತು.

ಫಾಲೋ ಯುವರ್ ವರ್ಲ್ಡ್ (2011-2019)

ಫಾಲೋ ಯುವರ್ ವರ್ಲ್ಡ್ (2011-2019)

ಫಾಲೋ ಯುವರ್ ವರ್ಲ್ಡ್ ಎನ್ನುವುದು ಗೂಗಲ್ ಮ್ಯಾಪ್ಸ್‌ನ ವೈಶಿಷ್ಟ್ಯವಾಗಿದ್ದು, ಬಳಕೆದಾರರಿಗೆ ತಮ್ಮ ಆಸಕ್ತಿಕರ ಸ್ಥಳಗಳನ್ನು ನೋಂದಾಯಿಸಲು ಮತ್ತು ಎಚ್ಚರಿಕೆಗಳನ್ನು ಪಡೆಯಲು ಇದನ್ನು ಪ್ರಾರಂಭಿಸಲಾಗಿತ್ತು.

ಡೇಟ್ಯಾಲಿ (2017-2019)

ಡೇಟ್ಯಾಲಿ (2017-2019)

ಬಳಕೆದಾರರು ತಮ್ಮ ಮೊಬೈಲ್ ಡೇಟಾ ಉಳಿಸಲು ಮತ್ತು ನಿರ್ವಹಿಸಲು ಸಹಾಯ ಮಾಡುವುದಕ್ಕೆ ಗೂಗಲ್‌ ಡೇಟ್ಯಾಲಿ ಅಪ್ಲಿಕೇಶನ್‌ನ್ನು ಹೊರತಂದಿತ್ತು.

ಗೂಗಲ್ ಬುಲೆಟಿನ್ (2018-2019)

ಗೂಗಲ್ ಬುಲೆಟಿನ್ (2018-2019)

ಗೂಗಲ್ ಬುಲೆಟಿನ್ ಸಹ ಒಂದು ವರ್ಷ ಮಾತ್ರ ಬಳಕೆಗೆ ಲಭ್ಯವಿತ್ತು. ಸುದ್ದಿ ಸೇವೆಯು ಬಳಕೆದಾರರಿಗೆ ಸುದ್ದಿಗಳನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟಿತ್ತು. ಮತ್ತು ಅದೇ ಪ್ರದೇಶದ ಇತರರಿಗೆ ಆ ಕಥೆಗಳನ್ನು ಓದಲು ಅವಕಾಶ ಮಾಡಿಕೊಟ್ಟಿತ್ತು.

ಗೂಗಲ್ ಫ್ಯೂಷನ್ ಟೇಬಲ್ಸ್‌ (2009- 2019)

ಗೂಗಲ್ ಫ್ಯೂಷನ್ ಟೇಬಲ್ಸ್‌ (2009- 2019)

ಗೂಗಲ್ ಫ್ಯೂಷನ್ ಟೇಬಲ್ಸ್‌ ಡಾಟಾ ನಿರ್ವಹಣೆಯ ವೆಬ್ ಸೇವೆಯಾಗಿತ್ತು. ಡಾಟಾ ಟೇಬಲ್‌ಗಳನ್ನು ಇತರರೊಂದಿಗೆ ಸಂಗ್ರಹಿಸಲು, ದೃಶ್ಯೀಕರಿಸಲು ಮತ್ತು ಹಂಚಿಕೊಳ್ಳಲು ಬಳಕೆದಾರರಿಗೆ ಅವಕಾಶ ಮಾಡಿಕೊಟ್ಟಿತ್ತು.

ಗೂಗಲ್ ಟ್ರಾನ್ಸ್‌ಲೇಟರ್‌ ಟೂಲ್‌ಕಿಟ್ (2009-2019)

ಗೂಗಲ್ ಟ್ರಾನ್ಸ್‌ಲೇಟರ್‌ ಟೂಲ್‌ಕಿಟ್ (2009-2019)

ಗೂಗಲ್ ಅನುವಾದ ಸೇವೆಯಿಂದ ಸೃಷ್ಟಿಸಲಾದದ ಅನುವಾದಗಳನ್ನು ಸಂಪಾದಿಸಲು ಮತ್ತು ನಿರ್ವಹಿಸಲು ವೆಬ್ ಅಪ್ಲಿಕೇಶನ್ ಅನುವಾದಕರಿಗೆ ಅವಕಾಶ ಮಾಡಿಕೊಟ್ಟಿತ್ತು. ಆದರೆ, ಡಿಸೆಂಬರ್ 4ರ ನಂತರ ಈ ಸೇವೆ ಯಾರಿಗೂ ಸಿಗುತ್ತಿಲ್ಲ.

ಗೂಗಲ್ ಕೋರಿಲೇಟ್ (2011-2019)

ಗೂಗಲ್ ಕೋರಿಲೇಟ್ (2011-2019)

ನೈಜ-ಪ್ರಪಂಚದ ಪ್ರವೃತ್ತಿಗಳಿಗೆ ಅನುಗುಣವಾಗಿ ಹುಡುಕಾಟ ಮಾದರಿಗಳನ್ನು ಹುಡುಕಲು ಗೂಗಲ್‌ ಕೋರಿಲೇಟ್‌ ಸೇವೆ ಸಹಾಯ ಮಾಡಿದೆ. ಈ ಸೇವೆಯು ಡಿಸೆಂಬರ್ 15ರ ನಂತರ ಜನರಿಗೆ ಸಿಗಲ್ಲ ಎಂದು ಹೇಳಲಾಗುತ್ತಿದೆ.

Best Mobiles in India

Read more about:
English summary
Google Killed These 23 Services In 2019.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X