ಗೂಗಲ್‌ನಿಂದ ಹೊಸ ಸರ್ಚಿಂಗ್‌ ಆಯ್ಕೆ ಲಾಂಚ್‌; ಇನ್ಮೇಲೆ ಈ ಸೇವೆ ಇನ್ನಷ್ಟು ಹತ್ತಿರ!

|

ಯಾವುದೇ ಡಿವೈಸ್‌ಗೂ ಗೂಗಲ್‌ ಒಂದಲ್ಲಾ ಒಂದು ರೀತಿಯಲ್ಲಿ ಅಗತ್ಯ ಸೇವೆಗಳನ್ನು ನೀಡುತ್ತಾ ಬರುತ್ತಿದೆ. ಅದರಲ್ಲಿಯೂ ಗೂಗಲ್‌ನ ಹಲವಾರು ಆಪ್‌ಗಳಿಗೆ ಈಗಾಗಲೇ ಆಕರ್ಷಕ ಫೀಚರ್ಸ್‌ ಪರಿಚಯಿಸಿದ್ದು, ಇದೀಗ ಗೂಗಲ್‌ ಸರ್ಚ್‌ ಇಂಜಿನ್‌ನಲ್ಲಿ ಬಳಕೆದಾರರಿಗೆ ಹೊಸ ಅನುಭವ ನೀಡಲು ಮುಂದಾಗಿದೆ.

ಗೂಗಲ್‌

ಹೌದು, ಇನ್ಮುಂದೆ ಗೂಗಲ್‌ನಲ್ಲಿ ಹುಡುಕಾಟವನ್ನು ಸುಲಭಗೊಳಿಸಲು ಮತ್ತು ಹೆಚ್ಚು ಸಹಾಯಕವಾಗುವಂತೆ ಮಾಡಲು ಗೂಗಲ್‌ ಹೊಸ ಹುಡುಕಾಟದ ಫೀಚರ್ಸ್‌ ಅನ್ನು ಘೋಷಿಸಿದೆ. ಈ ಹೊಸ ಫೀಚರ್ಸ್‌ ಗೂಗಲ್‌ ಮ್ಯಾಪ್‌, ಗೂಗಲ್‌ ಸರ್ಚ್‌, ಲೆನ್ಸ್ ಮತ್ತು ಶಾಪಿಂಗ್ ಅನ್ನು ಕೇಂದ್ರೀಕರಿಸುತ್ತದೆ. ಪ್ರಮುಖ ವಿಷಯ ಎಂದರೆ ಗೂಗಲ್ ಲೆನ್ಸ್ ಮತ್ತು ಗೂಗಲ್ ಮ್ಯಾಪ್‌ ಹೊರತುಪಡಿಸಿ ಇತರೆ ವಿಭಾಗಕ್ಕೆ ಈ ಫೀಚರ್ಸ್‌ ಇಂದಿನಿಂದಲೇ ಲಭ್ಯವಿದೆ.

ಸೆಪ್ಟೆಂಬರ್‌

ಇನ್ನು ಈ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆದ ಸರ್ಚ್ ಆನ್ 2022 ಈವೆಂಟ್‌ನಲ್ಲಿ ಹೆಚ್ಚಿನ ಫೀಚರ್ಸ್‌ ಗಳ ಬಗ್ಗೆ ಗೂಗಲ್‌ ಯಾವುದೇ ವಿಷಯವನ್ನು ಬಹಿರಂಗಪಡಿಸದಿದ್ದರೂ ಸಹ ಕಾಲಕಾಲಕ್ಕೆ ಗ್ರಾಹಕರಿಗೆ ಅಚ್ಚರಿ ನೀಡುವ ಫೀಚರ್ಸ್‌ಗಳನ್ನು ದಿಢೀರನೇ ಪರಿಚಯಿಸಿಕೊಂಡು ಬರುತ್ತಿದೆ. ಗೂಗಲ್‌ ಸದ್ಯಕ್ಕೆ ಪರಿಚಯಿಸಿದ ಫೀಚರ್ಸ್‌ ಅನ್ನು ಇಲ್ಲಿ ವಿವರಿಸಲಾಗಿದೆ.

ಊಟಕ್ಕೆ ಅಲೆದಾಡಬೇಕಿಲ್ಲ

ಊಟಕ್ಕೆ ಅಲೆದಾಡಬೇಕಿಲ್ಲ

ಹೌದು, ಗೂಗಲ್‌ ಲೆನ್ಸ್‌ನಲ್ಲಿ ಈ ಫೀಚರ್ಸ್‌ ಸೇರಿಸಲಾಗಿದೆ. ಅದರಂತೆ 'ಮಲ್ಟಿಸರ್ಚ್ ನಿಯರ್‌ಮಿ' ಎಂಬ ಆಯ್ಕೆಯನ್ನು ನೀಡಲಾಗಿದ್ದು, ಈ ಮೂಲಕ ನೀವು ಹೊಸ ಖಾದ್ಯವನ್ನು ಸವಿಯಬಹುದು. ಹಾಗೆಯೇ ತಕ್ಷಣಕ್ಕೆ ಎಲ್ಲಿ ಲಭ್ಯವಾಗಲಿದೆ ಎಂಬುದನ್ನು ಕಂಡುಕೊಳ್ಳಬಹುದು. ಇದಿಷ್ಟೇ ಅಲ್ಲದೆ, ಆ ವಿಶೇಷ ಆಹಾರದ ಸ್ಕ್ರೀನ್‌ ಶಾಟ್‌ ತೆಗೆದುಕೊಳ್ಳಲು ಅವಕಾಶ ಸಹ ನೀಡಲಾಗಿದೆ. ಅದರಲ್ಲಿ' ನಿಯರ್‌ಮಿ' ಎಂಬ ಪದ ಸೇರಿಸಿದರೆ ನಿಮ್ಮ ಸಮೀಪದಲ್ಲಿ ಎಲ್ಲಿ ಆ ಆಹಾರ ಸಿಗುತ್ತದೆ ಎಂಬುದನ್ನು ತಿಳಿಸುತ್ತದೆ.

ಪೀಚರ್ಸ್‌

ಈ ಪೀಚರ್ಸ್‌ ಜೊತೆಗೆ ಮತ್ತೊಂದು ಫೀಚರ್ಸ್‌ ಅನ್ನು ಸಹ ಪರಿಚಯಿಸಿದ್ದು. ಆ ಮೂಲಕ ಬಳಕೆದಾರರು ಆಹಾರದ ಹೆಸರನ್ನು ಟೈಪ್ ಮಾಡಲು ಅವಕಾಶ ಮಾಡಿಕೊಡುತ್ತದೆ. ನಂತರ 'ನಿಯರ್‌ ಮಿ' ಆಯ್ಕೆಯ ಮೂಲಕ ಯಾವ ಹೋಟೆಲ್‌ನಲ್ಲಿ ಯಾವ ಆಹಾರ ಲಭ್ಯವಾಗುತ್ತದೆ?, ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಅದು ನೀಡುತ್ತದೆ.

3D ಹಾಗೂ AR ಶಾಪಿಂಗ್

3D ಹಾಗೂ AR ಶಾಪಿಂಗ್

ಗೂಗಲ್‌ ತನ್ನ AR ಶಾಪಿಂಗ್‌ಗೆ ಸುಧಾರಣೆ ತಂದಿದೆ. ಅದರಂತೆ ಬಳಕೆದಾರರಿಗೆ 3D ರೆಂಡರ್‌ಗಳು ಮತ್ತು ಆಗ್ಮೆಂಟೆಡ್ ರಿಯಾಲಿಟಿ (AR) ಬಳಸಿ ಶೂಗಳನ್ನು ಖರೀದಿಸಲು ಅನುವು ಮಾಡಿಕೊಡುತ್ತದೆ. ಇದರಲ್ಲಿ ಸೌಕೋನಿ, ವ್ಯಾನ್ಸ್ ಮತ್ತು ಮೆರೆಲ್ ಸೇರಿದಂತೆ ಕೆಲವೇ ಕೆಲವು ಬ್ರ್ಯಾಂಡ್‌ಗಳಿಗೆ ಈ ಫೀಚರ್ಸ್‌ ನೀಡಲಾಗಿದೆ. ಇನ್ನು ಶೂಗಳ 3D ಸ್ಪಿನ್‌ಗಳನ್ನು ರಚಿಸುವ ಕೆಲಸ ಮಾಡಲಾಗುತ್ತಿದ್ದು, ಈ 3D ಶೂ ರೆಂಡರ್‌ಗಳು ಮುಂಬರುವ ತಿಂಗಳುಗಳವರೆಗೆ ಲಭ್ಯವಿರುವುದಿಲ್ಲ ಎಂದು ಕಂಪೆನಿ ಹೇಳಿದೆ.

ಚರ್ಮದ ಬಣ್ಣ

ಇದಿಷ್ಟೇ ಅಲ್ಲದೆ ನಿಮ್ಮ ಚರ್ಮದ ಬಣ್ಣಕ್ಕೆ ಉತ್ಪನ್ನಗಳು ಹೇಗೆ ಹೊಂದಿಕೆಯಾಗುತ್ತವೆ ಎಂಬುದನ್ನು ನೋಡಬಹುದು. ಇದಕ್ಕಾಗಿಯೇ ಹೊಸ ಫೋಟೋ ಲೈಬ್ರರಿಯು ಚರ್ಮದ ಟೋನ್‌ಳು, ವಯಸ್ಸು, ಲಿಂಗ, ಮುಖದ ಆಕಾರ, ಜನಾಂಗ ಹಾಗೂ ಚರ್ಮದ ಪ್ರಕಾರಗಳ ವೈವಿಧ್ಯಮಯ ವರ್ಣಪಟಲವನ್ನು ಪ್ರತಿನಿಧಿಸುವ 148 ಮಾದರಿಗಳನ್ನು ಒಳಗೊಂಡಿದೆ.

ಲೈವ್ ವ್ಯೂ ಹಾಗೂ ಇವಿ ಚಾರ್ಜಿಂಗ್

ಲೈವ್ ವ್ಯೂ ಹಾಗೂ ಇವಿ ಚಾರ್ಜಿಂಗ್

ಲೈವ್ ವ್ಯೂ ಎಂಬ ಹೊಸ ಫೀಚರ್ ಅನ್ನು ಗೂಗಲ್‌ ಪರಿಚಯಿಸಿದ್ದು, ಆಯ್ದ ನಗರಗಳಿಗೆ ಮುಂದಿನ ವಾರದ ಆರಂಭದಲ್ಲಿ ಲಭ್ಯವಾಗಿಸಲು ಕಂಪೆನಿ ಮುಂದಾಗಿದೆ. ಅದರಂತೆ ಲಂಡನ್, ಲಾಸ್ ಏಂಜಲೀಸ್, ನ್ಯೂಯಾರ್ಕ್, ಪ್ಯಾರಿಸ್, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಟೋಕಿಯೋ ನಗರಗಳು ಈ ಫೀಚರ್ಸ್‌ ಪಡೆದುಕೊಳ್ಳುವ ಪ್ರಮುಖ ನಗರಗಳಾಗಿವೆ.

ಇವಿ ವಾಹನ

ಗೂಗಲ್‌ ಮ್ಯಾಪ್ಸ್‌ನಲ್ಲಿ ಈ ಫೀಚರ್ಸ್‌ ಲಭ್ಯವಿರಲಿದ್ದು, ಇವಿ ವಾಹನ ಮಾಲೀಕರಿಗೆ ಸಾಕಷ್ಟು ಸಹಾಯವಾಗಲಿದೆ. ಅತ್ಯುತ್ತಮ ಚಾರ್ಜಿಂಗ್ ಸ್ಟೇಷನ್‌ಗಳನ್ನು ಕಂಡುಹಿಡಿಯುವುದು ಸೇರಿದಂತೆ ಯಾವ ಸ್ಟೇಶನ್‌ನಲ್ಲಿ ಏನೆಲ್ಲಾ ಫೀಚರ್ಸ್‌ ಇರಲಿದೆ ಎಂಬುದನ್ನು ಈ ಮೂಲಕ ಕಂಡುಕೊಳ್ಳಬಹುದಾಗಿದೆ. ಹಾಗೆಯೇ ಇದರಲ್ಲಿ ಪ್ರವೇಶಿಸಬಹುದಾದ ಸ್ಥಳಗಳು ಎಂಬ ಫೀಚರ್ಸ್‌ ಅನ್ನು ಸಹ ನೀಡಿದೆ.

ಗೂಗಲ್ ಲೆನ್ಸ್ ಟ್ರಾನ್ಸಲೇಟ್‌

ಗೂಗಲ್ ಲೆನ್ಸ್ ಟ್ರಾನ್ಸಲೇಟ್‌

ಗೂಗಲ್‌ ಲೆನ್ಸ್‌ಗೆ ಈ ಹೊಸ ನವೀಕರಣವನ್ನು ಹೊರತರಲು ಗೂಗಲ್ ಮುಂದಾಗಿದೆ. ಈ ಫೀಚರ್ಸ್‌ ಮೂಲಕ ಬಳಕೆದಾರರು ಹೆಚ್ಚು ಸಂಕೀರ್ಣವಾದ ಪಠ್ಯವನ್ನು ಅನುವಾದಿಸಬಹುದು. ಹಾಗೆಯೇ ಗೂಗಲ್‌ ಫೋಟೋಗಳಲ್ಲಿ ಮ್ಯಾಜಿಕ್ ಎರೇಸರ್ ಕಾರ್ಯನಿರ್ವಹಿಸುವ ರೀತಿಯಲ್ಲಿಯೇ AI ರಚಿತ ಹಿನ್ನೆಲೆಯೊಂದಿಗೆ ಪಿಕ್ಸೆಲ್‌ಗಳನ್ನು ಈ ಫೀಚರ್ಸ್‌ ಮರುಸೃಷ್ಟಿಸುತ್ತದೆ. ಇನ್ನು ಈ ವರ್ಷದ ನಂತರ ಬಳಕೆದಾರರಿಗೆ ಈ ಫೀಚರ್ಸ್‌ ಲಭ್ಯವಾಗಲಿದೆ.

Best Mobiles in India

Read more about:
English summary
Google is providing essential services for any device in one way or another. Now offering a new searching option.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X