ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಹೊಸ ಪ್ರೋಗ್ರಾಂ ಪರಿಚಯಿಸಿದ ಗೂಗಲ್‌!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತನ್ನ ಪಿಕ್ಸೆಲ್‌ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌ ನೀಡಿದೆ. ಪಿಕ್ಸೆಲ್‌ ಸ್ಮಾರ್ಟ್‌ಫೋನ್‌ ಬಳಕೆದಾರರು ಇನ್ಮುಂದೆ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ತಾವೇ ರಿಪೇರಿ ಮಾಡುವುದಕ್ಕೆ ಅವಕಾಶ ನೀಡುವ ಹೊಸ ಪ್ರೋಗ್ರಾಂ ಅನ್ನು ಪರಿಚಯಿಸಿದೆ. ಸದ್ಯ ಗೂಗಲ್‌ ಪಿಕ್ಸೆಲ್‌ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಆಟೋ-ರಿಪೇರ್ ಪ್ರೋಗ್ರಾಂ ಅನ್ನು ಲಾಂಚ್‌ ಮಾಡಿದೆ. ಇದರಿಂದ ಗೂಗಲ್‌ ಪಿಕ್ಸೆಲ್‌ ಬಳಕೆದಾರರು ಸಾಕಷ್ಟು ಅನುಕೂಲ ಪಡೆದುಕೊಳ್ಳಬಹುದು ಎನ್ನಲಾಗಿದೆ.

ಗೂಗಲ್‌

ಹೌದು, ಗೂಗಲ್‌ ತನ್ನ ಪಿಕ್ಸೆಲ್‌ ಫೋನ್‌ ಬಳಕೆದಾರರಿಗೆ ಹೊಸ ಆಟೋ-ರಿಪೇರ್‌ ಪ್ರೋಗ್ರಾಂ ಅನ್ನು ಪ್ರಾರಂಭಿಸಿದೆ. ಈ ಪ್ರೋಗ್ರಾಂನಲ್ಲಿ ಗೂಗಲ್ ತನ್ನ ಆನ್‌ಲೈನ್ ರಿಪೇರಿ ಕಮ್ಯೂನಿಟಿ iFixit ನೊಂದಿಗೆ ಸಹಕರಿಸಿದೆ. ಇದು ಹಂತ-ಹಂತದ ಫೋನ್ ರಿಪೇರಿ ಮಾರ್ಗದರ್ಶಿಗಳು ಮತ್ತು ನಿಜವಾದ ಪಿಕ್ಸೆಲ್ ಸ್ಮಾರ್ಟ್‌ಫೋನ್ ಬಿಡಿ ಭಾಗಗಳನ್ನು ಒದಗಿಸುತ್ತದೆ. ಹಾಗಾದ್ರೆ ಗೂಗಲ್‌ನ ಆಟೋ ರಿಪೇರ್‌ ಪ್ರೋಗ್ರಾಂ ಮೂಲಕ ನಿಮ್ಮ ಪಿಕ್ಸೆಲ್‌ ಸ್ಮಾರ್ಟ್‌ಫೋನ್‌ಗಳನ್ನು ರಿಪೇರ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಟೋ ರಿಪೇರ್‌

ಗೂಗಲ್‌ನ ಆಟೋ ರಿಪೇರ್‌ ಪ್ರೋಗ್ರಾಂನಲ್ಲಿ ಪಿಕ್ಸೆಲ್‌ ಸ್ಮಾರ್ಟ್‌ಫೋನ್‌ ರಿಪೇರ್‌ ಮಾಡುವ ಗೈಡೆನ್ಸ್‌ ಅನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ಸ್ಮಾರ್ಟ್‌ಫೋನ್‌ ಬಿಡಿ ಭಾಗಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು. ಇನ್ನು ಈ ವರ್ಷದ ಕೊನೆಯಲ್ಲಿ US, UK, ಕೆನಡಾ, ಆಸ್ಟ್ರೇಲಿಯಾ ಮತ್ತು EU ದೇಶಗಳಲ್ಲಿ Pixel 2 ಮೂಲಕ Pixel 2 ಗಾಗಿ ifixit.com ನಲ್ಲಿ ಖರೀದಿಗೆ ಲಭ್ಯವಾಗಲಿವೆ. ಗೂಗಲ್‌ನ ಹೊಸ ಪ್ರೋಗ್ರಾಂ ಮೂಲಕ ಗ್ರಾಹಕರು ತಮ್ಮ ಫೋನ್‌ಗಳನ್ನು ತಾವೇ ರಿಪೇರಿ ಮಾಡಿಕೊಳ್ಳಬಹುದು. ಆದರೆ ಪ್ರೋಗ್ರಾಂನಲ್ಲಿನ ಸೂಚನೆಗಳನ್ನು ಸರಿಯಾಗಿ ಪಾಲಿಸಬೇಕಾದ ಅವಶ್ಯಕತೆಯಿದೆ.

ಗೂಗಲ್‌

ಗೂಗಲ್‌ನ ಬ್ಲಾಗ್‌ ಪೋಸ್ಟ್‌ನ ಪ್ರಕಾರ, ಬ್ಯಾಟರಿಗಳು, ಬದಲಿ ಡಿಸ್‌ಪ್ಲೇಗಳು, ಕ್ಯಾಮೆರಾಗಳು ಸೇರಿದಂತೆ ಸಾಮಾನ್ಯ ಪಿಕ್ಸೆಲ್ ಫೋನ್ ರಿಪೇರಿಗಾಗಿ ಫುಲ್‌ ರೇಂಜ್‌ ಬಿಡಿ ಭಾಗಗಳು ಪ್ರತ್ಯೇಕವಾಗಿ ಅಥವಾ iFixit ಫಿಕ್ಸ್ ಕಿಟ್‌ಗಳಲ್ಲಿ ಲಭ್ಯವಿರುತ್ತವೆ. ಈ ಕಿಟ್‌ಗಳು ಸ್ಕ್ರೂಡ್ರೈವರ್ ಬಿಟ್‌ಗಳು ಮತ್ತು ಸ್ಪಡ್ಜರ್‌ಗಳಂತಹ ಡಿವೈಸ್‌ಗಳನ್ನು ಒಳಗೊಂಡಿರುತ್ತದೆ. ಪಿಕ್ಸೆಲ್ ಫೋನ್‌ಗಳು ಲಭ್ಯವಿರುವ ದೇಶಗಳಲ್ಲಿ ಅಧಿಕೃತ ತಾಂತ್ರಿಕ ತಜ್ಞರ ಮೂಲಕ ಗೂಗಲ್‌ ರಿಪೇರಿಗಳನ್ನು ನೀಡುತ್ತಿದೆ.

ಗೂಗಲ್‌

ಇನ್ನು ಗೂಗಲ್‌ ಪಿಕ್ಸೆಲ್ ರಿಪೇರಿ ಕಿಟ್‌ಗಳಲ್ಲಿ ಕಂಪ್ಲೀಟ್‌ ಸೆಟ್ ಟೂಲ್ಸ್‌ iOpener, ರಿಪ್ಲೇಸ್‌ಮೆಂಟ್ ಪ್ರಿ-ಕಟ್ ಅಂಟು, iFixit ಓಪನಿಂಗ್ ಪಿಕ್ಸ್ , iFixit ಓಪನಿಂಗ್ ಟೂಲ್, ಸಕ್ಷನ್ ಹ್ಯಾಂಡಲ್, ಆಂಗಲ್ಡ್ ಟ್ವೀಜರ್‌ಗಳು, ಇಂಟಿಗ್ರೇಟೆಡ್ ಸಿಮ್‌ನೊಂದಿಗೆ ನಿಖರವಾದ ಬಿಟ್ ಡ್ರೈವರ್ ಅನ್ನು ಒಳಗೊಂಡಿರುತ್ತದೆ ಎಂದು iFixit ಹೇಳಿಕೊಂಡಿದೆ. ಎಜೆಕ್ಟ್ ಟೂಲ್, ಮತ್ತು ನಿರ್ದಿಷ್ಟ Pixel ಫೋನ್‌ಗೆ ಸೂಕ್ತವಾದ 4mm ನಿಖರವಾದ ಬಿಟ್ಸ್‌ಗಳನ್ನು ಒಳಗೊಂಡಿದೆ. ಗೂಗಲ್‌ನ ಪ್ರೋಗ್ರಾಂನಲ್ಲಿ ಹಂತ-ಹಂತದ ಗೂಗಲ್‌ ಪಿಕ್ಸೆಲ್‌ ಫೋನ್ ದುರಸ್ತಿ ಮಾರ್ಗದರ್ಶಿಗಳು Pixel 5 ಮೂಲಕ ಪ್ರತಿ Pixel ಗೆ ಲೈವ್ ಆಗಿವೆ ಎಂದು ವರದಿಯಾಗಿದೆ.

ಕ್ರೋಮ್‌ಬುಕ್‌

ಇದಲ್ಲದೆ ಕ್ರೋಮ್‌ಬುಕ್‌ ರಿಪೇರಿ ಪ್ರೋಗ್ರಾಂಗಾಗಿ ಗೂಗಲ್‌ ಈಗಾಗಲೇ Acer ಮತ್ತು Lenovo ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಿದೆ. ಕ್ರೋಮ್‌ಬುಕ್‌ ರಿಪೇರಿ ಮಾಡಬೇಕಾದರೆ, ಕ್ರೋಮ್‌ಬುಕ್ಸ್‌ ಕುರಿತು ಮಾಹಿತಿಯನ್ನು ಹುಡುಕಲು ಮತ್ತು ಆಂತರಿಕ ದುರಸ್ತಿ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಜೊತೆಗೆ ಗೂಗಲ್‌ ಕ್ರೋಮ್‌ ಒಎಸ್‌ ಫ್ಲೆಕ್ಸ್ ಅನ್ನು ಪರಿಚಯಿಸಿದೆ. ಇದು ಶಿಕ್ಷಣ ಮತ್ತು ಎಂಟರ್‌ಪ್ರೈಸ್ ಬಳಕೆದಾರರು ತಮ್ಮ ಕ್ರೋಮ್‌ಬುಕ್ಸ್ ಜೊತೆಗೆ ಕ್ರೋಮ್‌ ಒಎಸ್‌ನ ಆವೃತ್ತಿಯನ್ನು ರನ್‌ ಮಾಡಲು ಅನುಮತಿಸುತ್ತದೆ.

Best Mobiles in India

English summary
Google Launches Self-Repair Programme for Pixel Smartphones

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X