ಇನ್ಮುಂದೆ ಐಕ್ಲೌಡ್‌ನಿಂದ ಗೂಗಲ್‌ ಫೋಟೋಸ್‌ಗೆ ಡೇಟಾ ವರ್ಗಾಯಿಸುವುದು ಸುಲಭ!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತನ್ನ ಬಳಕೆದಾರರಿಗೆ ವಿಶೇಷ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಬಳಕೆದಾರರ ಅನುಭವವನ್ನು ಸುಧಾರಿಸುವುದಕ್ಕಾಗಿ ಅನೇಕ ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಸದ್ಯ ಇದೀಗ ಐಕ್ಲೌಡ್‌ನಿಂದ ಗೂಗಲ್‌ ಫೋಟೋಸ್‌ಗೆ ಫೋಟೋಗಳನ್ನು ನೇರವಾಗಿ ಟ್ರಾನ್ಸಫರ್‌ ಮಾಡುವುದಕ್ಕೆ ಅವಕಾಶ ನೀಡಲು ಮುಂದಾಗಿದೆ. ಇದಕ್ಕಾಗಿ ಸ್ವಿಚ್ಚ್ ಟು ಆಂಡ್ರಾಯ್ಡ್‌ ಐಒಎಸ್‌ ಅನ್ನು ಪರಿಚಯಿಸಲಿದೆ. ಇದರಿಂದ ಆಂಡ್ರಾಯ್ಡ್‌‌ನಿಂದ iOS ಐಕ್ಲೌಡ್‌ಗೆ ಫೋಟೋ ಆಮದು ಮಾಡುವುದು ಸುಲಭವಾಗಲಿದೆ.

ಗೂಗಲ್‌

ಹೌದು, ಗೂಗಲ್‌ ತನ್ನ ಸ್ವಿಚ್‌ ಮೂಲಕ ಐಕ್ಲೌಡ್‌ನಿಂದ ಗೂಗಲ್‌ ಫೋಟೋಸ್‌ಗೆ ಫೋಟೋ ಆಮದು ಮಾಡಲು ಅನುಮತಿಸಲಿದೆ. ಇದಕ್ಕಾಗಿ ಹೊಸ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಐಕ್ಲೌಡ್‌ನಿಂದ ಗೂಗಲ್‌ ಫೋಟೋಸ್‌ಗೆ ಫೋಟೋಗಳನ್ನು ಮತ್ತು ವೀಡಿಯೊಗಳನ್ನು ಕಾಪಿ ಮಾಡುವುದಕ್ಕೆ ಅವಕಾಶ ಸಿಗಲಿದೆ. ಹಾಗಾದ್ರೆ g.co/transferfromicloud ಮೂಲಕ ಗೂಗಲ್‌ ಫೋಟೋಸ್‌ಗೆ ಫೋಟೋಗಳನ್ನು ಟ್ರಾನ್ಸಫರ್‌ ಮಾಡೋದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್‌

ಗೂಗಲ್‌ ಆಪಲ್‌ ಡಿವೈಸ್‌ನಿಂದ ಡೇಟಾವನ್ನು ಆಂಡ್ರಾಯ್ಡ್‌ಗೆ ವರ್ಗಾವಣೆ ಮಾಡುವುದನ್ನು ಸುಲಭ ಮಾಡಲು ಮುಂದಾಗಿದೆ. ಇದರಿಂದ ಆಂಡ್ರಾಯ್ಡ್‌ನಿಂದ ಐಫೋನ್‌ ಡಿವೈಸ್‌ಗೆ ಸಂಪರ್ಕಿಸಲು ಬಳಕೆದಾರರಿಗೆ ಸಾಧ್ಯವಾಗುತ್ತದೆ. ಎರಡು ಫೋನ್‌ಗಳ ನಡುವೆ USB-C ನಿಂದ ಲೈಟ್ನಿಂಗ್ ಕೇಬಲ್ ಅನ್ನು ಬಳಸಿಕೊಂಡು ನಿಮ್ಮ Galaxy ಅಥವಾ Pixel ಫೋನ್‌ಗೆ ನೇರವಾಗಿ iOS ಡೇಟಾವನ್ನು ನಕಲಿಸಲು ಹೊಸ ಫೀಚರ್ಸ್‌ಅವಕಾಶ ನೀಡಬಹುದು ಎಂದು ವರದಿಯಾಗಿದೆ.

ಗೂಗಲ್‌

ಇನ್ನು ಗೂಗಲ್‌ ಪರಿಚಯಿಸಲಿರುವ ಹೊಸ ಫೀಚರ್ಸ್‌ ಆಪಲ್‌ ನಿಂದ ಆಂಡ್ರಾಯ್ಡ್‌ ಫೋನ್ ಅಥವಾ ಟ್ಯಾಬ್ಲೆಟ್‌ಗೆ ಡೇಟಾ ವರ್ಗಾಯಿಸುವುದನ್ನು ಸಹ ಸುಲಭಗೊಳಿಸಲಿದೆ. ಇದರಿಂದ ನೇರವಾಗಿ ವೈಫೈ ಮೂಲಕ ಡೇಟಾವನ್ನು ನಕಲಿಸಲು iOS ಡಿವೈಸ್‌ ಅನ್ನು ಹೊಸ ಆಂಡ್ರಾಯ್ಡ್‌ಗೆ ಕನೆಕ್ಟ್‌ ಮಾಡಲು ಅವಕಾಶ ನೀಡಲಿದೆ. ಇದರೊಂದಿಗೆ ಗೂಗಲ್‌ ಡ್ರೈವ್‌ಗೆ ಡೇಟಾವನ್ನು ಬ್ಯಾಕಪ್ ಮಾಡುವುದು ಮತ್ತು ಅದನ್ನು ರಿಸ್ಟೋರ್‌ ಮಾಡುವುದಕ್ಕೆ ಕೂಡ ಅವಕಾಶ ನೀಡಲಿದೆ.

ಗೂಗಲ್‌

ಇದಲ್ಲದೆ ಗೂಗಲ್‌ ಕೆಲ ದಿನಗಳ ಹಿಂದೆ ತನ್ನ ಗೂಗಲ್‌ ಮೆಸೇಜಸ್‌ ಅನ್ನು ಅಪ್ಡೇಟ್‌ ಮಾಡಿದೆ. ಇದರಿಂದ ಐಫೋನ್ ಬಳಕೆದಾರರ ರಿಯಾಕ್ಷನ್‌ ನಿಮಗೆ ಟೆಕ್ಸ್ಟ್‌ ಮೆಸೇಜ್‌ಗಳಲ್ಲಿ ಎಮೋಜಿಯಾಗಿ ಗೋಚರಿಸಲಿದೆ. ಇದರ ಜೊತೆಗೆ, ಆಂಡ್ರಾಯ್ಡ್‌ ಬಳಕೆದಾರರು ಶೀಘ್ರದಲ್ಲೇ ವೀಡಿಯೊಗಳು ಮತ್ತು ಫೋಟೋಗಳನ್ನು ಸಂಭಾಷಣೆಯೊಳಗೆ ಗೂಗಲ್‌ ಫೋಟೋಗಳ ಲಿಂಕ್‌ಗಳಾಗಿ ಸೆಂಡ್‌ ಮಾಡಿದರೆ ಅದೇ ರೆಸಲ್ಯೂಶನ್‌ನಲ್ಲಿ ವೀಕ್ಷಿಸಲು ಸಾಧ್ಯವಾಗಲಿದೆ. ಅಲ್ಲದೆ ಮೆಸೇಜ್‌ಗಳು ಇದೀಗ ಆಟೋಮ್ಯಾಟಿಕ್‌ ಆಗಿ ಬಳಕೆದಾರರ ಸಂದೇಶಗಳನ್ನು ವೈಯಕ್ತಿಕ ಮತ್ತು ವ್ಯಾಪಾರ ಟ್ಯಾಬ್‌ಗಳಲ್ಲಿ ಸಂಘಟಿತ ಇನ್‌ಬಾಕ್ಸ್‌ನೊಂದಿಗೆ ವಿಂಗಡಿಸುತ್ತದೆ. ಜೊತೆಗೆ, 24 ಗಂಟೆಗಳ ನಂತರ ಒನ್-ಟೈಮ್ ಪಾಸ್‌ವರ್ಡ್ ಅಥವಾ OTP ಹೊಂದಿರುವ ಸಂದೇಶಗಳನ್ನು ಸ್ವಯಂಚಾಲಿತವಾಗಿ ಡಿಲೀಟ್‌ ಮಾಡಲಿದೆ ಎಂದು ಗೂಗಲ್‌ ಹೇಳಿಕೊಂಡಿದೆ.

ಗೂಗಲ್‌

ಇದರೊಂದಿಗೆ ಗೂಗಲ್‌ ತನ್ನ ಜಿಬೋರ್ಡ್‌ ಅನ್ನು ವ್ಯಾಕರಣ ತಿದ್ದುಪಡಿ ಫೀಚರ್ಸ್‌ನೊಂದಿಗೆ ಅಪ್ಡೇಟ್‌ ಮಾಡಿದೆ. ಈ ಹೊಸ ಫೀಚರ್ಸ್‌ ವ್ಯಾಕರಣ ದೋಷಗಳನ್ನು ಪತ್ತೆಹಚ್ಚುವುದಕ್ಕೆ ಸಹಾಯ ಮಾಡಲಿದೆ. ಅಲ್ಲದೆ ಸಂದೇಶಗಳನ್ನು ಟೈಪ್ ಮಾಡುವಾಗ ಬಳಕೆದಾರರಿಗೆ ಸಹಾಯ ಮಾಡಲು ಸಲಹೆಗಳನ್ನು ನೀಡುತ್ತದೆ ಎಂದು ಗೂಗಲ್ ಹೇಳಿಕೊಂಡಿದೆ. ಇದಲ್ಲದೆ ಕಂಪನಿಯು ಎಮೋಜಿ ಕಿಚನ್‌ ಅನ್ನು ಕೂಡ ಅಪ್ಡೇಟ್‌ ಮಾಡಿದೆ. ಇದರಿಂದ 2,000 ಕ್ಕೂ ಹೆಚ್ಚು ಹೊಸ ಎಮೋಜಿ ಮ್ಯಾಶಪ್‌ಗಳನ್ನು ಸ್ಟಿಕ್ಕರ್‌ಗಳಾಗಿ ಲಭ್ಯವಿದೆ.

ಗೂಗಲ್‌

ಇನ್ನು ಗೂಗಲ್‌ ಪಿಕ್ಸೆಲ್ ಮತ್ತು ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳಲ್ಲಿ ಮೊದಲೇ ಸ್ಥಾಪಿಸಲಾದ ಲೈವ್ ಟ್ರಾನ್ಸ್‌ಕ್ರೈಬ್ ಫೀಚರ್ಸ್‌ನಲ್ಲಿ ಹೊಸ ಅಪ್ಡೇಟ್‌ ಲಭ್ಯವಾಗಲಿದೆ. ಅಲ್ಲದೆ ಇತರ ಎಲ್ಲಾ ಆಂಡ್ರಾಯ್ಡ್ ಸಾಧನಗಳಿಗೆ ಡೌನ್‌ಲೋಡ್ ಮಾಡಲು ಉಚಿತ ಅಪ್ಲಿಕೇಶನ್‌ನಲ್ಲಿ ಲಭ್ಯವಾಗಲಿದೆ. ವೈ-ಫೈ ಮತ್ತು ಡೇಟಾ ಲಭ್ಯವಿಲ್ಲದಿದ್ದಾಗ ಅಥವಾ ಸ್ಥಿರವಾದ ಇಂಟರ್ನೆಟ್ ಪ್ರವೇಶವಿಲ್ಲದ ಪ್ರದೇಶಗಳಲ್ಲಿ ಲೈವ್ ಟ್ರಾನ್ಸ್‌ಕ್ರೈಬ್ ಅಪ್ಲಿಕೇಶನ್ ಈಗ ಆಫ್‌ಲೈನ್ ಮೋಡ್ ಅನ್ನು ನೀಡಲಿದೆ ಎನ್ನಲಾಗಿದೆ.

Best Mobiles in India

Read more about:
English summary
Google dig details from Data Transfer Tool, reveals the upcoming app for iOS may be able to import data from iCloud directly to Google Photos.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X