ಈ ವರ್ಷದ 'ಏಪ್ರಿಲ್‌ ಫೂಲ್ ಡೇ'ಗೆ ಗೂಗಲ್ ಮಾಡಿದ ಕೆಲಸ ಏನು ಗೊತ್ತಾ?

|

ಇತ್ತೀಚಿನ ವರ್ಷಗಳಲ್ಲಿ ಬಡದಂತೆ ಏಪ್ರಿಲ್ ಫೂಲ್ ಡೇ ಅನ್ನು ಆಚರಿಸಿಕೊಂಡು ಬರುತ್ತಿರುವ ಗೂಗಲ್‌ನ ಈ ವರ್ಷದ ವಿಶೇಷತೆ ಏನು ಎಂಬುದು ಇದೀಗ ಹೊರಬಿದ್ದಿದೆ. ಏಪ್ರಿಲ್ 1ನೇ ತಾರೀಖಿನ ಫೂಲ್ ದಿನಾಚರಣೆ ಅಂಗವಾಗಿ, ಈ ವರ್ಷವೂ ಕೂಡ ಗೂಗಲ್ ಸಂಸ್ಥೆ ವಿಶೇಷವಾಗಿ ಮೂರ್ಖರ ದಿನಾಚರಣೆಯನ್ನು ಆಚರಿಸಿದ್ದು, ಈ ಬಾರಿ ಅದಕ್ಕೆ ಗೂಗಲ್ ಮ್ಯಾಪ್ ಸಿಕ್ಕಿದೆ.!

ಹೌದು, ಈ ವರ್ಷದ ಫೂಲ್ಸ್ ಡೇಗಾಗಿ ಗೂಗಲ್ ತನ್ನ ಗೂಗಲ್ ಮ್ಯಾಪ್‌ ಆಪ್‌ನಲ್ಲಿ ಕ್ಲಾಸಿಕ್ ಸ್ನೇಕ್ ಗೇಮ್ ಆವೃತ್ತಿಯನ್ನು ತಾತ್ಕಾಲಿಕವಾಗಿ ಸೇರಿಸಿ ಗೂಗಲ್ ವಿಶಿಷ್ಟವಾಗಿ ಮೂರ್ಖರ ದಿನಾಚರಣೆಯನ್ನು ಆಚರಿಸಿದೆ. ಈ ದಿನದ ಅಂಗವಾಗಿ ಕ್ಲಾಸಿಕ್ ಸ್ನೇಕ್ ಗೇಮ್ ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಜಾಗತಿಕವಾಗಿ ಹೊರಬಂದಿದೆ ಎಂದು ಗೂಗಲ್ ತಿಳಿಸಿದೆ.

ಈ ವರ್ಷದ 'ಏಪ್ರಿಲ್‌ ಫೂಲ್ ಡೇ'ಗೆ ಗೂಗಲ್ ಮಾಡಿದ ಕೆಲಸ ಏನು ಗೊತ್ತಾ?

ಗೂಗಲ್ ಮ್ಯಾಪ್ಸ್ ಆಪ್‌ನಲ್ಲಿನೀವು ಈ ಸ್ನೇಕ್ ಗೇಮ್ ಅನ್ನು ಆಡಬಹುದಾಗಿದ್ದು, ಎಡಭಗಾದಲ್ಲಿರುವ ಸೈಡ್ ಬಾರ್ ಒತ್ತಿದಾಗ, ನಿಮಗೆ 'ಪ್ಲೇ ಸ್ನೇಕ್' ಎಂಬ ಆಯ್ಕೆ ಗೋಚರಿಸುತ್ತದೆ. ಆದರೆ, ಇದು ವಾಸ್ತವಿಕ ಸ್ನೇಕ್ ಗೇಮ್ ಅಲ್ಲ. ಬದಲಾಗಿ, ಸಾರ್ವಜನಿಕ ಸಾರಿಗೆ ವಾಹನವಾಗಿ ನೀವು ಇದನ್ನು ಆಡಬೇಕಾಗುತ್ತದೆ. ಆಗಲೇ ಏಪ್ರಿಲ್ ಫೂಲ್ ಎಂಬ ಸಂದೇಶವೊಂದು ಗೋಚರಿಸುತ್ತದೆ.

ಉದಾಹರಣೆಗೆ, ಟೋಕಿಯೋ ಬುಲೆಟ್ ರೈಲು, ಸ್ಯಾನ್ ಫ್ರಾನ್ಸಿಸ್ಕೋ ಕೇಬಲ್ ಕಾರ್ ಅಥವಾ ಲಂಡನ್ ಡಬಲ್ ಡೆಕರ್ ಬಸ್‌ಗಳನ್ನು ಆಯ್ಕೆ ಮಾಡಿಕೊಂಡು, ಆಯಾ ನಗರಗಳ 9 ಬಿಟ್ ಮ್ಯಾಪ್‌ನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಬಹುದು. ಕೈರೋ, ಪೌಲೋ, ಲಂಡನ್, ಸಿಡ್ನಿ, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಟೋಕಿಯೋ ಅಲ್ಲದೆ 'ವರ್ಲ್ಡ್' ಕೂಡ ಆಯ್ದುಕೊಳ್ಳಬಹುದು.

ಈ ವರ್ಷದ 'ಏಪ್ರಿಲ್‌ ಫೂಲ್ ಡೇ'ಗೆ ಗೂಗಲ್ ಮಾಡಿದ ಕೆಲಸ ಏನು ಗೊತ್ತಾ?

ಫೀಚರ್ ಫೋನ್‌ಗಳಲ್ಲಿ ಸಾಕಷ್ಟು ಸದ್ದು ಮಾಡಿ, ಎಂಜಾಯ್ ಮಾಡುತ್ತಾ ಸಮಯ ಕಳೆಯಲು ನೆರವಾಗುತ್ತಿದ್ದ ಕ್ಲಾಸಿಕ್ ಸ್ನೇಕ್ ಗೇಮ್ ನೋಕಿಯಾದ 6110 ಮಾಡೆಲ್ ಫೋನ್‌ನಲ್ಲಿ 1997ರಲ್ಲಿ ಮೊದಲ ಬಾರಿ ಕಾಣಿಸಿಕೊಂಡಿತ್ತು. ಇದೀಗ ಗೂಗಲ್ ಮ್ಯಾಪ್ಸ್ ಒಳಗೆ ಈ ಹಾವಿನಾಟ ಈಗ ಮತ್ತೆ ಬಂದಿದೆ.! ಈ ಮೂಲಕ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಗತಕಾಲವನ್ನು ನೆನಪಿಸಿದೆ.

Best Mobiles in India

English summary
Google is temporarily adding a version of the classic game Snakes into its Google Maps app for April Fools’ Day this year. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X