ಗೂಗಲ್ ಮ್ಯಾಪ್ ಗೆ ಸೇರಿಕೊಳ್ಳುತ್ತಿದೆ ಮತ್ತಷ್ಟು ಪ್ರಯೋಜನಕಾರಿ ವೈಶಿಷ್ಟ್ಯಗಳು..

|

ಎಲ್ಲಿಗೋ ಹೊಗಬೇಕಾದವರು ಇನ್ನೆಲ್ಲಿಗೋ ಹೋಗಿ, ಅಡ್ರೆಸ್ ಹುಡುಕೋಕೆ ಪರದಾಡೋ ಪ್ರಮೇಯ ಈಗಿನ ಜಮಾನದಲ್ಲಿ ಇಲ್ಲವೇ ಇಲ್ಲ. ಇಂತಹ ಸಂದಿಗ್ಧ ಸನ್ನಿವೇಶಗಳ ನಿವಾರಣೆಗೂ ಪರಿಹಾರವನ್ನು ನಮ್ಮ ಟೆಕ್ನಾಲಜಿ ದುನಿಯಾ ನೀಡಿಯಾಗಿದೆ. ಹೌದು ಅದುವೇ ದಾರಿ ತೋರಿಸೋ ಮಾರ್ಗದರ್ಶಿ ಗೂಗಲ್ ಮ್ಯಾಪ್. ಹೋಟೆಲ್ ನಿಂದ ಹಿಡಿದು-ದೇವಸ್ಥಾನಗಳವರೆಗೂ,ಹೂವಿನ ಅಂಗಡಿಯಿಂದ ಹಿಡಿದು ಚಪ್ಪಲಿ ಅಂಗಡಿಯವರೆಗೂ ಯಾವುದೇ ಜಾಗವನ್ನು ಬೇಕಾದ್ರೂ ಕರಾರುವಕ್ಕಾಗಿ ತೋರಿಸೋ ತಾಕತ್ತು ಈ ಮಹಾನುಭಾವನದ್ದು. ಈಗ ಈ ಗೂಗಲ್ ಮ್ಯಾಪ್ ಗೆ ಮತ್ತಷ್ಟು ವೈಶಿಷ್ಟ್ಯಗಳು ಸೇರಿಕೊಳ್ಳುತ್ತಿವೆ.

ಗೂಗಲ್ ಮ್ಯಾಪ್ ಗೆ ಸೇರಿಕೊಳ್ಳುತ್ತಿದೆ ಮತ್ತಷ್ಟು ಪ್ರಯೋಜನಕಾರಿ ವೈಶಿಷ್ಟ್ಯಗಳು..


ಹೌದು ಆಂಡ್ರಾಯ್ಡ್ ಮತ್ತು Ios ಎರಡೂ ಬಳಕೆದಾರರು ಇದರ ಸದುಪಯೋಗವನ್ನು ಬಳಸಿಕೊಳ್ಳಬಹುದಾಗಿದೆ. ಸರ್ಚ್ ರಿವ್ಯೂ ಮೂಲಕ ನೀವು ಹುಡುಕಿದ ಸ್ಥಳದ ಬಗ್ಗೆ ಸಂಪೂರ್ಣ ವಿವರ ಪಡೆಯಬಹುದು. ನಿಮಗಿಂತ ಮುಂಚೆ ನೀವು ಹೋಗಬೇಕೆಂದುಕೊಂಡ ಸ್ಥಳಕ್ಕೆ ತೆರಳಿದವರಿಂದ ಪಡೆದ ಮಾಹಿತಿಯನ್ನು ನಿಮ್ಮ ಮಾರ್ಗದರ್ಶನಕ್ಕೆ ಬಳಸಿ ಮಾಹಿತಿ ನೀಡುವುದು ಇದರ ಕೆಲಸ.

ನೀವು ಹೋಗಬೇಕೆಂದು ಕೊಂಡ ಸ್ಥಳದಲ್ಲಿ ವ್ಯವಸ್ಥೆ ಹೇಗಿದೆ? ಹೋಗುವಾದದರೆ ಅದು ನಿಮ್ಮ ಆಲೋಚನೆಗಳಿಗೆ ಎಷ್ಟು ಫರ್ಫೆಕ್ಟ್ ಆಗಿದೆ ಎಂಬುದನ್ನು ಈ ಮೂಲಕ ನೀವು ಪಡೆಯಬಹುದು. ಆ ಮೂಲಕ ನಿಮಗೆ ಅಲ್ಲಿನ ಪರಿಪೂರ್ಣ ಚಿತ್ರಣ ದೊರೆಯಲಿದೆ.

ಹಾಗಾದ್ರೆ ಆ ವೈಶಿಷ್ಟ್ಯತೆಯನ್ನು ಬಳಸಿಕೊಳ್ಳುವುದು ಹೇಗೆ..

1. . ಆಂಡ್ರಾಯ್ಡ್ ನಲ್ಲಿ ಬಳಸುವ ಬಗೆ

• ಗೂಗಲ್ ಮ್ಯಾಪ್ ನಲ್ಲಿ ನೀವು ಹುಡುಕಬೇಕಾಗಿರುವ ಸ್ಥಳವನ್ನು ಮೊದಲು ಸರ್ಚ್ ಮಾಡಿ

• ರಿವ್ಯೂ ಟ್ಯಾಬ್ ನ್ನು ಟ್ಯಾಪ್ ಮಾಡಿ

• ನೀವು ಏನನ್ನು ಹುಡುಕುತ್ತಿದ್ದೀರಿ ಎಂಬ ಬಗ್ಗೆ ಸರ್ಚ್ ಬಾರ್ ನಲ್ಲಿ ಬರೆಯಿರಿ

2. IOS ನಲ್ಲಿ ಹೇಗೆ ಸರ್ಚ್ ರಿವ್ಯೂ ಬಳಸುವುದು

• ಮೊದಲು ಗೂಗಲ್ ಮ್ಯಾಪ್ ನಲ್ಲಿ ಸ್ಥಳವನ್ನು ಹುಡುಕಿ

• ರಿವ್ಯೂ ಸೆಕ್ಷನ್ ನ್ನು ಸ್ಕ್ರೂಲ್ ಡೌನ್ ಮಾಡಿ

• ನಂತರ ಸರ್ಚ್ ಬಾರ್ ನಲ್ಲಿ ನೀವು ಏನನ್ನು ಹುಡುಕುತ್ತಿದ್ದೀರಿ ಎಂಬುದನ್ನು ಬರೆಯಿರಿ

ಗೂಗಲ್ ಹೇಳಿಕೆಯಂತೆ ಈ ವೈಶಿಷ್ಟ್ಯವು ಈಗಾಗಲೇ ಎಲ್ಲಾ ಗೂಗಲ್ ಮ್ಯಾಪ್ ಗಳಲ್ಲಿ ಲಭ್ಯವಿದೆ. ಒಂದು ವೇಳೆ ನಿಮ್ಮ ಗೂಗಲ್ ಮ್ಯಾಪ್ ನಲ್ಲಿ ಇಲ್ಲದೇ ಇದ್ದಲ್ಲಿ ಕೂಡಲೇ ಮ್ಯಾಪ್ ನ್ನು ಅಪ್ ಡೇಟ್ ಮಾಡಿಕೊಳ್ಳಿ..

ಇತ್ತೀಚೆಗೆ ಯಾವುದೇ ಮಹತ್ವದ ವೈಶಿಷ್ಟ್ಯವನ್ನು ಗೂಗಲ್ ಮ್ಯಾಪ್ ತರದೇ ಇದ್ದರೂ, ಅದರ ರೂಪವನ್ನು ಸ್ವಲ್ಪ ಮಟ್ಟಿಗೆ ಬದಲಾಯಿಸಿಕೊಂಡಿದೆ. ಆ ಮೂಲಕ ಬಳಕೆದಾರನಿಗೆ ಗೂಗಲ್ ಮ್ಯಾಪ್ ಬಳಸುವುದು ಮತ್ತಷ್ಟು ಸರಾಗವಾಗಲಿದೆ.

ಸ್ಕ್ರೋಲಿಂಗ್ ಬಾರ್, ಸರ್ಚ್ ಬಾರ್ ನ ಕೆಳಗಡೆಯೇ ಇದ್ದು, ಇವೆರಡೂ ಒಟ್ಟಿಗೆ ಮೇಲ್ಬಾಗದಲ್ಲಿ ಇರಲಿದೆ.

ಫ್ಲೋಟಿಂಗ್ ಬಾರ್ ಎಲ್ಲಾ ಕೆಟಗರಿಯನ್ನು ತೋರಿಸುತ್ತೆ., ಉದಾಹರಣೆಗೆ ಪೆಟ್ರೋಲ್ ಪಂಪ್, ಫಾರ್ಮಸಿಗಳು,ಆಸ್ಪತ್ರೆಗಳು, ರೆಸ್ಟೋರೆಂಟ್ ಗಳು, ಕೆಫೆಗಳು, ಸೂಪರ್ ಮಾರ್ಕೆಟ್ ಇತ್ಯಾದಿ..

ರೂ.9999ಕ್ಕೆ ಸ್ಮಾರ್ಟ್‌TV ಬಿಡುಗಡೆ ಮಾಡಿದ ಶಿಯೋಮಿ: ಬೆಚ್ಚಿಬಿದ್ದ TV ಮಾರುಕಟ್ಟೆ....!ರೂ.9999ಕ್ಕೆ ಸ್ಮಾರ್ಟ್‌TV ಬಿಡುಗಡೆ ಮಾಡಿದ ಶಿಯೋಮಿ: ಬೆಚ್ಚಿಬಿದ್ದ TV ಮಾರುಕಟ್ಟೆ....!

ನೂತನ ಗ್ಯೂಗಲ್ ಮ್ಯಾಪ್ ನ ಬೆಟಾ ವರ್ಷನ್ ನಲ್ಲಿ ಫ್ಲೋಟಿಂಗ್ ಬಾರ್ ವಿಸಿಬಲ್ ಆಗಿದ್ದು,ಪ್ರಾದೇಶಿಕವಾಗಿ ಲಾಕ್ ಆಗಿರುವ ಸಾಧ್ಯತೆಯೂ ಇರಲಿದೆ. ಇದರಲ್ಲಿ ಲೇಯರ್ ಬಟನ್ ಗಳನ್ನು ಕೂಡ ಎಡಭಾಗದ ಕಾರ್ನರ್ ನಲ್ಲಿ ಕಾಣಬಹುದು. ಒಟ್ಟಾರೆಯಾಗಿ ಗೂಗಲ್ ಮ್ಯಾಪ್ ಬಳಕೆದಾರ ಸ್ನೇಹಿಯಾಗಿ ವರ್ತಿಸುತ್ತದೆ.

ಗೂಗಲ್ ಮ್ಯಾಪ್ ಗೆ ಇನ್ನಷ್ಟು ವೈಶಿಷ್ಟ್ಯಗಳು ಸೇರಿಕೊಳ್ಳಲಿವೆ ಎಂಬ ಬಗ್ಗೆ ಈ ತಿಂಗಳು ನಡೆದ ಗೂಗಲ್ I/O ಡೆವಲಪರ್ಸ್ ಸಮಾವೇಶದಲ್ಲಿ ಹೇಳಲಾಗಿದೆ. ಗ್ರೂಪ್ ಪ್ಲಾನಿಂಗ್, ಯೂಟ್ಯೂಬ್, ಗೂಗಲ್ ಲೆನ್ಸ್ ಇಂಟಿಗ್ರೇಷನ್, ಯುವರ್ ಮ್ಯಾಚ್ ಸ್ಕೋರ್, ಶೇರಿಂಗ್ ಈಟಿಎ ಇತ್ಯಾದಿ... ಇವುಗಳಲ್ಲಿ ಇಂಟಿಗ್ರೇಷನ್ ಆಫ್ ಗೂಗಲ್ ಲೆನ್ಸ್ ಬಗ್ಗೆ ಹೆಚ್ಚು ಮಾತುಕತೆಗಳು ಆರಂಭವಾಗಿದೆ. ಸ್ಮಾರ್ಟ್ ಫೋನ್ ಕ್ಯಾಮರಾಗಳನ್ನು ಬಳಸಿ ಇದು ಪ್ರತಿಯೊಂದು ರಸ್ತೆಯ ಫೋಟೋಗಳನ್ನು ಒದಗಿಸಲಿದ್ದು ಹುಡುಕಾಡುವವರಿಗೆ ಇನ್ನಷ್ಟು ಸಹಾಯ ಮಾಡುವ ಉದ್ದೇಶವಿದೆ.

How to search your lost smartphone!!! ಕಳೆದು ಹೋದ ನಿಮ್ಮ ಸ್ಮಾರ್ಟ್‌ಫೋನ್ ಹುಡುಕುವುದೇಗೆ...?

ಒಟ್ಟಾರೆ ಹೇಳಬೇಕೆಂದರೆ ಗೂಗಲ್ ಮ್ಯಾಪ್ ನಾವು ಹೋಗಬೇಕೆಂದುಕೊಂಡ ಸ್ಥಳಕ್ಕೆ ಚಾಚೂತಪ್ಪದೆ ನಮ್ಮನ್ನು ತಲುಪಿಸಲು ಇನ್ನಷ್ಟು ವೈಶಿಷ್ಟ್ಯಗಳೊಂದಿಗೆ ಹೊರಬರುತ್ತಿದೆ.

Best Mobiles in India

Read more about:
English summary
Google Maps has added a useful new feature

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X