ಗೂಗಲ್‌ ಮ್ಯಾಪ್‌ನಲ್ಲಿ ಮಹತ್ತರ ಬದಲಾವಣೆ! ಇದರಿಂದ ನಿಮಗೇನು ಉಪಯೋಗ ಗೊತ್ತಾ?

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್ ತನ್ನ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ. ಅಲ್ಲದೆ ತನ್ನ ಸೇವೆಗಳಾದ G-mail, ಗೂಗಲ್‌ ಮ್ಯಾಪ್‌ ನಲ್ಲಿಯೂ ಸಹ ಹಲವು ಹೊಸ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಈಗಾಗಲೇ ಗೂಗಲ್‌ ಮ್ಯಾಪ್‌ನಲ್ಲಿ ಅನೇಕ ಅಪ್ಡೇಟ್‌ ಮಾಡಿರುವ ಗೂಗಲ್‌ ಇದೀಗ ತನ್ನ ಗೂಗಲ್‌ ಮ್ಯಾಪ್‌ನಲ್ಲಿ ಭಾಷಾಂತರವನ್ನು ಸಾಕಷ್ಟು ಸುದಾರಿಸಿದೆ. ಈ ಹೊಸ ಅಪ್ಡೇಟ್‌ ಮೂಲಕ ಗೂಗಲ್‌ ಮ್ಯಾಪ್‌ 10 ಭಾರತೀಯ ಭಾಷೆಗಳಿಗೆ ಸ್ವಯಂಚಾಲಿತ ಲಿಪ್ಯಂತರಣವನ್ನು ಪರಿಚಯಿಸಿದೆ.

ಗೂಗಲ್‌

ಹೌದು, ಗೂಗಲ್‌ ತನ್ನ ಗೂಗಲ್‌ ಮ್ಯಾಪ್‌ ಸೇವೆಯಲ್ಲಿ ಭಾರತದ 10 ಭಾಷೆಗಳಿಗೆ ಸ್ವಯಂ ಚಾಲಿತ ಲಿಪ್ಯಂತರಣ ಅವಕಾಶವನ್ನು ಕಲ್ಫಿಸಿದೆ. ಈ ಭಾಷೆಗಳಲ್ಲಿ ಬಾಂಗ್ಲಾ, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು ಮತ್ತು ತೆಲುಗು ಭಾಷೆಗಳು ಸೇರಿವೆ. ಲಿಪ್ಯಂತರಣವು ಭಾಷಾ ಅನುವಾದಕ್ಕಿಂತ ಭಿನ್ನವಾಗಿದೆ. ಅಂದರೆ ಒಂದೇ ಪದಗಳನ್ನು ಬೇರೆ ಲಿಪಿಯಲ್ಲಿ ಬರೆಯುವುದು. ಇದರಿಂದ ಸ್ಥಳೀಯ ಭಾಷೆಗಳಲ್ಲಿ ಉತ್ತಮ ಹುಡುಕಾಟ ಫಲಿತಾಂಶಗಳನ್ನು ಶಕ್ತಗೊಳಿಸುತ್ತದೆ. ಇನ್ನುಳಿದಂತೆ ಈ ಅಪ್ಡೇಟ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್‌

ಗೂಗಲ್‌ ಮ್ಯಾಪ್‌ ಹೆಚ್ಚು ನಿಖರವಾದ ಸರ್ಚಿಂಗ್‌ ರಿಸಲ್ಟ್‌ ಅನ್ನು ಸಕ್ರಿಯಗೊಳಿಸಲು ಲಿಪ್ಯಂತರಣ ಸರ್ಚಿಂಗ್‌ ಅನ್ನು ಸುದಾರಿಸಿದೆ. ಇದಕ್ಕಾಗಿ ದೇಶದಲ್ಲಿ ಲ್ಯಾಟಿನ್ ಸ್ಕ್ರಿಪ್ಟ್ ಪಾಯಿಂಟ್ ಆಫ್ ಇಂಟರೆಸ್ಟ್ ಪ್ರದೇಶಗಳ ಹೆಸರುಗಳನ್ನು ಲಿಪ್ಯಂತರಣ ಮಾಡಲು ಗೂಗಲ್ ಕಲಿಕೆಯ ಮಾದರಿಗಳ ಸಮೂಹವನ್ನು ನಿರ್ಮಿಸಿದೆ. ಈ ಹೊಸ ಸ್ವಯಂಚಾಲಿತ ಲಿಪ್ಯಂತರಣ ತಂತ್ರಜ್ಞಾನವು ಇಂಗ್ಲಿಷ್ ಮಾತನಾಡದ ಭಾರತದಲ್ಲಿ ಬಳಕೆದಾರರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ.

ಗೂಗಲ್

ಗೂಗಲ್ ತನ್ನ ಗೂಗಲ್ ಮ್ಯಾಪ್‌ನಲ್ಲಿ ಭಾರತದ 10 ಭಾಷೆಗಳಿಗೆ ಸ್ವಯಂಚಾಲಿತ ಲಿಪ್ಯಂತರಣವನ್ನು ಸೇರಿಸುವುದಾಗಿ ಈ ಹಿಂದೆಯೇ ಘೋಷಿಸಿತು. ಇದರರ್ಥ ಸ್ಥಳೀಯ ಭಾಷೆಯ ಬಳಕೆದಾರರು ಈಗ ಭಾರತದಲ್ಲಿ ಪಿಒಐಗಳ ಮೊದಲಿಗಿಂತ ಹೆಚ್ಚು ನಿಖರವಾದ ಫಲಿತಾಂಶಗಳನ್ನು ಪಡೆಯುತ್ತಾರೆ. ಇನ್ನು ಈ ಕಲಿಕೆಯ ಮಾದರಿಗಳ ಹೊಸ ಸೇರ್ಪಡೆಯೊಂದಿಗೆ, ಹಿಂದಿ ಲಿಪ್ಯಂತರಣವು 3.2x ವ್ಯಾಪ್ತಿ ಸುಧಾರಣೆ ಮತ್ತು 1.8x ಗುಣಮಟ್ಟದ ಸುಧಾರಣೆಯನ್ನು ಕಂಡಿದೆ ಎಂದು ಗೂಗಲ್ ಹೇಳಿದೆ. ಬಂಗಾಳಿ ಸ್ಥಳೀಯ ಭಾಷಾ ಲಿಪ್ಯಂತರಣವು 19x ವ್ಯಾಪ್ತಿ ಸುಧಾರಣೆ ಮತ್ತು 3.3x ಗುಣಮಟ್ಟದ ಸುಧಾರಣೆಯನ್ನು ಕಂಡಿದೆ. ಕಲಿತ ಮಾದರಿಗಳ ಹೊಸ ಸಮೂಹದಿಂದಾಗಿ ಒಡಿಯಾ ಭಾಷಾ ಲಿಪ್ಯಂತರಣವು 960x ವ್ಯಾಪ್ತಿ ಸುಧಾರಣೆಯನ್ನು ಕಂಡಿದೆ.

ಗೂಗಲ್

ಕಲಿತ ಮಾದರಿಗಳು, ವಿವಿಧ ಲಿಪ್ಯಂತರಣ ನಿಘಂಟುಗಳು ಮತ್ತು ಅಕ್ರೊನಿಮ್‌ಗಳ ಮಾಡ್ಯೂಲ್‌ನ ಹೊಸ ಸಮೂಹವು ಕೆಲವು ಭಾಷೆಗಳಲ್ಲಿ ಗುಣಮಟ್ಟ ಮತ್ತು ವ್ಯಾಪ್ತಿಯನ್ನು ಸುಮಾರು ಇಪ್ಪತ್ತು ಪಟ್ಟು ಹೆಚ್ಚಿಸಿದೆ ಎಂದು ಗೂಗಲ್ ಹೇಳಿದೆ. "ಸಾಮಾನ್ಯ ಇಂಗ್ಲಿಷ್ ಪದಗಳನ್ನು ಸ್ಥಳೀಯ ಲಿಪಿಯಲ್ಲಿ ಬರೆಯುವಾಗಲೂ ಸಹ ಭಾರತದ ಸ್ಥಳಗಳ ಹೆಸರುಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಈ ಲಿಪಿಗಳಲ್ಲಿ ಹೆಸರನ್ನು ಹೇಗೆ ಬರೆಯಲಾಗಿದೆ ಎಂಬುದನ್ನು ಹೆಚ್ಚಾಗಿ ಅದರ ಉಚ್ಚಾರಣೆಯಿಂದ ನಡೆಸಲಾಗುತ್ತದೆ. ಆದ್ದರಿಂದ ಗೂಗಲ್‌ ಈ ಕ್ರಮಕ್ಕೆ ಮುಂದಾಗಿದೆ.

Best Mobiles in India

English summary
Google Maps Now Offers Better Search Results In Kannada And Other India Langauges.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X