ಗೂಗಲ್‌ ಮೀಟ್‌ ವಿಡಿಯೊ ಕಾಲ್‌ನಲ್ಲಿ ಬ್ಯಾಕ್‌ಗ್ರೌಂಡ್‌ ಬದಲಿಸಬಹುದು!.ಹೇಗೆ ಗೊತ್ತಾ?

|

ಸದ್ಯ ವಿಡಿಯೊ ಕಾಲಿಂಗ್ ಆಪ್‌ಗಳ ಹೆಚ್ಚಿನ ಡಿಮ್ಯಾಂಡ್‌ನಲ್ಲಿದ್ದು, ಜೂಮ್‌ ಸೇರಿದಂತೆ ಗೂಗಲ್ ಮೀಟ್, ಜಿಯೋ ಮೀಟ್ ಆಪ್‌ಗಳು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಇವುಗಳಲ್ಲಿ ಗೂಗಲ್ ಮೀಟ್ ಜೂಮ್ ಆಪ್‌ಗೆ ನೇರ ಪೈಪೋಟಿ ನೀಡುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದ್ದು, ಸಾಕಷ್ಟು ನೂತನ ಅಪ್‌ಡೇಟ್‌ಗಳನ್ನು ಅಳವಡಿಸಿಕೊಂಡಿದೆ. ಈ ನಿಟ್ಟಿನಲ್ಲಿ ಗೂಗಲ್ ಮೀಟ್ ಅಪ್ಲಿಕೇಶನ್ ಈಗ ಮತ್ತೊಂದು ಆಕರ್ಷಕ ಆಯ್ಕೆಯನ್ನು ಬಳಕೆದಾರರಿಗೆ ನೀಡಿದೆ.

ಗೂಗಲ್‌

ಹೌದು, ಗೂಗಲ್‌ ಮೀಟ್‌ ಅಪ್ಲಿಕೇಶನ್ ಬ್ಯಾಕ್‌ಗ್ರೌಂಡ್‌ ಬದಲಿಸುವ ಆಯ್ಕೆಯನ್ನು ಪರಿಚಯಿಸಿದೆ. ಗೂಗಲ್ ತನ್ನ ಮೀಟ್ ವಿಡಿಯೋ ಕಾನ್ಫರೆನ್ಸಿಂಗ್ ಪ್ಲಾಟ್‌ಫಾರ್ಮ್‌ನ ಬಳಕೆದಾರರಿಗೆ ಗೂಗಲ್ ಆಯ್ದ ಫೋಟೊಗಳನ್ನು ಅಥವಾ ತಮ್ಮ ಆಯ್ಕೆಯ ಫೋಟೊದೊಂದಿಗೆ ಬ್ಯಾಕ್‌ಗ್ರೌಂಡ್‌ ಬದಲಾಯಿಸಲು ಈ ಫೀಚರ್ ನೆರವಾಗಲಿದೆ. ಇನ್ನು ಈ ನೂತನ ಫೀಚರ್‌ ಡೆಸ್ಕ್‌ಟಾಪ್‌ ಬಳಕೆದಾರರಿಗೆ ಲಭ್ಯ.

ChromeOS

ಬ್ಯಾಕ್‌ಗ್ರೌಂಡ್‌ ಬದಲಿಸುವ ಆಯ್ಕೆಯು ChromeOS, ವಿಂಡೋಸ್ ಮತ್ತು ಮ್ಯಾಕ್ ಡೆಸ್ಕ್‌ಟಾಪ್ ಡಿವೈಸ್‌ನ Chrome ಬ್ರೌಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಸರ್ಚ್ ಇಂಜಿನ ದೈತ್ಯ ಗೂಗಲ್‌ ಹೇಳಿದೆ. ಈ ಫೀಚರ್ ಕಾರ್ಯನಿರ್ವಹಿಸಲು ಬಳಕೆದಾರರಿಗೆ ವಿಸ್ತರಣೆ ಅಥವಾ ಯಾವುದೇ ಹೆಚ್ಚುವರಿ ಸಾಫ್ಟ್‌ವೇರ್ ಅಗತ್ಯವಿಲ್ಲ. ಗೂಗಲ್ ಮೀಟ್ ಮೊಬೈಲ್ ಅಪ್ಲಿಕೇಶನ್ ಬಳಕೆದಾರರು ಶೀಘ್ರದಲ್ಲೇ ಈ ಫೀಚರ್ ಅನ್ನು ಪಡೆಯುವ ನಿರೀಕ್ಷೆಯಿದೆ.

ಸ್ಟಾರ್ಟರ್

ಇನ್ನು ಗೂಗಲ್ ಮೀಟ್ ಎಸೆನ್ಷಿಯಲ್ಸ್, ಬಿಸಿನೆಸ್ ಸ್ಟಾರ್ಟರ್, ಬಿಸಿನೆಸ್ ಸ್ಟ್ಯಾಂಡರ್ಡ್, ಬಿಸಿನೆಸ್ ಪ್ಲಸ್, ಎಂಟರ್‌ಪ್ರೈಸ್ ಎಸೆನ್ಷಿಯಲ್ಸ್, ಎಂಟರ್‌ಪ್ರೈಸ್ ಸ್ಟ್ಯಾಂಡರ್ಡ್, ಎಂಟರ್‌ಪ್ರೈಸ್ ಪ್ಲಸ್, ಎಂಟರ್‌ಪ್ರೈಸ್ ಫಾರ್ ಎಜುಕೇಶನ್ ಮತ್ತು ಲಾಭೋದ್ದೇಶವಿಲ್ಲದ ಗ್ರಾಹಕರು ಹಾಗೂ ವೈಯಕ್ತಿಕ ಗೂಗಲ್ ಖಾತೆಗಳನ್ನು ಹೊಂದಿರುವ ಬಳಕೆದಾರರಿಗಾಗಿ ಗೂಗಲ್ ಮೀಟ್ ಬ್ಯಾಕ್‌ಗ್ರೌಂಡ್‌ ಬದಲಿಸುವ ಆಯ್ಕೆಯು ಹೊರಹೊಮ್ಮುತ್ತಿದೆ.

ಬ್ಯಾಕ್‌ಗ್ರೌಂಡ್‌ ಬದಲಿಸಲು ಈ ಕ್ರಮಗಳನ್ನು ಅನುಸರಿಸಿ:

ಬ್ಯಾಕ್‌ಗ್ರೌಂಡ್‌ ಬದಲಿಸಲು ಈ ಕ್ರಮಗಳನ್ನು ಅನುಸರಿಸಿ:

* ವೀಡಿಯೊ ಕರೆ ಮಾಡುವ ಮೊದಲು ನೀವು ಹಿನ್ನೆಲೆ ಬದಲಾಯಿಸಲು ಬಯಸಿದರೆ, Google ಮೀಟ್‌ಗೆ ಹೋಗಿ> ಸಭೆ ಆಯ್ಕೆಮಾಡಿ> ಹಿನ್ನೆಲೆ ಬದಲಾಯಿಸಿ. ಅದರ ನಂತರ ನೀವು ಸಭೆಗೆ ಸೇರಬಹುದು.

* ವೀಡಿಯೊ ಕರೆಯ ಸಮಯದಲ್ಲಿ ಹಿನ್ನೆಲೆ ಬದಲಾಯಿಸಲು, ಕೆಳಗಿನ ಬಲ ಭಾಗದಲ್ಲಿರುವಲ್ಲಿರುವ ಇನ್ನಷ್ಟು ಆಯ್ಕೆಯನ್ನು (ಮೂರು ಚುಕ್ಕೆಗಳು) ಕ್ಲಿಕ್ ಮಾಡಿ ಮತ್ತು ನಂತರ ಹಿನ್ನೆಲೆ ಬದಲಿಸಿ ಕ್ಲಿಕ್ ಮಾಡಿ. ನೀವು ಆಯ್ಕೆಯನ್ನು ಆರಿಸಿದಾಗ ನಿಮ್ಮ ಕ್ಯಾಮೆರಾ ಸ್ವಯಂಚಾಲಿತವಾಗಿ ಆನ್ ಆಗುತ್ತದೆ ಎಂದು ಗೂಗಲ್ ನಿರ್ದಿಷ್ಟಪಡಿಸಿದೆ.

*ಮೊದಲೇ ಅಪ್‌ಲೋಡ್ ಮಾಡಿದ ಹಿನ್ನೆಲೆ ಆಯ್ಕೆ ಮಾಡಲು, ನೀವು ಪಟ್ಟಿ ಮಾಡಲಾದ ಆಯ್ಕೆಗಳಿಂದ ಒಂದನ್ನು ಆಯ್ಕೆ ಮಾಡಬಹುದು. ನಿಮ್ಮ ಹಿನ್ನೆಲೆಗಾಗಿ ನಿಮ್ಮ ಸ್ವಂತ ಚಿತ್ರವನ್ನು ಅಪ್‌ಲೋಡ್ ಮಾಡಲು, ಸೇರಿಸು ಕ್ಲಿಕ್ ಮಾಡಿ.

Best Mobiles in India

English summary
The search giant said that custom background feature will work on ChromeOS and on the Chrome browser on Windows and Mac desktop devices.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X