ಗೂಗಲ್‌ ಮೆಸೇಜ್‌ ಸೇರಿದ ಆಟೋಮ್ಯಾಟಿಕ್‌ OTP ಮೆಸೇಜ್‌ ಡಿಲೀಟ್‌ ಫೀಚರ್ಸ್‌!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತನ್ನ ಗೂಗಲ್ ಮೆಸೇಜ್‌ನಲ್ಲಿ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದು 24 ಗಂಟೆಗಳ ನಂತರ ಒನ್ ಟೈಮ್ ಪಾಸ್ವರ್ಡ್ (ಒಟಿಪಿ) ಮೆಸೇಜ್‌ಗಳನ್ನು ಆಟೋಮ್ಯಾಟಿಕ್‌ ಡಿಲೀಟ್‌ ಮಾಡಲಿದೆ. ಈ ಹೊಸ ಫೀಚರ್ಸ್‌ ಮೊದಲು ಗೂಗಲ್‌ ಮೆಸೇಜ್‌ಗಳ ಬೀಟಾ ಅಪ್ಲಿಕೇಶನ್‌ನಲ್ಲಿ ಲಭ್ಯವಾಗಲಿದ್ದು, ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ. 7.5.048 ಆವೃತ್ತಿಯಲ್ಲಿನ ಗೂಗಲ್ ಮೆಸೇಜ್‌ ಬೀಟಾ ಬಳಕೆದಾರರಿಗೆ ಈ ಫೀಚರ್ಸ್‌ ಲಭ್ಯವಾಗಲಿದೆ.

ಗೂಗಲ್‌

ಹೌದು, ಗೂಗಲ್‌ ಮೆಸೇಜ್‌ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದು ನಿಮ್ಮ ಗೂಗಲ್‌ ಮೆಸೇಜ್‌ಗೆ ಬರುವ ಒನ್‌ಟೈಮ್‌ ಪಾಸ್‌ವರ್ಡ್‌ಗಳನ್ನು ಆಟೋಮ್ಯಾಟಿಕ್‌ ಆಗಿ ಡಿಲೀಟ್‌ ಮಾಡಲಿದೆ. ಈ ರೀತಿ ಮಾಡುವುದರಿಂದ ನಿಮ್ಮ ಗೂಗಲ್‌ ಮೆಸೇಜ್‌ನಲ್ಲಿ OTP ಮೆಸೇಜ್‌ ಸ್ಟೋರೇಜ್‌ ಆಗುವುದು ತಪ್ಪಲಿದೆ. ಸಾಮಾನ್ಯವಾಗಿ OTP ಸಂದೇಶ ನಿರ್ಧಿಷ್ಟ ಸಮಯದ ನಂತರ ತನ್ನ ವ್ಯಾಲಿಡಿಟಿ ಕಳೆದುಕೊಮಡಿರುತ್ತದೆ. ಆದರಿಂದ ಈ ಸಂದೇಶಗಳನ್ನ ಡಿಲೀಟ್‌ ಮಾಡುವುದರಿಂದ ಬಳಕೆದಾರರಿಗೆ ಯಾವುದೇ ನಷ್ಟ ವಾಗುವುದಿಲ್ಲ. ಇನ್ನುಳಿದಂತೆ ಈ ಹೊಸ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಗೂಗಲ್‌ ಮೆಸೇಜ್‌ OTP ಮೆಸೇಜ್‌ ಅನ್ನು 24 ಗಂಟೆಯೊಳಗೆ ಆಟೋಮ್ಯಾಟಿಕ್‌ ಡಿಲೀಟ್‌ ಮಾಡುವ ಫೀಚರ್ಸ್‌ ಪರಿಚಯಿಸಿದೆ ನಿಜ. ಆದರೆ ಈ ಫೀಚರ್ಸ್‌ ಇನ್ನೂ ಕೂಡ ಎಲ್ಲಾ ಬಳಕೆದಾರರಿಗೆ ಲಭ್ಯವಿಲ್ಲ. ಇದು ಫರ್ಸನಲ್‌, ಟ್ರಾನ್ಸಕ್ಷನ್‌, ಆಫರ್‌ಗಳು ಮತ್ತು ಒಟಿಪಿಗಳು ಸೇರಿದಂತೆ ವರ್ಗಗಳ ಪ್ರಕಾರ ಸಂದೇಶಗಳನ್ನು ವಿಂಗಡಿಸಲು ಬಳಕೆದಾರರಿಗೆ ಅನುಮತಿಸುವ ಫೀಚರ್ಸ್‌ನ ಭಾಗವಾಗಿದೆ. ವರ್ಗದ ಪ್ರಕಾರ ಮೆಸೇಜ್‌ಗಳನ್ನು ವೀಕ್ಷಿಸಿ ಆನ್ ಮಾಡುವ ಆಯ್ಕೆ ಇದೆ, ಅದಕ್ಕೆ ಅನುಗುಣವಾಗಿ ಮೆಸೇಜ್‌ಗಳನ್ನು ಪ್ರದರ್ಶಿಸುತ್ತದೆ. ಅದರ ಕೆಳಗೆ ಈ ಹೊಸ ಫೀಚರ್ಸ್‌ ಲಭ್ಯವಾಗಲಿದೆ. ಇದನ್ನು ಆನ್ ಮಾಡಿದ ನಂತರ, ಎಲ್ಲಾ ಪ್ರಸ್ತುತ ಮತ್ತು ಭವಿಷ್ಯದ ಒಟಿಪಿಗಳನ್ನು 24 ಗಂಟೆಗಳ ನಂತರ ಶಾಶ್ವತವಾಗಿ ಡಿಲೀಟ್‌ ಮಾಡಲಾಗುತ್ತದೆ.

ಎಸ್‌ಎಂಎಸ್

ಇನ್ನು ನಿಮಗೆಲ್ಲಾ ತಿಳಿದಿರುವಂತೆ ಒಟಿಪಿಗಳನ್ನು ಎಸ್‌ಎಂಎಸ್ ಮೂಲಕ ಕಳುಹಿಸಲಾಗುತ್ತದೆ. ಇದನ್ನು ಹೆಚ್ಚಾಗಿ ಹಣಕಾಸಿನ ವ್ಯವಹಾರಗಳಿಗೆ ಬಳಸಲಾಗುತ್ತದೆ. ವಿಭಿನ್ನ ಅಪ್ಲಿಕೇಶನ್‌ಗಳಿಗಾಗಿ ಎರಡು ಅಂಶಗಳ ದೃಡೀಕರಣದಭಾಗವಾಗಿ ಇದನ್ನು ಬಳಸಲಾಗುತ್ತದೆ. ಅಲ್ಲದೆ ಈ ಒಟಿಪಿಗಳು ನಿರ್ದಿಷ್ಟ ಅವಧಿಯ ನಂತರ ತಮ್ಮ ಅವಶ್ಯಕತೆಯನ್ನು ಕಳೆದುಕೊಳ್ಳುತ್ತವೆ. ಆದ್ದರಿಂದ ಈ ಆಟೋಮ್ಯಾಟಿಕ್‌-ಡಿಲೀಟ್‌ ಫೀಚರ್ಸ್‌ ನಿಮ್ಮ ಇನ್‌ಬಾಕ್ಸ್‌ನಲ್ಲಿನ ಗೊಂದಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಗೂಗಲ್‌

ಇದರಿಂದ ಗೂಗಲ್‌ ಮೆಸೇಜ್‌ಗಳ ಇನ್‌ಬಾಕ್ಸ್ ಹೆಚ್ಚಾಗಿ ಪ್ರಚಾರಗಳು ಮತ್ತು ಆಫರ್‌ ಮೆಸೇಜ್‌ಗಳಿಂದ ತುಂಬಿ ಹೋಗಿರುತ್ತೆ. ಕೆಲವೊಮ್ಮೆ ನಿಮ್ಮ ಮೆಸೇಜ್‌ ಇನ್‌ಬಾಕ್ಸ್‌ ತೆರೆದರೆ ಸಾಕು ಹೆಚ್ಚಿನ ಆಫರ್‌ ಸಂದೇಶಗಳೇ ತುಂಬಿ ಹೋಗಿರುತ್ತವೆ. ಆದರಿಂದ ಈ ಹೊಸ ಫೀಚರ್ಸ್‌ ತುಂಬಾ ಪರಿಣಾಮಕಾರಿಯಾಗಿ ಸಹಾಯಕವಾಗಲಿದೆ. ಗೂಗಲ್ ಪ್ರಸ್ತುತ ಇದನ್ನು ಬೀಟಾದಲ್ಲಿ ಪರೀಕ್ಷಿಸುತ್ತಿದೆ. ಇನ್ನು ಇತ್ತೀಚೆಗೆ ಜಾಗತಿಕವಾಗಿ ಹೆಚ್ಚಿನ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿರುವ ಸಂದೇಶಗಳ ಅಪ್ಲಿಕೇಶನ್‌ನಲ್ಲಿ "ವೇಳಾಪಟ್ಟಿ ಕಳುಹಿಸುವಿಕೆಯನ್ನು" ಸಹ ಪರಿಚಯಿಸಲಾಗಿದೆ.

Best Mobiles in India

English summary
Google Messages is rolling out a new feature that will automatically delete One Time Password (OTP) messages after 24 hours.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X