ಗೂಗಲ್ ಮೆಸೆಜ್‌ಗೆ ಸೇರಲಿದೆ ಈ ಹೊಸ ಫೀಚರ್ಸ್‌; ಏನದು ಗೊತ್ತಾ!?

|

ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌ನಲ್ಲಿ ವಾಟ್ಸಾಪ್‌, ಇನ್‌ಸ್ಟಾಗ್ರಾಮ್‌ ಹಾಗೂ ಟೆಲಿಗ್ರಾಮ್‌ ಸೇರಿದಂತೆ ಇನ್ನಿತರೆ ಆಪ್‌ಗಳು ಗ್ರಾಹಕರಿಗೆ ಭಿನ್ನ ವಿಭಿನ್ನ ಫೀಚರ್ಸ್‌ನಲ್ಲಿ ಸೇವೆ ನೀಡುತ್ತಿವೆ. ಇದರ ನಡುವೆ ಗೂಗಲ್‌ ಸಹ ಇದೇ ರೀತಿಯ ಸೇವೆ ನೀಡುತ್ತಿದ್ದು, ತನ್ನ ಗೂಗಲ್ ಮೆಸೆಜ್‌ ಆಪ್‌ನಲ್ಲಿ ಈಗಾಗಲೇ ಹಲವಾರು ಬದಲಾವಣೆಗಳನ್ನು ತರುವುದರ ಜೊತೆಗೆ ಹೊಸ ಫೀಚರ್ಸ್‌ಗಳನ್ನೂ ಪರಿಚಯಿಸಿತ್ತು. ಇದೀಗ ಮತ್ತೆ ಮೆಸೇಜಿಂಗ್‌ ಆಪ್‌ನಲ್ಲಿ ಆಕರ್ಷಕ ಫೀಚರ್ಸ್‌ ಅನ್ನು ಬಳಕೆದಾರರಿಗೆ ನೀಡಲು ಮುಂದಾಗಿದೆ.

ಗೂಗಲ್‌ ಮೆಸೆಜ್‌

ಹೌದು, ಈ ಗೂಗಲ್‌ ಮೆಸೆಜ್‌ ಆಪ್‌ ಎಸ್‌ಎಮ್‌ಎಸ್‌, ಆರ್‌ಸಿಎಸ್‌ ಹಾಗೂ ಇನ್‌ಸ್ಟಂಟ್‌ ಮೆಸೆಜ್‌ ಕಳುಹಿಸುವಿಕೆ ಆಪ್‌ ಆಗಿದ್ದು, ಇದು ಆಂಡ್ರಾಯ್ಡ್‌ ಹಾಗೂ ವೇರ್‌ಓಎಸ್‌ ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಇನ್ನು ಈ ಪ್ಲಾಟ್‌ಫಾರ್ಮ್‌ನಲ್ಲಿ ಎಮೋಜಿಗಳಿಗೆ ಸಂಬಂಧಿಸಿದಂತೆ ಹೊಸ ಸೌಲಭ್ಯ ಕಲ್ಪಿಸಲು ಗೂಗಲ್‌ ಮುಂದಾಗಿದೆ. ಈ ಮೂಲಕ ಟೆಕ್ಸ್ಟ್‌ ಬದಲಾಗಿ ಎಮೋಜಿ ಮೂಲಕವೇ ಮಾತನಾಡಬಹುದು.

ಈಗಾಗಲೇ ಏಳು ಎಮೋಜಿ ಲಭ್ಯ

ಈಗಾಗಲೇ ಏಳು ಎಮೋಜಿ ಲಭ್ಯ

ಗೂಗಲ್‌ನ ಈ ಮೆಸೇಜಿಂಗ್‌ ಆಪ್‌ನಲ್ಲಿ ಪ್ರಸ್ತುತ ಬಳಕೆದಾರರು ಏಳು ಎಮೋಜಿಗಳನ್ನು ಬಳಕೆ ಮಾಡಲು ಅನುವು ಮಾಡಿಕೊಡಲಾಗಿದೆ. ಈ ಮೂಲಕ ನೀವು ಯಾವುದೇ ಟೆಕ್ಸ್ಟ್‌ ಮಾಡದೆ ಎಮೋಜಿ ಮೂಲಕವೇ ನಿಮ್ಮ ಸ್ನೇಹಿತರು ಹಾಗೂ ಬಂಧುಗಳಿಗೆ ಪ್ರತಿಕ್ರಿಯೆ ನೀಡಬಹುದು. ಇದು ಒಂದು ಮೋಜಿನ ಮಾರ್ಗವಾಗಿದ್ದು, ಇದರಲ್ಲಿ ಬಳಕೆದಾರರು ಥಂಬ್ಸ್ ಅಪ್, ಥಂಬ್ಸ್ ಡೌನ್‌, ಹೃದಯಾಕಾರದ ಕಣ್ಣುಗಳೊಂದಿಗೆ ನಗುತ್ತಿರುವ ಫೇಸ್‌, ಸಂತೋಷದ ಕಣ್ಣೀರಿನ ಫೇಸ್‌, ಓಪನ್‌ ಮೌತ್‌, ಅಳುವ ಫೀಲಿಂಗ್‌ನಲ್ಲಿರುವ ಫೇಸ್‌ ಮತ್ತು ಕೋಪದ ಫೇಸ್‌ಗಳ ಎಮೋಜಿಗಳು ಬಳಕೆದಾರರಿಗೆ ಲಭ್ಯ ಇವೆ.

ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿ

ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿ

ಇನ್ನು ನೀವು ನೀವು ರಿಚ್ ಕಮ್ಯುನಿಕೇಶನ್ ಸರ್ವಿಸಸ್ ಚಾಟ್‌ ಆಯ್ಕೆಯಲ್ಲಿ ದೀರ್ಘವಾಗಿ ಒತ್ತಿದರೆ, ಈ ಏಳು ಎಮೋಜಿಗಳು ಕಾಣಿಸಿಕೊಳ್ಳುತ್ತವೆ. ಆದರೆ ಈ ಎಮೋಜಿಗಳಿಂದ ನೀವು ಇತರ ಎಮೋಜಿಗಳೊಂದಿಗೆ ಮೆಸೆಜ್‌ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಆದರೆ ಈ ನಿಯಮ ಇನ್ನೇನು ಕೆಲವೇ ದಿನಗಳಲ್ಲಿ ಬದಲಾಗಲಿದೆ. ಯಾಕೆಂದರೆ ಗೂಗಲ್ ಆಪ್‌ಅನ್ನು ಪರೀಕ್ಷಿಸುತ್ತಿದ್ದು, ಹೊಸ ಫೀಚರ್ಸ್‌ ಬಳಕೆದಾರರಿಗೆ ಶೀಘ್ರದಲ್ಲೇ ಲಭ್ಯವಾಗಲಿದೆ.

ಕೆಲವೇ ದಿನಗಳಲ್ಲಿ ಹೊಸ ಫೀಚರ್ಸ್‌

ಕೆಲವೇ ದಿನಗಳಲ್ಲಿ ಹೊಸ ಫೀಚರ್ಸ್‌

ಇನ್ನು ಈ ಹೊಸ ಫೀಚರ್ಸ್‌ ಮೂಲಕ ವಾಟ್ಸಾಪ್‌ ಹಾಗೂ ಇನ್ನಿತರೆ ಪ್ಲಾಟ್‌ಫಾಮ್‌ನ ಚಾಟ್‌ ವಿಭಾಗದಲ್ಲಿ ಹೇಗೆ ಪ್ರತಿಕ್ರಿಯೆ ನೀಡುತ್ತಿದ್ದೀರೋ ಅದೇ ರೀತಿಯಲ್ಲಿ ಈ ಸೇವೆ ಸಿಗಲಿದೆ. ಅಂದರೆ ನೀವು ರಿಚ್ ಕಮ್ಯುನಿಕೇಶನ್ ಸರ್ವಿಸಸ್ ಚಾಟ್‌‌ ಮೂಲಕ ಮೆಸೆಜ್‌ಗೆ ಪ್ರತಿಕ್ರಿಯಿಸಲು ನಿಮ್ಮ ಸ್ಯಾಮ್‌ಸಂಗ್‌ ಅಥವಾ ಇತರ ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಮಿತಿಯಿಲ್ಲದೇ ಎಮೋಜಿಗಳನ್ನು ಬಳಕೆ ಮಾಡಬಹುದಾಗಿದೆ.

ಮೆಸೆಜ್ ಬೋರ್ಡ್‌ ನಲ್ಲಿ ಪ್ಲಸ್ ಐಕಾನ್

ಮೆಸೆಜ್ ಬೋರ್ಡ್‌ ನಲ್ಲಿ ಪ್ಲಸ್ ಐಕಾನ್

ಇನ್ನು ಈ ಅಪ್‌ಡೇಟ್‌ ವಿಷಯದಲ್ಲಿ ಈಗಾಗಲೇ ಮಾತ್ರೆ ಆಕಾರದ ಚಾಟ್ ಮೆಸೆಜ್ ಬೋರ್ಡ್‌ ಪ್ಲಸ್ ಐಕಾನ್ ಅನ್ನು ಹೊಂದಿದೆ. ಇದರ ಮೇಲೆ ಟ್ಯಾಪ್ ಮಾಡುವುದರಿಂದ ಪೂರ್ಣ ಎಮೋಜಿ ಪಿಕ್ಕರ್‌ಗಳು ತೆರೆದುಕೊಳ್ಳಲಿವೆ. ಹಾಗೆಯೇ ವರ್ಗವಾರು ಎಮೋಜಿಗಳನ್ನು ಇದರಲ್ಲಿ ನೀಡಲಾಗುತ್ತದೆ. ಈ ಮೂಲಕ ನಿಮಗೆ ಮೆಚ್ಚಿನವುಗಳನ್ನು ಆಯ್ಕೆ ಮಾಡಲು ಸುಲಭ ಮಾರ್ಗ ಕಲ್ಪಿಸಲಾಗಿದೆ. ಹಾಗೆಯೇ ಟೆಕ್ಸ್ಟ್‌ ವಿಭಾಗದಲ್ಲಿನ ಮೈಕ್ರೊಫೋನ್ ಐಕಾನ್ ಪಕ್ಕದಲ್ಲಿರುವ ಎಮೋಜಿ ಐಕಾನ್ ಮೇಲೆ ಟ್ಯಾಪ್ ಮಾಡುವ ಮೂಲಕವೂ ನೀವು ಈ ಆಯ್ಕೆಯನ್ನು ಪಡೆಯಬಹುದಾಗಿದೆ.

ಗ್ರಾಹಕರು

ಗ್ರಾಹಕರು ಇತ್ತೀಚಿನ ಬೀಟಾದೊಂದಿಗೆ ತಮ್ಮ ಫೋನ್‌ಗಳಲ್ಲಿ ಈ ಹೊಸ ಫೀಚರ್ಸ್‌ ಅನ್ನು ಬಳಕೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಬೆರಳಣಿಕೆಯಷ್ಟು ಬಳಕೆದಾರರಿಗೆ ಮಾತ್ರ ಈ ಸೌಲಭ್ಯ ಸದ್ಯಕ್ಕೆ ಸಿಕ್ಕಿದೆ. ಇನ್ನು ಇದರ ಮತ್ತೊಂದು ಫಿಚರ್ಸ್‌ ಎಂದರೆ ಇದರಲ್ಲಿ ರಿಚ್ ಕಮ್ಯುನಿಕೇಶನ್ ಸರ್ವಿಸಸ್ ಚಾಟ್‌ ಹಾಗೂ ಎಸ್ಎಮ್‌ಎಸ್‌ ಟೆಕ್ಸ್ಟ್‌ಗಳೆರಡರಲ್ಲೂ ಈ ಪ್ರತಿಕ್ರಿಯೆಗಳನ್ನು ಕಳುಹಿಸಲು ಸಂಪೂರ್ಣ ಎಮೋಜಿಗಳನ್ನು ಬಳಕೆ ಮಾಡಬಹುದಾಗಿದೆ.

Best Mobiles in India

Read more about:
English summary
Google Messages will soon introduce react to messages with any emoji.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X