ಗೂಗಲ್‌ ಒನ್‌ನಿಂದ ಹೊಸ ಸ್ಟೋರೇಜ್‌ ಪ್ಲಾನ್‌ ಲಾಂಚ್‌!

|

ಗೂಗಲ್‌ನ ಜನಪ್ರಿಯ ಸೇವೆಗಳಲ್ಲಿ ಗೂಗಲ್‌ ಒನ್‌ ಕೂಡ ಒಂದಾಗಿದೆ. ಗೂಗಲ್‌ ಒನ್‌ ಕ್ಲೌಡ್‌ ಸ್ಟೋರೇಜ್‌ ಪ್ಲಾಟ್‌ಫಾರ್ಮ್‌ ಆಗಿದ್ದು, ಡಾಕ್ಯುಮೆಂಟ್ಸ್‌, ಫೈಲ್‌, ಫೋಟೋಸ್‌ಗಳನ್ನು ಸ್ಟೋರ್‌ ಮಾಡಲು ಅವಕಾಶ ನೀಡಲಿದೆ. ಇದೀಗ ಗೂಗಲ್ ಒನ್ ಹೊಸ ಸ್ಟೋರೇಜ್ ಪ್ಲಾನ್ ಅನ್ನು ಸೇರಿಸಿದೆ. ಇದು ಈಗಾಗಲೇ ಲಭ್ಯವಿರುವ ಸ್ಟೋರೇಜ್ ಆಯ್ಕೆಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ಸದ್ಯ ಗೂಗಲ್‌ ಒನ್‌ ಹೊಸ ಸ್ಟೋರೇಜ್‌ ಪ್ಲಾನ್‌ 5TB ಸ್ಟೋರೇಜ್‌ ಅವಕಾಶವನ್ನು ನೀಡಲಿದೆ.

ಗೂಗಲ್‌ ಒನ್‌

ಹೌದು, ಗೂಗಲ್‌ ಒನ್‌ ಹೊಸದಾಗಿ 5TB ಸ್ಟೋರೇಜ್‌ ಪ್ಲಾನ್‌ ಅನ್ನು ಪರಿಚಯಿಸಿದೆ. ಇದು ಪ್ರಸ್ತುತ ಲಭ್ಯವಿರುವ 2TB ಸ್ಟೋರೇಜ್‌ ಮತ್ತು 10TB ಸ್ಟೋರೇಜ್‌ ಪ್ಲಾನ್‌ಗಳ ನಡುವಿನ ಅಂತರ ತಗ್ಗಿಸಲಿದೆ. 5TB ಸ್ಟೋರೇಜ್‌ ಬಯಸುವವರಿಗೆ ಇದು ಸೂಕ್ತವಾಗಿರಲಿದೆ. ಹಾಗಾದ್ರೆ ಗೂಗಲ್‌ ಒನ್‌ನ ಈ ಹೊಸ ಪ್ಲಾನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಗೂಗಲ್‌ ಒನ್‌

ಗೂಗಲ್‌ ಒನ್‌ ತನ್ನ ಹೊಸ 5TB ಸ್ಟೋರೇಜ್‌ ಪ್ಲಾನ್‌ ಅನ್ನು ಸೈಲೈಂಟ್‌ ಆಗಿ ಲಾಂಚ್‌ ಮಾಡಿದೆ. ಈ ಹೊಸ 5TB ಸ್ಟೋರೇಜ್‌ ಪ್ಲಾನ್‌ ತಿಂಗಳಿಗೆ $ 24.99 (ಸುಮಾರು 1,840ರೂ)ಗೆ ಲಭ್ಯವಾಗಲಿದೆ. ಈ ಸ್ಟೋರೇಜ್‌ ಪ್ಲಾನ್‌ ಅನ್ನು ವಾರ್ಷಿಕವಾಗಿ ಖರೀದಿಸುವುದಾದರೆ, ಇದರ ಬೆಲೆ $ 249.99 (ಸರಿಸುಮಾರು ರೂ. 18,414) ಗೆ ಖರೀದಿಸಬಹುದು. ಹಾಗೆಯೇ ಈ ಪ್ಲಾನ್‌ ಮೇಲೆ ಬಳಕೆದಾರರು 17% ಪರಿಣಾಮಕಾರಿ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಗೂಗಲ್‌

ಗೂಗಲ್‌ ಗೂಗಲ್‌ನ 2TB ಮತ್ತು 10TB ಶೇಖರಣಾ ಯೋಜನೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದಕ್ಕಾಗಿಯೇ ಈ ಹೊಸ ಪ್ಲಾನ್‌ ಲಾಂಚ್‌ ಮಾಡಿದೆ ಯಾಕಂದ್ರೆ ಈ ಹಿಂದೆ 4TB ಸ್ಟೋರೇಜ್‌ ಬೇಕು ಎಂದೆನಿಸಿದರೂ 10TB ಸ್ಟೋರೇಜ್‌ ಪ್ಲಾನ್‌ ಖರೀದಿಸಬೇಕಾದ ಅನಿವಾರ್ಯತೆ ಇತ್ತು. ಇದೀಗ 5TB ಪ್ಲಾನ್‌ ಪರಿಚಯಿಸಿರುವುದರಿಂದ ಎರಡು ಪ್ಲಾನ್‌ಗಳ ನಡುವೆ ಇದನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಹೀಗಾಗಿ ಬಳಕೆದಾರರು ತಮ್ಮ ಸ್ಟೋರೇಜ್‌ ಪ್ಲಾನ್‌ಗಳ ನಡುವೆ ಅಂತರ ಕಡಿಮೆ ಮಾಡಿಕೊಳ್ಳಬಹುದಾಗಿದೆ.

ಗೂಗಲ್

ಇನ್ನು 5TB ಪ್ಲಾನ್ ಗೂಗಲ್ ಒನ್‌ನ 2TB ಸ್ಟೋರೇಜ್ ಪ್ಲಾನ್ ಒಳಗೊಂಡಿರುವ ಪ್ರಯೋಜನಗಳನ್ನೇ ಒಳಗೊಂಡಿದೆ. ಇದರಲ್ಲಿ ಗೂಗಲ್ ಎಕ್ಸಫರ್ಟ್ಸ್‌, ಕುಟುಂಬವನ್ನು ಸೇರಿಸುವ ಆಯ್ಕೆ, ಹೆಚ್ಚುವರಿ ಸದಸ್ಯರ ಲಾಭಗಳು, ಗೂಗಲ್ ಸ್ಟೋರ್ ಖರೀದಿಯಲ್ಲಿ 10% ರಿಯಾಯಿತಿ ಮತ್ತು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗಾಗಿ ವಿಪಿಎನ್ ನೀಡುವ ಆಯ್ಕೆಯನ್ನು ಈ ಪ್ಲಾನ್‌ ನೀಡಲಿದೆ. ಸದ್ಯ ಈ ಹೊಸ ಪ್ಲಾನ್‌ ಯಾವಾಗ ಲಾಂಚ್‌ ಆಯ್ತು ಅನ್ನೊದು ತಿಳಿದು ಬಂದಿಲ್ಲ. ಆದರೆ ಇದು ಸಾಕಷ್ಟು ಹೊಸ ಹೊಸ ಆಯ್ಕೆಗಳನ್ನು ಒಳಗೊಂಡಿದೆ.

ಸ್ಟೋರೇಜ್‌

ಸದ್ಯ ಈ ಹೊಸ 5TB ಸ್ಟೋರೇಜ್‌ ಪ್ಲಾನ್‌ಗಳಿಗೆ ಅಪ್‌ಗ್ರೇಡ್ ಮಾಡಲು ಬಯಸುವ ಬಳಕೆದಾರರು ಹೆಚ್ಚಿನ ವಿವರಗಳಿಗಾಗಿ ಗೂಗಲ್‌ ಒನ್‌ ಸ್ಟೋರೇಜ್‌ ವೆಬ್‌ ಪೇಜ್‌ಗೆ ಹೋಗಬಹುದು. ಭಾರತದಲ್ಲಿ ಬಳಕೆದಾರರು ಪ್ರಸ್ತುತ ಉಚಿತ 15GB ಸ್ಟೋರೇಜ್‌ ಆಯ್ಕೆಯನ್ನು ಆರಿಸಲು ಅಥವಾ ಪಾವತಿಸಿದ ಯೋಜನೆಗಳಿಗೆ ಅಪ್‌ಗ್ರೇಡ್ ಮಾಡಲು ಅವಕಾಶವನ್ನು ನೀಡಲಾಗಿದೆ. ಇನ್ನು ಈ ಪಾವತಿಸಿದ ಪ್ಲಾನ್‌ಗಳು 100ರೂ,ಗಳ ಬೇಸ್‌ ಪ್ಲಾನ್‌ ಆಗಿರುವ 100GB ಸ್ಟೋರೇಜ್‌ ಪ್ಲಾನ್‌ ಒಳಗೊಂಡಿದೆ.

ಗೂಗಲ್‌ ಒನ್‌

ಗೂಗಲ್‌ ಒನ್‌ ತಿಂಗಳಿಗೆ 130ರೂ ಬೆಲೆಯ ಪ್ಲಾನ್‌, ವರ್ಷಕ್ಕೆ 1,300ರೂ ಬೆಲೆಯ ಪ್ಲಾನ್‌, 200ರೂ, ಗಳಿಗೆ ಸ್ಟ್ಯಾಂಡರ್ಡ್ 200GB ಸ್ಟೋರೇಜ್ ಪ್ಲಾನ್ ಲಭ್ಯವಿದೆ. ಇನ್ನು ತಿಂಗಳಿಗೆ 210ರೂ ಅಥವಾ ವರ್ಷಕ್ಕೆ 2,100ರೂ ಬೆಲೆಯ ಪ್ಲಾನ್‌ ಹೊಂದಿದೆ. ಕೊನೆಯದಾಗಿ ಪ್ರೀಮಿಯಂ 2TB ಸ್ಟೋರೇಜ್ ಪ್ಲಾನ್ ಇದ್ದು ಇದರ ಬೆಲೆ ತಿಂಗಳಿಗೆ 650ರೂ ಆಗಿದೆ. ಇದಲ್ಲದೆ ತಿಂಗಳಿಗೆ 6,500ರೂ, ಬೆಲೆಯ ಪ್ಲಾನ್‌ ಕೂಡ ಒಂದಾಗಿದೆ. ಇನ್ನು ಈ ಎಲ್ಲಾ ಮೂರು ಪ್ಲಾನ್‌ಗಳು ಗೂಗಲ್ ಎಕ್ಸ್‌ಫರ್ಟ್‌ ಎಂಟ್ರಿ, ಕುಟುಂಬವನ್ನು ಸೇರಿಸುವ ಆಯ್ಕೆ ಮತ್ತು ಹೆಚ್ಚುವರಿ ಸದಸ್ಯರ ಪ್ರಯೋಜನಗಳೊಂದಿಗೆ ಬರುತ್ತವೆ.

Most Read Articles
Best Mobiles in India

English summary
Google One's 5TB storage plan is available for $24.99 (roughly Rs. 1,840) per month in the US.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X