ಬಳಕೆದಾರರ ಹೆಸರು ಹೈಲೆಟ್‌ ಮಾಡಲು ಗೂಗಲ್‌ನಿಂದ ಪೀಪಲ್ ಕಾರ್ಡ್ಸ್‌ ಲಾಂಚ್‌!

|

ಇತ್ತೀಚಿನ ದಿನಗಳಲ್ಲಿ ಯಾವುದೇ ಮಾಹಿತಿ ಬೇಕಿದ್ದರೂ ನಿಮಗೆ ಥಟ್ಟನೆ ನೆನಪಾಗೋದೆ ಗೂಗಲ್‌. ಇಂತಹ ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಸರ್ಚ್‌ನಲ್ಲಿ ನಿಮ್ಮ ಹೆಸರು ಕೂಡ ಕಾಣಿಸಿಕೊಂಡರೆ ಅದರ ಸಂಭ್ರಮವೇ ಬೇರೆ. ಅದರಲ್ಲೂ Google ಸರ್ಚ್‌ ಸರ್ಚಿಂಗ್‌ನ ಜನರ ಪಟ್ಟಿಯಲ್ಲಿ ನೀವು ಉನ್ನತ ಸ್ಥಾನವನ್ನು ಪಡೆಯ ಬೇಕೆಂದುಕೊಂಡಿದ್ದರೆ ಯಾವುದಾದರೂ ಸಾದನೆ ಮಾಡಿರಬೇಕು. ಆದರೆ ಈಗ ನೀವು ಯಾವುದೇ ಸಾದನೆ ಮಾಡದೇ ಹೋದರು ಸಹ ನಿಮ್ಮ ಹೆಸರನ್ನು ಗೂಗಲ್‌ ಸರ್ಚ್‌ನಲ್ಲಿ ಅದರಲ್ಲೂ ಉನ್ನತಮಟ್ಟದ ಸ್ಥಾನದಲ್ಲಿ ಕಾಣಬಹುದಾಗಿದೆ. ಅದು ಹೇಗೆ ಅನ್ನೊದನ್ನ ತಿಳಿಯೋಣ ಬನ್ನಿರಿ.

ಗೂಗಲ್‌

ಹೌದು, ಗೂಗಲ್‌ ಸರ್ಚ್‌ನಲ್ಲಿ ನಿಮ್ಮ ಹೆಸರು ಹುಡುಕಿದರೆ ಮೊದಲು ಕಾಣ ಸಿಗಬೇಕು ಎಂಬ ಹಂಬಲ ಎಲ್ಲರಲ್ಲೂ ಇದ್ದೆ ಇರುತ್ತೆ. ಬಳಕೆದಾರರ ಈ ಆಶಯವನ್ನ ಈಡೇರಿಸುವ ನಿಟ್ಟಿನಲ್ಲಿ ಗೂಗಲ್ ಪೀಪಲ್ ಕಾರ್ಡ್ಸ್‌ ಅನ್ನು ಪರಿಚಯಿಸಿದೆ. ಇದು ವರ್ಚುವಲ್ ವಿಸಿಟಿಂಗ್ ಕಾರ್ಡ್‌ ಆಗಿದ್ದು, ಆನ್‌ಲೈನ್‌ನಲ್ಲಿ ಸುಲಭವಾಗಿ ಸರ್ಚ್‌ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಅಲ್ಲದೆ ಆನ್‌ಲೈನ್‌ನಲ್ಲಿ ಹೆಚ್ಚು ಸುಲಭವಾಗಿ ಸರ್ಚ್‌ ಮಾಡಲು ಬಯಸುವ ಜನರಿಗೆ, ಕನಿಷ್ಠ Google ಸರ್ಚ್‌ನಲ್ಲಿಯಾದರೂ ನಿಮ್ಮ ಹೆಸರು ಕಾಣಿಸಿಕೊಳ್ಳುವುದಕ್ಕೆ ಇದು ಅವಕಾಶ ಮಾಡಿಕೊಡಲಿದೆ. ಇದು ಬಳಕೆದಾರರು ಸರ್ಚ್‌ಗಳಲ್ಲಿ ವೇಗವಾಗಿ ಪಾಪ್ ಅಪ್ ಮಾಡಲು ಸಹಾಯ ಮಾಡುತ್ತದೆ.

ಗೂಗಲ್‌

ಸದ್ಯ ಗೂಗಲ್‌ ಬಳಕೆದಾರರು ಸರ್ಚಿಂಗ್‌ನಲ್ಲಿ ವರ್ಚುವಲ್ ವಿಸಿಟಿಂಗ್ ಕಾರ್ಡ್ ಅನ್ನು ಕ್ರಿಯೆಟ್‌ ಮಾಡಬಹುದು. ಇದು ಅವರ ಅಸ್ತಿತ್ವದಲ್ಲಿರುವ ವೆಬ್‌ಸೈಟ್, ಸಾಮಾಜಿಕ ಪ್ರೊಫೈಲ್‌ಗಳು, ಸ್ಥಳ ಇತ್ಯಾದಿಗಳಂತಹ ಮಾಹಿತಿಯನ್ನು ಹೈಲೈಟ್ ಮಾಡಲಿದೆ. ಅಲ್ಲದೆ ಬಳಕೆದಾರರು ಬಯಸಿದರೆ ಫೋನ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಸಹ ಹೈಲೈಟ್ ಮಾಡಬಹುದು. ಇದಲ್ಲದೆ ಇತರರು ನಿಮ್ಮ ಬಗ್ಗೆ ತಿಳಿದುಕೊಳ್ಳಬೇಕೆಂದು ನೀವು ಬಯಸುವ ಯಾವುದಾದರೂ,ಮಾಹಿತಿಯನ್ನ ಸಹ ನೀವು ಹೈಲೈಟ್‌ ಮಾಡಬಹುದಾಗಿದೆ. ಅಷ್ಟೇ ಅಲ್ಲ ಇನ್ಮುಂದೆ ನೀವು ನಿಮ್ಮ ಗೂಗಲ್‌ ಪಿಪಲ್ಸ್‌ ಕಾರ್ಡ್‌ ಅನ್ನೇ ವಿಸಿಟಿಂಗ್ ಕಾರ್ಡ್‌ ಮಾದರಿಯಲ್ಲಿ ಬಳಸಬಹುದು. ನಿಮ್ಮ ವಿಚಾರಿಸುವ ಯಾವುದೇ ವ್ಯಕ್ತಿ ನಿಮ್ಮ ಹೆಸರನ್ನು ಗೂಗಲ್‌ ಸರ್ಚ್‌ ಮಾಡಿದರೆ ಸಾಕು ನಿಮ್ಮ ಮಾಹಿತಿ ಆತ ತಿಳಿಯಬಹುದಾಗಿದೆ.

ಗೂಗಲ್‌

ಇನ್ನು ಗೂಗಲ್‌ ಪೀಪಲ್ ಕಾರ್ಡ್ಸ್‌ ಮೂಲಕ ಪ್ರಭಾವಶಾಲಿಗಳು, ಉದ್ಯಮಿಗಳು, ಸ್ವತಂತ್ರೋದ್ಯೋಗಿಗಳು, ಸ್ವಯಂ ಉದ್ಯೋಗಿಗಳು, ಉದ್ಯೋಗವನ್ನು ಹುಡುಕುವ ಜನರು ಇತ್ಯಾದಿಗಳಿಗೆ ಸಹಾಯ ಮಾಡಲು ಉದ್ದೇಶಿಸಿದೆ. ಇದಲ್ಲದೆ ಇಂದಿನಿಂದಲೇ, ಭಾರತದಲ್ಲಿ ಬಳಕೆದಾರರು ತಮ್ಮದೇ ಆದ ಪೀಪಲ್ ಕಾರ್ಡ್‌ಗಳನ್ನು ಕ್ರಿಯೆಟ್‌ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ ಅವರ ಸ್ಮಾರ್ಟ್‌ಫೋನ್‌ಗಳಲ್ಲಿ ಇತರ ಜನರ ಕಾರ್ಡ್‌ಗಳನ್ನು ಸಹ ನೋಡಬಹುದು. ಇನ್ನು ಈ ಫೀಚರ್ಸ್‌ ಇದೀಗ ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿನ Google ಸರ್ಚ್‌ನಲ್ಲಿ ಮಾತ್ರ ಲಭ್ಯವಿದೆ. ಅಲ್ಲದೆ ಈ ಕಾರ್ಡ್‌ಗಳು ಇದೀಗ ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯವಿವೆ, ಮುಂದಿನ ದಿನಗಳಲ್ಲಿ ಹೆಚ್ಚಿನ ಭಾಷಾ ಬೆಂಬಲವನ್ನು ಹೊರತರಲಾಗುವುದು ಎಂದು ಗೂಗಲ್‌ ಹೇಳಿಕೊಂಡಿದೆ.

ಗೂಗಲ್‌ ಕಾರ್ಡ್ ಅನ್ನು ಕ್ರಿಯೆಟ್‌ ಮಾಡುವುದು ಹೇಗೆ.?

ಗೂಗಲ್‌ ಕಾರ್ಡ್ ಅನ್ನು ಕ್ರಿಯೆಟ್‌ ಮಾಡುವುದು ಹೇಗೆ.?

ಹಂತ:1 ಪೀಪಲ್ ಕಾರ್ಡ್ ರಚಿಸುವುದು ತುಂಬಾ ಸರಳವಾಗಿದ್ದು, ಮೊದಲು ನೀವು ನಿಮ್ಮ Google ಖಾತೆಗೆ ಸೈನ್ ಇನ್ ಆಗಬೇಕು.

Google

ಹಂತ:2 ನಂತರ ನೀವು Google ಸರ್ಚ್‌ನಲ್ಲಿ ನಿಮ್ಮ ಹೆಸರನ್ನು ಸರ್ಚ್‌ ಮಾಡುವುದಕ್ಕಾಗಿ Add me to Search ಅನ್ನು ಟೈಪ್ ಮಾಡಿ

ಗೂಗಲ್‌

ಹಂತ:3 ನಂತರ ನೀವು ಗೂಗಲ್‌ ಸರ್ಚ್‌ನಲ್ಲಿ ಪಡೆಯುವ ಮೊದಲ ಪ್ರಾಂಪ್ಟ್ ನಲ್ಲಿ add yourself ಮತ್ತು ಅಲ್ಲಿಂದ ನಿಮ್ಮ ಕಾರ್ಡ್ ಅನ್ನು ಕ್ರಿಯೆಟ್‌ ಮಾಡಲು ಶುರುಮಾಡಿ.

ಹಂತ:4 ಈಗ ನಿಮಗೆ ಬೇಕಾದಲ್ಲಿ ನಿಮ್ಮ ಇಮೇಜ್‌ ಅನ್ನು ಆಡ್‌ ಮಾಡಿ, ನಿಮ್ಮದೇ ಆದ ವಿವರಣೆಯನ್ನು ಸೇರಿಸಿ, ನಿಮ್ಮ ವೆಬ್‌ಸೈಟ್‌ಗಳು ಮತ್ತು ಸಾಮಾಜಿಕ ಪ್ರೊಫೈಲ್‌ಗಳಿಗೆ ಲಿಂಕ್‌ಗಳನ್ನು ಸೇರಿಸಿ ಮತ್ತು ಫೋನ್ ಸಂಖ್ಯೆ ಮತ್ತು ಇಮೇಲ್ ಐಡಿ ಅನ್ನು ಸೇರಿಸಿ. ಇದೀಗ ನಿಮ್ಮ ಕಾರ್ಡ್‌ ಕ್ರಿಯೆಟ್‌ ಆಗಲಿದೆ.

ಪೀಪಲ್ ಕಾರ್ಡ್‌ಗಳ ಪ್ರೊಟೆಕ್ಷನ್‌ ಹೇಗೆ ?

ಪೀಪಲ್ ಕಾರ್ಡ್‌ಗಳ ಪ್ರೊಟೆಕ್ಷನ್‌ ಹೇಗೆ ?

ಗೂಗಲ್‌ನ ಪಿಪಲ್‌ ಕಾರ್ಡ್‌ಗಳಲ್ಲಿ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿಯಿದೆ ಎಂದು ಖಚಿತಪಡಿಸಿಕೊಳ್ಳಲು ಮತ್ತು ಬಳಕೆದಾರರನ್ನು ನಿಂದನೀಯ ಮತ್ತು ಆಕ್ರಮಣಕಾರಿ ವಿಷಯದಿಂದ ರಕ್ಷಿಸಲು ಗೂಗಲ್ ಕಂಟ್ರೋಲ್ಸ್‌ ಮತ್ತು ಪ್ರೊಟೆಕ್ಷನ್‌ ಗುಂಪನ್ನು ಸಹ ಹೊಂದಿದೆ. ಅಲ್ಲದೆ ಪ್ರತಿಯೊಬ್ಬ ಬಳಕೆದಾರರಿಗೆ ಕೇವಲ ಒಂದು ಪೀಪಲ್ ಕಾರ್ಡ್ ಮಾತ್ರ ಕ್ರಿಯೆಟ್‌ ಮಾಡಲು ಅವಕಾಶ ನೀಡಲಾಗಿದೆ. ಈ ಕಾರ್ಡ್ ಅನ್ನು ಬಳಕೆದಾರರ Google ಖಾತೆ ಮತ್ತು ಫೋನ್ ಸಂಖ್ಯೆಯೊಂದಿಗೆ ದೃಡೀಕರಿಸಿದರೆ ಮಾತ್ರ ಆಕ್ಟಿವ್‌ ಆಗಲಿದೆ. ಇದಲ್ಲದೆ ಬಳಕೆದಾರರು ತಮ್ಮ ಕಾರ್ಡ್‌ಗಳಲ್ಲಿನ ಮಾಹಿತಿಯ ಸಂಪೂರ್ಣ ನಿಯಂತ್ರಣವನ್ನು ಹೊಂದಿರುತ್ತಾರೆ.

ಸಾಮಾನ್ಯ ಹೆಸರು ಇದ್ದಾಗ ಏನು ಮಾಡುವುದು?

ಸಾಮಾನ್ಯ ಹೆಸರು ಇದ್ದಾಗ ಏನು ಮಾಡುವುದು?

135ಕೋಟಿ ಗೂ ಅಧಿಕ ಜನರಿರುವ ನಮ್ಮ ದೇಶದಲ್ಲಿ, ಒಂದೇ ಹೆಸರನ್ನು ಹೊಂದಿರುವ ಸಾಕಷ್ಟು ಮಂದಿಯನ್ನು ನಾವು ಕಾಣಬಹುದು. ಆದ್ದರಿಂದ ಒಮದೇ ಹೆಸರಿನಲ್ಲಿ ಎರಡೂ ಗೂಗಲ್‌ ಪೀಪಲ್ ಕಾರ್ಡ್‌ಗಳನ್ನು ಹೊಂದಿದ್ದರೆ, ಅವುಗಳನ್ನು ಹೇಗೆ ಪ್ರತ್ಯೇಕಿಸಬಹುದು ಅನ್ನೊ ಪ್ರಶ್ನೆ ಎಲ್ಲರಿಗೂ ಸಹಜವಾಗಿಯೇ ಕಾಡುತ್ತದೆ. ಇದಕ್ಕಾಗಿ ನೀವು Google ಸರ್ಚ್‌ನಲ್ಲಿ ಸರ್ಚ್‌ ಮಾಡಿದಾಗ ಅವನು / ಅವಳು ಪೀಪಲ್ ಕಾರ್ಡ್ ಹೊಂದಿದ್ದರೆ, ಅದು ಹೆಸರು, ವೃತ್ತಿ ಮತ್ತು ಸ್ಥಳ ಮಾಹಿತಿಯನ್ನು ಪ್ರದರ್ಶಿಸುವ ಮಾಡ್ಯೂಲ್ ಆಗಿ ಬದಲಾಗುತ್ತದೆ. ಇದನ್ನು ಹುಡುಕುವವರು ಈ ಮಾಹಿತಿಯ ಮೂಲಕ ಬೇರ್ಪಡಿಸುವ ಮೂಲಕ ರೈಟ್‌ ಕಾರ್ಡ್ ಅನ್ನು ಕ್ಲಿಕ್ ಮಾಡಬಹುದು. ಇದಲ್ಲದೆ ನಿಮ್ಮ ಪೀಪಲ್ ಕಾರ್ಡ್‌ನಲ್ಲಿ ನೀವು ಇಮೇಜ್‌ ಅನ್ನು ಸೆಟ್‌ಮಾಡಿಲ್ಲದಿದ್ದರೂ ಸಹ, ನಿಮ್ಮ ವೃತ್ತಿ ಮತ್ತು ಸ್ಥಳ ಇತರರಿಗೆ ಅದನ್ನು ಸಂಕುಚಿತಗೊಳಿಸಲು ಸಹಾಯ ಮಾಡಲಿದೆ.

Best Mobiles in India

English summary
For people who want to be found online more easily, on Google Search at least, you don’t really need to be a celebrity. Google has launched People Cards, which are virtual visiting cards, that will help users pop up faster on searches.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X