ಗೂಗಲ್‌ ಫೋನ್‌ ಅಪ್ಲಿಕೇಶನ್‌ನಲ್ಲಿ ಅಪರಿಚಿತ ಕರೆಗಳನ್ನು ಪತ್ತೆ ಹಚ್ಚುವುದು ಇನ್ನಷ್ಟು ಸುಲಭ!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಈಗಾಗಲೇ ಹಲವು ಸೇವೆಗಳನ್ನು ಪರಿಚಯಿಸಿದೆ. ಅಲ್ಲದೆ ಹಲವು ಅಪ್ಲಿಕೇಶನ್‌ಗಳನ್ನು ಬಳಕೆದಾರರ ಅನುಕೂಲಕ್ಕಾಗಿ ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದೀಗ ತನ್ನ ಗೂಗಲ್‌ ಫೋನ್ ಅಪ್ಲಿಕೇಶನ್‌ನಲ್ಲಿ ಟ್ರೂ ಕಾಲರ್‌ ಮಾದರಿಯ ಫೀಚರ್ಸ್‌ ಅನ್ನು ಪರಿಚಯಿಸಿದೆ. ಗೂಗಲ್ ಫೋನ್ ಅಪ್ಲಿಕೇಶನ್ ಅಂತಿಮವಾಗಿ ಮೂಲಭೂತ ಕರೆ ಮಾಡುವವರ ಐಡಿ ಫೀಚರ್ಸ್‌ಅನ್ನು ಪಡೆದುಕೊಂಡಿದೆ, ಇದು ಮುಂಬರುವ ಎಲ್ಲಾ ಕರೆಗಳಿಗೆ ಕರೆ ಮಾಡುವವರ ಹೆಸರು ಮತ್ತು ಸಂಖ್ಯೆಯನ್ನು ಪ್ರದರ್ಶಿಸುತ್ತದೆ.

ಗೂಗಲ್‌

ಹೌದು, ಗೂಗಲ್‌ ಫೋನ್‌ ಅಪ್ಲಿಕೇಶನ್‌ ಸ್ಥಿರ ಆವೃತ್ತಿಯಲ್ಲಿ ಕಾಲರ್‌ ಐಡಿ ಫೀಚರ್ಸ್‌ ಅನ್ನು ಪರಿಚಯಿಸಲಾಗಿದೆ. ಈ ಫೀಚರ್ಸ್‌ ಹೇಗಿರಲಿದೆ ಎನ್ನುವ ಕೆಲವು ಸ್ಕ್ರೀನ್‌ಶಾಟ್‌ಗಳನ್ನು ಪ್ರಕಟಣೆ ಹಂಚಿಕೊಂಡಿದೆ. ಗೂಗಲ್‌ ಫೋನ್ ಅಪ್ಲಿಕೇಶನ್‌ನಲ್ಲಿ, ಸೆಟ್ಟಿಂಗ್‌ಗಳ ಮೆನು ಅಡಿಯಲ್ಲಿ, ನೀವು ಕಾಲರ್ ID ಪ್ರಕಟಣೆ ಮೆನುವನ್ನು ಕಾಣಬಹುದು. ಹಾಗಾದ್ರೆ ಈ ಫೀಚರ್ಸ್‌ ಅನ್ನು ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಪ್ಲಿಕೇಶನ್‌

ಗೂಗಲ್‌ ಫೋನ್‌ ಅಪ್ಲಿಕೇಶನ್‌ ಸೆಟ್ಟಂಗ್ಸ್‌ನಲ್ಲಿ ಕಾಲರ್‌ ಐಡಿ ಫೀಚರ್ಸ್‌ ಅನ್ನು ನೀಡಲಾಗಿದೆ. ಇದನ್ನು ನೀವು ಟ್ಯಾಪ್‌ ಮಾಡಿದಾಗ, ಅದನ್ನು ಆನ್ ಮಾಡುವ ಆಯ್ಕೆಯನ್ನು ನೀವು ಕಾಣಬಹುದು. ಒಮ್ಮೆ ನೀವು ಅದನ್ನು ಆನ್ ಮಾಡಿದ ನಂತರ "ಕರೆ ಮಾಡುವವರ ಹೆಸರು ಮತ್ತು ಸಂಖ್ಯೆಯನ್ನು ಒಳಬರುವ ಕರೆಗಳಿಗಾಗಿ ಜೋರಾಗಿ ಓದಿ ಹೇಳಲಾಗುತ್ತದೆ" ಎನ್ನಲಾಗಿದೆ. ಜೊತೆಗೆ ಈ ಫೀಚರ್ಸ್‌ ಆಯ್ಕೆ ಮಾಡಲು ನಿಮಗೆ ಮೂರು ಆಯ್ಕೆಗಳನ್ನು ನೀಡಲಾಗುವುದು. ನೀವು ಯಾವಾಗಲೂ ಫೀಚರ್ಸ್‌ ಅನ್ನು ಆನ್ ಮಾಡಬಹುದು ಅಥವಾ ಹೆಡ್‌ಸೆಟ್ ಬಳಸುವಾಗ ಮಾತ್ರ. ಇಲ್ಲವೇ ಫೀಚರ್ಸ್‌ ಅನ್ನು ಶಾಶ್ವತವಾಗಿ ಆಫ್ ಮಾಡಲು ಒಂದು ಆಯ್ಕೆ ಸಹ ಇದೆ. ಅನಗತ್ಯ ಮತ್ತು ಸ್ಪ್ಯಾಮ್ ಕರೆಗಳನ್ನು ತೊಡೆದುಹಾಕಲು ಈ ಫೀಚರ್ಸ್‌ ನಿಮಗೆ ಸಹಾಯ ಮಾಡುತ್ತದೆ.

ಗೂಗಲ್‌

ಈ ಕಾಲರ್ ಐಡಿ ಪ್ರಕಟಣೆ ಫೀಚರ್ಸ್‌ನಿಂದಾಗಿ ಫೋನ್ ಅನ್ನು ದೂರದಲ್ಲಿದ್ದರೂ ಸಹ ಯಾರು ಕರೆ ಮಾಡುತ್ತಿದ್ದಾರೆ ಎಂಬುದನ್ನು ತಿಳಿಯಲು ಸಹಾಯಕವಾಗಲಿದೆ. ಏಕೆಂದರೆ ಗೂಗಲ್‌ ಫೋನ್‌ ಅಪ್ಲಿಕೇಶನ್‌ ನಿಮಗೆ ಜೋರಾಗಿ ಕೂಗಿ ಹೇಳಲಿದೆ. ಆದಾಗ್ಯೂ, ನಿಮ್ಮ ಫೋನ್ ಕರೆ ಮಾಡುವ ವ್ಯಕ್ತಿಯ ಹೆಸರನ್ನು ಓದುವುದನ್ನು ನೀವು ಬಯಸದಿದ್ದರೆ, ನೀವು ಈ ಫೀಚರ್ಸ್‌ನ್ನು ನಿಷ್ಕ್ರಿಯಗೊಳಿಸಬಹುದು.

ಗೂಗಲ್‌

ಇನ್ನು ಹೊಸ ಫೀಚರ್ಸ್‌ ಅನ್ನು ಬಳಸಲು ಬಳಕೆದಾರರು ಪ್ಲೇ ಸ್ಟೋರ್‌ನಿಂದ ಗೂಗಲ್‌ ಫೋನ್ ಅಪ್ಲಿಕೇಶನ್‌ನ ಇತ್ತೀಚಿನ ಆವೃತ್ತಿಗೆ ನವೀಕರಿಸಬೇಕಾಗುತ್ತದೆ. ಹೊಸ ನವೀಕರಣವು ಬಳಕೆದಾರರಿಗೆ ಅಜ್ಞಾತ ಕರೆ ಮಾಡುವವರನ್ನು ಸ್ವಯಂಚಾಲಿತವಾಗಿ ಸ್ಕ್ರೀನ್ ಮಾಡಲು ಮತ್ತು ಅವರ ಫೋನ್ ರಿಂಗಾಗುವ ಮೊದಲು ಪತ್ತೆಯಾದ ರೋಬೋಕಾಲ್‌ಗಳನ್ನು ಫಿಲ್ಟರ್ ಮಾಡಲು ಸಹಾಯ ಮಾಡುತ್ತದೆ ಎಂದು ಅಪ್ಲಿಕೇಶನ್ ವಿವರಣೆಯಲ್ಲಿ ತಿಳಿಸಲಾಗಿದೆ. ಆದರೆ ಈ ಫೀಚರ್ಸ್‌ ಭಾರತಕ್ಕೆ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.

Most Read Articles
Best Mobiles in India

Read more about:
English summary
Google Phone app is finally getting the very basic Caller ID feature that willl announce caller’s name and number for all upcoming calls.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X