ಗೂಗಲ್‌ನಿಂದ ಗೂಗಲ್ ಫೋಟೋ ಮತ್ತು ಲೋಗೋ ರಿ ಡಿಸೈನ್‌!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್, ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೆ ಬಂದಿದೆ. ಕಾಲಕಾಲಕ್ಕೆ ತಕ್ಕಂತೆ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸುತ್ತಿರುವ ಗೂಗಲ್‌ ಇದೀಗ ತನ್ನ ಗೂಗಲ್‌ ಇಮೇಜ್‌ ವಿನ್ಯಾಸವನ್ನ ಮರುವಿನ್ಯಾಸಗೊಳಿಸಿದೆ. ಗೂಗಲ್‌ ಇಮೇಜ್‌ ಬಳಕೆದಾರರ ಅವಿಸ್ಮರಣೀಯ ನೆನಪುಗಳ ಪೊಟೋಗಳನ್ನ ಒಂದೆಡೆ ಸಂಗ್ರಹಿಸುವುದರಿಂದ ಇದು ಸಾಕಷ್ಟು ಪ್ರಾಮುಖ್ಯತೆಯನ್ನ ಪಡೆದುಕೊಂಡಿದೆ.

ಗೂಗಲ್‌

ಹೌದು, ಗೂಗಲ್‌ ತನ್ನ ಬಳಕೆದಾರರ ಹಿತದರಷ್ಟಿಯಿಂದ ಮರುವಿನ್ಯಾಸಗೊಳಿಸಲಾದ ಗೂಗಲ್ ಫೋಟೋಗಳನ್ನು ಬಿಡುಗಡೆ ಮಾಡಿದೆ. ಇದು ಬಳಕೆದಾರರ ಮರೆಯಲಾಗದ ನೆನಪುಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ, ಅಲ್ಲದೆ ಸರ್ಚ್‌ ಮತ್ತು ಸೆಂಟರ್‌, ಫೇಸ್‌ ಎಂಬ ಹೊಸ ಮೂರು-ಟ್ಯಾಬ್ ರಚನೆಯೊಂದಿಗೆ ವಿನ್ಯಾಸಗೊಳಿಸಲಾಗಿದೆ. ಅಷ್ಟಕ್ಕೂ ಹೊಸ ಮಾದರಿಯ ಗೂಘಲ್‌ ಇಮೇಜ್‌ ವಿನ್ಯಾಸ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಸದ್ಯ ಗೂಗಲ್‌ ಪರಿಚಯಿಸಿರುವ ಗೂಗಲ್‌ ಇಮೇಜ್‌ನ ಹೊಸ ಲೋಗೋ ಮತ್ತು ವಿನ್ಯಾಸವು ಪ್ರಸ್ತುತ ಐಒಎಸ್‌ನಲ್ಲಿ ಮಾತ್ರ ಲಭ್ಯವಿದೆ. ಆದರೆ ಶೀಘ್ರದಲ್ಲಿಯೇ ಆಂಡ್ರಾಯ್ಡ್‌ನಲ್ಲಿಯೂ ಬಿಡುಗಡೆಯಾಗಲಿದೆ ಎನ್ನಲಾಗ್ತಿದೆ. ಇನ್ನು ಗೂಗಲ್‌ನ ಪ್ರಕಾರ, ಗೂಗಲ್‌ ಇಮೇಜ್‌ನ ಮರುವಿನ್ಯಾಸದ ನಂತರ ಬಳಕೆದಾರರು ದೊಡ್ಡ ಗಾತ್ರದ ಮೆಮೊರೀಸ್ ಅನ್ನು ಗೂಗಲ್‌ ಇಮೇಜ್‌ನಲ್ಲಿ ಪಡೆಯಬಹುದಾಗಿದೆ. ಪೋಟೋಗಳ ಗಾತ್ರಗಳು ಕೂಡ ಹಿರಿದಾಗಲಿದೆ. ಇದಲ್ಲದೆ ತ್ವರಿತ ಪ್ರವೇಶಕ್ಕಾಗಿ ಮುಂಭಾಗದಲ್ಲಿಯೇ ಜನರನ್ನು ಹುಡುಕುವ ಆಯ್ಕೆಯನ್ನು ಸಹ ಇದು ನಿಮಗೆ ನೀಡುತ್ತದೆ.

ಗೂಗಲ್‌

ಇನ್ನು ಗೂಗಲ್‌ ಇಮೇಜ್‌ನ ಲೈಬ್ರರಿಯು ನೀವು ಭೇಟಿ ನೀಡಿದ ಪ್ರಮುಖ ತಾಣಗಳ ಪಟ್ಟಿಯನ್ನು ಹೊಂದಿರಲಿದೆ. ಇದರಲ್ಲಿ ನೀವು ಬೇಟಿ ನಿಡಿದ ಸಂದರ್ಭ, ಆಗ ತೆಗೆದ ಭಾವಚಿತ್ರಗಳನ್ನ ಒಂದೆಡೆ ಸೇರಿಸಿರುತ್ತದೆ. ಅವುಗಳನ್ನು ಆಲ್ಬಮ್‌ಗಳು, ನಿಮ್ಮ ನೆಚ್ಚಿನ ಆಯ್ಕೆಯ ಪೋಟೋಗಳು, ಅನುಪಯುಕ್ತ ಪೋಟೋಗಳು, ಆರ್ಕೈವ್ ಮತ್ತು ಇತರೆ ವರ್ಗಗಳಾಗಿ ವರ್ಗೀಕರಿಸುತ್ತದೆ. ಇದಲ್ಲದೆ ಯುಎಸ್, ಇಯು ಅಥವಾ ಕೆನಡಾದಲ್ಲಿ ವಾಸಿಸುವ ಜನರಿಗೆ ಗೂಗಲ್ ನಕ್ಷೆಗಳಲ್ಲಿ ಗೂಗಲ್‌ನ ಮುದ್ರಣ ಮಳಿಗೆಗಳನ್ನು ಹುಡುಕುವ ಆಯ್ಕೆಯನ್ನು ಸಹ ನೀಡಲಾಗಿದೆ. ಅಲ್ಲಿ ಅವರು ತಮ್ಮದೇ ಆದ ಫೋಟೋಗಳನ್ನು ಒಳಗೊಂಡ ಮುದ್ರಿತ ಉತ್ಪನ್ನಗಳನ್ನು ಸಹ ಖರೀದಿಸಬಹುದಾಗಿದೆ.

ಹುಡುಕಾಟ

ಅಲ್ಲದೆ ಹೊಸ ಹುಡುಕಾಟ ಟ್ಯಾಬ್‌ನ ಭಾಗವಾಗಿ, ಬಳಕೆದಾರರು ಫೋಟೋಗಳು ಮತ್ತು ವೀಡಿಯೊಗಳ ಸೆನ್ಸಾರ್‌ ನಕ್ಷೆಯ ನೋಟವನ್ನು ನೋಡಬಹುದಾಗಿದೆ. ಇದರಿಂದಾಗಿ ಅವನ ಅಥವಾ ಅವಳ ಪ್ರಯಾಣದ ಫೋಟೋಗಳನ್ನು ಅನ್ವೇಷಿಸಲು ಜಗತ್ತಿನಾದ್ಯಂತ ಪಿಂಚ್ ಮತ್ತು ಜೂಮ್ ಮಾಡಬಹುದು. ಅಂದರೆ ನಿವು ಜಗತ್ತಿನ ಯಾವುದೇ ಪ್ರದೇಶಕ್ಕೆ ಬೇಟಿ ನೀಡಿದ್ದರೂ ಅದನ್ನ ಗೂಗಲ್‌ ಇಮೇಜ್‌ನಲ್ಲಿ ಜೂಮ್‌ ಮೂಲಕ ವೀಕ್ಷಿಸಬಹುದಾಗಿದೆ. ಇನ್ನು ಚಲನಚಿತ್ರಗಳು, ಕೊಲಾಜ್‌ಗಳು, ಅನಿಮೇಷನ್‌ಗಳು, ಶೈಲೀಕೃತ ಫೋಟೋಗಳು ಮತ್ತು ಹೆಚ್ಚಿನವುಗಳಂತಹ ಸ್ವಯಂಚಾಲಿತ ಸೃಷ್ಟಿಗಳನ್ನು ಗೂಗಲ್ ‘ನಿಮಗಾಗಿ' ಟ್ಯಾಬ್‌ನಿಂದ ಮೆಮೊರಿಗಳಿಗೆ ಸರಿಸಿದೆ. ಅಲ್ಲದೆ ಹಿಂದಿನ ನೆನಪುಗಳನ್ನು ನಿಮಗೆ ನೆನಪಿಸಲು ಆ ಪರಿಚಿತ ಪಿನ್‌ವೀಲ್ ಆಕಾರವನ್ನು ಉಳಿಸಿಕೊಂಡು ಕಂಪನಿಯು ಗೂಗಲ್ ಫೋಟೋಗಳ ಐಕಾನ್ ಅನ್ನು ಸರಳೀಕರಿಸಿದೆ.

Best Mobiles in India

English summary
The new logo and design are currently available on the iOS but will soon be rolled out for Android.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X