'ಗೂಗಲ್ ಫೋಟೋಸ್'ಗೆ ಸೇರಿಕೊಳ್ಳುತ್ತಿವೆ ಮತ್ತಷ್ಟು ವಿಶೇಷ ವೈಶಿಷ್ಟ್ಯಗಳು!

|

ಈಗಾಗಲೇ ಹಲವು ಉಪಯುಕ್ತ ವೈಶಿಷ್ಟ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗೂಗಲ್‌ನ ಜನಪ್ರಿಯ ಫೋಟೋ ಅಪ್ಲಿಕೇಶನ್ 'ಗೂಗಲ್ ಫೋಟೋಸ್' ಇದೀಗ ಮತ್ತೆ ಅಪ್‌ಡೇಟ್ ಆಗುತ್ತಿದೆ. ಗೂಗಲ್ ಫೋಟೋಸ್‌ನಲ್ಲಿ ಫೋಟೋಗಳನ್ನು ಹಸ್ತಚಾಲಿತವಾಗಿ ಟ್ಯಾಗ್ ಮಾಡುವ ಸಾಮರ್ಥ್ಯ, ಟೈಮ್‌ ಸ್ಟ್ಯಾಂಪ್ ಸಂಪಾದನೆ ಮತ್ತು ಇತ್ತೀಚಿನ ಅಪ್‌ಲೋಡ್‌ಗಳನ್ನು ಹುಡುಕುವುದು ಸೇರಿದಂತೆ ಗೂಗಲ್ ಫೋಟೋಸ್ ಆಪ್‌ನಲ್ಲಿ ಶೀಘ್ರದಲ್ಲೇ ಕೆಲವು ನೂತನ ಹೊಸ ವೈಶಿಷ್ಟ್ಯಗಳು ಸೇರ್ಪಡೆಯಾಗಲಿವೆ ಎಂದು ತಿಳಿದುಬಂದಿದೆ.

'ಗೂಗಲ್ ಫೋಟೋಸ್'ಗೆ ಸೇರಿಕೊಳ್ಳುತ್ತಿವೆ ಮತ್ತಷ್ಟು ವಿಶೇಷ ವೈಶಿಷ್ಟ್ಯಗಳು!

ಗೂಗಲ್ ಫೋಟೋಸ್ ಟಿಮ್ ಪ್ರಾಡೆಕ್ಟ್ ಲೀಡ್ 'ಡೇವಿಡ್ ಲೈಬ್' ಅವರು ಹೊಸ ವೈಶಿಷ್ಟ್ಯಗಳ ಲಭ್ಯತೆ ಬಗ್ಗೆ ತಿಳಿಸಿದ್ದು, ಗೂಗಲ್ ಫೋಟೋಗಳಲ್ಲಿ ಮುಂಬರುವ ವೈಶಿಷ್ಟ್ಯಗಳ ಕುರಿತು ಕೆಲವು ಒಳನೋಟಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಗೂಗಲ್ ಫೋಟೋಸ್ ಸೇರುವ ಹಲವು ನೂತನ ಫೀಚರ್ಸ್ ಬಳಕೆದಾರರ ಗಮನಸೆಳೆದಿವೆ. ಹಾಗಾದರೆ, ಗೂಗಲ್ ಫೋಟೋಸ್ ಅಪ್ಲಿಕೇಶನ್ ಅಪ್‌ಡೇಟ್ ಆದ ನಂತರ ಕಾಣಿಸಿಕೊಳ್ಳುವ ಎಲ್ಲಾ ಹೊಸ ಮತ್ತು ಉಪಯುಕ್ತ ವೈಶಿಷ್ಟ್ಯಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

1. ಮುಖವನ್ನು ಹಸ್ತಚಾಲಿತವಾಗಿ ಟ್ಯಾಗ್ ಮಾಡಿ

1. ಮುಖವನ್ನು ಹಸ್ತಚಾಲಿತವಾಗಿ ಟ್ಯಾಗ್ ಮಾಡಿ

ಗೂಗಲ್ ಫೋಟೋಸ್ ಬಳಕೆದಾರರುತಮ್ಮ ಫೋಟೋಗಳಲ್ಲಿ ಮುಖಗಳನ್ನು ಹಸ್ತಚಾಲಿತವಾಗಿ ಟ್ಯಾಗ್ ಮಾಡಲು ಫೀಚರ್ ತರಲಾಗುತ್ತಿದೆ. ಗೂಗಲ್ ಫೋಟೋಗಳು ಬಳಕೆದಾರರನ್ನು ತಪ್ಪಾಗಿ ಟ್ಯಾಗ್ ಮಾಡಿದ ಫೋಟೋಗಳನ್ನು ತೆಗೆದುಹಾಕಲು ಅನುಮತಿಸುತ್ತದೆ. ಇನ್ನು ಟ್ಯಾಗ್ ಮಾಡಿದ ಮುಖಕ್ಕೆ ಫೋಟೋಗಳನ್ನು ಸೇರಿಸಲು ಬಳಕೆದಾರರನ್ನು ಅನುಮತಿಸುವುದಿಲ್ಲ.

2. ಇತ್ತೀಚಿನ ಅಪ್‌ಲೋಡ್ ಫೋಟೋಗಳಿಗಾಗಿ ಹುಡುಕಿ

2. ಇತ್ತೀಚಿನ ಅಪ್‌ಲೋಡ್ ಫೋಟೋಗಳಿಗಾಗಿ ಹುಡುಕಿ

ಗೂಗಲ್ ಫೋಟೋಸ್ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಇತ್ತೀಚೆಗೆ ಅಪ್‌ಲೋಡ್ ಮಾಡಲಾದ ಫೋಟೋಗಳಿಗಾಗಿ ಬಳಕೆದಾರರು ಶೀಘ್ರದಲ್ಲೇ ಹುಡುಕಲು ಸಾಧ್ಯವಾಗುತ್ತದೆ. ಈ ವೈಶಿಷ್ಟ್ಯವು ಪ್ರಸ್ತುತ ಫೋಟೋಗಳ ವೆಬ್ ಇಂಟರ್ಫೇಸ್‌ಗೆ ಸೀಮಿತವಾಗಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಅಪ್ಲಿಕೇಶನ್‌ಗಳಲ್ಲಿ ಇದನ್ನು ತರಲು ಗೂಗಲ್ ಫೋಟೋಸ್ ತಂಡ ಈಗ ಕೆಲಸ ಮಾಡುತ್ತಿದೆ.

3. ಟೈಮ್‌ ಸ್ಟ್ಯಾಂಪ್‌ಗಳನ್ನು ಸಂಪಾದಿಸುವುದು

3. ಟೈಮ್‌ ಸ್ಟ್ಯಾಂಪ್‌ಗಳನ್ನು ಸಂಪಾದಿಸುವುದು

ಗೂಗಲ್ ಫೋಟೋಸ್‌ಗೆ ಬರುವ ಮತ್ತೊಂದು ವೈಶಿಷ್ಟ್ಯವೆಂದರೆ ಅಪ್ಲಿಕೇಶನ್‌ನ ಆಂಡ್ರಾಯ್ಡ್ ಆವೃತ್ತಿಯಲ್ಲಿ ಟೈಮ್‌ಸ್ಟ್ಯಾಂಪ್ ( ನಿರ್ದಿಷ್ಟ ಘಟನೆಯ ಸಮಯದ ಡಿಜಿಟಲ್ ದಾಖಲೆ)ಗಳನ್ನು ನೇರವಾಗಿ ಸಂಪಾದಿಸುವ ಸಾಮರ್ಥ್ಯ ಸಿಗಲಿದೆ. ಈ ವೈಶಿಷ್ಟ್ಯವು ಈಗಾಗಲೇ ವೆಬ್ ಮತ್ತು ಐಒಎಸ್ ಬಳಕೆದಾರರಿಗೆ ಲಭ್ಯವಿದ್ದು, ಆಂಡ್ರಾಯ್ಡ್ ಬಳಕೆದಾರರಿಗೆ ಶೀಘ್ರವೇ ಲಭ್ಯವಾಗಲಿದೆ.

4.ಆಲ್ಬಮ್ ಫೋಟೋಗಳನ್ನು ಅಳಿಸಲು ಸಹಾಯ

4.ಆಲ್ಬಮ್ ಫೋಟೋಗಳನ್ನು ಅಳಿಸಲು ಸಹಾಯ

ಆಲ್ಬಮ್‌ಗಳನ್ನು ಬ್ರೌಸ್ ಮಾಡುವಾಗ ಬಳಕೆದಾರರು ತಮ್ಮ ಲೈಬ್ರರಿಯಿಂದ ಕೆಲವು ಫೋಟೋಗಳು ಅಥವಾ ವೀಡಿಯೊಗಳನ್ನು ಅಳಿಸಲು ಅವಕಾಶ ನೀಡುವಲ್ಲಿ ಗೂಗಲ್ ಫೋಟೋಸ್ ತಂಡವು ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ಹಂಚಿದ ಆಲ್ಬಮ್‌ನಲ್ಲಿ ಫೋಟೋ ಅಥವಾ ವೀಡಿಯೊವನ್ನು ಇಷ್ಟಪಡುವುದನ್ನು ಟ್ಯಾಗ್ ಮಾಡಲು ಸಹ ಬಳಕೆದಾರರಿಗೆ ಸಾಧ್ಯವಾಗುತ್ತದೆ.

5.ಫೋಟೋಸ್‌ಗೆ ಬರುವ ಇತರ ಗಮನಾರ್ಹ ವೈಶಿಷ್ಟ್ಯಗಳು

5.ಫೋಟೋಸ್‌ಗೆ ಬರುವ ಇತರ ಗಮನಾರ್ಹ ವೈಶಿಷ್ಟ್ಯಗಳು

ಗೂಗಲ್ ಫೋಟೋಸ್‌ನಲ್ಲಿ ನಕಲಿ ಫೋಟೋ ಮತ್ತು ವೀಡಿಯೊಗಳನ್ನು ಸುಲಭವಾಗಿ ತೆಗೆದುಹಾಕುವುದು, ನಕ್ಷೆಯಯನ್ನು ಸೇರಿಸುವುದು, ಸ್ಲೈಡ್ ಶೋ ವಿವರಣೆಯನ್ನು ಪ್ರದರ್ಶಿಸುವುದು ಸೇರಿದಂತೆ ಇನ್ನೂ ಹೆಚ್ಚಿನ ವಿಶೇಷ ವೈಶಿಷ್ಟ್ಯಗಳು ಬರಲಿವೆ ಎಂದು ಹೇಳಲಾಗಿದೆ. ಆದರೆ, ಇವುಗಳು ಇನ್ನೂ ಗೂಗಲ್ ಫೋಟೋಸ್ ತಂಡದ ಆಲೋಚನೆಯಲ್ಲಿವೆ ಎಂದು ಹೇಳಲಾಗಿದೆ.

Best Mobiles in India

English summary
Google Photos users will finally be able to manually tag faces on their photos. The feature is said to be in development. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X