ಭಾರತದಲ್ಲಿ ಗೂಗಲ್ ಪ್ಲೇ ಪಾಸ್ ಬಿಡುಗಡೆ! ತಿಂಗಳಿಗೆ ಕೇವಲ 99 ರೂ!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಭಾರತದಲ್ಲಿ ಗೂಗಲ್‌ ಪ್ಲೇ ಪಾಸ್‌ ಸೇವೆಯನ್ನು ಭಾರತದಲ್ಲಿ ಪರಿಚಯಿಸಿದೆ. US ನಲ್ಲಿ ಪ್ರಾರಂಭವಾದ ಎರಡು ವರ್ಷಗಳ ನಂತರ ಅಂತಿಮವಾಗಿ ಭಾರತದಲ್ಲಿ ಲಾಂಚ್‌ ಮಾಡಲಾಗಿದೆ. ಇನ್ನು ಈ ಸೇವೆ ಚದಾದಾರಿಕೆ ಆಧಾರಿತ ಪಾವತಿ ಮಾಡುವ ಸೇವೆಯಾಗಿದೆ. ಇದರಲ್ಲಿ ನೀವು ಚಂದಾದಾರಿಕೆ ಪ್ಲಾನ್‌ಗಳನ್ನು ಆಯ್ಕೆ ಮಾಡಿಕೊಂಡರೆ ಯಾವುದೇ ಜಾಹೀರಾತುಗಳಿಲ್ಲದೆ ಪ್ಲೇ ಸ್ಟೋರ್‌ನಲ್ಲಿ ಅಪ್ಲಿಕೇಶನ್‌ಗಳನ್ನು ಪ್ರವೇಶಿಸುವುದಕ್ಕೆ ಸಾಧ್ಯವಾಗಲಿದೆ.

ಗೂಗಲ್‌

ಹೌದು, ಗೂಗಲ್‌ ಕಂಪೆನಿ ತನ್ನ ಗೂಗಲ್‌ ಪ್ಲೇ ಪಾಸ್‌ ಸೇವೆಯನ್ನು ಇದೀಗ ಭಾರತದಲ್ಲಿಯೂ ಕೂಡ ಪ್ರಾರಂಭಿಸಿದೆ. ಈ ಮೂಲಕ ಗೂಗಲ್‌ ಪ್ಲೇ ನಲ್ಲಿಯೂ ಚಂದದಾರಿಕೆ ಆಧಾರಿತ ಸೇವೆ ನೀಡಲು ಮುಂದಾಗಿದೆ. ಇನ್ನು ಈ ಸೇವೆಯಲ್ಲಿ ಗೂಗಲ್‌ ಮಾಸಿಕ ಮತ್ತು ವಾರ್ಷಿಕ ಚಂದಾದಾರಿಕೆ ಆಯ್ಕೆಗಳನ್ನು ನೀಡಲಿದೆ. ಇದರಿಂದ ಗ್ರಾಹಕರು ಯಾವುದೇ ರೀತಿಯ ಜಾಹಿರಾತು ಕಿರಿಕಿರಿ ಇಲ್ಲದೆ ಅಪ್ಲಿಕೇಶನ್‌ಗಳನ್ನು ಪ್ರವೇಶಿಸಲು ಸಾದ್ಯವಾಗಲಿದೆ. ಹಾಗಾದ್ರೆ ಗೂಗಲ್‌ ಪ್ಲೇ ಪಾಸ್‌ ಸೇವೆಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್ ಪ್ಲೇ ಪಾಸ್

ಗೂಗಲ್‌ ಪರಿಚಯಿಸಿರುವ ಗೂಗಲ್ ಪ್ಲೇ ಪಾಸ್ ಭಾರತದಲ್ಲಿ ಮೂರು ರೀತಿಯ ಚಂದಾದಾರಿಕೆಯನ್ನು ಹೊಂದಿದೆ. ಇದರಲ್ಲಿ ಮಾಸಿಕ ಯೋಜನೆ 99ರೂ.ಗಳಿಂದ ಪ್ರಾರಂಭವಾಗಲಿದೆ. ಎರಡನೇ ಚಂದಾದಾರಿಕೆ ಯೋಜನೆ ವಾರ್ಷಿಕ ಯೋಜನೆಯಾಗಿದ್ದು, ಇದು 889ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ 109ರೂ.ಒಂದು ತಿಂಗಳ ಪ್ರಿಪೇಯ್ಡ್‌ ಪ್ಲಾನ್‌ ಕೂಡ ಪರಿಚಯಿಸಿದೆ. ಇನ್ನು ಗೂಗಲ್‌ ತನ್ನ ಪ್ಲೇ ಸ್ಟೋರ್‌ಗಾಗಿ ಗೂಗಲ್‌ನ ಚಂದಾದಾರಿಕೆ ಯೋಜನೆಯನ್ನು 2019 ರಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪರಿಚಯಿಸಿತ್ತು. ಯುಎಸ್‌ನಲ್ಲಿ ಪ್ರಾರಂಭವಾದ ಎರಡು ವರ್ಷಗಳ ನಂತರ ಭಾರತದಲ್ಲಿ ಪ್ರಾರಂಭವಾಗುತ್ತಿದೆ. ಮಾಸಿಕ ಅಥವಾ ವಾರ್ಷಿಕ ಶುಲ್ಕಕ್ಕೆ ಬದಲಾಗಿ ಸೇವೆಯು ಹಲವಾರು ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳಿಗೆ ಪ್ರವೇಶವನ್ನು ಒದಗಿಸುತ್ತದೆ.

ಗೂಗಲ್‌

ಇನ್ನು ಗೂಗಲ್‌ ಪ್ಲೇ ಪಾಸ್‌ ಪ್ಲಾನ್‌ ಅಪ್ಲಿಕೇಶನ್‌ ಡೆವಲಪರ್‌ಗಳಿಗೆ ಸಾಕಷ್ಟು ಉಪಯುಕ್ತವಾಗಿದೆ. ಇದರಿಂದ ಜಾಹೀರಾತುಗಳು, ಅಪ್ಲಿಕೇಶನ್‌ನಲ್ಲಿನ ಖರೀದಿಗಳು ಮತ್ತು ಮುಂಗಡ ಪಾವತಿಗಳಿಲ್ಲದೆ ಅನೇಕ ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳಿಗೆ ಪ್ರವೇಶ ಲಭ್ಯವಾಗಲಿದೆ. ಸದ್ಯ ಈ ಸೇವೆಯನ್ನು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಹೊರತರಲಾಗುವುದು ಎಂದು ಗೂಗಲ್ ಪ್ಲೇ ಘೋಷಿಸಿದೆ. ಈ ಸೇವೆಯು ಈಗಾಗಲೇ 90ಕ್ಕೂ ಅಧಿಕ ದೇಶಗಳಲ್ಲಿ ಲಭ್ಯವಿದೆ.

ಗೂಗಲ್‌ ಪ್ಲೇ

ಗೂಗಲ್‌ ಪ್ಲೇ ಪಾಸ್ ಭಾರತವೂ ಸೇರಿದಂತೆ 59 ದೇಶಗಳ ಡೆವಲಪರ್‌ಗಳಿಂದ 41 ವಿಭಾಗಗಳಲ್ಲಿ 1000+ ಟೈಟಲ್ಸ್‌ ನೀಡುತ್ತದೆ ಎಂದು ಗೂಗಲ್‌ ಹೇಳಿಕೊಂಡಿದೆ. ಪ್ಲೇ ಪಾಸ್ ಎಲ್ಲಾ ರೀತಿಯ ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳ ಭಾರತೀಯ ಡೆವಲಪರ್‌ಗಳಿಗೆ ತಮ್ಮ ಜಾಗತಿಕ ಬಳಕೆದಾರರ ನೆಲೆಯನ್ನು ವಿಸ್ತರಿಸಲು ಮತ್ತು ಹೊಸ ಆದಾಯದ ಸ್ಟ್ರೀಮ್‌ಗಳನ್ನು ಅನ್‌ಲಾಕ್ ಮಾಡಲು ಹೊಸ ಮಾರ್ಗವನ್ನು ಅನುಮತಿಸುತ್ತದೆ ಎಂದು ಗೂಗಲ್ ಹೇಳಿಕೊಂಡಿದೆ. ಇದಲ್ಲದೆ ಗೂಗಲ್‌ ಪ್ರತಿ ತಿಂಗಳು ಹೊಸ ಗೇಮ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ಸೇರಿಸಲು ಜಾಗತಿಕ ಮತ್ತು ಲೋಕಲ್‌ ಡೆವಲಪರ್‌ಗಳೊಂದಿಗೆ ಕೆಲಸ ಮಾಡಲಿದೆ.

ಭಾರತದಲ್ಲಿ ಗೂಗಲ್‌ ಪ್ಲೇ ಪಾಸ್‌ ಯೋಜನೆಗಳು

ಭಾರತದಲ್ಲಿ ಗೂಗಲ್‌ ಪ್ಲೇ ಪಾಸ್‌ ಯೋಜನೆಗಳು

ಗೂಗಲ್ ಭಾರತೀಯ ಬಳಕೆದಾರರಿಗಾಗಿ ಮೂರು ವಿಭಿನ್ನ ಯೋಜನೆಗಳನ್ನು ಪ್ರಕಟಿಸಿದೆ. ಇದರಲ್ಲಿ ಮೊದಲ ಒಂದು ತಿಂಗಳ ಪ್ರಯೋಗವು ಎಲ್ಲಾ ಬಳಕೆದಾರರಿಗೆ ಉಚಿತವಾಗಿದೆ. ಆದರೆ, ನಂತರ ಈ ಸೇವೆಯನ್ನು ಮುಂದುವರಿಸಬೇಕಾದರೆ ತಿಂಗಳಿಗೆ 99 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಇಲ್ಲದಿದ್ದರೆ ವಾರ್ಷಿಕ ಗೂಗಲ್‌ ಪ್ಲೇ ಪಾಸ್‌ 889ರೂ. ಪ್ಲಾನ್‌ ಆಯ್ಕೆ ಮಾಡಬೇಖಾಗುತ್ತದೆ. ಹಾಗೆಯೇ ಬಳಕೆದಾರರು 109ರೂ.ಗಳಿಗೆ ಒಂದು ತಿಂಗಳ ಪ್ರಿಪೇಯ್ಡ್ ಚಂದಾದಾರಿಕೆಯನ್ನು ಸಹ ಪಡೆಯಬಹುದು. ಗೂಗಲ್‌ ಫ್ಯಾಮಿಲಿ ಗ್ರೂಪ್‌ನೊಂದಿಗೆ ಫ್ಯಾಮಿಲಿ ಅಡ್ಮೀನ್‌ ತಮ್ಮ ಪ್ಲೇ ಪಾಸ್‌ ಚಂದಾದಾರಿಕೆಯನ್ನು ಇತರ ಐದು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಬಹುದು.

ಐಕಾನ್

ಇನ್ನು ಪ್ಲೇ ಸ್ಟೋರ್ ಅಪ್ಲಿಕೇಶನ್‌ನ ಮೇಲಿನ ಬಲಭಾಗದಲ್ಲಿರುವ ಪ್ರೊಫೈಲ್ ಐಕಾನ್ ಅನ್ನು ಟ್ಯಾಪ್ ಮಾಡುವ ಮೂಲಕ ಬಳಕೆದಾರರು ಪಾಸ್ ಅನ್ನು ಪ್ರವೇಶಿಸಬಹುದು. ನಂತರ ಪ್ಲೇ ಪಾಸ್ ಆಯ್ಕೆಯನ್ನು ಆಯ್ಕೆ ಮಾಡಬಹುದು. ಪ್ಲೇ ಪಾಸ್‌ ಟ್ಯಾಬ್ ಮೂಲಕ ಅಥವಾ ಪ್ಲೇ ಸ್ಟೋರ್‌ನಲ್ಲಿ ಟೈಟಲ್‌ಗಳನ್ನು ಬ್ರೌಸ್ ಮಾಡುವಾಗ ಪ್ಲೇ ಪಾಸ್‌ "ಟಿಕೆಟ್" ಅನ್ನು ಸರ್ಚ್‌ ಮಾಡುವ ಮೂಲಕ ಚಂದಾದಾರರು ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳ ಸ್ಟೋರೇಜ್‌ ಅನ್ನು ಪ್ರವೇಶಿಸಬಹುದು.

Best Mobiles in India

English summary
Google Play Pass has been launched in India at Rs 99 per month.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X