ಗೂಗಲ್‌ ಪ್ಲೇ ನಲ್ಲಿ ಪರಿಷ್ಕರಣೆ; ಉತ್ತಮ ಗುಣಮಟ್ಟದ ಆಪ್‌ಗಳಿಗೆ ಒತ್ತು ನೀಡಿದ ಗೂಗಲ್‌

|

ಗೂಗಲ್‌ ಸಂಸ್ಥೆ ಸರ್ಚ್‌ ಇಂಜಿನ್‌ ಸೇವೆ ಜೊತೆಗೆ ಗ್ಯಾಜೆಟ್‌ ತಯಾರಿಕಾ ವಿಭಾಗದಲ್ಲೂ ಹಲವಾರು ರೀತಿಯ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡುತ್ತಾ ಬರುತ್ತಿದೆ. ಇದರ ನಡುವೆ ಉತ್ತಮ ಗುಣಮಟ್ಟವನ್ನು ಇನ್ನೂ ಹೆಚ್ಚಿಗೆ ಮಾಡಿಕೊಳ್ಳುವ ಉದ್ದೇಶದಿಂದ ಆಂಡ್ರಾಯ್ಡ್ ಡಿವೈಸ್‌ಗಳಿಗಾಗಿ ಗೂಗಲ್ ಪ್ಲೇ ಸ್ಟೋರ್‌ ಕೆಲಸ ಮಾಡುತ್ತಿದೆ. ಇದೀಗ ಈ ಪ್ಲೇ ಸ್ಟೋರ್‌ನಲ್ಲಿ ಕೆಲವು ಹೊಸ ನವೀಕರಣ ಮಾಡಲು ಗೂಗಲ್‌ ಮುಂದಾಗಿದೆ. ಅದರಂತೆ ಉತ್ತಮ ಗುಣಮಟ್ಟದ ಆಪ್‌ಗಳನ್ನು ಶೀಘ್ರದಲ್ಲೇ ಪತ್ತೆ ಮಾಡಿ ನೀವು ಇನ್‌ಸ್ಟಾಲ್‌ ಮಾಡಿಕೊಳ್ಳಬಹುದಾಗಿದೆ.

ಗೂಗಲ್ ಪ್ಲೇ

ಹೌದು, ಗೂಗಲ್ ಪ್ಲೇ ಆಪ್ ಅನ್ನು ನವೀಕರಣ ಮಾಡಲು ಗೂಗಲ್ ಮುಂದಾಗಿದೆ ಎಂದು ತಿಳಿದುಬಂದಿದೆ. ಈ ಮೂಲಕ ಆಂಡ್ರಾಯ್ಡ್‌ ಬಳಕೆದಾರರು ಗೂಗಲ್‌ ಸ್ಟೋರ್‌ನಲ್ಲಿ ಕಡಿಮೆ ಸಮಯದಲ್ಲಿ ಉತ್ತಮ ಗುಣಮಟ್ಟದ ಆಪ್‌ಗಳನ್ನು ಕಂಡುಕೊಳ್ಳಬಹುದು. ಇದಿಷ್ಟೇ ಅಲ್ಲದೆ ಆಪ್‌ ಬಗ್ಗೆ ಶೀರ್ಷಿಕೆಗಳು ಆಕರ್ಷಕವಾಗಿ ಗೋಚರಿಸಲಿವೆ ಎಂದು ತಿಳಿದುಬಂದಿದೆ. ಹಾಗೆಯೇ ಆಪ್‌ ಸರಿ ಇಲ್ಲದಿದ್ದರೆ ಅದರ ಬಗ್ಗೆಯೂ ಗೂಗಲ್‌ ಮಾಹಿತಿ ನೀಡಲಿದೆ.

ಗುಣಮಟ್ಟ

ಗೂಗಲ್ ಪ್ಲೇ ನಲ್ಲಿ ನಾವು ಮಾಡುವ ಪ್ರತಿಯೊಂದು ಕೆಲಸಕ್ಕೂ ಆಪ್‌ ಗುಣಮಟ್ಟ ಪ್ರಮುಖ ಪಾತ್ರ ವಹಿಸುತ್ತದೆ. ಆಂಡ್ರಾಯ್ಡ್ ಬಳಕೆದಾರರು ತಾವು ಇನ್‌ಸ್ಟಾಲ್‌ ಮಾಡಿಕೊಳ್ಳುವ ಆಪ್‌ ಮತ್ತು ಗೇಮ್‌ಗಳಿಂದ ಉತ್ತಮ ಅನುಭವವನ್ನು ನಿರೀಕ್ಷಿಸುತ್ತಾರೆ. ಹೀಗಾಗಿ ನಮ್ಮ ಗುಣಮಟ್ಟದ ಲಿಸ್ಟ್‌ಅನ್ನು ಪೂರೈಸದ ಕೆಲವು ಆಪ್‌ಗಳು ಹಾಗೂ ಗೇಮ್‌ಗಳನ್ನು ಪ್ರಮುಖ ಸರ್ಚ್‌ ವಿಭಾಗದಿಂದ ಹೊರಗಿಡುತ್ತೇವೆ. ಹಾಗೆಯೇ ಇತರರು ಸೂಕ್ತವಾದ ಬಳಕೆದಾರರ ನಿರೀಕ್ಷೆಗಳನ್ನು ಪೂರೈಸಬೇಕು ಎಂದು ಅವರಿಗೆ ಎಚ್ಚರಿಕೆ ಸಹ ನೀಡುತ್ತೇವೆ ಎಂದು ಗೂಗಲ್‌ ಪ್ಲೇ ನ ಗ್ರೂಪ್‌ ಪ್ರೊಡಕ್ಟ್‌ ಮ್ಯಾನೇಜರ್‌ ಲಾರೆನ್ ಮೈಟನ್ ಅವರು ಮಾಹಿತಿ ನೀಡಿದ್ದಾರೆ.

ಹೈಲೈಟ್ ಆಗಲಿವೆ ಉನ್ನತ ಗುಣಮಟ್ಟದ ಆಪ್‌

ಹೈಲೈಟ್ ಆಗಲಿವೆ ಉನ್ನತ ಗುಣಮಟ್ಟದ ಆಪ್‌

ಇನ್ನು ಆಪ್‌ಗಳ ತಾಂತ್ರಿಕ ಸಮಸ್ಯೆಗಳನ್ನು ಮೇಲ್ವಿಚಾರಣೆ ಮಾಡಲು ಗೂಗಲ್‌ ಹೊಸ ಆಂಡ್ರಾಯ್ಡ್‌ ವೈಟಲ್‌ಗಳನ್ನು ಪರಿಚಯಿಸುತ್ತಿದೆ. ಈ ಮೂಲಕ ಇದು ಆಪ್‌ಗಳ ಗುಣಮಟ್ಟ ಕಾಪಾಡಿಕೊಳ್ಳಲು ಒಂದು ಪಟ್ಟಿ ತಯಾರು ಮಾಡುತ್ತದೆ. ಈ ಪಟ್ಟಿಯಲ್ಲಿರುವ ಅಂಶಗಳನ್ನು ಪೂರೈಸಿದ ಆಪ್‌ಗಳು ಮುನ್ನೆಲೆಯಲ್ಲಿ ಕಾಣಿಸಿಕೊಂಡರೆ, ಪಟ್ಟಿಯಲ್ಲಿ ನೀಡಲಾದ ಅಂಶಗಳನ್ನು ಪೂರೈಸದ ಆಪ್‌ಗಳನ್ನು ಪ್ರಮುಖ ಪುಟದಿಂದ ಹೊರಗಿಡಲಾಗುತ್ತದಂತೆ. ಹಾಗೆಯೇ ಈ ಆಪ್‌ಗಳು ಸರಿಯಾಗಿ ಕಾರ್ಯನಿರ್ವಹಿಸದಿರಹುದು ಎಂಬ ಎಚ್ಚರಿಕೆ ಸಂದೇಶವನ್ನೂ ಸಹ ಡಿಸ್‌ಪ್ಲೇ ಮಾಡಬಹುದು ಎಂದು ಗೂಗಲ್ ಹೇಳಿದೆ. ಜೊತೆಗೆ ಈ ಎಚ್ಚರಿಕೆ ಸಂದೇಶಗಳನ್ನು ನವೆಂಬರ್ 30 ರಿಂದ ನೀಡಲು ಗೂಗಲ್‌ ಸನ್ನದ್ಧವಾಗಿದೆ. ಇನ್ನು ಏನೆಲ್ಲಾ ಪ್ರಮುಖ ಬದಲಾವಣೆಗಳಾಗಲಿ ಎಂಬುದನ್ನು ಈ ಕೆಳಕಂಡಂತೆ ವಿವರಿಸಲಾಗಿದೆ.

ತಾಂತ್ರಿಕ ಗುಣಮಟ್ಟವನ್ನು ಸುಧಾರಿಸಲು

ತಾಂತ್ರಿಕ ಗುಣಮಟ್ಟವನ್ನು ಸುಧಾರಿಸಲು

ಗೂಗಲ್‌ ಪ್ಲೇ ನಲ್ಲಿ ತಾಂತ್ರಿಕ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡಲು ಇದೊಂದು ಪ್ರಮುಖ ವೇದಿಕೆಯಾಗಿದೆ. ಈ ಮೂಲಕ ಅಸ್ತಿತ್ವದಲ್ಲಿರುವ ಪ್ರಮುಖ ಮೆಟ್ರಿಕ್‌ಗಳನ್ನು( ಮೆಟ್ರಿಕ್‌ಗಳು ಕಾರ್ಯಕ್ಷಮತೆ ಅಥವಾ ಉತ್ಪಾದನೆಯನ್ನು ಹೋಲಿಕೆ ಮಾಡಲು ಹಾಗೂ ಟ್ರ್ಯಾಕ್ ಮಾಡಲು ಬಳಸುವ ಪರಿಮಾಣಾತ್ಮಕ ಮೌಲ್ಯಮಾಪನದ ಅಳತೆ) ಬದಲಾಯಿಸುತ್ತಿದೆ ಎಂದು ಗೂಗಲ್‌ ಹೇಳಿಕೊಂಡಿದೆ. ಹಾಗೆಯೇ ಕೋರ್ ವೈಟಲ್ಸ್ ಮೆಟ್ರಿಕ್‌ಗಳು ಗೂಗಲ್‌ ಪ್ಲೇನಲ್ಲಿನ ಗೋಚರತೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ ಎಂದು ತಿಳಿದುಬಂದಿದೆ.

ಹೊಸ ಕೋರ್ ವೈಟಲ್‌ಗಳಲ್ಲಿ ಎರಡು ಮ್ಯಾಟ್ರಿಕ್‌!

ಹೊಸ ಕೋರ್ ವೈಟಲ್‌ಗಳಲ್ಲಿ ಎರಡು ಮ್ಯಾಟ್ರಿಕ್‌!

ಕೋರ್ ವೆಬ್ ವೈಟಲ್ಸ್ ನೈಜ ಬಳಕೆಯ ಡೇಟಾವನ್ನು ಆಧರಿಸಿ ನಿರಂತರವಾಗಿ ವರದಿ ನೀಡುತ್ತದೆ. ನಿಮ್ಮ ಪುಟಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಇದು ತೋರಿಸುತ್ತದೆ. ಇನ್ನು ಹೊಸ ಕೋರ್ ವೈಟಲ್ ಈ ನವೀಕರಣದಲ್ಲಿ ಎರಡು ಮ್ಯಾಟ್ರಿಕ್‌ ಆಯ್ಕೆ ಹೊಂದಿರಲಿದ್ದು, ಇದರಲ್ಲಿ ಒಂದು ಆಪ್‌ ಕ್ರ್ಯಾಶ್ ರೇಟ್‌ ಮಾಹಿತಿ ನೀಡಿದರೆ ಇನ್ನೊಂದು ಸ್ಪಂಧಿಸದಿರುವ ಆಪ್‌ ಬಗ್ಗೆ ಮಾಹಿತಿ ನೀಡಲಿದೆ.

ಒಟ್ಟಾರೆ ಕೆಟ್ಟ ಕಾರ್ಯನಿರ್ವಹಣೆಗೆ ಮಿತಿ

ಒಟ್ಟಾರೆ ಕೆಟ್ಟ ಕಾರ್ಯನಿರ್ವಹಣೆಗೆ ಮಿತಿ

ಇನ್ನು ಆಪ್‌ಗಳ ಗುಣಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಕೆಲವು ಮಿತಿಗಳನ್ನು ನೀಡಲು ಹೊಸ ಮೆಟ್ರಿಕ್‌ಗಳನ್ನು ಬಳಕೆ ಮಾಡಲಾಗುತ್ತದೆ. ಬಳಕೆದಾರ ಗ್ರಹಿಸಿದ ಕ್ರ್ಯಾಶ್ ದರಕ್ಕೆ 1.09% ಮತ್ತು ಬಳಕೆದಾರರು ಕಂಡುಕೊಂಡ ಸ್ಪಂಧಿಸದಿರುವ ಆಪ್‌ (app not responsive) ದರಕ್ಕೆ 0.47% ಮಿತಿ ನಿಗದಿ ಮಾಡಲಾಗಿದೆ. ಈ ದರ ಬದಲಾಗದೆ ಇದೇ ರೀತಿ ಇರಲಿದ್ದು, ಈ ಕಾರಣಕ್ಕೆ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಆಪ್‌ಗಳ ಗೋಚರತೆಯನ್ನು ಹೆಚ್ಚಿಸಲು ಡೆವಲಪರ್‌ಗಳು ತಮ್ಮ ಅಪ್ಲಿಕೇಶನ್‌ಗಳನ್ನು ಈ ಮಿತಿಗಳ ಕೆಳಗೆ ಇರಿಸಿಕೊಳ್ಳುವಂತೆ ಗೂಗಲ್ ಸಲಹೆ ನೀಡಿದೆ.

ಪ್ರತಿ ಫೋನ್ ಬಗ್ಗೆಯೂ ಗಮನ

ಪ್ರತಿ ಫೋನ್ ಬಗ್ಗೆಯೂ ಗಮನ

ಬಳಕೆದಾರರೆಲ್ಲರೂ ಒಂದೇ ರೀತಿಯ ಸ್ಮಾರ್ಟ್‌ಫೋನ್ ಬಳಸುವುದಿಲ್ಲ, ಎಲ್ಲರ ಬಳಿಯೂ ಭಿನ್ನ ವಿಭಿನ್ನ ಸ್ಮಾರ್ಟ್‌ಫೋನ್‌ಗಳಿರುತ್ತವೆ. ಅದರಂತೆ ಆಪ್‌ಗಳು ಸಹ ಪ್ರತಿ ಫೋನ್‌ನಲ್ಲೂ ವಿಭಿನ್ನವಾಗಿ ವರ್ತಿಸುತ್ತವೆ ಎಂದು ಗೂಗಲ್ ಕಂಡುಕೊಂಡಿದೆ. ಹೀಗಾಗಿ ಈ ಆಪ್‌ಗಳ ಕಾರ್ಯಾಚರಣೆಯನ್ನು ಗಣನೆಗೆ ತೆಗೆದುಕೊಳ್ಳುವ ಸಲುವಾಗಿ, ಪ್ರತಿ ಫೋನ್ ಮಾದರಿಯನ್ನು ಮೌಲ್ಯಮಾಪನ ಮಾಡುವ ಬಗ್ಗೆ ಮಿತಿ ನೀತಿಯನ್ನು ಪರಿಚಯಿಸುತ್ತಿದೆ ಎಂದು ಗೂಗಲ್‌ ಹೇಳಿಕೊಂಡಿದೆ.

Best Mobiles in India

English summary
Google company is also serving in the gadget manufacturing department along with search engine service. Meanwhile, Google Play Store is now ready to update.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X