ನಿಮ್ಮ ಮೊಬೈಲ್‌ನಲ್ಲಿ ಈ ಆ್ಯಪ್‌ಗಳಿದ್ದರೆ ಕೂಡಲೇ ಡಿಲೀಟ್‌ ಮಾಡಿ! ಕಾರಣ ಇಲ್ಲಿದೆ?

|

ಇಂದಿನ ದಿನಗಳಲ್ಲಿ ಆಪ್‌ ಆಧಾರಿತ ಸೇವೆಗಳ ಪ್ರಮಾಣ ಜಾಸ್ತಿಯಾಗಿದೆ. ಇದೇ ಕಾರಣಕ್ಕೆ ಪ್ರತಿಯೊಂದು ಕೆಲಸ ಕಾರ್ಯಗಳಿಗೆ ಅನುಗುಣವಾಗು ಆ್ಯಪ್‌ಗಳು ಕೂಡ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಆದರೆ ಕೆಲವು ಅಪ್ಲಿಕೇಶನ್‌ಗಳು ಭದ್ರತೆಯ ದೃಷ್ಟಿಯಿಂದ ಗೂಗಲ್‌ ಪ್ಲೇ ಸ್ಟೋರ್‌ನಿಂದ ಆಗಾಗ ಕಿಕ್‌ಔಟ್‌ ಆಗುತ್ತಾ ಬಂದಿವೆ. ಸದ್ಯ ಇದೀಗ ಗೂಗಲ್‌ ತನ್ನ ಪ್ಲೇ ಸ್ಟೋರ್‌ನಿಂದ 20 ಮಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ಗಳನ್ನು ಹೊಂದಿರುವ 13 ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದೆ.

ಗೂಗಲ್‌

ಹೌದು, ಗೂಗಲ್‌ ತನ್ನ ಪ್ಲೇ ಸ್ಟೋರ್‌ನಿಂದ ದುರುದ್ದೇಶಪೂರಿತ ಆಕ್ಟಿವಿಟಿ ಹೊಂದಿರುವ ಆ್ಯಪ್‌ಗಳನ್ನು ತೆಗೆದುಹಾಕಿದೆ. ಈ ಅಪ್ಲಿಕೇಶನ್‌ಗಳು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಟರಿ ದಕ್ಷತೆಯನ್ನು ಕುಗ್ಗಿಸುವ ಮತ್ತು ಮೊಬೈಲ್ ಡೇಟಾವನ್ನು ಕಬಳಿಸುತ್ತಿರುವ ಬಗ್ಗೆ ವರದಿಯಾಗಿದೆ. ಇದೇ ಕಾರಣಕ್ಕೆ ಗೂಗಲ್‌ 13 ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದೆ. ಒಂದು ವೇಳೆ ನಿಮ್ಮ ಮೊಬೈಲ್‌ನಲ್ಲಿ ಕೂಡ ಈ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದರೆ ಕೂಡಲೇ ಡಿಲೀಟ್‌ ಮಾಡುವುದು ಉತ್ತಮ. ಹಾಗಾದ್ರೆ ಗೂಗಲ್‌ ಪ್ಲೇ ಸ್ಟೋರ್‌ ತೆಗೆದುಹಾಕಿರುವ ಪ್ರಮುಖ ಅಪ್ಲಿಕೇಶನ್‌ಗಳು ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹೈ ಸ್ಪೀಡ್ ಕ್ಯಾಮೆರಾ

ಹೈ ಸ್ಪೀಡ್ ಕ್ಯಾಮೆರಾ

ಗೂಗಲ್‌ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿರುವ ಪ್ರಮುಖ ಆ್ಯಪ್‌ಗಳಲ್ಲಿ ಹೈ ಸ್ಪೀಡ್‌ ಕ್ಯಾಮೆರಾ ಆಪ್‌ ಕೂಡ ಒಂದು. ಇದು ಹೆಚ್ಚಿನ ವೇಗದಲ್ಲಿ ಮಲ್ಟಿ ಫೋಟೋಸ್‌ ಸೆರೆಹಿಡಿಯುವುದಕ್ಕೆ ಅವಕಾಶವನ್ನು ನೀಡಲಿದೆ. ಜೊತೆಗೆ ಸ್ಪೋರ್ಟ್ಸ್‌ ಮತ್ತು ಮಕ್ಕಳ ಸ್ಟಿಲ್‌ ಮತ್ತು ಕ್ಲಿಯರ್‌ ಫೊಟೋ ಕ್ಲಿಕ್‌ ಮಾಡಲು ಅನುಮತಿಸಲಿದೆ. ಆದರೆ ಈ ಆ್ಯಪ್‌ನಲ್ಲಿ ಭದ್ರತಾ ದೋಷ ಕಂಡುಬಂದಿರುವುದರಿಂದ ಇದನ್ನು ರಿಮೂವ್‌ ಮಾಡಲಾಗಿದೆ.

ಸ್ಮಾರ್ಟ್ ಟಾಸ್ಕ್

ಸ್ಮಾರ್ಟ್ ಟಾಸ್ಕ್

ಇನ್ನು ಪ್ಲೇ ಸ್ಟೋರ್‌ನಿಂದ ಗೂಗಲ್‌ ಗೇಟ್‌ ಪಾಸ್‌ ನೀಡಿರುವ ಮತ್ತೊಂದು ಆ್ಯಪ್‌ ಸ್ಮಾರ್ಟ್‌ಟಾಸ್ಕ್ ಆಗಿದೆ. ಇದು ಬಳಕೆದಾರರು ತಮ್ಮ ಕೆಲಸವನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ. ಇದಕ್ಕಾಗಿ ಕಸ್ಟಮೈಸ್‌ ಮಾಡಬಹುದಾದ ಡ್ಯಾಶ್‌ಬೋರ್ಡ್ ಅನ್ನು ನೀಡುತ್ತದೆ. ಆದರೆ ಇದರಲ್ಲಿ ಕೆಲವು ಭದ್ರತಾ ದೋಷಗಳನ್ನು ಭದ್ರತಾ ಸಂಶೋದಕರು ಗತುರುತಿಸಿರುವ ಕಾರಣ ಇದನ್ನು ಪ್ಲೇ ಸ್ಟೋರ್‌ನಿಂದ ರಿಮೂವ್‌ ಮಾಡಲಾಗಿದೆ.

ಫ್ಲ್ಯಾಶ್‌ಲೈಟ್‌ +

ಫ್ಲ್ಯಾಶ್‌ಲೈಟ್‌ +

ಇದು ಫ್ಲ್ಯಾಶ್‌ಲೈಟ್ ಅಪ್ಲಿಕೇಶನ್ ಆಗಿದ್ದು, ಕ್ಲೀನ್ ಮತ್ತು ಬಳಸಲು ಸುಲಭವಾದ ಇಂಟರ್ಫೇಸ್‌ನೊಂದಿಗೆ ಬರುತ್ತದೆ. ಇದರಲ್ಲಿ ಕೂಡ ಭದ್ರತಾ ದೋಷವನ್ನು ಪತ್ತೆ ಹಚ್ಚಲಾಗಿದೆ. ಈ ಆ್ಯಪ್‌ ನಿಮ್ಮ ಬ್ಯಾಟರಿ ದಕ್ಷತೆಯನ್ನು ಕುಗ್ಗಿಸಲಿದೆ ಎಂದು ಹೇಳಲಾಗಿದೆ. ಅಲ್ಲದೆ ಬ್ಯಾಕ್‌ಗ್ರೌಂಡ್‌ನಲ್ಲಿ ನಿಮ್ಮ ಮೊಬೈಲ್‌ ಡೇಟಾವನ್ನು ಹೆಚ್ಚು ಬಳಸಲಿದೆ ಎಂದು ವರದಿಯಾಗಿದೆ.

ಮೆಮೊ ಕ್ಯಾಲೆಂಡರ್

ಮೆಮೊ ಕ್ಯಾಲೆಂಡರ್

ಒಂದು ವೇಳೆ ನಿಮ್ಮ ಮೊಬೈಲ್‌ನಲ್ಲಿ ಮೆಮೊ ಕ್ಯಾಲೆಂಡರ್ ಆ್ಯಪ್‌ ಇದ್ದರೆ ಕೂಡಲೇ ಡಿಲೀಟ್‌ ಮಾಡುವುದು ಉತ್ತಮ. ಯಾಕೆಂದರೆ ಇದರಲ್ಲಿ ನೀವು ಸೆಟ್‌ ಮಾಡುವ ಪಾಸ್‌ವರ್ಡ್‌ಗಳು ಭದ್ರತಾ ದೋಷವನ್ನು ಹೊಂದಿರಲಿದೆ ಎನ್ನಲಾಗಿದೆ. ಇದರಲ್ಲಿ ನೀವು ನೋಟ್ಸ್‌ಗಳನ್ನು ತೆಗೆದುಕೊಳ್ಳಬಹುದು. ಆದರೆ ಈ ಆ್ಯಪ್‌ ಹ್ಯಾಕರ್ಸ್‌ಗಳಿಗೆ ಸುಲಭವಾಗಿ ತುತ್ತಾಗಲಿದೆ ಎಂದು ಹೇಳಲಾಗಿದೆ.

ಇನ್‌ಸ್ಟಾಗ್ರಾಮ್ ಪ್ರೊಫೈಲ್ ಡೌನ್‌ಲೋಡರ್

ಇನ್‌ಸ್ಟಾಗ್ರಾಮ್ ಪ್ರೊಫೈಲ್ ಡೌನ್‌ಲೋಡರ್

ಇನ್‌ಸ್ಟಾಗ್ರಾಮ್ ಫೋಟೋಗಳು, ವೀಡಿಯೊಗಳು, ಪೋಸ್ಟ್‌ಗಳು ಮತ್ತು ಕಥೆಗಳನ್ನು ಡೌನ್‌ಲೋಡ್ ಮಾಡಲು ಬಳಸುವ ಈ ಅಪ್ಲಿಕೇಶನ್‌ ಕೂಡ ಭದ್ರತಾ ದೋಷವನ್ನು ಹೊಂದಿದೆ ಎನ್ನಲಾಗಿದೆ. ಆದರಿಂದ ಗೂಗಲ್‌ ಪ್ಲೆ ಸ್ಟೋರ್‌ನಿಂದ ಈ ಅಪ್ಲಿಕೇಶನ್‌ ಅನ್ನು ತೆಗೆದುಹಾಕಲಾಗಿದೆ. ಒಂದು ವೇಳೆ ಈ ಅಪ್ಲಿಕೇಶನ್‌ ನಿಮ್ಮ ಮೊಬೈಲ್‌ನಲ್ಲಿದ್ದರೆ ಕೂಡಲೆ ಡಿಲೀಟ್‌ ಮಾಡುವುದು ಸೂಕ್ತವಾಗಿದೆ.

ಇಂಗ್ಲೀಷ್-ಕೊರಿಯನ್ ಡಿಕ್ಷನರಿ

ಇಂಗ್ಲೀಷ್-ಕೊರಿಯನ್ ಡಿಕ್ಷನರಿ

ಹೆಸರೇ ಸೂಚಿಸುವಂತೆ ಇದು ಪಾಕೆಟ್ ಡಿಕ್ಷನರಿ ಆ್ಯಪ್‌ ಆಗಿದೆ. ಇದನ್ನು ಆನ್‌ಲೈನ್‌ ಮತ್ತು ಆಫ್‌ಲೈನ್‌ನಲ್ಲಿ ಬಲಸಬಹುದಾಗಿತ್ತು. ಆದರೆ ಈ ಅಪ್ಲಿಕೇಶನ್‌ ಕೂಡ ಭದ್ರತೆಯ ದೃಷ್ಟಿಯಿಂದ ಮೊಬೈಲ್‌ನಲ್ಲಿ ಬಳಕೆಗೆ ಯೋಗ್ಯವಲ್ಲ ಎಂದು ಹೇಳಲಾಗಿದೆ.

ಜಾಯ್‌ಕೋಡ್‌

ಇದಲ್ಲದೆ ಕ್ವಿಕ್‌ ನೋಟ್ಸ್‌, ಜಾಯ್‌ಕೋಡ್‌, ಎಜ್‌ಡಿಕಾ, ಎಜ್‌ನೋಟ್ಸ್‌, ಇಮೆಜ್‌ ವಾಲ್ಟ್‌ ಹೈಡ್‌ ಇಮೇಜಸ್‌ ನಂತಹ ಅಪ್ಲಿಕೇಶನ್‌ಗಳು ಕೂಡ ಗೂಗಲ್‌ ಪ್ಲೇ ಸ್ಟೋರ್‌ನಿಂದ ಕಿಕ್‌ಔಟ್‌ ಆಗಿವೆ.

Best Mobiles in India

English summary
Google recently removed these 13 'dangerous' apps from Play Store

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X