ಗೂಗಲ್ ನಲ್ಲಿ ಗೇಮ್ ಆಫ್ ದಿ ಇಯರ್ ರಸಪ್ರಶ್ನೆ – ನೀವೂ ಭಾಗವಹಿಸಿ ಮಜಾ ಅನುಭವಿಸಿ

|

2018 ರಲ್ಲಿ ಏನೇನು ನಡೆಯಿತು? ಯಾವುದು ಟ್ರೆಂಡ್ ಆಯ್ತು? ಯಾವುದು ಪ್ರಸಿದ್ಧಿಯಾಯ್ತು? ಒಟ್ಟಾರೆ 2018 ರ ಬಗ್ಗೆ ನಿಮಗೆಷ್ಟು ಗೊತ್ತು? ಇದನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ಒಮ್ಮೆ ಗೂಗಲ್ ಗೆ ತೆರಳಿ. ಗೂಗಲ್ ನಲ್ಲಿ ಆಟವಾಗಿ ಮಜಾ ಪಡೆಯಿರಿ. ಹೇಗೆ ಎಂದು ಕೇಳುತ್ತಿದ್ದೀರಾ? ಗೂಗಲ್ ನಲ್ಲಿ “ಗೇಮ್ ಆಫ್ ದಿ ಇಯರ್” ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನೀವು ಇದರಲ್ಲಿ ಭಾಗವಹಿಸಬಹುದು.

ಗೂಗಲ್ ನಲ್ಲಿ ರಸಪ್ರಶ್ನೆ:

ಗೂಗಲ್ ನಲ್ಲಿ ರಸಪ್ರಶ್ನೆ:

ಹೌದು, 2018 ರ ಪ್ರಸಿದ್ಧ ಹುಡುಕಾಟದ ಟ್ರೆಂಡ್ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಗೂಗಲ್ ಆಯೋಜಿಸಿದೆ. ಹಂತಗಳನ್ನು ಉತೀರ್ಣಗೊಳಿಸಿದಂತೆ ಪ್ರಶ್ನೆಗಳ ಕಠಿಣತೆಯೂ ಹೆಚ್ಚುತ್ತಾ ಸಾಗುತ್ತದೆ. ಆಟದ ಆರಂಭದಲ್ಲಿ ಬಳಕೆದಾರರು ತಮ್ಮ ಹೆಸರನ್ನು ಎಂಟರ್ ಮಾಡಬೇಕು ಮತ್ತು ವರ್ಚುವಲ್ ಹೋಸ್ಟ್ ನ ಧ್ವನಿಯನ್ನು ಕೂಡ ಕಸ್ಟಮೈಜ್ ಮಾಡಬಹುದು.

ಕಸ್ಟಮೈಜ್ ಆಯ್ಕೆಗಳು:

ಕಸ್ಟಮೈಜ್ ಆಯ್ಕೆಗಳು:

ನೀವು ಆಟದ ವೇಗವನ್ನು ಕೂಡ ಹೊಂದಿಸಬಹುದು(ನಿಧಾನವಾಗಿ ಮತ್ತು ವೇಗವಾಗಿ) ಮತ್ತು ಪಿಚ್( ಕಡಿಮೆ/ಹೆಚ್ಚು) ಜೊತೆಗೆ DeepMind's WaveNet ನಿಂದ ರಚಿಸಲ್ಪಟ್ಟ ನ್ಯಾಚುರಲ್ ಸೌಂಡಿಂಗ್ ನ್ನು ಕೂಡ ಕಸ್ಟಮೈಜ್ ಮಾಡಲು ಅವಕಾಶವಿದೆ. ಈ ಅಲ್ಗೋರಿತ್ತಮ್ ಗಳನ್ನು ಬ್ರಿಟೀಷ್ ಮತ್ತು ಆಸ್ಟ್ರೇಲಿಯನ್ ಉಚ್ಛಾರಣೆಗಾಗಿ ಗೂಗಲ್ ಅಸಿಸ್ಟೆಂಟ್ ನಲ್ಲಿ ಬಳಕೆ ಮಾಡಲಾಗುತ್ತಿತ್ತು. ಇದೀಗ ಗೂಗಲ್ ಕ್ಲೌಡ್ ನಲ್ಲಿ ಥರ್ಡ್-ಪಾರ್ಟಿ ಡೆವಲಪರ್ ಗಳಿಗೂ ಕೂಡ ಲಭ್ಯವಿದೆ.

10 ಸೆಕೆಂಡ್ ನಲ್ಲಿ ಉತ್ತರಿಸಿ:

10 ಸೆಕೆಂಡ್ ನಲ್ಲಿ ಉತ್ತರಿಸಿ:

ಅಷ್ಟೇ ಅಲ್ಲ ಮೇಲಿನ ಬಲ ಮೂಲೆಯಲ್ಲಿ ಧ್ವನಿಯನ್ನು ಸಂಪೂರ್ಣವಾಗಿ ಮ್ಯೂಟ್ ಮಾಡುವುದಕ್ಕೂ ಕೂಡ ಅವಕಾಶವಿದೆ ಜೊತೆಗೆ ಎಲ್ಲಾ ಸೂಚನೆಗಳನ್ನು ಕೂಡ ಸ್ಕ್ರೀನ್ ನಲ್ಲಿ ಗಮನಿಸಬಹುದು. ಪ್ರತಿ ಪ್ರಶ್ನೆಯನ್ನು ಉತ್ತರಿಸುವುದಕ್ಕೂ 10 ಸೆಕೆಂಡ್ ಗಳ ಕಾಲಾವಕಾಶವಿರುತ್ತದೆ. ಮೂರು ತಪ್ಪು ಉತ್ತರಗಳನ್ನು ನೀಡಿದರೆ ಆಟ ಅಂತ್ಯಗೊಳ್ಳುತ್ತದೆ. ಪ್ರತಿ ಸುತ್ತಿನ ಅಂತ್ಯದಲ್ಲಿ ಗೂಗಲ್ ನಗೆಚಟಾಕಿಯನ್ನು ಹಾರಿಸುತ್ತದೆ.

ಒಟ್ಟು 20 ಸುತ್ತುಗಳು:

ಒಟ್ಟು 20 ಸುತ್ತುಗಳು:

ನೀವೆಷ್ಟು ಬೇಗ ಉತ್ತರಿಸುತ್ತೀರಿ ಎಂಬುದರ ಆಧಾರದಲ್ಲ ನಿಮಗೆ ಪಾಯಿಂಟ್ ಗಳು ಲಭ್ಯವಾಗುತ್ತದೆ. ಹಂತಹಂತವಾಗಿ ಪ್ರಶ್ನೆಗಳು ಕಠಿಣವಾಗುತ್ತದೆ ಮತ್ತು ಹೆಚ್ಚು ಸಾಧ್ಯತೆ ಇರುವ ಉತ್ತರಗಳಿರುತ್ತದೆ ಅಂದರೆ ಗೊಂದಲ ಹುಟ್ಟಿಸುವ ಉತ್ತರಗಳಿರುತ್ತದೆ. ಒಟ್ಟು 20 ಸುತ್ತುಗಳಿರುತ್ತದೆ. ಅದರ ಮಧ್ಯದಲ್ಲಿ ಕೆಲವು ಬೋನಸ್ ರೌಂಡ್ ಗಳೂ ಕೂಡ ಇರುತ್ತದೆ. ಹೆಚ್ಚೆಚ್ಚು ಪಾಯಿಂಟ್ ಗಳನ್ನು ಗಳಿಸಲು ಕೆಲವು ಗೇಮ್ ಗಳೂ ಕೂಡ ಇರುತ್ತದೆ.

ನಿಮ್ಮ ಪ್ರದರ್ಶನವನ್ನು ಟ್ವೀಟರ್&ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ:

ನಿಮ್ಮ ಪ್ರದರ್ಶನವನ್ನು ಟ್ವೀಟರ್&ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಿ:

ಬಳಕೆದಾರರು ಟ್ವೀಟರ್ ಮತ್ತು ಫೇಸ್ ಬುಕ್ ನಲ್ಲಿ ಎಷ್ಟು ಚೆನ್ನಾಗಿ ಗೇಮ್ ನಲ್ಲಿ ಭಾಗವಹಿಸಿದ್ದಾರೆ ಎಂಬುದನ್ನು ಹಂಚಿಕೊಳ್ಳುವುದಕ್ಕೆ ಅವಕಾಶವಿರುತ್ತದೆ. ಈ ವರ್ಷದ ಆಟವು ಸ್ವಲ್ಪ ವಿಚಿತ್ರವಾಗಿದೆ ಮತ್ತು ವಿಭಿನ್ನವಾಗಿದೆ.ಅಷ್ಟೇ ಅಲ್ಲ ನಾಜೂಕಾಗಿದೆ ಮತ್ತು ಅನಿಮೇಟೆಡ್ ಆಗಿದೆ. ಹಾಗಾಗಿ ಗೂಗ್ಲಿ ಅನುಭವವನ್ನು ನಿಮಗೆ ಈ ಗೇಮ್ ನೀಡುತ್ತದೆ.

Best Mobiles in India

English summary
Google releases fun ‘Game of the Year’ that quizzes you on 2018’s top trends

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X