Subscribe to Gizbot

ಸಾಮಾನ್ಯ ಸ್ಪೀಕರ್ ಅನ್ನು ಸ್ಮಾರ್ಟ್ ಮಾಡಲಿದೆ ಗೂಗಲ್ ಹೋಮ್..!

Posted By: Lekhaka

ಗೂಗಲ್ ಹೋಮ್ ಸ್ಮಾರ್ಟ್ ಸ್ಪೀಕರ್ ಗಳು ಉತ್ತಮ ಆಯ್ಕೆಗಳನ್ನು ಹೊಂದಿದ್ದು, ನಿಮ್ಮ ಮನೆಯಲ್ಲಿ ಉತ್ತಮ ದನಿಯನ್ನು ಕೇಳಿಸಲು ಸಹಾಯವನ್ನು ಮಾಡಲಿದೆ. ಗೂಗಲ್ ತನ್ನ ಹೋಮ್ ಸ್ಪೀಕರ್ ನೊಂದಿಗೆ ಬಳಕೆ ಮಾಡಿಕೊಳ್ಳುವ ಹೋಮ್ ಆಪ್ ಅನ್ನು ಆಪ್ ಡೇಟ್ ಮಾಡಿದ್ದು, ಈ ಹೋಮ್ ಸ್ಮಾರ್ಟ್ ಸ್ಪೀಕರ್ ಅನ್ನು ಬ್ಲೂಟೂತ್ ಸಹಾಯದಿಂದ ಸಾಮಾನ್ಯ ಸ್ಪೀಕರ್ ನೊಂದಿಗೂ ಕನೆಕ್ಟ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ.

ಸಾಮಾನ್ಯ ಸ್ಪೀಕರ್ ಅನ್ನು ಸ್ಮಾರ್ಟ್ ಮಾಡಲಿದೆ ಗೂಗಲ್ ಹೋಮ್..!

ಇದರಿಂದಾಗಿ ನಿಮ್ಮ ಮನೆಯಲ್ಲಿ ಇರುವ ಸಾಮಾನ್ಯ ಸ್ಪೀಕರ್ ಅನ್ನು ಗೂಗಲ್ ವಾಯ್ಸ್ ಅಸಿಸ್ಟೆಂಟ್ ಹೊಂದಿರುವ ಸ್ಪೀಕರ್ ನೊಂದಿಗೆ ಕೆನೆಕ್ಟ್ ಮಾಡಿಕೊಳ್ಳಬಹುದಾಗಿದೆ. ಇದಲ್ಲದೇ ನಿಮ್ಮ ಮನೆಯಲ್ಲಿರುವ ಬ್ಲೂಟೂತ್ ಸಂಪರ್ಕ ಸಾಧಿಸುವ ಆಡಿಯೋ ಸಾಧನಗಳೊಂದಿಗೆ ಸುಲಭವಾಗಿ ಕನೆಕ್ಟ್ ಆಗಲಿದೆ.

ಆದರೆ ನೀವು ಗೂಗಲ್ ಅಸಿಸ್ಟೆಂಟ್ ಅನ್ನು ಬಳಕೆ ಮಾಡಿಕೊಳ್ಳಬೇಕಾದರೆ ನಿವು ಗೂಗಲ್ ಹೋಮ್ ಬಳಿಗೆ ಹೋಗಬೇಕಾಗಿದೆ. ಈ ಹೊಸ ಆಪ್ ಡೇಟ್ ಗೂಗಲ್ ಮಿನಿಯನ್ನು ಖರೀದಿಸುವವರಿಗೆ ಉತ್ತಮ ಆಯ್ಕೆಯಾಗಲಿದೆ. ಸಣ್ಣ ಸೈಜ್ ನಲ್ಲಿರುವ ಸ್ಪೀಕರ್ ನಲ್ಲಿ ಏನು ಕೇಳುವುದಿಲ್ಲ ಎನ್ನುವವರು ದೊಡ್ಡ ಸ್ಪೀಕರ್ ನಲ್ಲಿ ಸೌಂಡ್ ಕೆಳಲು ಇದು ಸಹಾಯವನ್ನು ಮಾಡಲಿದೆ.

ಮಾರುಕಟ್ಟೆಗೆ ಗೂಗಲ್ ಸ್ಮಾರ್ಟ್ ಸ್ಪೀಕರ್ ಗಳು: ಫ್ಲಿಪ್ ಕಾರ್ಟ್ ನಲ್ಲಿ ಮಾರಾಟ...!

ಇದು ಹೆಚ್ಚಿನ ದನಿಯನ್ನು ಕೆಳಲು ಸಹಾಯ ಮಾಡುವುದಲ್ಲದೇ, ಮನೆಯಲ್ಲಿ ಪಾರ್ಟಿ ಇದ್ದಾಗ ದೊಡ್ಡದಾಗಿ ಸೌಂಡ್ ಮಾಡಲು ನಿಮ್ಮ ಸ್ಮಾರ್ಟ್ ಸ್ಪೀಕರ್ ಅನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಗೂಗಲ್ ನೀಡಲಿದೆ. ಇದರಿಂದಾಗಿ ನಿಮ್ಮ ಸ್ಮಾರ್ಟ್ ಸ್ಪೀಕರ್ ನಿಂದ ನಿಮ್ಮ ಮನೆಯ ಪಾರ್ಟಿ ಸಹ ಸ್ಮಾರ್ಟ್ ಆಗಲಿದೆ.

Xiaomi Mi TV 4A ಹೇಗಿದೆ?..ಖರೀದಿಸಲು ಬೆಸ್ಟ್ ಟಿವಿ ಇದೇನಾ?
ಗೂಗಲ್ ಹೊಮ್ ಮಿನಿ ಚಿಕ್ಕದಾದ ಸ್ಮಾರ್ಟ್ ಸ್ಪೀಕರ್ ಆಗಿದೆ. ಶೀಘ್ರವೇ ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಇದು ವಾಯ್ಸ್ ಕಾಮೆಂಡಿಗ್ ಅನ್ನು ಸ್ವೀಕರಿಸಲಿದ್ದು, ಬಳಕೆದಾರರಿಗೆ ಹೊಸ ಮಾದರಿಯ ಅನುಭವನ್ನು ನೀಡಲಿದ್ದು, ನಿಮ್ಮ ಪರ್ಸನಲ್ ಅಸಿಸ್ಟೆಂಟ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ.
English summary
Google has rolled out a new update to its Home app that would allow users to connect Assistant-enabled speakers to connect with any Bluetooth speakers. All you need to do is pair a Bluetooth speaker to the Google Home through the app and music and podcasts will automatically play on the connected speaker.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot