ದಶಕದ ಸಂಭ್ರಮವನ್ನು ಭರ್ಜರಿಯಾಗಿ ಆಚರಿಸಿಕೊಂಡ ಆಂಡ್ರಾಯ್ಡ್‌..!

|

ವಿಶ್ವದ ಬಹಳಷ್ಟು ಸ್ಮಾರ್ಟ್‌ಫೋನ್‌ಗಳಲ್ಲಿ ಒಎಸ್‌ ಆಗಿರುವ ಆಂಡ್ರಾಯ್ಡ್‌ಗೆ ಇಂದಿಗೆ 10 ವರ್ಷಗಳು ತುಂಬಿದ್ದು, ದಶಕದ ಸಂಭ್ರಮವನ್ನು ಭರ್ಜರಿಯಾಗಿಯೇ ಆಚರಿಸಿಕೊಂಡಿದೆ. ಆಪಲ್‌ iOSಗೆ ಸ್ಪರ್ಧೆ ನೀಡಿ ಎಲ್ಲಾ ಸ್ಮಾರ್ಟ್‌ಫೋನ್‌ಗಳನ್ನು ಬಳಕೆದಾರ ಸ್ನೇಹಿಯಾಗಿ ಮಾಡಿದ ಹೆಗ್ಗಳಿಕೆ ಆಂಡ್ರಾಯ್ಡ್‌ನದ್ದು.

ದಶಕದ ಸಂಭ್ರಮವನ್ನು ಭರ್ಜರಿಯಾಗಿ ಆಚರಿಸಿಕೊಂಡ ಆಂಡ್ರಾಯ್ಡ್‌..!

ಆಂಡ್ರಾಯ್ಡ್‌ ಬೆಂಬಲದೊಂದಿಗೆ ಅನೇಕ ಸ್ಮಾರ್ಟ್‌ಫೋನ್‌ ಕಂಪನಿಗಳು ತಮ್ಮದೇ ಆದ ಸ್ವತಂತ್ರ ಒಎಸ್‌ ರೂಪಿಸಿಕೊಂಡು ಬಳಕೆದಾರರಿಗೆ ತಲುಪುತ್ತಿವೆ. ಸದ್ಯ ಬಿಲಿಯನ್‌ಗೂ ಹೆಚ್ಚು ಸಕ್ರಿಯ ಡಿವೈಸ್‌ಗಳಲ್ಲಿ ಆಂಡ್ರಾಯ್ಡ್‌ ಒಎಸ್‌ ಬೆಂಬಲಿತವಾಗಿದೆ. ಆಗಿದ್ದರೆ, ಗೂಗಲ್‌ ಆಂಡ್ರಾಯ್ಡ್‌ನ ದಶಕದ ಸಂಭ್ರಮದ ಸುತ್ತ ಒಂದು ಸುತ್ತು ಹಾಕಿಕೊಂಡು ಬರೋಣ ಬನ್ನಿ.

ಶುಭಾಶಯ ಕೋರಿದ ಗೂಗಲ್‌ ಸಿಇಒ

ಆಂಡ್ರಾಯ್ಡ್‌ನ 10ನೇ ವರ್ಷದ ಸಂಭ್ರಮಕ್ಕೆ ಗೂಗಲ್‌ ಸಿಇಒ ಸುಂದರ್‌ ಪಿಚೈ ಟ್ವಿಟ್ಟರ್‌ನಲ್ಲಿ ಶುಭ ಕೋರಿದ್ದು, ಎಲ್ಲಾ ಬಳಕೆದಾರರಿಗೆ, ಡೆವಲಪರ್‌ಗಳಿಗೆ ಮತ್ತು ಪಾಲುದಾರರಿಗೆ ಧನ್ಯವಾದಗಳನ್ನು ಹೇಳಿದ್ದಾರೆ.

ಆಂಡ್ರಾಯ್ಡ್‌ನಿಂದ ಸಂಭ್ರಮ

ಟ್ವಿಟರ್‌ನಲ್ಲಿ ಆಂಡ್ರಾಯ್ಡ್‌ ತನ್ನ ದಶಕದ ಸಂಭ್ರಮವನ್ನು ಹಂಚಿಕೊಂಡಿದ್ದು, ತಾನು ನಡೆದ ಬಂದ ಬಗೆಯನ್ನು ವಿವರಿಸಿಕೊಂಡಿದ್ದು, ವಯಸ್ಸಿನ ಪಕ್ವತೆಯೊಂದಿಗೆ ಆಂಡ್ರಾಯ್ಡ್‌ ಕೂಡ ಪಕ್ವವಾಗುತ್ತಿದೆ ಎಂದು ಬರದುಕೊಂಡಿದೆ.

ಕಾರ್ಲ್‌ ಪೈನಿಂದ ಅಭಿನಂದನೆ

ಒನ್‌ಪ್ಲಸ್‌ ಸಹ ಸಂಸ್ಥಾಪಕ ಕಾರ್ಲ್‌ ಪೈ ಕೂಡ ಟ್ವಿಟ್ಟರ್‌ನಲ್ಲಿ ಆಂಡ್ರಾಯ್ಡ್‌ನ ದಶಕದ ಸಂಭ್ರಮಕ್ಕೆ ಶುಭಾಶಯ ಕೋರಿದ್ದಾರೆ. ಹ್ಯಾಪಿ ಬರ್ತ್‌ಡೇ ಆಂಡ್ರಾಯ್ಡ್‌ ಎಂದು ಬರೆದುಕೊಂಡಿದ್ದಾರೆ.

ಗೊಂದಲದ ಬರ್ತ್‌ಡೇ

ಗೊಂದಲದ ಬರ್ತ್‌ಡೇ

ಗೂಗಲ್‌ನ ಎಲ್ಲಾ ಅಂಶಗಳ ಬರ್ತ್‌ಡೇಯಂತೆ ಆಂಡ್ರಾಯ್ಡ್‌ ವಾರ್ಷಿಕೋತ್ಸವವೂ ಕೂಡ ಗೊಂದಲಮಯವಾಗಿದೆ. ಆಂಡ್ರಾಯ್ಡ್‌ ಸೆಪ್ಟೆಂಬರ್‌ 23, 2008ರಂದು ನೈಜವಾಗಿ ಲಾಂಚ್‌ ಆಗಿದ್ದು, ಆದರೆ, ಗೂಗಲ್‌ ಮಾತ್ರ ಒಂದು ತಿಂಗಳ ನಂತರ ದಶಕದ ಸಂಭ್ರಮಾಚರನೆಯನ್ನು ಆಚರಿಸಿಕೊಳ್ಳುತ್ತಿದೆ. ಇತ್ತೀಚೆಗೆ ತಾನೇ ಗೂಗಲ್ 20 ವರ್ಷಗಳನ್ನು ಪೂರೈಸಿದಾಗ ಇದೇ ಗೊಂದಲ ಎಲ್ಲರಲ್ಲೂ ಕಾಡಿತ್ತು.

ಗೂಗಲ್‌ನಿಂದ ಸೋಮವಾರ ಪೋಸ್ಟ್‌

ಗೂಗಲ್‌ನಿಂದ ಸೋಮವಾರ ಪೋಸ್ಟ್‌

ಗೂಗಲ್‌ ಅಕ್ಟೋಬರ್‌ 22,2018ರಂದು ಅಧಿಕೃತವಾಗಿ ಪೋಸ್ಟ್‌ ಹಾಕುವ ಮೂಲಕ ಆಂಡ್ರಾಯ್ಡ್‌ಗೆ 10 ವರ್ಷ ತುಂಬಿದೆ ಎಂಬುದನ್ನು ಎಲ್ಲರಿಗೂ ನೆನಪಿಸಿದೆ. ಆದರೆ, ಆಂಡ್ರಾಯ್ಡ್‌ ಬಂದಿದ್ದು, ಸೆಪ್ಟಂಬರ್‌ನಲ್ಲಿ ಗೂಗಲ್‌ ಯಾಕಿಷ್ಟು ತಡ ಮಾಡಿ ಶುಭಾಶಯ ತಿಳಿಸಿತೋ ಗೊತ್ತಿಲ್ಲ.

ಕಳೆದ ವರ್ಷವೇ 10 ವರ್ಷ ತುಂಬಿತ್ತು

ಕಳೆದ ವರ್ಷವೇ 10 ವರ್ಷ ತುಂಬಿತ್ತು

ಆಂಡ್ರಾಯ್ಡ್‌ನ ನಿಜವಾದ ಜನ್ಮದಿನ ನವೆಂಬರ್‌ 5, 2007 ಎಂದು ಹೇಳಲಾಗುತ್ತದೆ. ಏಕೆಂದರೆ, ಆಂಡ್ರಾಯ್ಡ್‌ ಬೇಟಾ ಆವೃತ್ತಿಯನ್ನು ಗೂಗಲ್‌ ಅಂದು ಬಿಡುಗಡೆಗೊಳಿಸಿತ್ತು. ನಂತರ ನವೆಂಬರ್‌ 12ರಂದು ಸಾಫ್ಟ್‌ವೇರ್‌ ಡೆವಲಪ್‌ಮೆಂಟ್‌ ಕಿಟ್‌ನ್ನು (SDK) ಬಿಡುಗಡೆ ಮಾಡಲಾಯಿತು. ಇದೆಲ್ಲಾ ಗಮನಿಸಿದರೆ ಆಂಡ್ರಾಯ್ಡ್‌ಗೆ ಕಳೆದ ವರ್ಷವೇ 10 ವರ್ಷ ಆಗಿರುವುದು ಗೊತ್ತಾಗುತ್ತದೆ.

ಯಾಕೆ ಅಕ್ಟೋಬರ್ 22..?

ಯಾಕೆ ಅಕ್ಟೋಬರ್ 22..?

ಅಕ್ಟೋಬರ್‌ 22ನ್ನು ಆಂಡ್ರಾಯ್ಡ್‌ ತನ್ನ ಬರ್ತ್‌ಡೇ ಆಗಿ ಆಯ್ದುಕೊಂಡಿರುವುದಕ್ಕೂ ಕಾರಣವಿದೆ. ಅಕ್ಟೋಬರ್ 22, 2008ರಲ್ಲಿ ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಮ್‌ ಬೆಂಬಲಿತ T-Mobile G1 ಫೋನ್‌ ಮಾರುಕಟ್ಟೆಯಲ್ಲಿ ದೊರೆತಿತ್ತು. ಮತ್ತು ಗೂಗಲ್‌ ಪ್ಲೇ ಸ್ಟೋರ್‌ನ ಮೊದಲ ಆವೃತ್ತಿ ಆಂಡ್ರಾಯ್ಡ್‌ ಮಾರ್ಕೇಟ್‌ ಸೆಪ್ಟೆಂಬರ್‌ 23, 2008ರಂದು ಬಿಡುಗಡೆಯಾಗಿದ್ದವು. ಆದರೆ, ಸಂಪೂರ್ಣ ಸುಸಜ್ಜಿತ ಗೂಗಲ್‌ ಪ್ಲೇ ಸ್ಟೋರ್‌ ಬಂದಿದ್ದು, ಮಾರ್ಚ್‌ 2012ರಲ್ಲಿ ಎಂಬುದನ್ನು ನೆನಪಲ್ಲಿಟ್ಟುಕೊಳ್ಳೊಣ.

Best Mobiles in India

English summary
Google’s Android is now officially ten years old. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X