ಬಳಕೆದಾರರಿಗೆ ಯೂಟ್ಯೂಬ್‌ ಬಗ್ಗೆ ತಿಳಿಸಲು ಗೂಗಲ್‌ನಿಂದ ಹೊಸ ವೆಬ್‌ಸೈಟ್ ಪ್ರಾರಂಭ!

|

ನಿಮಗೆ ಯಾವುದೇ ಮಾಹಿತಿ ಬೇಕಿದ್ದರೂ ಮೊದಲು ನೆನಪಾಗೋದೇ ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌. ಸದ್ಯ ಗೂಗಲ್‌ ಇಂದು ಎಲ್ಲರ ನೆಚ್ಚಿನ ಸರ್ಚ್‌ ಇಂಜಿನ್‌ ಆಗಿ ಗುರುತಿಸಿಕೊಂಡಿದೆ. ಇನ್ನು ಗೂಗಲ್‌ ಈಗಾಗಲೇ ತನ್ನ ಬಳಕೆದಾರರಿಗೆ ಹಲವಾರು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಇದಲ್ಲದೆ ಕಾಲಕಾಲಕ್ಕೆ ತಕ್ಕಂತೆ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸುತ್ತಾ ಬoದಿರುವ ಗೂಗಲ್‌ ಇದೀಗ ಮತ್ತೊಂದು ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ.

ಗೂಗಲ್‌

ಹೌದು, ಜನಪ್ರಿಯ ಸರ್ಚ್‌ ಇಂಜಿನ್‌ ಗೂಗಲ್‌ ತನ್ನ ಹೊಸ ವೆಬ್‌ಸೈಟ್ ಅನ್ನು ಪ್ರಾರಂಭಿಸಿದೆ. ಈ ವೆಬ್‌ಸೈಟ್‌ ನಲ್ಲಿ ಯೂಟ್ಯೂಬ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಜನರಿಗೆ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಸದ್ಯ ಗೂಗಲ್‌ ‘ಯೂಟ್ಯೂಬ್ ಹೇಗೆ ಕಾರ್ಯನಿರ್ವಹಿಸುತ್ತದೆ' ಎಂಬ ವೆಬ್‌ಸೈಟ್ ಅನ್ನು ಪರಿಚಯಿಸಿದ್ದು, ಇದು ಗೂಗಲ್‌ನ ಕಾರ್ಯದಕ್ಷತೆಯ ಪಾರದರ್ಶಕತೆ, ಮತ್ತು ಕಂಪನಿಯ ವೀಡಿಯೊ-ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನ ವಿವಿಧ ಅಂಶಗಳ ಬಗ್ಗೆ ಜನರ ಪ್ರಶ್ನೆಗಳಿಗೆ ಉತ್ತರಿಸುವ ಗುರಿಯನ್ನು ಹೊಂದಿದೆ ಎಂದು ಗೂಗಲ್‌ ಹೇಳಿಕೊಂಡಿದೆ. ಅಷ್ಟಕ್ಕೂ ಈ ವೆಬ್‌ಸೈಟ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಗೂಗಲ್‌ ಪರಿಚಯಿಸಿರುವ How youtube works ವೆಬ್‌ಸೈಟ್‌ ಮಕ್ಕಳ ಸುರಕ್ಷತೆ, ಹಾನಿಕಾರಕ ವಿಷಯ, ತಪ್ಪು ಮಾಹಿತಿ ಮತ್ತು ಹಕ್ಕುಸ್ವಾಮ್ಯದಂತಹ ವಿಷಯಗಳನ್ನು ಒಳಗೊಂಡ ವೀಡಿಯೊಗಳನ್ನು ಯೂಟ್ಯೂಬ್ ಹೇಗೆ ನಿಭಾಯಿಸುತ್ತದೆ ಮತ್ತು COVID-19 ಬಿಕ್ಕಟ್ಟಿಗೆ ಅದು ಹೇಗೆ ಪ್ರತಿಕ್ರಿಯಿಸಿದೆ. ಅಲ್ಲದೆ ನಾವು ಚುನಾವಣೆಯನ್ನು ಹೇಗೆ ಬೆಂಬಲಿಸುತ್ತೇವೆ ಎಂಬ ಬಳಕೆದಾರರ ಪ್ರಶ್ನೆಗಳಿಗೆ ಈ ವೆಬ್‌ಸೈಟ್ ಉತ್ತರಿಸುತ್ತದೆ ಎಂದು ಗೂಗಲ್ ಹೇಳಿದೆ.

ಯೂಟ್ಯೂಬ್

ಇದರ ಜೊತೆಗೆ, ಹೊಸದಾಗಿ ಪ್ರಾರಂಭಿಸಲಾದ ಈ ವೆಬ್‌ಸೈಟ್ ಬಳಕೆದಾರರಿಗೆ ಯೂಟ್ಯೂಬ್ ಸರ್ಚ್‌, ಶಿಫಾರಸುಗಳು, ಪ್ರೈವಸಿ ಕಂಟ್ರೋಲ್‌, ಮತ್ತು ಜಾಹೀರಾತು ಸೆಟ್ಟಿಂಗ್‌ಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನ ನೀಡುತ್ತದೆ. ಅಲ್ಲದೆ ಬಳಕೆದಾರರು YouTubeನ ಹೊಸ ಮಾರ್ಗಸೂಚಿಗಳು ಮತ್ತು ಹಣಗಳಿಸುವ ನೀತಿಗಳನ್ನು ಸಹ ಇದರಲ್ಲಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದಾಗಿ ಬಳಕೆದಾರರು ಯಾವ ವಿಷಯವನ್ನು ತಿಳಿಯಬಹುದಾಗಿದೆ.

ಪ್ಲಾಟ್‌ಫಾರ್ಮ್

ಇನ್ನು ದೈನಂದಿನ ಆಧಾರದ ಮೇಲೆ ಪ್ಲಾಟ್‌ಫಾರ್ಮ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸುವುದರ ಜೊತೆಗೆ ಯೂಟ್ಯೂಬ್ ಹೇಗೆ ಕಾರ್ಯನಿರ್ವಹಿಸುತ್ತದೆ. ಹೊಸ ಮಾದರಿಯ ಫೀಚರ್ಸ್‌ವಿಡಿಯೋ ಸೃಷ್ಟಿಕರ್ತರು ಮತ್ತು ಕಲಾವಿದರನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಬಳಕೆದಾರರಿಗೆ ಸಹಾಯ ಮಾಡಲು ಕಂಪನಿಯು ಗೂಗಲ್‌ ಸಹಾಯ ಮಾಡಲಿದೆ. ಡೇಟಾ, ದಾಖಲೆಗಳು ಮತ್ತು ಪ್ರಸ್ತುತ ಪ್ರವೃತ್ತಿಗಳನ್ನು ಸಹ ಯೂಟ್ಯೂಬ್‌ನಲ್ಲಿ ಒದಗಿಸುತ್ತದೆ.

Best Mobiles in India

English summary
How YouTube Works will be launching in the US first following which it will be made available in other countries over time.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X