ವ್ಯವಹಾರಿಕ ಕರೆಗಳನ್ನ ಪರಿಶೀಲಿಸಲು ಬರಲಿದೆ ಗೂಗಲ್‌ನಿಂದ ಹೊಸ ಫೀಚರ್ಸ್‌!

|

ಜನಪ್ರಿಯ ಸರ್ಚ್‌ ಇಂಜಿನ್‌ ದೈತ್ಯ ಎನಿಸಿಕೊಂಡಿರುವ ಗೂಗಲ್‌ ತನ್ನ ಬಳಕೆದಾರರಿಗೆ ಮತ್ತೊಂದು ಹೊಸ ಮಾದರಿಯ ಫೀಚರ್ಸ್‌ ಅನ್ನು ಪರಿಚಯಿಸಲು ಮುಂದಾಗಿದೆ. ಗೂಗಲ್‌ ಅಂದುಕೊಂಡತೆ ಈ ಫೀಚರ್ಸ್‌ ಅನ್ನು ಪರಿಚಯಿಸಿದರೆ ಬಳಕೆದಾರರಿಗೆ ಭಾರಿ ಅನುಕೂಲವಾಗುವುದರಲ್ಲಿ ಅನುಮಾನವೇ ಇಲ್ಲ. ಸದ್ಯ ಈ ಫೀಚರ್ಸ್‌ ಬಳಕೆದಾರರಿಗೆ ಬರುವ ಕರೆಗಳಿಗಳು ಹಾಗೂ ತೊಂದರೆಗೊಳಗಾದ ಕರೆಗಳಿಗೆ ಸಂಬಂದಿಸದೆ ಎಂದು ಹೇಳಲಾಗ್ತಿದೆ.

ಗೂಗಲ್‌

ಹೌದು, ಗೂಗಲ್‌ ತೊಂದರೆಗೊಳಗಾದ ಮಾರ್ಕೆಟಿಂಗ್ ಕರೆ ಮಾಡುವವರನ್ನು ಪತ್ತೆ ಹಚ್ಚುವ ಕಾರ್ಯ ಮಾಡುವ ಫೀಚರ್ಸ್‌ ಒಂದನ್ನ ಅಭಿವೃದ್ದಿ ಪಡಿಸಲು ಮುಂದಾಗಿದೆ. ಸದ್ಯ ಗೂಗಲ್‌ ಈ ಹೊಸ ಫೀಚರ್ಸ್‌ ಅನ್ನು ಅಭಿವೃದ್ಧಿಪಡಿಸಿದರೆ ಅದು ನಿಮಗೆ ವ್ಯಾಪಾರ ಕರೆ ಕುರಿತು ಹೆಚ್ಚಿನ ಮಾಹಿತಿ ನೀಡಲಿದೆ ಎನ್ನಲಾಗ್ತಿದೆ. ಅಲ್ಲದೆ ನಿಮ್ಮ ಕರೆಗೆ ಸಂಬಂದಿಸಿದ ಪರಿಶೀಲಿಸಿದ ಮಾಹಿತಿಯನ್ನು ನೀಡುತ್ತದೆ. ಅಲ್ಲದೆ ಈ ಫೀಚರ್ಸ್‌ ಅನ್ನು ಗೂಗಲ್‌ ನ ಫೋನ್ ಅಪ್ಲಿಕೇಶನ್‌ಗೆ ಸಂಯೋಜಿಸಲಾಗುವುದು ಎನ್ನಲಾಗ್ತಿದೆ. ಅಷ್ಟಕ್ಕೂ ಈ ಫೀಚರ್ಸ್‌ ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್

ಗೂಗಲ್ ಸದ್ಯ "ಪರಿಶೀಲಿಸಿದ ಕರೆಗಳು" ಎಂದು ಕರೆಯಲ್ಪಡುವ ಹೊಸ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸುತ್ತದೆ. ಇದು ಬಳಕೆದಾರರ ವ್ಯವಹಾರಗಳಿಗೆ ಸಂಬಂದಿಸಿದಂತೆ ತಮ್ಮ ಗುರುತುಗಳನ್ನು ಪರಿಶೀಲಿಸಲು, ಸ್ವೀಕರಿಸುವವರಿಗೆ ಅವರ ಹೆಸರುಗಳನ್ನು ತೋರಿಸಲು ಮತ್ತು ಕರೆ ಮಾಡಲು ಕಾರಣ ಏನು ಅನ್ನೊದನ್ನ ತಿಳಿಸಲು ಅನುಮತಿಸುತ್ತದೆ. ಈ ಪರಿಶೀಲಿಸಿದ ಕರೆಗಳು ವ್ಯವಹಾರದ ಲಾಂಚನವನ್ನು ಸಹ ಪ್ರದರ್ಶಿಸುತ್ತವೆ. ಗೂಗಲ್ ತನ್ನ ವ್ಯಾಪಾರ ಪಾಲುದಾರರೊಂದಿಗೆ ಬಳಕೆದಾರರ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ ಎಂದು ಹೇಳಿಕೊಂಡಿದೆ.

ಗೂಗಲ್‌

ಸದ್ಯ ಗೂಗಲ್‌ ನ ಈ ಫೀಚರ್ಸ್‌ನಿಂದಾಗಿ ವ್ಯವಹಾರಿಕವಾಗಿ ಸಂವಹನ ನಡೆಸುವವರಿಗೆ ತುಂಬಾ ಅನುಕೂಲವಾಗಲಿದೆ. ಯಾರು ಕರೆ ಮಾಡಿದ್ದಾರೆ. ಯಾವ ಕಾರಣಕ್ಕಾಗಿ ಕರೆ ಮಾಡಿದ್ದಾರೆ ಅನ್ನೊದು ತಿಳಿಯಲಿದೆ. ಇದಲ್ಲದೆ ಗೂಗಲ್‌ ಪರಿಶೀಲಿಸಿದ ಕರೆಗಳಿಗೆ ವ್ಯವಹಾರಗಳು ಗೂಗಲ್‌ನ ಸುರಕ್ಷಿತ ಸರ್ವರ್‌ಗೆ ಕರೆ ಮಾಹಿತಿಯನ್ನು ಕಳುಹಿಸುವ ಅಗತ್ಯವಿದೆ ಎಂದು ಹೇಳಲಾಗ್ತಿದೆ. ಸರ್ವರ್ ನಂತರ ಡೇಟಾವನ್ನು ಬಳಕೆದಾರರ ಫೋನ್‌ಗೆ ತೋರಿಸುತ್ತದೆ. ಈ ಪ್ರಕ್ರಿಯೆಯಲ್ಲಿ, ಕರೆ ಮಾಡಲು ಅನುಮತಿಸುವ ಮೊದಲು ಫೋನ್ ಅಪ್ಲಿಕೇಶನ್ ಕರೆ ಮಾಡುವವರ ಡೇಟಾವನ್ನು ಪರಿಶೀಲಿಸುತ್ತದೆ. ಕರೆ ಪೂರ್ಣಗೊಂಡ ಕೆಲವೇ ನಿಮಿಷಗಳಲ್ಲಿ ಗೂಗಲ್‌ನ ಸರ್ವರ್‌ಗಳು ಡೇಟಾವನ್ನು ಅಳಿಸುತ್ತದೆ.

ಡಿವೈಸ್‌

ಯಾವುದೇ ವ್ಯವಹಾರಿಕ ಬಳಕೆದಾರರು ನಿಮಗೆ ಕರೆ ಮಾಡಿದಾಗ, ನಿಮ್ಮ ಡಿವೈಸ್‌ ಒಳಬರುವ ಕರೆ ಮಾಹಿತಿಯನ್ನು ವ್ಯವಹಾರದಿಂದ ಗೂಗಲ್‌ ಸ್ವೀಕರಿಸಿದ ಮಾಹಿತಿಯೊಂದಿಗೆ ಹೋಲಿಕೆ ಮಾಡುತ್ತದೆ. ಹೊಂದಾಣಿಕೆ ಇದ್ದರೆ ಮಾತ್ರ ಫೋನ್ ಅಪ್ಲಿಕೇಶನ್ ಕರೆಯನ್ನು ಪರಿಶೀಲಿಸಿದ ಕರೆಯಂತೆ ಪ್ರದರ್ಶಿಸುತ್ತದೆ "ಎಂದು ಗೂಗಲ್ ಹೇಳಿಕೊಂಡಿದೆ. ಇನ್ನು ಪೂರ್ವನಿಯೋಜಿತವಾಗಿ ಫೋನ್ ಅಪ್ಲಿಕೇಶನ್‌ನಲ್ಲಿ ಗೂಗಲ್‌ನ ಪರಿಶೀಲಿಸಿದ ಕರೆಗಳನ್ನು ಸಕ್ರಿಯಗೊಳಿಸಲಾಗುತ್ತದೆ. ಆದಾಗ್ಯೂ, ಬಳಕೆದಾರರು ಹೊರಗುಳಿಯುವ ಆಯ್ಕೆಯನ್ನು ಹೊಂದಿರುತ್ತಾರೆ. ಇದರಿಂದಾಗಿದೆ ಮೊದಲೇ ಹೇಳಿದಂತೆ, ಕಾನೂನುಬದ್ಧ ವ್ಯಾಪಾರ ಕರೆಗಳಿಗೆ ಮಾತ್ರ ಪ್ರತಿಕ್ರಿಯಿಸಲು ಗೂಗಲ್‌ನ ಪರಿಶೀಲಿಸಿದ ಕರೆಗಳು ಬಳಕೆದಾರರಿಗೆ ಸಹಾಯ ಮಾಡುತ್ತದೆ.

Best Mobiles in India

English summary
Google’s Verified Calls will be integrated within its official Phone app. Here is how it works.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X