ಗೂಗಲ್‌ನಿಂದ ಕೋವಿಡ್‌-19ಗೆ ಸಂಬಂಧಿಸಿದ ಫಿಶಿಂಗ್‌ ಇ-ಮೇಲ್‌ಗಳಿಗೆ ಬ್ರೇಕ್!

|

ಕೊರೊನಾ ವೈರಸ್ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದು, ಭಾರತ ಸೇರಿದಂತೆ ಹಲವು ದೇಶಗಳು ಕೊರೊನಾ ವೈರಸ್‌ ನಿಯಂತ್ರಿಸಲು ನಡೆಸುತ್ತಿವೆ. ಕೋವಿಡ್‌-19 ಹಾವಳಿಯಿಂದ ಜನರು ಸಹ ಭೀತಿಯಲ್ಲಿದ್ದಾರೆ. ಆದರೆ ಸೈಬರ್ ವಂಚಕರು ಕೊರೊನಾ ವೈರಸ್‌ ಅನ್ನೇ ಬಂಡವಾಳ ಮಾಡಿಕೊಂಡು ಜನರಿಗೆ ಆನ್‌ಲೈನ್‌ ಫಿಶಿಂಗ್ ಮತ್ತು ಮಾಲ್ವೇರ್ಗಳ ಮೂಲಕ ವಂಚಿಸುವ ಯತ್ನಗಳನ್ನು ನಡೆಸುತ್ತಿದ್ದಾರೆ. ಆದ್ರೆ ಟೆಕ್ ದೊಡ್ಡಣ್ಣ ಗೂಗಲ್ ವಂಚನೆಗಳಿಗೆ ಬ್ರೇಕ್ ಹಾಕುವ ಕಾರ್ಯಮಾಡುತ್ತಿದೆ.

ಹೌದು

ಹೌದು, ಸೈಬರ್ ವಂಚಕರು ಜನರಿಗೆ ವಂಚಿಸುವ ಉದ್ದೇಶದಿಂದ ನಕಲಿ ಕೊರೊನಾ ವೈರಸ್ ಮ್ಯಾಪ್‌ ಹಾಗೂ ನಕಲಿ ಕೊರೊನಾ ವೈರಸ್‌ ಟ್ರ್ಯಾಕಿಂಗ್ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದು, ಗೂಗಲ್ ಈ ತರಹದ ಫಿಶಿಂಗ್ ದಾಳಿಗಳನ್ನು ತಡೆಯುವ ಕಾರ್ಯ ಮಾಡುತ್ತಿದೆ. ಗೂಗಲ್ ಸಂಸ್ಥೆಯು ತನ್ನ ಜಿ-ಮೇಲ್ ಸೇವೆಯಲ್ಲಿ ಪ್ರತಿದಿನ ಸುಮಾರು 18 ಮಿಲಿಯನ್‌ನಷ್ಟು ಕೊರೊನಾ ವೈರಸ್ ಸಂಬಂಧಿತ ಫಿಶಿಂಗ್‌ ಇಮೇಲ್‌ಗಳನ್ನು ಗೂಗಲ್ ನಿರ್ಬಂಧಿಸುತ್ತಿದೆ ಎಂದು ಕಂಪನಿ ಹೇಳಿದೆ.

ಇ-ಮೇಲ್‌

ಫಿಶಿಂಗ್ ಇ-ಮೇಲ್‌ಗಳ ಜೊತೆಗೆ ವೈರಸ್ ಹರಡುವಿಕೆಗೆ ಸಂಬಂಧಿಸಿದ ಲಕ್ಷಾಂತರ ಸ್ಪ್ಯಾಮ್ ಸಂದೇಶಗಳನ್ನು(ಎಸ್‌ಎಮ್‌ಎಸ್‌) ನಿರ್ಬಂಧಿಸುತ್ತಿದೆ. ಪ್ರತಿದಿನ ಸುಮಾರು 240 ದಶಲಕ್ಷಕ್ಕೂ ಹೆಚ್ಚಿನ COVID-19ಗೆ ಸಂಬಂಧಿತ ಸ್ಪ್ಯಾಮ್ ಮೆಸೆಜ್‌ಗಳನ್ನು ನಿರ್ಬಂಧಿಸುವ ಕೆಲಸ ಮಾಡುತ್ತಿದೆ. ಸಂಸ್ಥೆಯ ML ಮಾಡೆಲ್‌ಗಳು ಶೇ.99.9% ನಕಲಿ ಇ-ಮೇಲ್, ಫಿಶಿಂಗ್ ಇಮೇಲ್, ಮಾಲ್‌ವೇರ್‌ ಹಾಗೂ ಸ್ಪ್ಯಾಮ್ ಮೆಸೆಜ್‌ಗಳನ್ನು ಜನರನ್ನು ತಲುಪದಂತೆ ತಡೆಯುತ್ತವೆ ಎಂದು ಸಂಸ್ಥೆ ಹೇಳಿದೆ.

ತಡೆದ

ಗೂಗಲ್ ತಡೆದ ಇ-ಮೇಲ್‌ಗಳ ಪಟ್ಟಿಯಲ್ಲಿ ಕೊರೊನಾ ವೈರಸ್‌ ಬಗೆಗಿನ ಭಯ ಹಾಗೂ ತುರ್ತುಸ್ಥಿತಿಯ ಸಂದರ್ಭವನ್ನು ದುರುದ್ದೇಶಕ್ಕಾಗಿ ಬಳಸಿಕೊಳ್ಳುವಂತಹ ಫಿಶಿಂಗ್ ಇ-ಮೇಲ್ ಇರುವುದಾಗಿ ಗೂಗಲ್ ತಿಳಿಸಿದೆ. ಹಾಗೆಯೇ ಸರ್ಕಾರಿ ಸಂಸ್ಥೆಗಳಂತೆ ನಕಲಿ ಹಾದಿಯ ಮೂಲಕ ದೇಣಿಗೆ ಕೋರಿರುವ ವಂಚನೆಯ ಇ-ಮೇಲ್‌ಗಳು, ಸರ್ಕಾರ ಪರಿಕಾರ ಪ್ಯಾಕೇಜ್‌ಗಳಂತೆ ನಕಲಿ ದಾರಿಗಳ ಮತ್ತು ಎಸ್‌ಎಮ್‌ಎಸ್‌ಗಳ ಮೂಲಕ ಜನರಿಗೆ ಮೋಸ್ ಮಾಡುವ ಇ ಮೇಲ್‌ಗಳು ಸೇರಿವೆ.

ಫಿಶಿಂಗ್

ಫಿಶಿಂಗ್ ಇ-ಮೇಲ್ ಮತ್ತು ಮಾಲ್‌ವೇರ್ ನಿಯಂತ್ರಣ ಮಾಡಲು ಗೂಗಲ್ ಜಿ-ಸೂಟ್‌ನಲ್ಲಿ ಸುಧಾರಿತ ಸೆಟ್ಟಿಂಗ್‌ಗಳನ್ನು ಪೂರ್ವನಿಯೋಜಿತವಾಗಿ ವ್ಯವಸ್ಥೆ ಮಾಡಿರುವುದಾಗಿ ಹೇಳಿದೆ. ಹಾಗೂ ಎಲ್ಲಾ ಜಿ ಸೂಟ್ ಬಳಕೆದಾರರು ಈ ಸ್ವಯಂಚಾಲಿತವಾಗಿ ಈ ಪೂರ್ವಭಾವಿ ರಕ್ಷಣೆ ವ್ಯವಸ್ಥೆ ದೊರೆಯುತ್ತದೆ ಎಂದು ಸಂಸ್ಥೆ ಹೇಳಿದೆ.

Best Mobiles in India

English summary
Gmail blocks about 18 million coronavirus-related phishing emails every day.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X