ಗೂಗಲ್‌ ಸರ್ಚ್‌ನಲ್ಲಿಯೂ ಈಗ ಡಾರ್ಕ್‌ ಮೋಡ್‌ ಸೌಲಭ್ಯ!

|

ಸದ್ಯ ಸ್ಮಾರ್ಟ್‌ಫೋನ್ ಹಾಗೂ ಆಪ್ಸ್‌ಗಳಲ್ಲಿ ಡಾರ್ಕ್‌ ಮೋಡ್ ಸೌಲಭ್ಯ ಹೆಚ್ಚು ಟ್ರೆಂಡಿಂಗ್‌ನಲ್ಲಿದ್ದು, ಬಹುತೇಕ ಜನಪ್ರಿಯ ಆಪ್ಸ್‌ಗಳು ಈ ಸೌಲಭ್ಯವನ್ನು ಅಳವಡಿಸಿಕೊಂಡಿವೆ. ಆ ಸಾಲಿಗೆ ಈಗ ಸಾಫ್ಟ್‌ವೇರ್ ದೈತ್ಯ ಗೂಗಲ್ ಸಹ ಸೇರಿಕೊಂಡಿದ್ದು, ತನ್ನ ಗೂಗಲ್ ಸರ್ಚ್ ಅಪ್ಲಿಕೇಶನ್‌ನಲ್ಲಿ ಹೊಸದಾಗಿ ಡಾರ್ಕ್ ಮೋಡ್ ಫೀಚರ್ಸ್‌ ಪರಿಚಯಿಸಲಿದೆ. ಹೀಗಾಗಿ ಬಳಕೆದಾರರು ಗೂಗಲ್ ಸರ್ಚ್‌ನಲ್ಲಿ ಇನ್ಮುಂದೆ ಡಾರ್ಕ್ ಮೋಡ್ ಸಕ್ರಿಯ ಮಾಡಿಕೊಳ್ಳಬಹುದಾಗಿದೆ.

ಗೂಗಲ್ ಸಂಸ್ಥೆ

ಹೌದು, ಗೂಗಲ್ ಸಂಸ್ಥೆಯು ಈಗ ತನ್ನ ಸರ್ಚ್ ಅಪ್ಲಿಕೇಶನ್‌ನಲ್ಲಿ ನೂತನವಾಗಿ ಡಾರ್ಕ್ ಮೋಡ್ ಫೀಚರ್‌ ಅನ್ನು ಸೇರಿಸಲಿದೆ. ಮೊದಲಿಗೆ ಗೂಗಲ್ ಸರ್ಚ್ ಬೀಟಾ ಆವೃತ್ತಿಯಲ್ಲಿ ಈ ಸೌಲಭ್ಯ ಲಭ್ಯವಾಗಿದ್ದು, ಮುಂದಿನ ದಿನಗಳಲ್ಲಿ ಸಾಮಾನ್ಯ ಆವೃತ್ತಿಯ ಬಳಕೆದಾರರಿಗೂ ಡಾರ್ಕ್‌ ಮೋಡ್ ಲಭ್ಯವಾಗಲಿದೆ. ಇನ್ನೂ ಈ ಹೊಸ ಸೌಲಭ್ಯವು ಆಂಡ್ರಾಯ್ಡ್ ಹಾಗೂ ಐಓಎಸ್‌ ಆಪರೇಟಿಂಗ್ ಸಿಸ್ಟಂಗಳಲ್ಲಿಯೂ ಕಾಣಿಸಲಿದೆ.

ಆಂಡ್ರಾಯ್ಡ್

ಗೂಗಲ್ ಸರ್ಚ್‌ ಆಪ್‌ನಲ್ಲಿ ಡಾರ್ಕ್‌ ಮೋಡ್ ಸೌಲಭ್ಯವು ಆಂಡ್ರಾಯ್ಡ್ ನ ಇತ್ತೀಚಿನ ಆಂಡ್ರಾಯ್ಡ್‌ 10 ಓಎಸ್‌ ಹಾಗೂ ಆಪಲ್ ಐಒಎಸ್ 12 ಮತ್ತು ಐಓಎಸ್‌ 13 ರಲ್ಲಿ ಮಾತ್ರ ಲಭ್ಯವಿದೆ. ಆದರೂ, ಐಒಎಸ್ 12 ಬಳಕೆದಾರರು ಈ ಫೀಚರ್‌ಗಾಗಿ ಫ್ಲಿಕ್ ಬಟನ್ ಒತ್ತಬೇಕಿದೆ. ಡಾರ್ಕ್‌ ಮೋಡ್‌ ಆಯ್ಕೆ ಬೇಡವಾಗಿದ್ದರೇ ಸೆಟ್ಟಿಂಗ್‌ನಲ್ಲಿ ಹೋಗಿ ಡಾರ್ಕ್‌ ಮೋಡ್ ಅನ್ನು ಆಫ್ ಮಾಡಬಹುದು.

ಡಾರ್ಕ್‌ಮೋಡ್ ಪ್ರಯೋಜನ

ಡಾರ್ಕ್‌ಮೋಡ್ ಪ್ರಯೋಜನ

ವಾಟ್ಸಪ್ ಬಳಕೆದಾರರು ಡಾರ್ಕ್‌ಮೋಡ್ ಆಯ್ಕೆ ಆನ್ ಮಾಡಿದಾಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ವಾಟ್ಸಪ್‌ ಚಾಟ್, ಸ್ಟೇಟಸ್‌, ಫೀಡ್ ಮತ್ತು ಸೆಟ್ಟಿಂಗ್ ಆಯ್ಕೆಗಳು ಸಹ ಕಪ್ಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತವೆ. ಡಾರ್ಕ್‌ಮೋಡ್‌ ಆಯ್ಕೆ ಸಕ್ರಿಯದಿಂದ ಫೋನಿನ ಡಿಸ್‌ಪ್ಲೇಯ ಪ್ರಖರತೆ ಕಡಿಮೆ ಆಗುತ್ತದೆ ಇದರಿಂದ ಕಣ್ಣಿಗೂ ಉತ್ತಮ ಹಾಗೂ ಬ್ಯಾಟರಿ ಉಳಿಕೆಗೂ ನೆರವಾಗಲಿದೆ. ವಾಟ್ಸಪ್‌ನಲ್ಲಿ ಸಹ ಡಾರ್ಕ್ ಮೋಡ್ ಸಕ್ರಿಯ ಮಾಡಬಹುದು.

ವಾಟ್ಸಪ್ನಲ್ಲಿ ಡಾರ್ಕ್‌ಮೋಡ್ ಆನ್ ಮಾಡುವುದು ಹೇಗೆ

ವಾಟ್ಸಪ್ನಲ್ಲಿ ಡಾರ್ಕ್‌ಮೋಡ್ ಆನ್ ಮಾಡುವುದು ಹೇಗೆ

* ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ವಾಟ್ಸಪ್ ಆಪ್ ತೆರೆಯಿರಿ.(ವಾಟ್ಸಪ್ ಬೀಟಾ ಆವೃತ್ತಿ)

* ಮೆನು(ಮೂರು ಡಾಟ್) ಸೆಟ್ಟಿಂಗ್ ಕ್ಲಿಕ್ ಮಾಡಿರಿ.

* ನಂತರ ಚಾಟ್ಸ್‌(chats) ಆಯ್ಕೆ ಸೆಲೆಕ್ಟ್ ಮಾಡಿರಿ.

ಚಾಟ್ಸ್ ಆಯ್ಕೆ

* ಚಾಟ್ಸ್ ಆಯ್ಕೆ ತೆರೆದಾಗ (Theme) 'ಥೀಮ್' ಆಯ್ಕೆ ಕಾಣಿಸುತ್ತದೆ.

* ಥೀಮ್ ಆಯ್ಕೆಯಲ್ಲಿ- ಸೆಟ್‌ ಬೈ ಬ್ಯಾಟರಿ ಸೇವರ್, ಲೈಟ್ ಮತ್ತು ಡಾರ್ಕ್ ಆಯ್ಕೆಗಳು ಕಾಣಿಸುತ್ತವೆ.

* ಅವುಗಳಲ್ಲಿ ಡಾರ್ಕ್ ಆಯ್ಕೆ ಸೆಲೆಕ್ಟ್ ಮಾಡಿರಿ.

ಸಾಮಾಜಿಕ ತಾಣಗಳಲ್ಲಿ ಡಾರ್ಕ್‌ಮೋಡ್

ಸಾಮಾಜಿಕ ತಾಣಗಳಲ್ಲಿ ಡಾರ್ಕ್‌ಮೋಡ್

ಪ್ರಸ್ತುತ ಜನಪ್ರಿಯ ಸಾಮಾಜಿಕ ತಾಣಗಳಾದ ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮೆಸೆಂಜರ್ ಸೇರಿದಂತೆ ಗೂಗಲ್‌ ಕ್ರೋಮ್ ಹಾಗೂ ಹಲವು ಆಪ್‌ಗಳು ಡಾರ್ಕ್‌ಮೋಡ್ ಫೀಚರ್ಸ್‌ ಅನ್ನು ಹೊಂದಿವೆ. ಆ ಲಿಸ್ಟಿಗೆ ಈಗ ವಾಟ್ಸಪ್ ಸಹ ಸೇರಿಕೊಂಡಿದೆ. ವಾಟ್ಸಪ್ ಡಾರ್ಕ್‌ಮೋಡ್ ಫೀಚರ್‌ ಡಿಸ್‌ಪ್ಲೇ ಬೆಳಕಿನ ಪ್ರಮಾಣ ತಗ್ಗಿಸಲಿದೆ. ಸದ್ಯದಲ್ಲಿಯೇ ಸೋಶಿಯಲ್ ಮೀಡಿಯಾ ದೈತ್ಯ ಫೇಸ್‌ಬುಕ್‌ನಲ್ಲಿಯೂ ಡಾರ್ಕ್‌ಮೋಡ್ ಸೌಲಭ್ಯ ಸೇರಿಕೊಳ್ಳಲಿದೆ.

Most Read Articles
Best Mobiles in India

English summary
This new feature is only available on Android 10, Apple iOS 12, and 13.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X