ಗೂಗಲ್‌ನಲ್ಲಿ ಪ್ರಾಣಿಯ ಹೆಸರನ್ನು ಸರ್ಚ್ ಮಾಡಿ, ಆಮೇಲೆ ನೋಡಿ ಮ್ಯಾಜಿಕ್!

|

ಟೆಕ್ ದೈತ್ಯ ಗೂಗಲ್ ಸಂಸ್ಥೆಯು ತನ್ನ ಗೂಗಲ್ ಸರ್ಚ್‌ ಪೇಜ್‌ನಲ್ಲಿ ಹಲವು ಹೊಸತನಗಳನ್ನು ಪರಿಚಯಿಸುತ್ತಲೇ ಸಾಗಿದೆ. ಕೆಲವು ವಿಶೇಷ ದಿನಗಳಂದು ಆ ದಿನಕ್ಕೆ ಸಂಬಂಧಪಟ್ಟ ಮಾಹಿತಿ ನೀಡುತ್ತದೆ. ಸಾಧಕರ ಹುಟ್ಟು ಹಬ್ಬದ ದಿನದಂದು ಡೂಡಲ್‌ನಲ್ಲಿ ಅವರಿಗೆ ಗೌರವ ಅರ್ಪಿಸುತ್ತದೆ. ಹಾಗೆಯೇ ಗೂಗಲ್ ಸರ್ಚ್‌ನ ಕೆಲವು ಟ್ರಿಕ್ಸ್‌ ಬಳಕೆದಾರರಿಗೆ ಭಿನ್ನ ಫಲಿತಾಂಶ ನೀಡುತ್ತದೆ. ಆ ಪೈಕಿ ಗೂಗಲ್ ಸರ್ಚ್‌ನಲ್ಲಿ ಆನಿಮಲ್ಸ್‌ ಬಗ್ಗೆ ಸರ್ಚ್ ಮಾಡಿದರೇ ನಿಮಗೆ 3D AR ವ್ಯೂವ್‌ನಲ್ಲಿ ಪ್ರಾಣಿಗಳು ಕಾಣಿಸುತ್ತವೆ.

ಗೂಗಲ್‌

ಹೌದು, ಗೂಗಲ್‌ ಸರ್ಚ್ 3D AR ವ್ಯೂವ್ ಸೇವೆಯನ್ನು ಪರಿಚಯಿಸಿದ್ದು, ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಪ್ರಾಣಿಗಳನ್ನು ನೀವು 3D AR ವ್ಯೂವ್‌ನಲ್ಲಿ ವೀಕ್ಷಿಸಬಹುದಾಗಿದೆ. 3D AR ನೋಟದಲ್ಲಿ ಪ್ರಾಣಿಗಳು ನೈಜತೆಯಂತೆ ಕಂಡುಬರಲಿದ್ದು, ಮಕ್ಕಳಗೆ ಹೆಚ್ಚಿನ ಖುಷಿ ನೀಡುತ್ತದೆ. ಹಾಗೆಯೇ 3D ರೂಪದ ಪ್ರಾಣಿಗಳನ್ನು ನೀವುರುವ ಸ್ಥಳದಲ್ಲಿಯೇ ಕಾಣಿಸುವಂತೆ ಬ್ಯಾಕ್‌ಗ್ರೌಂಡ್‌ ಸಹ ಬದಲಾಯಿಸಬಹುದು. ಹಾಗಾದರೇ ಗೂಗಲ್ ಸರ್ಚ್‌ನಲ್ಲಿ ಪ್ರಾಣಿಗಳನ್ನು 3D AR ವ್ಯೂವ್‌ನಲ್ಲಿ ವೀಕ್ಷಿಸುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ ಮತ್ತು ನೀವು ಒಮ್ಮೆ ಟ್ರಾಯ್ ಮಾಡಿ ನೋಡಿ.

3D ARನಲ್ಲಿ ಪ್ರಾಣಿಗಳ ಚಿತ್ರ

3D ARನಲ್ಲಿ ಪ್ರಾಣಿಗಳ ಚಿತ್ರ

3D AR-(Augmented reality) ಒಂದು ತಂತ್ರಜ್ಞಾನವಾಗಿದ್ದು, ಇಲ್ಲಿ ಚಿತ್ರಗಳು ನೈಜತೆಯ ರೂಪದಲ್ಲಿ ಕಾಣಿಸುತ್ತವೆ. ಫೋನ್‌ ಸ್ಕ್ರೀನ್‌ನಲ್ಲಿ ಪ್ರಾಣಿ ಸುತ್ತಲೂ ಚಲಿಸುವುದು ಕಾಣಿಸುತ್ತದೆ. ಹಾಗೆಯೇ ಪ್ರಾಣಿ ಬಾಲವನ್ನು ಆಡಿಸುವುದು, ತಲೆ ತಗ್ಗಿಸುವುದು ಅಥವಾ ಆಕಳಿಕೆ ಮಾಡುವ ದೃಶ್ಯಗಳು ಕಾಣಿಸುತ್ತವೆ.
ಪ್ರಾಣಿಗಳ ಚಿತ್ರವನ್ನು 3D-ARನಲ್ಲಿ ವೀಕ್ಷಿಸಲು ಹೀಗೆ ಮಾಡಿ
* ಸ್ಮಾರ್ಟ್‌ಫೋನಿನಲ್ಲಿ ಗೂಗಲ್ ಸರ್ಚ್ ತೆರೆಯಿರಿ
* ಸರ್ಚ್‌ನಲ್ಲಿ ಪ್ರಾಣಿಯ ಹೆಸರನ್ನು ಬರೆಯಿರಿ (Ex-Tiger)
* ಆ ನಂತರ ಸರ್ಚ್ ಮಾಡಿರಿ
* ಕಾಣಿಸುವ ಫಲಿತಾಂಶದಲ್ಲಿ ವ್ಯೂವ ಇನ್ 3D ಆಯ್ಕೆ ಟ್ಯಾಪ್ ಮಾಡಿ.

ಜೂಮ್ ಮಾಡಿ ಮತ್ತು 360 ಡಿಗ್ರಿ ತಿರುಗಿಸಿ

ಜೂಮ್ ಮಾಡಿ ಮತ್ತು 360 ಡಿಗ್ರಿ ತಿರುಗಿಸಿ

ಸ್ಮಾರ್ಟ್‌ಫೋನಿನಲ್ಲಿ ಪ್ರಾಣಿಗಳ 3D-ARನಲ್ಲಿ ವೀಕ್ಷಿಸುವಾಗ ಪ್ರಾಣಿಯ ಚಿತ್ರವನ್ನು ನೀವು 360 ಡಿಗ್ರಿಯಲ್ಲಿ ತಿರುಗಿಸಿ ವೀಕ್ಷಿಸಬಹುದಾಗಿದೆ. ಪ್ರಾಣಿಯ ನೈಜ ಸೌಂಡ್ ಸಹ ಕೇಳಿಸಿಕೊಳ್ಳಬಹುದು. ಇದರೊಂದಿಗೆ ಪ್ರಾಣಿಯ ಚಿತ್ರವನ್ನು ಜೂಮ್ ಮಾಡಿ ಸಹ ವೀಕ್ಷಿಸಬಹುದು.

ಅಪ್‌ಡೇಟ್ ಓಎಸ್‌ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರ ಸಫೋರ್ಟ್‌

ಅಪ್‌ಡೇಟ್ ಓಎಸ್‌ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರ ಸಫೋರ್ಟ್‌

ಆಂಡ್ರಾಯ್ಡ್ 7 ಓಎಸ್‌ ಹಾಗೂ ಅದಕ್ಕಿಂತಲೂ ಮೇಲ್ಪಟ್ಟ ಓಎಸ್‌ನ ಸ್ಮಾರ್ಟ್‌ಫೋನ್‌ಗಳಲ್ಲಿ ಮತ್ತು ಐಓಎಸ್‌ 11 ಹಾಗೂ ಅದಕ್ಕೂ ಮೇಲ್ಪಟ್ಟ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಐಫೋನ್‌ಗಳಲ್ಲಿ ಮಾತ್ರ ಈ ಸೌಲಭ್ಯ ಲಭ್ಯವಾಗಲಿದೆ.

Best Mobiles in India

English summary
The 3D models are a little crude, but they do provide a realistic sense of an animal’s scale and movement.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X