ಗೂಗಲ್‌ ಸರ್ಚ್‌ ಮಾಡುವಾಗ ಈ ಟ್ರಿಕ್ಸ್‌ಗಳನ್ನು ಫಾಲೋ ಮಾಡಿ!

|

ಇಂದಿನ ದಿನಗಳಲ್ಲಿ ಯಾವುದೇ ಮಾಹಿತಿ ಬೇಕಿದ್ದರೂ ಗೂಗಲ್‌ ಸರ್ಚ್‌ ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ನಮ್ಮ ದೈನಂದಿನ ಅಗತ್ಯಗಳಲ್ಲಿ ಗೂಗಲ್‌ ಸರ್ಚ್‌ ಕೂಡ ಒಂದಾಗಿದೆ. ಇದೇ ಕಾರಣಕ್ಕೆ ಗೂಗಲ್‌ ಅನ್ನು ಸರ್ಚ್‌ ಇಂಜಿನ್‌ ದೈತ್ಯ ಎಂದು ಕರೆಯಲಾಗುತ್ತದೆ. ಇನ್ನು ಗೂಗಲ್‌ ಕೂಡ ಬಳಕೆದಾರರ ಅಗತ್ಯಗಳಿಗೆ ಅನುಗುಣವಾಗಿ ಮಾಹಿತಿಯನ್ನು ನೀಡುತ್ತಾ ಬಂದಿದೆ. ಇದಲ್ಲದೆ ಬಳಕೆದಾರರ ಸುರಕ್ಷತೆ ಮತ್ತು ಅನುಭವವನ್ನು ಸುಧಾರಿಸುವುದಕ್ಕಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ.

ಗೂಗಲ್‌

ಹೌದು, ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ನೀಡುತ್ತಾ ಬಂದಿದೆ. ಇದರಿಂದ ಗೂಗಲ್‌ ಬಳಸುವ ಜನರು ಸುಲಭವಾಗಿ ಬ್ರೌಸ್‌ ಮಾಡುವುದಕ್ಕೆ ಸಾಧ್ಯವಾಗಲಿದೆ. ಗೂಗಲ್‌ನಲ್ಲಿ ಶಿಕ್ಷಣ, ಟೆಕ್‌, ಆರೋಗ್ಯ ಸೇರಿದಂತೆ ಎಲ್ಲಾ ರೀತಿಯ ಮಾಹಿತಿಯನ್ನು ಕೂಡ ತಿಳಿಯಬಹುದಾಗಿದೆ. ಹಾಗೆಯೇ ಗೂಗಲ್‌ನ ಹಲವು ಸೇವೆಗಳ ಮೂಲಕ ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ. ಆದರೂ ಕೂಡ ಕೆಲವು ಸಮಯದಲ್ಲಿ ಗೂಗಲ್‌ನಲ್ಲಿ ನೀವು ಸರ್ಚ್‌ ಮಾಡುತ್ತಿರುವ ವಿಚಾರವನ್ನು ನಿಖರವಾಗಿ ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ಗೂಗಲ್‌ನ ಕೆಲವು ಟ್ರಿಕ್ಸ್‌ಗಳನ್ನು ಫಾಲೋ ಮಾಡಬೇಕಾಗುತ್ತದೆ.

ಗೂಗಲ್‌

ಗೂಗಲ್‌ನಲ್ಲಿ ನೀವು ಯಾವುದೇ ವಿಚಾರವನ್ನು ಸರ್ಚ್‌ ಮಾಡಿದರೂ ಅದಕ್ಕೆ ಸಂಬಂಧಿಸಿದ ಮಾಹಿತಿ ಶೋ ಆಗಲಿದೆ. ಆದರೆ ಕೆಲವು ಸಂದರ್ಭಗಳಲ್ಲಿ ನೀವು ಸರ್ಚ್‌ ಮಾಡುವ ವಿಷಯಕ್ಕೆ ಸಂಬಂಧಪಟ್ಟ ನಿಖರ ಮಾಹಿತಿ ತಿಳಿಯಲು ಸಾಧ್ಯವಾಗುವುದಿಲ್ಲ ಇಂತಹ ಸನ್ನಿವೇಶದಲ್ಲಿ ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಇದಕ್ಕಾಗಿ ಗೂಗಲ್‌ನಲ್ಲಿ ನೀವು ಕೆಲವು ತಂತ್ರಗಳನ್ನು ಅನುಸರಿಸಬಹುದು. ಇದರಿಂದ ನೀವು ಸರ್ಚ್‌ ಮಾಡುವ ವಿಷಯದ ನಿಖರ ಮಾಹಿತಿ ತಿಳಿಯಲು ಸಾಧ್ಯವಾಗಲಿದೆ. ಹಾಗಾದ್ರೆ ಗೂಗಲ್‌ನಲ್ಲಿ ನಿಖರವಾದ ಮಾಹಿತಿ ಪಡೆಯಲು ಸಹಾಯ ಮಾಡುವ ಟಿಪ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಯೂಸ್‌ ಅಡ್ವಾನ್ಸ್ಡ್‌ ಸರ್ಚ್‌

ಯೂಸ್‌ ಅಡ್ವಾನ್ಸ್ಡ್‌ ಸರ್ಚ್‌

ಗೂಗಲ್‌ನಲ್ಲಿ ನೀವು ನಿಖರವಾದ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕೆ ಅಡ್ವಾನ್ಸ್ಡ್‌ ಸರ್ಚ್‌ ಬಳಸುವುದು ಸೂಕ್ತವಾಗಿದೆ. ಗೂಗಲ್‌ನ "ಸುಧಾರಿತ ಹುಡುಕಾಟ" ಫೀಚರ್ಸ್‌ ನಿಮ್ಮ ಸರ್ಚ್‌ ಅನ್ನು ಪರಿಷ್ಕರಿಸಲು ಸಹಾಯ ಮಾಡುತ್ತದೆ. ನೀವು ಸರ್ಚ್‌ ರಿಸಲ್ಟ್‌ಗಳನ್ನು ನಿರ್ದಿಷ್ಟ ಭಾಷೆಗಳಲ್ಲಿ ಅಥವಾ ನಿರ್ದಿಷ್ಟ ಪ್ರದೇಶಗಳಿಂದ ಮಾತ್ರ ಸೇರಿಸಬಹುದು. ನೀವು ನಿರ್ದಿಷ್ಟ ಸೈಟ್‌ನಲ್ಲಿ ಮಾಹಿತಿಯನ್ನು ಹುಡುಕುತ್ತಿದ್ದರೆ, ನಿರ್ದಿಷ್ಟ ಡೊಮೇನ್‌ಗಾಗಿ ಇಲ್ಲಿ ಹುಡುಕಬಹುದು. ಇನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ ಅಡ್ವಾನ್ಸ್ಡ್‌ ಸರ್ಚ್‌ ಅನ್ನು ಬಳಸುವುದಕ್ಕೆ google.com/advanced_search ಗೆ ಹೋಗಬಹುದು.

ಸೂಕ್ತ ಕೀ ವರ್ಡ್‌ಗಳನ್ನು ಬಳಸಿರಿ

ಸೂಕ್ತ ಕೀ ವರ್ಡ್‌ಗಳನ್ನು ಬಳಸಿರಿ

ನೀವು ಸರ್ಚ್‌ ಮಾಡುವಾಗ ಸೂಕ್ತ ಕೀವರ್ಡ್‌ಗಳನ್ನು ಬಳಸುವುದು ಉತ್ತಮ. ಏಕೆಂದರೆ ಕೆಲವೊಮ್ಮೆ ನೀವು ಬಳಸುವ ಪದಗಳಲ್ಲಿ ಇರುವ ಪ್ರತ್ಯೇಕ ಸಂಪರ್ಕಿತ ಕೀವರ್ಡ್‌ಗಳು ಬೇರೆಯದೆ ಮಾಹಿತಿಯನ್ನು ನೀಡಲಿದೆ. ಇದರಿಂದ ನೀವು ಬಯಸುವ ಮಾಹಿತಿಯ ಬದಲಿಗೆ ಎರಡನೆಯ ಕೀವರ್ಡ್‌ನ ವಿಷಯ ನಿಮಗೆ ದೊರೆಯುವ ಸಾದ್ಯತೆ ಇರಲಿದೆ. ನಿರ್ದಿಷ್ಟ ಕೀವರ್ಡ್‌ಗೆ ಸಂಬಂಧಿಸಿದ ಫಲಿತಾಂಶಗಳನ್ನು ತೆಗೆದುಹಾಕುವುದಕ್ಕೆ ನೀವು ಸೂಕ್ತ "ಕೀವರ್ಡ್" ಅನ್ನು ಸೇರಿಸುವುದು ಉತ್ತಮವಾಗಿದೆ.

ಸರ್ಚ್‌ ಫಾರ್‌ ಫೈಲ್ಸ್‌

ಸರ್ಚ್‌ ಫಾರ್‌ ಫೈಲ್ಸ್‌

ಒಂದು ವೇಳೆ ನೀವು ಗೂಗಲ್‌ನಲ್ಲಿ ಫೈಲ್ಸ್‌ಗಳನ್ನು ಸರ್ಚ್‌ ಮಾಡುತ್ತಿದ್ದರೆ, ಸರ್ಚ್‌ನಲ್ಲಿ "ಫೈಲ್ಟೈಪ್:" ಅನ್ನು ಸೇರಿಸುವುದು ಉತ್ತಮ. ನಂತರ ನೀವು ಹುಡುಕುತ್ತಿರುವ ಫೈಲ್ ಎಕ್ಸ್‌ಟೆನ್ಶನ್‌ ಅನ್ನು ಸೇರಿಸಬಹುದು. ಅಂದರೆ ನೀವು ಏನಾದರೂ ಪಿಡಿಎಫ್‌ ಫೈಲ್‌ ಸರ್ಚ್‌ ಮಾಡುತ್ತಿದ್ದರೆ, ನೀವು "filetype:pdf" ಎಂದು ಸರ್ಚ್‌ ಮಾಡುವುದು ಸೂಕ್ತವಾಗಿದೆ.

ಗೂಗಲ್‌ ಟ್ರಾನ್ಸ್‌ಲೇಟ್‌

ಗೂಗಲ್‌ ಟ್ರಾನ್ಸ್‌ಲೇಟ್‌

ಗೂಗಲ್‌ ಸರ್ಚ್‌ ಮಾಡುವಾಗ ನಿಮಗೆ ನಿರ್ಧಿಷ್ಟ ಪದಗಳ ಅರ್ಥ ತಿಳಿಯದಿದ್ದರೆ, ಆ ಪದವನ್ನು ಟ್ರಾನ್ಸ್‌ಲೇಟ್‌ ಮಾಡಿರಿ. ಇದರಿಂದ ನಿಮಗೆ ಬೇಕಾದ ಮಾಹಿತಿಯನ್ನು ಸರ್ಚ್‌ ಮಾಡುವುದಕ್ಕೆ ಸಹಾಯವಾಗಲಿದೆ. ಆದರೆ ನೀವು ಯಾವ ಭಾಷೆಯನ್ನು ಹುಡುಕುತ್ತಿದ್ದೀರಿ ಎಂಬುದರ ಆಧಾರದ ಮೇಲೆ ನಿಮ್ಮ ಮೈಲೇಜ್ ಬದಲಾಗಬಹುದು.

ಬೇಸಿಕ್‌ ಸರ್ಚ್‌

ಬೇಸಿಕ್‌ ಸರ್ಚ್‌

ನೀವು ಅಡ್ವಾನ್ಸ್ಡ್‌ ಸರ್ಚ್‌ ಬಳಸಲು ಬಯಸಿದಿದ್ದರೆ ನೀವು ಬೇಸಿಕ್‌ ಸರ್ಚ್‌ ಅನ್ನು ಬಳಸಬಹುದು. ಆದರೆ ನೀವು ಬಯಸುವ ಮಾಹಿತಿ ಪಡೆಯುವುದಕ್ಕೆ ನೀವು ಎರಡು ವಿಭಿನ್ನ ಸರ್ಚ್‌ ಮಾಡಬಹುದು. ಇದಕ್ಕಾಗಿ ನೀವು ಬೂಲಿಯನ್ ಆಪರೇಟರ್ ಮತ್ತು ಅನ್ನು ಬಳಸಬಹುದು.

ಗೂಗಲ್‌ನಲ್ಲಿ

ಇನ್ನು ಗೂಗಲ್‌ನಲ್ಲಿ ನೀವು ಸರ್ಚ್‌ ಮಾಡುವ ಮಾಹಿತಿ ಸರ್ಚ್‌ ಹಿಸ್ಟರಿಯಲ್ಲಿ ಸ್ಟೋರ್‌ ಆಗಿರುತ್ತದೆ. ಅಲ್ಲದೆ ನೀವು ಬೇಟಿ ನೀಡಿದ ಸ್ಥಳದ ಲೊಕೇಶನ್‌ ಹಾಗೂ ಲೊಕೇಶನ್ ಸರ್ಚ್ ಮಾಹಿತಿಯು ಕೂಡ ಸರ್ಚ್‌ ಹಿಸ್ಟರಿಯಲ್ಲಿ ದಾಖಲಾಗಿರುತ್ತವೆ. ಇದರಿಂದ ನಿಮ್ಮ ಫೋನ್‌ ಅನ್ನು ಬೇರೆಯವರು ಬಳಸುವಾಗ ನಿಮ್ಮ ಹಿಸ್ಟರಿಯನ್ನು ವೀಕ್ಷಿಸುವ ಸಾಧ್ಯತೆ ಇರುತ್ತದೆ. ನಿಮ್ಮ ಸರ್ಚ್‌ ಗೂಗಲ್‌ ಸರ್ಚ್‌ ಹಿಸ್ಟರಿಯನ್ನು ಬೇರೆಯವರು ನೋಡಬಾರದಂತೆ ಮಾಡುವುದಕ್ಕೆ ಕೂಡ ಗೂಗಲ್‌ ಅವಕಾಸ ನೀಡಿದೆ. ಇದರಲ್ಲಿ ನೀವು ಸರ್ಚ್‌ ಹಿಸ್ಟರಿಗೆ ಪಾಸ್‌ವರ್ಡ್‌ ಸೆಟ್‌ ಮಾಡುವುದು ಇಲ್ಲವೆ ಸರ್ಚ್‌ ಹಿಸ್ಟರಿಯನ್ನು ಡಿಲೀಟ್‌ ಮಾಡುವ ಆಯ್ಕೆಯನ್ನು ನೀಡಿದೆ.

ಗೂಗಲ್‌ ಸರ್ಚ್‌ ಹಿಸ್ಟರಿಗೆ ಪಾಸ್‌ವರ್ಡ್‌ ಸೆಟ್‌ ಮಾಡುವುದು ಹೇಗೆ?

ಗೂಗಲ್‌ ಸರ್ಚ್‌ ಹಿಸ್ಟರಿಗೆ ಪಾಸ್‌ವರ್ಡ್‌ ಸೆಟ್‌ ಮಾಡುವುದು ಹೇಗೆ?

* ಮೊದಲಿಗೆ activity.google.com ನಲ್ಲಿ ವೆಬ್ ಮತ್ತು ಅಪ್ಲಿಕೇಶನ್ ಆಕ್ಟಿವಿಟಿ ಟ್ಯಾಬ್‌ಗೆ ಹೋಗಿ.
* ಇದರಲ್ಲಿ Manage My Activity verification ಬಟನ್ ಟ್ಯಾಪ್ ಮಾಡಿ.
* require extra verification ಆಯ್ಕೆಮಾಡಿ.
* ಇದರಲ್ಲಿ ಸರ್ಚ್‌ ಹಿಸ್ಟರಿಯನ್ನು ಬ್ರೌಸ್‌ ಮಾಡುವುದಕ್ಕೆ ಪಾಸ್‌ವರ್ಡ್‌ ಸೆಟ್‌ ಮಾಡುವ ಆಯ್ಕೆಯನ್ನು ಕೇಳುತ್ತದೆ.
ಈ ಮೂಲಕ ನಿಮ್ಮ ಸರ್ಚ್‌ ಹಿಸ್ಟರಿಯನ್ನು ಪಾಸ್‌ವರ್ಡ್‌ ಮೂಲಕ ಸೆಕ್ಯುರ್‌ ಮಾಡಬಹುದು.

ಪಾಸ್‌ವರ್ಡ್‌

ಒಂದು ವೇಳೆ ನೀವು ಪಾಸ್‌ವರ್ಡ್‌ ಮೂಲಕ ಸರ್ಚ್‌ ಹಿಸ್ಟರಿಯನ್ನು ಸೆಕ್ಯುರ್‌ ಮಾಡಿದರೂ ಲೀಕ್‌ ಆಗುವ ಸಾಧ್ಯತೆ ಇದ್ದರೆ ಸರ್ಚ್‌ ಹಿಸ್ಟರಿಯನ್ನು ಆಟೋ ಡಿಲೀಟ್‌ ಮಾಡುವ ಆಯ್ಕೆಯನ್ನು ನೀವು ಪರಿಗಣಿಸಬಹುದು. ಇದರಿಂದ ನಿಮ್ಮ ಸರ್ಚ್‌ ಹಿಸ್ಟರಿಯನ್ನು ನೀವು ಯಾರಿಗೂ ಸಿಗದಂತೆ ಮಾಡಬಹುದು. ಆಟೋ ಡಿಲೀಟ್‌ ಆಯ್ಕೆಯನ್ನು ಸೆಲೆಕ್ಟ್‌ ಮಾಡಿದರೆ ನಿಮಗೆ 3 ತಿಂಗಳ ಅಥವಾ 18 ತಿಂಗಳ ಆಯ್ಕೆ ಸಿಗಲಿದೆ. ಇದರಲ್ಲಿ ನೀವು ನಿಮಗೆ ಬೇಕಾದರ ಆಯ್ಕೆಯನ್ನು ಸೆಲೆಕ್ಟ್‌ ಮಾಡಬಹುದು. ಈ ಮೂಲಕ ನಿಮ್ಮ ಸರ್ಚ್‌ ಹಿಸ್ಟರಿ ನಿಗಧಿತ ಸಮಯದಲ್ಲಿ ಆಟೋ ಡಿಲೀಟ್‌ ಆಗುವಂತೆ ಮಾಡಬಹುದು.

Best Mobiles in India

English summary
Google Search tricks will help you find exactly what you are looking

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X