ಸರ್ಚ್‌ ಆನ್‌ 2022 ಈವೆಂಟ್‌: ಗೂಗಲ್‌ ಸರ್ಚ್‌ ಸೇರಲಿವೆ ಪ್ರಮುಖ ಫೀಚರ್ಸ್‌ಗಳು!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಸರ್ಚ್‌ ಆನ್‌ 2022 ಈವೆಂಟ್ ಅನ್ನು ಆಯೋಜಿಸಿದೆ. ಈ ಈವೆಂಟ್‌ನಲ್ಲಿ ಗೂಗಲ್‌ ತನ್ನ ಸರ್ಚ್‌ನಲ್ಲಿ ತರಲಿರುವ ಹೊಸ ಫೀಚರ್ಸ್‌ಗಳ ಅನಾವರಣಗೊಳಿಸಿದೆ. ಇದರಲ್ಲಿ ಗೂಗಲ್‌ ಮ್ಯಾಪ್‌, ಆನ್‌ಲೈನ್ ಶಾಪಿಂಗ್ ಎಕ್ಸ್‌ಪಿರಿಯನ್ಸ್‌ ಸೇರಿದಂತೆ ಹಲವಾರು ಉತ್ಪನ್ನಗಳು ಮತ್ತು ಸೇವೆಗಳಿಗೆ ಅಪ್ಡೇಟ್‌ ಅನ್ನು ಘೋಷಣೆ ಮಾಡಿದೆ. ಇದಲ್ಲದೆ ಗೂಗಲ್‌ ತನ್ನ ಸರ್ಚ್ ಇಂಜಿನ್, ಅಂದರೆ ಗೂಗಲ್ ಸರ್ಚ್‌ನ ಪ್ರಮುಖ ಅಪ್ಡೇಟ್‌ಗಳನ್ನು ಸಹ ಪರಿಚಯಿಸಿದೆ.

ಗೂಗಲ್‌

ಹೌದು, ಗೂಗಲ್‌ ಸರ್ಚ್‌ ಆನ್‌ 2022 ಈವೆಂಟ್‌ನಲ್ಲಿ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಭವಿಷ್ಯದಲ್ಲಿ ಗೂಗಲ್‌ ಸರ್ಚ್‌ಗೆ ಸೇರ್ಪಡೆಯಾಗಲಿರುವ ಫೀಚರ್ಸ್‌ಗಳ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಇದರಲ್ಲಿ ಮಲ್ಟಿ ಸರ್ಚ್‌ ಗೆಟ್ಸ್‌ ಸ್ಮಾರ್ಟ್‌ರ್‌ನಂತಹ ಫೀಚರ್ಸ್‌ಗಳು ಕೂಡ ಸೇರಿವೆ. ಹಾಗಾದ್ರೆ ಗೂಗಲ್‌ ಸರ್ಚ್‌ ಆನ್‌ 2022 ನಲ್ಲಿ ಅನಾವರಣಗೊಂಡ ಹೊಸ ಫೀಚರ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಮಲ್ಟಿಸರ್ಚ್‌

ಮಲ್ಟಿಸರ್ಚ್‌

ಗೂಗಲ್ ತನ್ನ ಸರ್ಚ್‌ ಆನ್‌ 2022 ಈವೆಂಟ್‌ನಲ್ಲಿ ಮಲ್ಟಿಸರ್ಚ್ ಗೆಟ್ಸ್‌ ಸ್ಮಾರ್ಟರ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದು ಒಂದೇ ಸಮಯದಲ್ಲಿ ಪಠ್ಯ ಮತ್ತು ಚಿತ್ರಗಳನ್ನು ಬಳಸಿಕೊಂಡು ಗೂಗಲ್‌ ಸರ್ಚ್‌ನಲ್ಲಿ ಮಾಹಿತಿಯನ್ನು ಸರ್ಚ್‌ ಮಾಡಲು ಅವಕಾಶ ನೀಡಲಿದೆ. ಅಂದರೆ ಫೋಟೋ ಮತ್ತು ಟೆಕ್ಸ್ಟ್‌ ಎರಡನ್ನು ಬಳಸಿಕೊಂಡು ಸರ್ಚ್‌ ಮಾಡುವುದಕ್ಕೆ ಅವಕಾಶ ಸಿಗಲಿದೆ. ಈ ಫೀಚರ್ಸ್‌ ಜಾಗತಿಕವಾಗಿ ಇಂಗ್ಲಿಷ್‌ನಲ್ಲಿ ಲಭ್ಯವಿದೆ ಎಂದು ಗೂಗಲ್‌ ಹೇಳಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಈ ಫೀಚರ್ಸ್‌ 70 ಭಾಷೆಗಳಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ.

ಬೆಟರ್‌ ಗೂಗಲ್ ಲೆನ್ಸ್

ಬೆಟರ್‌ ಗೂಗಲ್ ಲೆನ್ಸ್

ಗೂಗಲ್‌ ಲೆನ್ಸ್ ಈಗಾಗಲೇ ಬಳಕೆದಾರರಿಗೆ ಟೆಕ್ಸ್ಟ್‌ ಮತ್ತು ಇಮೇಜ್‌ ಅನ್ನು ಅನುವಾದ ಮಾಡಲು ಅನುವು ಮಾಡಿಕೊಡುತ್ತಿದೆ. ಆದರೆ ಇದೀಗ ಈ ಫೀಚರ್ಸ್‌ ಅನ್ನು ಇನ್ನಷ್ಟು ಅಪ್ಡೇಟ್‌ ಮಾಡಲಾಗಿದ್ದು, ಮೆಷಿನ್‌ ಲರ್ನಿಂಗ್‌ ಮಾದರಿಗಳನ್ನು ಆಪ್ಟಿಮೈಸ್ ಮಾಡಿದೆ. ಇದರಿಂದ ಟ್ರಾನ್ಸ್‌ಲೇಟ್‌ ಟೆಕ್ಸ್ಟ್‌ ಅನ್ನು ಕೇವಲ 100 ಮಿಲಿಸೆಕೆಂಡ್‌ಗಳಲ್ಲಿ ಕಾಂಪ್ಲೇಕ್ಸ್‌ ಇಮೇಜ್‌ಗಳಾಗಿ ಸಂಯೋಜಿಸಲಿದೆ. ಇದರಿಂದ ಟ್ರಾನ್ಸ್‌ಲೇಟ್‌ ಮಾಡುವುದು ಇದೀಗ ಇನ್ನಷ್ಟು ಸುಲಭವಾಗಿದೆ.

ಐಒಎಸ್‌ನಲ್ಲಿ ಗೂಗಲ್‌ ಹೆಚ್ಚು ಕ್ರಿಯಾತ್ಮಕತೆ

ಐಒಎಸ್‌ನಲ್ಲಿ ಗೂಗಲ್‌ ಹೆಚ್ಚು ಕ್ರಿಯಾತ್ಮಕತೆ

ಐಒಎಸ್‌ನಲ್ಲಿ ಗೂಗಲ್‌ ಅಪ್ಲಿಕೇಶನ್‌ ಇನ್ನಷ್ಟು ಹೆಚ್ಚಿನ ಕ್ರಿಯಾತ್ಮಕತೆಯನ್ನು ಹೊಂದುವಂತೆ ಮಾಡಲಾಗಿದೆ. ಇದರಿಂದ ಆನ್‌ಲೈನ್‌ ಶಾಪಿಂಗ್, ಕ್ಯಾಮೆರಾದೊಂದಿಗೆ ಪಠ್ಯವನ್ನು ಅನುವಾದಿಸಲು, ಹುಡುಕಲು ಮತ್ತು ಹೆಚ್ಚಿನದನ್ನು ಮಾಡಲು ಸರ್ಚ್‌ ಬಾರ್‌ನಲ್ಲಿ ಹೊಸ ಶಾರ್ಟ್‌ಕಟ್‌ಗಳನ್ನು ಸೇರಿಸಲಾಗಿದೆ.

ಗೂಗಲ್‌ ಸರ್ಚ್‌ನಲ್ಲಿ ಇನ್ನಷ್ಟು ವೇಗ

ಗೂಗಲ್‌ ಸರ್ಚ್‌ನಲ್ಲಿ ಇನ್ನಷ್ಟು ವೇಗ

ಸರ್ಚ್‌ ಆನ್‌ 2022 ಈವೆಂಟ್‌ನಲ್ಲಿ ಪರಿಚಯಿಸಿದ ಮತ್ತೊಂದು ಪ್ರಮುಖ ಫೀಚರ್ಸ್‌ ಎಂದರೆ ಗೂಗಲ್ ಸರ್ಚ್‌ನಲ್ಲಿ ವೇಗವನ್ನು ಹೆಚ್ಚಿಸಿರುವುದು. ಅದರಂತೆ ಇನ್ಮುಂದೆ ಗೂಗಲ್ ಸರ್ಚ್ ಬಳಕೆದಾರರಿಗೆ ಟೈಪಿಂಗ್ ಮುಗಿಸುವ ಮೊದಲೇ ಉತ್ತರಗಳನ್ನು ನೀಡುತ್ತದೆ ಎಂದು ಹೇಳಲಾಗಿದೆ. ಅಂದರೆ ನೀವು ಏನನ್ನು ಸರ್ಚ್‌ ಮಾಡಲು ಟೈಪ್‌ ಮಾಡುತ್ತಿದ್ದೀರಾ ಅನ್ನೊದನ್ನ ಕೆಲವೇ ಸೆಕೆಂಡುಗಳಲ್ಲಿ ಊಹಿಸುವ ಮೂಲಕ ಉತ್ತರವನ್ನು ನೀಡಲಿದೆ.

ಬಳಕೆದಾರರು

ಬಳಕೆದಾರರು ಸರ್ಚ್ ಬಾಕ್ಸ್‌ನಲ್ಲಿ ಟೈಪ್ ಮಾಡಲು ಪ್ರಾರಂಭಿಸಿದ ತಕ್ಷಣ ಅದಕ್ಕೆ ಪೂರಕವಾದ ಕೀವರ್ಡ್‌ಗಳನ್ನು ಪ್ರದರ್ಶಿಸಲಿದೆ. ಇದರಿಂದ ನೀವು ನಿಮ್ಮ ಆಯ್ಕೆ ಯಾವುದು ಅನ್ನೊದನ್ನ ಸುಲಭವಾಗಿ ತಿಳಿಸಬಹುದಾಗಿದೆ. ಹೆಚ್ಚು ಸೂಕ್ತವಾದ ಮತ್ತು ಸಹಾಯಕವಾದ ಮಾಹಿತಿಯನ್ನು ಹೈಲೈಟ್ ಮಾಡುವ ಮೂಲಕ ವಿಷಯವನ್ನು ಅನ್ವೇಷಿಸಲು ಇದು ಸುಲಭವಾಗಿದೆ. ಇದರಿಂದ ನಿಮಗೆ ಸಂಪೂರ್ಣ ವಾಕ್ಯವನ್ನು ಟೈಪ್‌ ಮಾಡುವ ಸಮಯ ಉಳಿತಾಯವಾಗಲಿದೆ. ಅಲ್ಲದೆ ಸರ್ಚ್‌ ಮಾಹಿತಿಗಾಗಿ ಕಾಯಬೇಕಾದ ಅನಿವಾರ್ಯತೆ ಕೂಡ ಇರುವುದಿಲ್ಲ. ಸದ್ಯ ಗೂಗಲ್‌ ಅನಾವರಣ ಗೊಳಿಸಿರುವ ಹೊಸ ಅಪ್ಡೇಟ್‌ಗಳು ಶೀಘ್ರದಲ್ಲೇ ಗೂಗಲ್‌ ಸರ್ಚ್‌ ಅನ್ನು ಸೇರಲಿವೆ ಎಂದು ವರದಿಯಾಗಿದೆ.

Best Mobiles in India

English summary
Google search will soon get these new features

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X