ಚೀನಾಗೆ ಮತ್ತೆ ಎಂಟ್ರಿ ನೀಡಲು ಮಂಡಿಯೂರಿದ ಗೂಗಲ್!..ನಿಷೇಧ ವಾಪಸ್?

|

ಅಮೆರಿಕ ಮತ್ತು ಚೀನಾದ ನಡುವೆ ವ್ಯಾವಹಾರಿಕ ಕಲಹಗಳು ನಡೆಯುತ್ತಲೇ ಇರುವಾಗ, ಎಂಟು ವರ್ಷಗಳ ಹಿಂದೆ ಚೀನಾದಿಂದ ಹೊರ ಬಂದ ಗೂಗಲ್ ಇದೀಗ ಮತ್ತೆ ಚೀನಾ ಪ್ರವೇಶಿಸಲು ಯತ್ನಿಸುತ್ತಿದೆ. ಸೆನ್ಸಾರ್ಶಿಪ್ ಮತ್ತು ಹ್ಯಾಕಿಂಗ್​ ವಿಚಾರವಾಗಿ ಚೀನಾದಿಂದ ಬ್ಯಾನ್​ ಆಗಿದ್ದ ಗೂಗಲ್​ ಸಂಸ್ಥೆ ಇದೀಗ ಮತ್ತೆ ಚೀನಾವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಮುಂದಾಗಿದೆ.

ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕತೆ ಚೀನಾದಲ್ಲಿ ಈ ಹಿಂದೆ ಗೂಗಲ್‌ ಪದಾರ್ಪಣೆ ಮಾಡಿದ್ದರೂ, ನಂತರ ನಿಷೇಧಕ್ಕೀಡಾಗಿತ್ತು. 2006ರಲ್ಲಿ ಚೀನಾದಲ್ಲಿ ತನ್ನ 'ಗೂಗಲ್‌ ಚೀನಾ' ಸೇವೆಯನ್ನು ಆರಂಭಿಸಿದ್ದ ಗೂಗಲ್‌ನ ಎಲ್ಲಾ ಸೇವೆಗಳನ್ನು 2010ರ ವೇಳೆಗೆ ನಿಷೇಧಿಸಲಾಗಿತ್ತು. ನಿಷೇಧದ ನಂತರ ಮತ್ತೆ ಚೀನಾದಲ್ಲಿ ಗೂಗಲ್‌ಗೆ ಜಾಗ ಇಲ್ಲ ಎನ್ನುವ ಪರಿಸ್ಥಿತಿ ಕೂಡ ಎದುರಾಗಿತ್ತು.

ಚೀನಾಗೆ ಮತ್ತೆ ಎಂಟ್ರಿ ನೀಡಲು ಮಂಡಿಯೂರಿದ ಗೂಗಲ್!..ನಿಷೇಧ ವಾಪಸ್?

ಆದರೆ, ಈಗ ಬದಲಾದ ವಿದ್ಯಮಾನಗಳಲ್ಲಿ ಇಂಟರ್‌ನೆಟ್‌ ದಿಗ್ಗಜ ಗೂಗಲ್‌ ಚೀನಾದಲ್ಲಿ ಮತ್ತೆ ತನ್ನ ಸೇವೆಯನ್ನು ಮತ್ತೆ ಆರಂಭಿಸಲು ಸಿದ್ಧತೆ ನಡೆಸಿದೆ. ಹಾಗಾದರೆ, ಚೀನಾದಲ್ಲಿ ಗೂಗಲ್‌ ನಿಷೇಧಗೊಂಡಿದ್ದು ಏಕೆ? ಚೀನಾದಲ್ಲಿ ತನ್ನ ಸೇವೆಯನ್ನು ವಿಸ್ತರಿಸಿಕೊಳ್ಳಲು ಗೂಗಲ್ ಸಂಸ್ಥೆ ತೆಗೆದುಕೊಳ್ಳುತ್ತಿರುವ ಕ್ರಮಗಳು ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಚೀನಾದಲ್ಲಿ ಗೂಗಲ್ ನಿಷೇಧವಾಗಿದ್ದೇಕೆ?

ಚೀನಾದಲ್ಲಿ ಗೂಗಲ್ ನಿಷೇಧವಾಗಿದ್ದೇಕೆ?

ಗೂಗಲ್​ ಹೇಳಿಕೊಂಡಂತೆ, 2010ರಲ್ಲಿ ನಡೆದಿದ್ದ ಸೈಬರ್​ ದಾಳಿಯಿಂದಾಗಿ ಇದರ ಸೋರ್ಸ್​ ಕೋಡ್​ ಹಾಗು ಅಲ್ಲಿನ ಮಾನವ ಹಕ್ಕುಗಳ ಆಯೋಗದವರ ಇ-ಮೇಲ್​ ಸಂದೇಶಗಳು ಸೋರಿಕೆಯಾಗಿತ್ತು. ಇದಾದ ಬಳಿಕ ಗೂಗಲ್​ನ ಗ್ರೇಟ್​ ಫೈರ್​ವಾಲ್​ ಹ್ಯಾಕರ್​ಗಳನ್ನು ಪತ್ತೆಹಚ್ಚಲು ವಿಫಲವಾಗಿತ್ತು. ಈ ಎಲ್ಲಾ ಕಾರಣದಿಂದ ಗೂಗಲ್​ನ್ನು ಚೀನಾದಲ್ಲಿ ನಿಷೇಧಿಸಲಾಗಿತ್ತು.

ಚೀನಾದ ಸರಕಾರ ಕೋರಿದ ಗೂಗಲ್!

ಚೀನಾದ ಸರಕಾರ ಕೋರಿದ ಗೂಗಲ್!

ಚೀನಾದಲ್ಲಿ 8,000ಕ್ಕೂ ಅಧಿಕ ವೆಬ್‌ಸೈಟ್‌ಗಳನ್ನು ಬ್ಲಾಕ್‌ ಮಾಡಲಾಗಿದ್ದು, ಮುಖ್ಯವಾಹಿ ವಿದೇಶಿ ಮೂಲದ ಇಂಟರ್‌ನೆಟ್‌, ವೆಬ್‌ಸೈಟ್‌ಗಳಿಗೆ ಅಲ್ಲಿ ನಿರ್ಬಂಧವಿದೆ. ಅದಕ್ಕೆ ತಕ್ಕಂತೆ ಇಂಟರ್‌ನೆಟ್‌ ಸೆನ್ಸಾರ್‌ಶಿಪ್‌ ನೀತಿ ಅಲ್ಲಿದೆ. ಇದರ ಹಂತವಾಗಿ ಚೀನಾ ನಿರ್ಭಂಧಿಸಿರುವ ತಾಣಗಳನ್ನು ಬ್ಲಾಕ್​ ಮಾಡಲು ಗೂಗಲ್ ಸಂಸ್ಥೆ ಚೀನಾದ ಸರಕಾರದ ಸಹಾಯ ಕೇಳಿದೆ.

ಚೀನಾ ಸರ್ಚ್​ ಆಪ್ ಅಭಿವೃದ್ಧಿ!

ಚೀನಾ ಸರ್ಚ್​ ಆಪ್ ಅಭಿವೃದ್ಧಿ!

ದಿ ಇಂಟರ್​ಸೆಪ್ಟ್​​ ವರದಿ ಪ್ರಕಾರ, ಗೂಗಲ್​ ಬೆಂಬಲಿತ ಚೀನಾದ ಸರ್ಚ್​ ಆಪ್​ವೊಂದು ಅಭಿವೃದ್ಧಿ ಪಡಿಸಲಾಗಿದೆ, ಚೀನಾದ ಅಧಿಕಾರಿಗಳಿಗೂ ಇದರ ಕುರಿತು ಪರೀಕ್ಷಿಸಲು ಆಪ್​ ಕಾರ್ಯವೈಖರಿಯನ್ನು ತೋರಿಸಲಾಗಿದೆ.ಇದರ ಮೂಲಕ ಚೀನಾ ಸರಕಾರ ಬ್ಲಾಕ್​ ಮಾಡಿರುವ ವೆಬ್​ಸೈಟ್​ಗಳನ್ನು ತನ್ನ ಸೈಟ್​ನಲ್ಲಿ ಕಾಣಿಸದಂತೆ ತಡೆಗಟ್ಟಲಾಗುತ್ತದೆ ಎಂದು ಹೇಳಲಾಗಿದೆ.

ಗೂಗಲ್‌ಗೆ ಲಾಭವೇನು?

ಗೂಗಲ್‌ಗೆ ಲಾಭವೇನು?

ವಿಶ್ವದಾದ್ಯಂತ ಮಾರುಕಟ್ಟೆಯನ್ನು ಹೊಂದಿರುವ ಗೂಗಲ್ ಚೀನಾ ದ ಮಾರುಕಟ್ಟೆಯನ್ನು ಬಿಟ್ಟುಕೊಡಲು ತಯಾರಾಗಿಲ್ಲ. ಜೊತೆಗೆ ಅಮೆಜಾನ್‌ ಮತ್ತು ಮೈಕ್ರೊಸಾಫ್ಟ್‌ಗೆ ಕಂಪೆನಿಗಳಿಗೆ ಪೈಪೋಟಿ ನೀಡಲು ಚೀನಾದಲ್ಲಿ ಕ್ಲೌಡ್‌ ಸೇವೆ ಅನುಕೂಲಕರ. ಜಾಗತಿಕ ಮಟ್ಟದಲ್ಲಿ ಕ್ಲೌಡ್‌ ಬಿಸಿನೆಸ್‌ ಮಾಡಲು ಚೀನಾ ನಿರ್ಣಾಯಕ ಮಾರುಕಟ್ಟೆಯಾಗಿದೆ.

ಚೀನಿ ಕಂಪನಿಗಳ ಜತೆ ಮಾತುಕತೆ!

ಚೀನಿ ಕಂಪನಿಗಳ ಜತೆ ಮಾತುಕತೆ!

ಚೀನಾದ ನೆಟ್‌ ದಿಗ್ಗಜ ಟೆನ್ಸೆಂಟ್ ಹೋಲ್ಡಿಂಗ್ಸ್, ಇನ್ಸ್‌ಪರ್‌ ಗ್ರೂಪ್‌ನಂಥಹ ಕಂಪನಿಗಳಿಗೆ ತನ್ನ ಕ್ಲೌಡ್‌ ಸೇವೆಯನ್ನು ನೀಡಲು ಗೂಗಲ್‌ ಮಾತುಕತೆ ನಡೆಸಿದೆ. ಈ ವರ್ಷದ ಆರಂಭದಲ್ಲಿಯೇ ಮಾತುಕತೆ ನಡೆದಿದ್ದು, ಮೂರು ಕಂಪನಿಗಳ ಜತೆ ಸಹಭಾಗಿತ್ವಕ್ಕೆ ಗೂಗಲ್‌ ಒಲವು ವ್ಯಕ್ತಪಡಿಸಿದೆ. ಗೂಗಲ್ ಚೀನಿ ಕಂಪನಿಗಳಲ್ಲಿ ಹೂಡಿಕೆಗೆ ಈಗಾಗಲೇ ತೊಡಗಿಸಿಕೊಂಡಿದೆ.

Best Mobiles in India

English summary
Google is reportedly building a censored search engine that could allow it to return to the massive market in China. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X