ಕತ್ತಲೆಯಲ್ಲಿ ಸ್ಮಾರ್ಟ್‌ಫೋನ್‌ ನೋಡುವುದರಿಂದ ಕುರುಡು ಉಂಟಾಗಬಹುದು!

Written By:

ಮನುಷ್ಯನ ಪಂಚೇಂದ್ರಿಯಗಳಲ್ಲಿ ಕಣ್ಣು ಸಹ ಒಂದು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಹಾಗೆ ಒಮ್ಮೆ ಕಣ್ಣು ಕುರುಡಾಗಿದೆ ಎಂಬುದನ್ನು ಕಲ್ಪನೆ ಮಾಡಿಕೊಳ್ಳಲು ಸಹ ಭಯವಾಗುತ್ತೆ. ದಿನದಲ್ಲಿ 20 ಗಂಟೆಗಳಿಗೂ ಹೆಚ್ಚು ಸಮಯ ಕಣ್ಣು ಕಾರ್ಯನಿರ್ವಹಿಸುತ್ತದೆ.

ಕತ್ತಲೆಯಲ್ಲಿ ಸ್ಮಾರ್ಟ್‌ಫೋನ್‌ ಉಪಯೋಗಿಸಿದಲ್ಲಿ ಖಂಡಿತ ಕಣ್ಣು ಕುರುಡಾಗುವುದು ಖಚಿತ ಎಂದು ಸಂಶೋಧಕರ ತಂಡವೊಂದು ಎಚ್ಚರಿಕೆ ನೀಡಿದೆ. ಅಂದಹಾಗೆ ನಿಮ್ಮ ಕಣ್ಣನ್ನು ಹೇಗೆ ಕಾಪಾಡಿಕೊಳ್ಳಬೇಕೆಂದು ಹೆಚ್ಚಿನ ಮಾಹಿತಿ ತಿಳಿಯಲು ಸ್ಲೈಡರ್‌ನ ಮಾಹಿತಿ ಓದಿರಿ.

ಮಂಗಳ ಗ್ರಹಕ್ಕೆ ಕಳುಹಿಸಲು 'ಮಂಗ'ಗಳಿಗೆ ತರಬೇತಿ ನೀಡುತ್ತಿರುವ ರಷ್ಯಾ!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಂಶೋಧಕರ ತಂಡ ಹೇಳಿದ್ದೇನು?

ಸಂಶೋಧಕರ ತಂಡ ಹೇಳಿದ್ದೇನು?

ಕತ್ತಲೆಯಲ್ಲಿ ಸ್ಮಾರ್ಟ್‌ಫೋನ್‌ ನೋಡುವುದರಿಂದ ಕುರುಡಾಗಬಹುದು!

ಸಂಶೋಧಕರ ತಂಡವೊಂದು ಇಬ್ಬರು ಮಹಿಳೆಯರ ಒಂದು ಕಣ್ಣು ಮಾತ್ರ ಕುರುಡಾಗಿರುವ ಬಗ್ಗೆ ಅಧ್ಯಯನ ನಡೆಸಿದಾಗ, ಸ್ಮಾರ್ಟ್‌ಫೋನ್‌ ಅನ್ನು ಕತ್ತಲೆಯಲ್ಲಿ ಹೆಚ್ಚು ನೋಡುವುದು ಕುರುಡುತನಕ್ಕೆ ಕಾರಣವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಮೊದಲ ರೋಗಿ

ಮೊದಲ ರೋಗಿ

ಕತ್ತಲೆಯಲ್ಲಿ ಸ್ಮಾರ್ಟ್‌ಫೋನ್‌ ನೋಡುವುದರಿಂದ ಕುರುಡಾಗಬಹುದು!

22 ವರ್ಷದ ಇಂಗ್ಲೆಂಡ್‌ ಮಹಿಳೆ ಮಲಗುವ ಮುನ್ನ ಸ್ಮಾರ್ಟ್‌ಫೋನ್‌ ನೋಡುವ ಹವ್ಯಾಸ ಇಟ್ಟುಕೊಂಡಿದ್ದಳಂತೆ. ಅವಳ ಎಡಗಣ್ಣು ದಿಂಬಿನಿಂದ ಮುಚ್ಚಿಕೊಳ್ಳುತ್ತಿದ್ದರಿಂದ ಆಕೆ ಹೆಚ್ಚು ಬಲಗಣ್ಣಿನಿಂದಲೇ ಸ್ಮಾರ್ಟ್‌ಫೋನ್‌ ಅನ್ನು ನೋಡುತ್ತಿದ್ದಳಂತೆ. ಈ ರೀತಿಯ ಚಟುವಟಿಕೆಯಿಂದ ಆಕೆಗೆ ಕಣ್ಣು ಕುರುಡಾಗಿದೆ.

ಎರಡನೇ ರೋಗಿ

ಎರಡನೇ ರೋಗಿ

ಕತ್ತಲೆಯಲ್ಲಿ ಸ್ಮಾರ್ಟ್‌ಫೋನ್‌ ನೋಡುವುದರಿಂದ ಕುರುಡಾಗಬಹುದು!

40 ವರ್ಷದ ಮಹಿಳೆಯೊಬ್ಬಳು ಸೂರ್ಯೋದಯ ಆಗುವ ಮೊದಲೇ ಸ್ಮಾರ್ಟ್‌ಫೋನ್‌ನಲ್ಲಿ ಕತ್ತಲೆಯಲ್ಲಿಯೇ ನ್ಯೂಸ್‌ ಓದುತ್ತಿದ್ದಳಂತೆ. ಆಕೆಯ ಈ ಹವ್ಯಾಸ ಒಂದು ವರ್ಷದಲ್ಲಿ ಆಕೆಯ ಕಣ್ಣಿನ ಕಾರ್ನೀಯಾಗೆ ತೊಂದರೆಯಾಗಿ ಕಣ್ಣು ಕುರುಡಾಗಿದೆಯಂತೆ.

ಕಣ್ಣು ಕುರುಡಾದವರು

ಕಣ್ಣು ಕುರುಡಾದವರು

ಕತ್ತಲೆಯಲ್ಲಿ ಸ್ಮಾರ್ಟ್‌ಫೋನ್‌ ನೋಡುವುದರಿಂದ ಕುರುಡಾಗಬಹುದು!

ಅವರು ಸ್ಮಾರ್ಟ್‌ಫೋನ್ ನೋಡುತ್ತಿದ್ದಾಗ ಒಂದು ಕಣ್ಣಿನ ರೆಟಿನಾ ಬೆಳಕನ್ನು ನೋಡುವುದು ಮತ್ತು ಇನ್ನೊಂದು ಕತ್ತಲೆಯಲ್ಲಿ ಇರುವುದೇ ಕಣ್ಣಿನ ಕುರುಡುತನಕ್ಕೆ ಕಾರಣವಾಗಿದೆ ಎಂದು 'The New England Journal of Medicine' ನಿಯತಕಾಲಿಕೆ ವರದಿಗಾರರಾದ ಓಮರ್‌ ಮಹ್ರೂ ವರದಿ ಮಾಡಿದ್ದಾರೆ.

ರೆಟಿನಾ ಅತ್ಯದ್ಭುತ

ರೆಟಿನಾ ಅತ್ಯದ್ಭುತ

ಕತ್ತಲೆಯಲ್ಲಿ ಸ್ಮಾರ್ಟ್‌ಫೋನ್‌ ನೋಡುವುದರಿಂದ ಕುರುಡಾಗಬಹುದು!

ಕಣ್ಣಿನ ರೆಟಿನಾ ಅತ್ಯದ್ಭುತವಾಗಿ ಎಲ್ಲಾ ಬೆಳಕಿನ ಮಟ್ಟಗಳನ್ನು ಹೊಂದಿಕೊಳ್ಳುವ ಗುಣ ಹೊಂದಿದೆ. ಆದರೆ ಈ ಇಬ್ಬರು ಮಹಿಳೆಯರ ವಿಷಯದಲ್ಲಿ ಅವರು ಅತಿಯಾಗಿ ಸ್ಮಾರ್ಟ್‌ಫೋನ್‌ನ ಬ್ರೈಟ್‌ ಸ್ಕ್ರೀನ್ ಅನ್ನು ಕತ್ತಲೆಯಲ್ಲಿ ನೋಡುವುದು ಅವರ ಕುರುಡುತನಕ್ಕೆ ಕಾರಣವಾಗಿದೆ. ಇದನ್ನು ಸಂಶೋಧಕರು ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರು ಹೇಳಿದ ಉತ್ತರದಿಂದ ಈ ಹೇಳಿಕೆ ನೀಡಿದ್ದಾರೆ.

ಇತರೆ ರೋಗಿಗಳು

ಇತರೆ ರೋಗಿಗಳು

ಕತ್ತಲೆಯಲ್ಲಿ ಸ್ಮಾರ್ಟ್‌ಫೋನ್‌ ನೋಡುವುದರಿಂದ ಕುರುಡಾಗಬಹುದು!

ಮಹ್ರೂ'ರವರ ಪ್ರಕಾರ ಲಂಡನ್‌ ಕಣ್ಣಿನ ಆಸ್ಪತ್ರೆಯಲ್ಲಿ ಇದ್ದ ಇತರ ಹಲವು ರೋಗಿಗಳ ಕಣ್ಣಿನ ಕುರುಡುತನಕ್ಕೆ ಕತ್ತಲೆಯಲ್ಲಿ ಸ್ಮಾರ್ಟ್‌ಫೋನ್‌ ಬಳಕೆ ಮಾಡುವುದೇ ಕಾರಣವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Seeing Smartphone in the dark can make you ‘blind’! Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot